Birth Certificate: ಇನ್ಮುಂದೆ ಆಧಾರ್ ಅಲ್ಲ, ಎಲ್ಲಾ ಕೆಲಸಕ್ಕೂ ಈ ದಾಖಲೆಯೇ ಕಡ್ದಾಯ; ಕೂಡಲೇ ಮಾಡಿಸಿಕೊಳ್ಳಿ!

Birth Certificate: ನಾವು ಸರ್ಕಾರದ ಯಾವುದೇ ಸೌಲತ್ತು ಬಳಸಲು ಅವರು ನೀಡಿದ ಅರ್ಜಿಗಳನ್ನು ತುಂಬಬೇಕಾಗುತ್ತದೆ. ಈ ಅರ್ಜಿ ತುಂಬಿದ ಬಳಿಕ ಅದಕ್ಕೆ ಆಧಾರ್, ಓಟರ್ ಐಡಿ, ರೇಶನ್ ಕಾರ್ಡ್ ಹೀಗೆ ಸೂಕ್ತ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ಇನ್ಮುಂದೆ ನೀವು ಜನನ ಪ್ರಮಾಣಪತ್ರವನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಜನನ ಪ್ರಮಾಣ ಪತ್ರ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದು ಅಕ್ಟೋಬರ್ ೧ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರವು ಈ ಬಾರಿಯ ಮಾನ್ಸೂನ್ ಅಧಿವೇಶನದಲ್ಲಿ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2023ನ್ನು ಅಂಗೀಕರಿಸಿತ್ತು. ಇದಕ್ಕೆ ಇದೀಗ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ತಮ್ಮ ಅಂಕಿತ ಹಾಕಿದ್ದಾರೆ. ಹಾಗಾಗಿ ಅಕ್ಟೋಬರ್ 1ರಿಂದ ಇದು ಕಾಯ್ದೆಯಾಗಿ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ರಿಜಿಷ್ಟಾರ್ ಜನರಲ್ ಹಾಗೂ ಜನಗಣತಿ ಆಯುಕ್ತರಾದ  ಮೃತ್ಯುಂಜಯ್ ಕುಮಾರ್ ನಾರಾಯಣ ಅವರು ತಿಳಿಸಿದ್ದಾರೆ. ಈ  ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಏನೇನು ಬದಲಾವಣೆ?:

ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು, ಚಾಲನಾ ಪರವಾನಿಗೆ ಪಡೆಯಲು, ಆಧಾರ್ ಕಾರ್ಡ್, ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ವೇಳೆ ನೀವು ಜನನ ಪ್ರಮಾಣ ಪತ್ರವನ್ನು ಹಾಜರು ಪಡಿಸಬೇಕಾಗುತ್ತದೆ. ವಿವಾಹ ನೋಂದಣಿಯಂತಹ ಕೆಲಸಕ್ಕೂ ಜನನ ಪ್ರಮಾಣ ಪತ್ರ ಲಗತ್ತಿಸಲು ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಈ ರೀತಿ ತಿದ್ದುಪಡಿ ಕಾನೂನು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.

ಈ ಬಾರಿಯ ಮಾನ್ಸೂನ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ ) ಕಾಯ್ದೆ 2023ನ್ನು ಅಂಗೀಕರಿಸಲಾಗಿತ್ತು. ಜನನ ಮತ್ತು ನೋಂದಣಿ (ತಿದ್ದುಪಡಿ) 2023ರ ಉಪವಿಭಾಗ 1ಮತ್ತು ಉಪವಿಭಾಗ 2ರ ಪ್ರಕಾರ ನೀಡಲಾದ ಅಧಿಕಾರ ಅನುಷ್ಟಾನದಲ್ಲಿ 1 ಅಕ್ಟೋಬರ್ 2023 ರಲ್ಲಿ ದಿನಾಂಕವನ್ನು ನೇಮಿಸುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪಾರದರ್ಶಕ ಚುನಾವಣೆಗೂ ಅನುಕೂಲ:

ಈ ರೀತಿ ಜನನ ಮತ್ತು ಮರಣ ಪ್ರಮಾಣ ಪತ್ರ ಜೋಡಣೆಯಿಂದ ಓಟರ್ ಐಡಿ ಪರಿಷ್ಕರಣೆ ಸರಳವಾಗಲಿದೆ. ನಿಮಗೆ 18 ವರ್ಷ ಆಗುತ್ತಿದ್ದಂತೆ ಸರ್ಕಾರದಿಂದಲೇ ಓಟರ್ ಐಡಿ ನಿಮಗೆ ಸಿಗಲಿದೆ. ಅದೇ ರೀತಿ ಯಾವುದಾದರೂ ವ್ಯಕ್ತಿ ಮೃತಪಟ್ಟಲ್ಲಿ ಆ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಹೀಗೆ ಇದರಿಂದ ಪಾರದರ್ಶಕ ಚುನಾವಣೆ ನಡೆಸಲೂ ಇದು ಅನುಕೂಲವಾಗಲಿದೆ. ಇದಕ್ಕಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ವ್ಯಕ್ತಿ ಮೃತಪಟ್ಟ 15 ದಿನಗಳ ಒಳಗೆ ಆ ವ್ಯಕ್ತಿಯ ಮರಣ ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಲಾಗಿದೆ.

Comments are closed.