Social Media: ಇದನ್ನ ನೋಡ್ತಾ ಇದ್ರೆ ತಲೆ ತಿರುಗುತ್ತೆ; ಇಲ್ಲಿ ನಿಮಗೆ ಕಾಣುವ ಸಂಖ್ಯೆ ಯಾವುದು? ಟ್ರೆಂಡ್ ಸೆಟ್ ಮಾಡಿದ ಬ್ರೇನ್ ಟೀಸರ್!

Social Media: ಬ್ರೈನ್ ಟೀಸರ್ ಪರಿಹಾರ ಮಾಡುವುದು ಸುಲಭದ ಕೆಲಸವೇ? ಇಲ್ಲ ಕಷ್ಟದ ಕೆಲಸವೇ ಎನ್ನುವುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ನಲ್ಲಿದೆ. ಇದಕ್ಕೆ ಕಾರಣ ಎಕ್ಸ್ ಪೋಸ್ಟ್ ಆಗಿರುವ ಬ್ರೈನ್ ಟೀಸರ್ ಅನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಬಹಳಷ್ಟು ಜನರು ಕಷ್ಟ ಪಡುತ್ತಿದ್ದಾರೆ. ಈ ಟೀಸರ್ನಲ್ಲಿ ಅಳವಡಿಸಲಾದ ನಂಬರ್ ಎಷ್ಟು ಎಂದು ಕಂಡುಹಿಡಯಲು ಅವರು ಪ್ರಯತ್ನಿಸುತ್ತಿದ್ದಾರೆ, ಇನ್ನು ಇದರಲ್ಲೇನಿದೆ ಮಹಾ, ನೋಡಿದ ಕೂಡಲೇ ನಂಬರ್ ಯಾವುದು ಎಂದು ತಿಳಿದಿದೆ ಎಂದು ಹೇಳಿದ್ದಾರೆ. ಅತ್ಯಂತ ವೇಗವಾಗಿ ಟೀಸರ್ ಅಲ್ಲಿ ಅಡಗಿರುವ ನಂಬರ್ನ್ನು ಅವರು ಹೇಳಿದ್ದಾರೆ. ಇನ್ನು ಕೆಲವರು ಅದರಲ್ಲಿರುವ ನಂಬರ್ ಯಾವುದು ಎಂದು ತಲೆ ಕೆಡಿಸಿಕೊಂಡು ಕುಳಿತಿದ್ದಾರೆ. ಮೊದಲ ನೋಟದಲ್ಲಿಯೇ ಪಜಲ್ನ್ನು ಕಂಡು ಹಿಡಿಯಲು ಸಾಧ್ಯವೇ ಎನ್ನುವುದನ್ನು ನೀವು ಪ್ರಯತ್ನಿಸಬಹುದು.

ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಫೋಟೊದಲ್ಲಿ ಅತ್ಯಂತ ಸರಳ ಹೆಡ್ಡಿಂಗ್ ಕೊಡಲಾಗಿದೆ. ಕಣ್ಣುಗಳ ಪರೀಕ್ಷೆಯಲ್ಲಿ ನಿಮಗೆ ಕಾಣುವ ನಂಬರ್ ಯಾವುದು ಎಂದು ಕೇಳಲಾಗಿದೆ. ಕಪ್ಪು ಹಾಗೂ ಬಿಳಿ ಪಟ್ಟಿಯ ನಡುವೆ ಅಡಗಿರುವ ನಂಬರ್ನ್ನು ನೀವು ಗುರುತಿಸಬೇಕು.

ಒಂದು ದಿನದ ಹಿಂದೆ ಈ ಪೋಸ್ಟ್ ಶೇರ್ ಮಾಡಲಾಗಿದ್ದು, ಸಾಕಷ್ಟ ಸೌಂಡ್ ಮಾಡುತ್ತಿದೆ. 24 ಗಂಟೆಯಲ್ಲಿ ಇದಕ್ಕೆ ಸುಮಾರು 6 ಮಿಲಿಯನ್ ವೀವ್ಸ್ ಕಂಡಿದೆ. ಅಲ್ಲದೆ ನೋಡುವವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆ ಆಗುತ್ತಲೇ ಇದೆ. ಅಲ್ಲದೆ ಹತ್ತಾರು ಸಾವಿರ ಜನ ಕಮಿಂಟ್ ಸಹ ಮಾಡಿದ್ದಾರೆ.

ಕೆಲವರು ಇದರಲ್ಲಿ ಏನು ವಿಶೇಷವಿದೆ. ಇದರಲ್ಲಿ ಇವರು ನಂಬರ್ ಇದೇ ನಂಬರ್ ಸಹಿತ ಕಮಿಂಟ್ ಮಾಡಿದರೆ, ಇನ್ನು ಕೆಲವರು ಈ ನಂಬರ್ ಕಂಡುಹಿಡಿಯುವುದೇ ನಮಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಕಮೀಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ರೀತಿ ಸಂಖ್ಯೆಗಳನ್ನು ಕಂಡುಹಿಡಿಯುವುದು ನಮಗೆ ಇಷ್ಟದ ವಿಚಾರ, ಇನ್ನಷ್ಟು ಈ ರೀತಿ ಸವಾಲನ್ನು ನೀಡಿ ಎಂದು ಕಮಿಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಬ್ರೈನ್ ಟೀಸರ್ ಸಕತ್ ಸೌಂಡ್ ಮಾಡುತ್ತಿರುವುದು ನಿಜವಾಗಿದೆ.

Social Media number brain teaser 1 | Live Kannada News
Social Media: ಇದನ್ನ ನೋಡ್ತಾ ಇದ್ರೆ ತಲೆ ತಿರುಗುತ್ತೆ; ಇಲ್ಲಿ ನಿಮಗೆ ಕಾಣುವ ಸಂಖ್ಯೆ ಯಾವುದು? ಟ್ರೆಂಡ್ ಸೆಟ್ ಮಾಡಿದ ಬ್ರೇನ್ ಟೀಸರ್! https://sihikahinews.com/2023/10/26/social-media-number-brain-teaser/

ಈ ಚಿತ್ರವನ್ನು ಸ್ವಲ್ಪ ಮೇಲಕ್ಕೇತ್ತಿ ಅದನ್ನೇ ದಿಟ್ಟಿಸಿ ನೋಡಿದರೆ ಅದರಲ್ಲಿರುವ ಸಂಖ್ಯೆ ನಿಮಗೆ ಗೋಚರವಾಗುತ್ತದೆ. ಅದು 17 ಆಗಿದೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತದೆ. ಈ ರೀತಿಯ ಆರೋಗ್ಯಕರ ಚರ್ಚೆಗಳು ನಡೆಯುತ್ತಿರುವುದು ಒಳಿತು.

Comments are closed.