Election Tricks: ಚುನಾವಣೆಗೂ ಮುನ್ನವೇ ಹೊಸ ಯೋಜನೆ; ಮಹಿಳೆಯರಿಗೆ 3,000ರೂ, ಪಿಂಚಣಿ 6,000ಕ್ಕೆ ಹೆಚ್ಚಳ; ಸರ್ಕಾರದ ಹೊಸ ಆದೇಶ  

Election Tricks: ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಆಗ ಜನರು ತಮ್ಮ ಪ್ರತಿನಿಧಿಗಳನ್ನು ಶಾಸಕರಾಗಿ ಆಯ್ಕೆ ಮಾಡುತ್ತಾರೆ. ಇದೀಗ ಕೇಂದ್ರ ಚುನಾವಣಾ ಆಯೋಗವು 5 ರಾಜ್ಯಗಳ ಚುನಾವಣೆಯನ್ನು ಘೋಷಣೆ ಮಾಡಿದೆ. ನವೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ನಲ್ಲಿ ಫಲಿತಾಂಶ ಹೊರಬೀಳಲಿದೆ. ಇದಕ್ಕಾಗಿ ಐದು ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಚುನಾವಣೆ ನಡೆಯುವ ರಾಜ್ಯದಲ್ಲಿ ತೆಲಂಗಾಣವು ಒಂದಾಗಿದೆ.

ತೆಲಂಗಾಣದಲ್ಲೂ ಚುನಾವಣಾ ಕಾವು ಜೋರಾಗಿದೆ. ಕಾಂಗ್ರೆಸ್, ಬಿಜೆಪಿ, ಬಿಆರ್ಸಿ ಸೇರಿದಂತೆ ಎಲ್ಲ ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ತೆಲಂಗಾಣ ರಾಜ್ಯ ರಚನೆಯಾದ ನಂತರ 2 ಬಾರಿಯೂ ಸುಲಭವಾಗಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಸಿ ಪಕ್ಷವು ಈ ಬಾರಿ ಹೋರಾಟ ಮಾಡಲೇಬೇಕಾಗಿದೆ. ಯಾಕೆಂದರೆ ತೆಲಂಗಾಣದಲ್ಲಿ ಬಿಆರ್ಸಿ ವಿರುದ್ಧ ಆಡಳಿತ ವಿರೋಧಿ ಅಲೆ ಜೋರಾಗಿದೆ. ಇದಕ್ಕಾಗಿಯೇ ಬಿಆರ್ಸಿ ಪಕ್ಷವು ತನ್ನ ಪ್ರನಾಳಿಕೆ ಬಿಡುಗಡೆ ಮಾಡಿದ್ದು, ಜನರಿಗೆ ಭರ್ಜರಿ ಆಫರ್ ನೀಡಿದೆ.

ಕಾಂಗ್ರೆಸ್ ಪಕ್ಷವು ಕರ್ನಾಟಕದಂತೆ ತೆಲಂಗಾಣದಲ್ಲೂ ಉಚಿತ ಕೊಡುಗೆಗಳ ಮೊರೆ ಹೋಗಿದೆ. ಇದಕ್ಕೆ ಟಕ್ಕರ್ ನೀಡಲು ಬಿಆರ್ಸಿ ಮುಂದಾಗಿದೆ. ಬಿಆರ್ಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ 4೦೦ ರೂ.ಗೆ ಅಡುಗೆ ಸಿಲಿಂಡರ್ ನೀಡಲಾಗುವುದು ಎಂದು ತಿಳಿಸಿದೆ. ಇದು ಮಾನ್ಯತೆ ಪಡೆದ ಎಲ್ಲ ಪತ್ರಕರ್ತರಿಗೂ ಅನ್ವಯವಾಗಲಿದೆ.

ಇದರ ಜೊತೆ ಪಿಂಚಣಿದಾರರ ಮತಗಳತ್ತಲೂ ದೃಷ್ಟಿ ಹರಿಸಿದ್ದು, ಪಿಂಚಣಿ ಮೊತ್ತವನ್ನು 5೦೦೦ ರೂ.ಗೆ ಏರಿಕೆ ಮಾಡಲಾಗುವುದು ಎಂದು ಕೆಸಿಆರ್ ತಿಳಿಸಿದ್ದಾರೆ. ಈ ಪಿಂಚಣಿ ಮೊತ್ತವನ್ನು ಹಂತ ಹಂತವಾಗಿ ಏರಿಕೆ ಮಾಡಲಾಗುವುದು. ವಾರ್ಷಿಕವಾಗಿ ೫೦೦ ರೂ. ಹೆಚ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತೆಲಂಗಾಣದಲ್ಲಿ 3೦16 ರೂ. ಪಿಂಚಣಿ ನೀಡಲಾಗುತ್ತಿದೆ. ಅಂಗವಿಕಲರಿಗೆ ನೀಡಲಾಗುವ ಪಿಂಚಣಿಯನ್ನು 4೦೦೦ ರೂ.ನಿಂದ 6೦೦೦ರೂ.ಗೆ ಹೆಚ್ಚಿಸಲಾಗುವುದು, ಕೆಸಿಆರ್ ಭಿಮಾ ಹೆಸರಿನಲ್ಲಿ ತೆಲಂಗಾಣದ 93 ಲಕ್ಷ ಜನರಿಗೆ 5 ಲಕ್ಷ ರೂ. ವಿಮೆ ಮಾಡಿಸಲಾಗುವುದು. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಲಾಗಿದೆ.

ರೈತಬಂಧು ಮೊತ್ತವನ್ನು 16,೦೦೦ ರೂ.ಗೆ ಹೆಚ್ಚಿಸಲಾಗುವುದು ಎಂದು ಕೆಸಿಆರ್ ಪ್ರಕಟಿಸಿದ್ದಾರೆ. ಇದರಿಂದ ಹಲವು ರೈತರಿಗೆ ಪರಿಹಾರ ಸಿಗಲಿದೆ. ಮಾರ್ಚ್ ನಂತರ 12,೦೦೦ ರೂ. ಇರುವ ಈ ಮೊತ್ತವನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Comments are closed.