EV vehicle: ಹೀರೋ ಬೈಕ್ ಇದ್ದವರಿಗೆ ಗುಡ್ ನ್ಯೂಸ್ ನೀಡಿದ ಆರ್ ಟಿ ಒ; ನಿಮ್ಮ ಬೈಕ್ ಗೂ ಸಿಕ್ತು ಈ ಪರ್ಮಿಶನ್!

EV vehicle: ಪ್ರಸ್ತುತ ದಿನದಲ್ಲಿ ಬೈಕ್ (Bike) ಕೊಂಡುಕೊಳ್ಳುವುದು ಎಷ್ಟು ಕಷ್ಟವೋ ಅದಕ್ಕೆ ಇಂಧನ ಹಾಗೂ ಅದರ ನಿರ್ವಹಣೆ (maintenance) ಇನ್ನು ಕಷ್ಟವಾಗಿದೆ. ದಿನೇ ದಿನೇ ಏರುವ ಪೆಟ್ರೋಲ್  ದರದಿಂದ ಅನೇಕರು ಕಂಗಾಲಾಗಿದ್ದಾರೆ. ಅದಕ್ಕಾಗಿ ತಮ್ಮ ಬೈಕ್ ಮಾರಾಟ ಮಾಡಿ ಇಲೆಕ್ಟ್ರಾನಿಕ್ ಬೈಕ್ಗಳ (EV Bike) ಮೊರೆ ಹೋಗುತ್ತಿದ್ದಾರೆ. ಆದರೆ ಹಿರೋ ಸ್ಪ್ಲೆಂಡರ ಬೈಕ್ ಬಳಕೆದಾರರಿಗೆ ಆರ್ಟಿ ಒ ಗುಡ್ ನ್ಯೂಸ್ ನೀಡಿದ್ದು, ನೀವು ನಿಮ್ಮ ಬೈಕನ್ನು ಇಲೆಕ್ಟ್ರಾನಿಕ್ ಬೈಕ್ ಆಗಿ ಪರಿವರ್ತಿಸಿದರೆ ಅದಕ್ಕೆ ಸುಲಭವಾಗಿ ಅಪ್ರೂವಲ್ ನೀಡಲಿದೆ. ಇದನ್ನೂ ಓದಿ: Relationship Laws: ಸೊಸೆಯಾದವಳು ಅತ್ತೆ ಮಾವ ಬೇಡ ಗಂಡ ಮಾತ್ರ ಸಾಕು ಎಂದು ಹೇಳುವಂತಿಲ್ಲ; ಕೋರ್ಟ್ ಆದೇಶ!  

ಸ್ಪ್ಲೆಂಡರ್ ಬೈಕ್ಗಳಿಗೆ ಇವಿ ಕಿಟ್ಗಳನ್ನು ಅಳವಡಿಸುವ ಕೆಲಸವನ್ನು ಪುಣೆಯ ಗೋಗೋಎ 1 ಕಂಪನಿಯು ಮಾಡುತ್ತಿದೆ. ಆರ್ಟಿಒ ಕಚೇರಿಯಿಂದ ಇದಕ್ಕೆ ಅಪ್ರೂವಲ್ ಕೂಡ ಪಡೆದುಕೊಂಡಿದೆ. ಈ ರೀತಿ ಪೆಟ್ರೋಲ್ ಇಂಜಿನ್ನಿಂದ ಇವಿ ಆಗಿ ಪರಿವರ್ತನೆ ಮಾಡಲು ಆರ್ಟಿಒ ಅಧಿಕಾರಿಗಳಿಂದ ಒಪ್ಪಿಗೆ ಪಡೆಯುವುದು ಬಹಳ ಮಹತ್ವದಾಗಿದ್ದಾಗಿದೆ.

