Ganesha Chaturthi: ಗಣೇಶ ಚತುರ್ಥಿಗೆ ಯಾವ ವಿಗ್ರಹ ಪ್ರತಿಷ್ಠಾಪಿಸದರೆ ಸೂಕ್ತ ಗೊತ್ತಾ? ಈ ಗಣಪತಿ ಬಪ್ಪನಿಗೆ ಶಕ್ತಿಯೂ ಹೆಚ್ಚು ಗೊತ್ತಾ?

Ganesha Chaturthi: ಭಾರತವು ಹಿಂದೂ ರಾಷ್ಟ್ರ. ಹಿಂದೂಗಳು ವರ್ಷಪೂರ್ತಿ ಹಬ್ಬಗಳನ್ನು ಆಚರಿಸುತ್ತಾರೆ. ಯುಗಾದಿಯಿಂದ ಹಿಡಿದು ಶಿವರಾತ್ರಿಯತನಕ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಬಹಳ ಪ್ರಾಧಾನ್ಯತೆ ಇದೆ. ಇದು ಎಲ್ಲರನ್ನು ಒಂದು ಮಾಡುವ ಹಬ್ಬವಾಗಿದೆ. ಹಾಗಾಗಿಯೇ ಈ ಹಬ್ಬವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದನ್ನೂ ಓದಿ: Solar Panel: ಸರ್ಕಾರ ಕೊಡುವ ಉಚಿತ ವಿದ್ಯುತ್ತೇ ಯಾಕೇ? ನೀವೆ ಮನೆಯಲ್ಲಿಯೇ ವಿದ್ಯುತ್ ತಯಾರಿಸಿ, ಬಳಸಿ, ಬೆಸ್ಕಾಂ ಗೇ ಮಾರಾಟ ಮಾಡಿ ಆದಾಯ ಗಳಿಸಿ; ಸರ್ಕಾರದ ಸಬ್ಸಿಡಿ ಇದೆ!

ಗಣೇಶ ಚತುರ್ಥಿ ಹಬ್ಬವನ್ನು ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಪ್ರತಿಷ್ಠಾಪಿಸಲಾಗುತ್ತದೆ. ಈ ಹಬ್ಬವನ್ನು ೧೦ ದಿನಗಳ ವರೆಗೆ ಆಚರಿಸಲಾಗುತ್ತದೆ. ಈ ಬಾರಿ ಸೆ.೧೮ರಂದು ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಹೀಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಗಣೇಶನ ಮೂರ್ತಿ ತರುವ ವೇಳೆ ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪರಿಸರ ಸ್ನೇಹಿ ಗಣಪತಿ ಮೂರ್ತಿ ಇಟ್ಟು ಪೂಜೆ ಮಾಡುವುದು ಉತ್ತಮ.

ಗಣೇಶನ ಭಂಗಿಗೆ ಆದ್ಯತೆ ನೀಡಿ:

ಗಣಪತಿಯ ಮೂರ್ತಿಯನ್ನು ಆಯ್ಕೆ ಮಾಡುವಾಗ ಭಂಗಿಗೆ ಮೊದಲ ಆದ್ಯತೆ ನೀಡಬೇಕು. ಕುಳಿತಿರುವ ಭಂಗಿಯಾದರೆ ಉತ್ತಮ. ಇದನ್ನು ಲಲಿತಾಸನದಲ್ಲಿರುವ ಗಣೇಶ ಎಂದೂ ಕರೆಯಲಾಗುತ್ತದೆ. ಇದು ಶಾಂತಿಯ ಸಂಕೇತವಾಗಿದೆ. ಈ ರೀತಿಯ ಮೂರ್ತಿ ಪ್ರತಿಷ್ಠಪಿಸಿ ಪೂಜಿಸುವುದರಿಂದ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ. ಇನ್ನು ಮಲಗಿರುವ ಭಂಗಿಯ ಗಣೇಶನ ಮೂರ್ತಿ ಪ್ರತಿಷ್ಠಾಪನೆಯು ಒಳ್ಳೆಯದು. ಇದು ಐಶಾರಾಮಿ ಹಾಗೂ ಸಂಪತ್ತಿನ ಸಂಕೇತವಾಗಿದೆ. ಇದನ್ನೂ ಓದಿ: Birth Certificate: ಇನ್ಮುಂದೆ ಆಧಾರ್ ಅಲ್ಲ, ಎಲ್ಲಾ ಕೆಲಸಕ್ಕೂ ಈ ದಾಖಲೆಯೇ ಕಡ್ದಾಯ; ಕುದಲೇ ಮಾಡಿಸಿಕೊಳ್ಳಿ!

