Ration Card cancellation: ರೇಶನ್ ಕಾರ್ಡ್ ತಿದ್ದುಪಡಿಗೆ ಹೋದ್ರೆ ಕಾರ್ಡೇ ರದ್ದು; ಒಂದು ಲಕ್ಷಕ್ಕೂ ಅಧಿಕ APL, BPL ಕಾರ್ಡ್ ಗಳ ತಿದ್ದುಪಡಿ ತಿರಸ್ಕರಿಸಿದ ಸರ್ಕಾರ!

Ration Card cancellation: ಸ್ನೇಹಿತರೆ, ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಹೋಗುತ್ತಿದ್ದೀರಾ? ಹಾಗಾದರೆ ಈ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಒಂದು ವೇಳೇ ತಿದ್ದುಪಡಿಯ ವೇಳೆ ನಿಮ್ಮ ರೆಶನ್ ಕಾರ್ಡ್ ನಲ್ಲಿ ತಪ್ಪಿದ್ದರೆ, ವಂಚನೆ ಮಾಡುತ್ತಿದ್ದರೆ ಅಂತಹ ರೇಶನ್ ಕಾರ್ಡ್ ರದ್ದುಪಡಿಸಲಾಗುತ್ತಿದೆ.

ಬಿಪಿಎಲ್ (BPL card) ಹಾಗೂ ಎಪಿಎಲ್ (APL card) ತಿದ್ದುಪಡಿ ಮಾಡಿಕೊಳ್ಳುತ್ತಿರುವವರ ರೇಷನ್ ಕಾರ್ಡ್ (ration card) ನ್ನು ಪರಿಶೀಲಿಸಿ, ಸರಿ ಇಲ್ಲದ, ಅಕ್ರಮ ರೇಷನ್ ಕಾರ್ಡ್ ನ್ನು ಆಹಾರ ಇಲಾಖೆ ರದ್ದುಪಡಿಸುತ್ತಿದೆ. ಅಂತವರಿಗೆ ಪುನಃ ರೇಶನ್ ಕಾರ್ಡ್ ಪಡೆದುಕೊಳ್ಳುವುದಕ್ಕೂ ಸಾಧ್ಯವಿಲ್ಲ.  

ರೇಶನ್ ಕಾರ್ಡ್ ತಿದ್ದುಪಡಿ ಅರ್ಜಿ ತಿರಸ್ಕಾರ:

ಗೃಹಲಕ್ಷ್ಮಿ ಯೋಜನೆಯ (gruha Lakshmi scheme) 2,000 ರೂಪಾಯಿಗಳನ್ನು ಪಡೆದುಕೊಳ್ಳಲು ಬಿಪಿಎಲ್ ಅಥವಾ ರ್ಪಿಎಲ್ ರೆಷನ್ ಕಾರ್ಡ್ ಹೊಂದಿರಬೇಕು.  ಆದರೆ ರೆಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಮನೆಯ ಯಜಮಾನಿಯದ್ದೇ ಆಗಿರಬೇಕು. ಇದಕ್ಕಾಗಿ ಸಾಕಷ್ಟು ಜನ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಹೀಗೆ ರೇಶನ್ ಕಾರ್ಡ್ ತಿದ್ದುಪಡಿಗೆ ಹೋದ ಲಕ್ಷಾಂತರ ಜನ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುವಂತಾಗಿದೆ. ರಾಜ್ಯದಲ್ಲಿ ಶೇಕಡ 70ರಷ್ಟು ಎಪಿಎಲ್ ಅರ್ಜಿಗಳು ತಿದ್ದುಪಡಿಗೆ ಸಲ್ಲಿಕೆಯಾಗಿದ್ದು.  ಒಟ್ಟು 24 ಲಕ್ಷ ಎಪಿಎಲ್ ಕಾರ್ಡ್ ದಾರರು ಅರ್ಜಿಯಲ್ಲಿ ಲಕ್ಷಕ್ಕೂ ಅಧಿಕ ಕಾರ್ಡ್ ತಿರಸ್ಕಾರಗೊಂಡಿದೆ.

ಸರ್ಕಾರ 1.27 ಲಕ್ಷ ಪಡಿತರ ಅರ್ಜಿಗಳಿಗೆ ಒಪ್ಪಿಗೆ ಸೂಚಿಸಿತ್ತು. ಆದರೆ ಇದರಲ್ಲಿ 93,000 ಅರ್ಜಿಗಳು ತಿರಸ್ಕಾರಗೊಂಡಿದೆ. ಉಳಿದ ಅರ್ಜಿಗಳ ಪರಿಶೀಲನೆ ಸಪ್ಟೆಂಬರ್ ಅಂತ್ಯದೊಳಗೆ ಮುಗಿಯಲಿದೆ ಎಂದು ಸರ್ಕಾರ ತಿಳಿಸಿದೆ.  ಇನ್ನು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೇಶನ್ ಕಾರ್ಡ್ ನಲ್ಲಿ ವಂಛನೆ ಮಾಡಿ ತಿದ್ದುಪಡೀ ಮಾಡಿಕೊಳ್ಳಲು ಪ್ರಯತ್ನಿಸಿದ ಕಾರ್ಡ್ ಗಳನ್ನು ರಿಜೆಕ್ಟ್ ಮಾಡಲಾಗಿದೆ.  ಅತ್ತೆ ಸೊಸೆ ಇಬ್ಬರೂ ಒಂದೇ ವಿಳಾಸದ ಬೇರೆ ಬೇರೆ ರೇಶನ್ ಕಾರ್ಡ್ ಮಾಡಿಸಿಕೊಳ್ಳಲು ಹಳೆಯ ರೆಷನ್ ಕಾರ್ಡ್ ನಲ್ಲಿ ಹೆಸರು ಡಿಲಿಟ್ ಮಾಡಿಸಿಕೊಳ್ಳಲು ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ವಂಚನೆ ತಿಳಿದುಬಂದಿದೆ. ಇಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

Comments are closed.