ಈ ಗೋಗೋಎ1  ಸ್ಟಾರ್ಟ್ ಅಪ್ ಕಂಪನಿಯು ದೇಶದ 36 ಸ್ಥಳಗಳ ಆರ್ಟಿಓ ಕಚೇರಿಯಿಂದ ಇವಿ ಬೈಕ್ಗಳಾಗಿ ಪರಿವರ್ತನೆ ಮಾಡಲು ಒಪ್ಪಿಗೆ ಪಡೆದುಕೊಂಡಿದೆ. ಇನ್ನು ಪೆಟ್ರೋಲ್ ಬೈಕ್ ಇವಿ ಬೈಕ್ ಆಗಿ ಪರಿವರ್ತನೆ ಆದ ನಂತರ ಹಸಿರು ಬಣ್ಣದ ನಂಬರ್ ಪ್ಲೇಟ್ ನೀಡಲಾಗುತ್ತದೆ. ವಿಶೇಷವಾಗಿ ಕಳೆದ ಹಲವು ವರ್ಷಗಳಿಂದ ಭಾರತೀಯರು ಬಳಕೆ ಮಾಡುತ್ತಿರುವ ಸ್ಪ್ಲೇಂಡರ ಬೈಕಗಳು ಹೆಚ್ಚಿನ ಮೈಲೇಜ್ ನೀಡುತ್ತವೆ. ಇದನ್ನು ಇವಿ ಬೈಕ್ಗಳಾಗಿ ಪರಿವರ್ತನೆ ಮಾಡುವುದರಿಂದ ಒಂದು ಸಲ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ 15೦ ಕೀಮೀ ಓಡಿಸಬಹುದಾಗಿದೆ. ದ್ವಿಚಕ್ರ ವಾಹನಗಳನ್ನು ಇವಿ ವಾಹನವಾಗಿ ರೂಪಾಂತರ ಮಾಡುವಂತಹ ಈ ಕಿಟ್ಗಳ ಮೂಲಕ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಚಲಾಯಿಸಬಹುದು. ಇದರ ಜೊತೆ ಪರಿಸರ ಮಾಲಿನ್ಯವೂ ತಗ್ಗಿದಂತಾಗುತ್ತದೆ. ಇದನ್ನೂ ಓದಿ: Bank Update: ಚೆಕ್ ಮೇಲೆ ಸಂಖ್ಯೆ ಮುಂದೆ “Only” ಅಂತ ಬರೆಯದೇ ಇದ್ರೆಚೆಕ್ ಬೌನ್ಸ್ ಆಗುತ್ತಾ? ಶಿಕ್ಷೆಯೂ ಆಗುತ್ತಾ? ಆರ್ ಬಿ ಐ ಏನ್ ಹೇಳತ್ತೆ?

ಇವಿ ಕಿಟ್ ಗಳನ್ನು ಅಳವಡಿಸಿಕೊಳ್ಳು ಎಷ್ಟು ಖರ್ಚಾಗುತ್ತೆ?:

ಇವಿ ಕನ್ವರ್ಷನ್ ಕಿಟ್ಗಳನ್ನು ಬೈಕ್ಗಳಲ್ಲಿ ಅಳವಡಿಸಿಕೊಳ್ಳಲು 35,೦೦೦ ರೂ.ಗಳನ್ನು ಪಾವತಿಸಬೇಕಾಗುತ್ತದೆ ಇದರ ಜೊತೆ 63೦೦ ರೂ.ಗಳನ್ನು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇದರ ಜೊತೆ ನೀವು ಮೂರು ವರ್ಷಗಳ ವಾರಂಟಿ ಪಡೆದುಕೊಳ್ಳುತ್ತೀರಿ. ಒಂದು ವೇಳೆ ನೀವು ಸಂಪೂರ್ಣವಾಗಿ ಬ್ಯಾಟರಿ ಪ್ಯಾಕ್ಗಳನ್ನು ಬೈಕ್ಗಳಲ್ಲಿ ಅಳವಡಿಸಿಕೊಳ್ಳಲು ಇಚ್ಚಿಸಿದಲ್ಲಿ ನೀವು 95,೦೦೦ರೂ.ಗಳನ್ನು ಪಾವತಿಸಬೇಕಾಗುತ್ತದೆ. ಉತ್ತಮವಾದ ಹಾಗೂ ಅಧಿಕ ವರ್ಷ ಬಾಳಿಕೆ ಬರುವಂತಹ ಇಂತಹ ಕೆಲಸಗಳಿಗೆ ನೀವು ಒಮ್ಮೆ ಹಣ ಖರ್ಚು ಮಾಡಿದರೆ ನಿಮಗೆ ಲಾಭ ಆಗಲಿದೆ. ಇದರ ಜೊತೆ ಆರ್ಟಿಓದಿಂದಲೂ ನಿಮಗೆ ಸುಲಭವಾಗಿ ನಂಬರ್ ಪ್ಲೇಟ್ ಸಿಗಲಿದೆ.

Comments are closed.