Mercury Saturn Transit 2023: ಇನ್ನು ಎರಡು ವರ್ಷ ತಲೆಕೆಡಿಸಿಕೊಳ್ಳಬೇಡಿ: ಬುಧ ಶನಿ ಈ ರಾಶಿಯವರ ಜೊತೆಗೆ ನಿಂತು ಮುನ್ನಡೆಸುತ್ತಾರೆ! ಅದೃಷ್ಟ ರಾಶಿಗಳು ಯಾವವು ಗೊತ್ತಾ?

Mercury Saturn Transit 2023: ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆದರೆ ಶನಿಯನ್ನು ನ್ಯಾಯ ದೇವರು ಎಂದು ಹೇಳಲಾಗುತ್ತೆ. ಹಾಗಾಗಿ ಜ್ಯೋತಿಶಾಸ್ತ್ರದ ಪ್ರಕಾರ ಬುಧ ಶನಿ ಯಾವ ರಾಶಿಯಲ್ಲಿ ಇರುತ್ತಾರೋ ಅಂತವರ ಜಾತಕ ಅಪರೂಪವಾದದ್ದು ಹಾಗೂ ರಾಜಯೋಗ ಸದಾ ಆ ಜಾತಕದಲ್ಲಿ ಇರುತ್ತದೆ ಎಂದು ಹೇಳಲಾಗುತ್ತೆ. ಪ್ರತಿಯೊಂದು ಗ್ರಹವು ತನ್ನ ಪಥ ಬದಲಾವಣೆ ಮಾಡಿದಾಗ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಕೆಲವು ಗ್ರಹಗಳ ಪಥ ಬದಲಾವಣೆ ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಇನ್ನು ಕೆಲವೊಮ್ಮೆ ನಕಾರಾತ್ಮಕ ಪರಿಣಾಮ ಕೂಡ ಉಂಟಾಗಬಹುದು. ಇದನ್ಣು ಓದಿ: Birth Certificate: ಇನ್ಮುಂದೆ ಆಧಾರ್ ಅಲ್ಲ, ಎಲ್ಲಾ ಕೆಲಸಕ್ಕೂ ಈ ದಾಖಲೆಯೇ ಕಡ್ದಾಯ; ಕೂಡಲೇ ಮಾಡಿಸಿಕೊಳ್ಳಿ!

ಬುಧ ಹಾಗೂ ನ್ಯಾಯ ದೇವತೆ ಶನಿ ಸಪ್ಟೆಂಬರ್ 18 ರಿಂದ ಒಂದೇ ರಾಶಿ ಮನೆಯಲ್ಲಿ ವಾಸವಾಗಲಿದ್ದಾರೆ. ಶನಿ ಹಾಗೂ ಬುಧನ ಸಂಕ್ರಮಣದಿಂದ ಈ ಮೂರು ರಾಶಿಯವರಿಗೆ ಅದೃಷ್ಟದ ಮಳೆಯ ಸುರಿಯಲಿದೆ ಆರ್ಥಿಕ ಸಮಸ್ಯೆ ಎನ್ನುವುದು ಇನ್ನು ಎರಡು ವರ್ಷ ಇವರ ಹತ್ತಿರ ಸುಳಿಯುವುದಿಲ್ಲ. ಶನಿಯ ಕೃಪಾ ದೃಷ್ಟಿ ಇರುವುದರಿಂದ ಮುಂದಿನ ಎರಡು ತಿಂಗಳು ಈ ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯಿತು ಎಂದೇ ಅರ್ಥ. ರಾಶಿಗಳು ಯಾವವು ನೋಡೋಣ.

ಮೇಷ ರಾಶಿ: ಬುಧ ಹಾಗೂ ಶನಿ ಪ್ರೇರಿತವಾದ ಧನರಾಜ ಯೋಗಗೊಂಡಿದ್ದು ಮೇಷ ರಾಶಿಯವರಿಗೆ 2025ರ ವರೆಗೆ ಜೀವನದ ಉತ್ತುಂಗ ಸ್ಥಿತಿಗೆ ಏರಬಹುದು. ಉದ್ಯೋಗ ವ್ಯವಹಾರ ಎರಡರಲ್ಲಿಯೂ ಪ್ರಗತಿ ಸಿಗುತ್ತದೆ ಯಾವುದೇ ಯೋಜನೆ ರೂಪಿಸಿದರು ಅದರಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಸಂಪತ್ತು ಹೆಚ್ಚಿಸಲು ಹೂಡಿಕೆ ಮಾಡಲು ಇದು ಸರಿಯಾದ ಸಮಯ.

ವೃಷಭ ರಾಶಿ: ಮುಂದಿನ ಎರಡು ವರ್ಷ ಸುವರ್ಣ ಯುಗ ನಿಮ್ಮ ಜೀವನದಲ್ಲಿ ಆರಂಭವಾಗಲಿದೆ ಉದ್ಯೋಗ ಬದಲಾವಣೆ ಮಾಡಲು ಯೋಚನೆ ಮಾಡುತ್ತಿದ್ದಾರೆ ತಕ್ಷಣವೇ ಆ ಕೆಲಸ ಮಾಡಿ. ಹೊಸ ಉದ್ಯೋಗ ನಿಮ್ಮನ್ನು ಕಾಯುತ್ತಿದೆ. ಆದಾಯ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ದುಪ್ಪಟ್ಟಾಗಲಿದೆ. ಇದನ್ನೂ ಓದಿ: Shukradese: ಕಡೆಗೂ ಶುರುವಾಗ್ಹೋಯ್ತು ಶುಕ್ರದೆಸೆ ಶುಕ್ರನ ನೇರ ಸಂಚಾರದಿಂದ ಈ ಮೂರು ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ! ನಿಮ್ಮ ರಾಶಿಯೂ ಇದ್ಯಾ ನೋಡಿಕೊಳ್ಳಿ

ತುಲಾ ರಾಶಿ: ಧನ ರಾಜಯೋಗ ರೂಪುಗೊಂಡು ಈ ರಾಶಿಯವರ ಜೀವನದಲ್ಲಿ ಹಣದ ಅರಿವು ಹೆಚ್ಚಾಗುತ್ತದೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ ಕುಟುಂಬದಲ್ಲಿ ಸಂತೋಷ ನೆಮ್ಮದಿ ಇರುವುದರಿಂದ ನೀವು ಇನ್ನಷ್ಟು ನಿಮ್ಮ ಕೆಲಸದ ಕಡೆಗೆ ಗಮನ ಹರಿಸಲು ಸಹಾಯಕವಾಗುತ್ತದೆ.

Comments are closed.