Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಈ ತಿಂಗಳಿನ ಫಲಾನುಭವಿಗಳ ಪಟ್ಟಿ ಪ್ರಕಟ ! ನಿಮ್ಮ ಹೆಸರುಂಟೋ ಇಲ್ಲವೋ ಚೆಕ್ ಮಾಡಿಕೊಳ್ಳಿ

Gruhalakshmi Scheme: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಆರಂಭವಾಗಿ ಎರಡು ತಿಂಗಳು ಕಳೆದಿದೆ. ಆದರೆ ಆರಂಭದಿಂದಲೂ ಈ ಯೋಜನೆ ಗೊಂದಲಮಯವಾಗಿದೆ. ಒಂದಷ್ಟು ಫಲಾನುಭವಿಗಳಿಗೆ ತಲುಪಿದರೆ ಇನ್ನೊಂದಿಷ್ಟು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದರ ನಡುವೆ ಮೂರನೇ ತಿಂಗಳ ಹಣ ಪಾವತಿಗೆ ಸರ್ಕಾರ (Government)  ಸಿದ್ಧತೆ ನಡೆಸಿದೆ. ಇದನ್ನೂ ಓದಿ: Bank Loan: ಸಾಲ ಮಾಡಿ ಕಾರು ಬೈಕ್ ಖರೀಸಿದವರಿಗೆ ಗುಡ್ ನ್ಯೂಸ್; ಆರ್ ಬಿ ಐ ಹೊಸ ರೂಲ್ಸ್!

ಸಪ್ಟೇಂಬರ್ 3೦ರ ಒಳಗೆ ಅಗಸ್ಟ ಹಾಗೂ ಸಫ್ಟೇಂಬರ್ ಎರಡೂ ತಿಂಗಳಿನ 4೦೦೦ ರೂ. ಹಣ ಪಾವತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈ ಭರವಸೆ ಹುಸಿಯಾಗಿದೆ. ಇನ್ನು ಹಲವರ ಖಾತೆಗೆ ಒಂದು ತಿಂಗಳ ಹಣ ಸಹ ಪಾವತಿಯಾಗಿಲ್ಲ. ಇದರಿಂದ ಬಡವರು, ಅರ್ಹ ಫಲಾನುಭವಿಗಳು, ಗ್ರಾಮ ಒನ್, ಬ್ಯಾಂಕ್ ತಿರುಗಿ ತಿರುಗಿ ಸುಸ್ತಾಗಿದ್ದಾರೆ. ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಜನರನ್ನು ಸಮಾಧಾನ ಮಾಡುವ ಸಲುವಾಗಿಯೇ ಸರ್ಕಾರವು ಸ್ಪಷ್ಟನೆ ನೀಡಿದ್ದು, ಅನ್ನಭಾಗ್ಯ ಹಣ ಜಮಾ ಆಗುತ್ತಿರುವ ಎಲ್ಲರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳಿಗೆ ಹಣ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: Scholarship:  1೦ನೇ ತರಗತಿ ಪಾಸ್ ಆದ ಹೆಣ್ಣುಮಕ್ಕಳಿಗೆ ಸಿಗತ್ತೆ ವರ್ಷ ಪೂರ್ತಿ ಸ್ಕಾಲರ್ ಶಿಪ್; ಕಾಲೇಜ್ ಫೀ ಕಟ್ಟುವ ತಲೆಬಿಸಿ ಇಲ್ಲ; ಇಂದೇ ಅಪ್ಲೈ ಮಾಡಿ

ಇನ್ನು ಅಕ್ಟೋಬರ್ ತಿಂಗಳಿನ ಹಣವನ್ನು ಅಕ್ಟೋಬರ್ 15 ರ ಒಳಗೆ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದಾದರೂ ತಾಂತ್ರಿಕ ಕಾರಣಗಳಿಂದ ಹಣ ಜಮಾ ಆಗದೆ ಇದ್ದವರು ಕೂಡಲೇ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದರ ಜೊತೆ ಇಲ್ಲಿಯ ವರೆಗೆ ಯಾವ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೂ ಅವರ ಖಾತೆಗೆ ಮೂರು ತಿಂಗಳ ಹಣ ಜಮಾ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಇನ್ನು ಎಪಿಎಲ್ ಪಡಿತರ ಚೀಟಿ (APL Ration card) ಹೊಂದಿರುವವರ ಖಾತೆಗೆ ಅನ್ನಭಾಗ್ಯ ಹಣ ಬರುವುದಿಲ್ಲ. ಆದರೆ ಅವರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿದ್ದರೆ ಅಂತಹವರ ಖಾತೆಗೂ ಹಣ ಜಮಾ ಮಾಡಲಾಗುತ್ತದೆ.

ಇದುವರೆಗೆ ಬ್ಯಾಂಕ್ನಲ್ಲಿ ಇಕೆವೈಸಿ ಮಾಡಿಸಿಕೊಳ್ಳದ ಗೃಹಲಕ್ಷ್ಮಿ ಫಲಾನುಭವಿಗಳು ಕೂಡಲೇ ಬ್ಯಾಂಕಿಗೆ ತೆರಳಿ ಇಕೆವೈಸಿ (EKYC) ಮಾಡಿಸಿಕೊಳ್ಳಿ. ಅಲ್ಲದೆ ಬ್ಯಾಂಕ್ ಖಾತೆಯಲ್ಲಿ ಏನಾದರೂ ತಾಂತ್ರಿಕ ತೊಂದರೆ ಇದೆಯೇ ಎಂದು ಬ್ಯಾಂಕ್ ಅಧಿಕಾರಿಗಳ ಬಳಿ ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಳ್ಳಿ. ಎಷ್ಟೋ ಜನ ಫಲಾನುಭವಿಗಳಿಗೆ ಬ್ಯಾಂಕ್ (Bank) ಖಾತೆಯಲ್ಲಿರುವ ತಾಂತ್ರಿಕ ತೊಂದರೆಯಿಂದಲೇ ಹಣ ಪಾವತಿ ಸಾಧ್ಯವಾಗುತ್ತಿಲ್ಲ.

ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರ ಎಲ್ಲ ಅರ್ಹರ ಖಾತೆಗೆ ಹಣ ಜಮಾ ಮಾಡಲಿದೆ ಎಂದು ಭರವಸೆ ನೀಡಿದೆ.

Comments are closed.