ಸೊಂಡಿಲಿನ ದಿಕ್ಕು;

ಗಣೇಶನ ಮೂರ್ತಿ ಆಯ್ಕೆ ಮಾಡುವ ವೇಳೆ ಗಣೇಶನ ಸೊಂಡಿಲು ಎಡಗಡೆ ಇರುವುದನ್ನು ನೀವು ಆಯ್ಕೆ ಮಾಡಬೇಕು. ಈ ರೀತಿ ಎಡಗಡೆ ಸೊಂಡಿಲು ಇರುವುದು ಯಶಸ್ಸು ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಬಲಭಾಗದ ಸೊಂಡಿಲಿರುವ ಗಣೇಶನನ್ನು ಪ್ರತಿಷ್ಠಾಪಿಸಿದರೆ ನೀವು ಆತನನ್ನು ತೃಪ್ತಿ ಪಡಿಸುವುದು ತುಂಬಾನೆ ಕಷ್ಟ ಎಂದು ಹೇಳಲಾಗುತ್ತದೆ. ಇದರ ಜೊತೆ ಕೈಯ್ಯಲ್ಲಿ ಮೋದಕ ಹಿಡಿದಿರುವ ಹಾಗೂ ಪಾದದ ಬಳಿ ಇಲಿ ಇರುವ ಗಣೇಶನ ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಮೋದಕವು ಗಣೇಶನಿಗೆ ಪ್ರಿಯವಾದ ಆಹಾರವಾಗಿದೆ. ಇಲಿ ಆತನ ವಾಹನವಾಗಿದೆ. ಹಾಗಾಗಿ ಇವೆರಡು ಇಲ್ಲದಿದ್ದರೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಪೂರ್ಣಗೊಳ್ಳುವುದಿಲ್ಲ.

ಶ್ವೇತ ವರ್ಣದ ಗಣೇಶನ ವಿಗ್ರಹ ತನ್ನಿ:

ವಾಸ್ತು ಶಾಸ್ತ್ರದ ಪ್ರಕಾರ ನೋಡುವುದಾದರೆ ಬಿಳಿ ಬಣ್ಣದ ಗಣೇಶನ ಮೂರ್ತಿ ಸ್ಥಾಪನೆ ಮಾಡುವುದು ಉತ್ತಮ. ಬಿಳಿ ಬಣ್ಣವು ಶಾಂತಿಯ ಸಂಕೇತವಾಗಿದೆ.ಇನ್ನು ಸಿಂಧೂರ ವರ್ಣದ ಗಣೇಶನ ವಿಗ್ರಹವು ಸ್ವ-ಅಭಿವೃದ್ಧಿ ಸಂಕೇತವಾಗಿದೆ.

ಇಲ್ಲಿಯೇ ಪ್ರತಿಷ್ಠಾಪಿಸಿ;

ಗಣೇಶನ ಮೂರ್ತಿಯನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪನೆ ಮಾಡುವುದು ಸರಿಯಲ್ಲ. ದೇವರ ಮನೆಯ ಹತ್ತಿರ ಅಥವಾ ಮನೆಯ ಹಾಲ್ನಲ್ಲಿ ಪ್ರತಿಷ್ಠಾಪಿಸುವುದು ಉತ್ತಮ. ಸ್ನಾನದ ಕೋಣೆಯ ಹತ್ತಿರ ಪ್ರತಿಷ್ಠಾಪಿಸುವುದು ಒಳ್ಳೆಯದಲ್ಲ. ಇನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವವರು ಗ್ಯಾರೇಜ್ ಅಥವಾ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವುದು ಶ್ರೇಯಸ್ಕರವಲ್ಲ ಎಂದು ಪರಿಗಣಿಸಲಾಗುತ್ತದೆ.

Comments are closed.