Lakshmi pooja; ಶುಕ್ರವಾರ ಈ ಒಂದು ಕೆಲಸ ಮಾಡಿ ಸಾಕು;  ಲಕ್ಷ್ಮಿ ಸದಾ ಸದಾ ಕಾಲಕ್ಕೆ ನಿಮ್ಮ ಮನೆಯಲ್ಲಿಯೇ ನೆಲೆಸಿರುತ್ತಾಳೆ!

Lakshmi pooja: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಲು ಶುಕ್ರವಾರ ಪ್ರಶಸ್ತ ದಿನವಾಗಿದೆ. ಈ ದಿನದಂದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಲಿದ್ದಾಳೆ. ಇದರಿಂದ ನಮ್ಮ ಇಷ್ಟಾರ್ಥಗಳೆಲ್ಲ ನೆರವೇರಲಿದೆ ಎನ್ನುವ ನಂಬಿಕೆ ಆಸ್ತಿಕ ಬಂಧುಗಳಲ್ಲಿದೆ. ಶುಕ್ರವಾರದ ದಿನ ಲಕ್ಷ್ಮಿ ದೇವಿಯ ಜೊತೆ ನಾರಾಯಣನನ್ನು ಆರಾಧನೆ ಮಾಡಬೇಕು. ಇದರಿಂದ ಲಕ್ಷ್ಮಿ ನಾರಾಯಣರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಶುಕ್ರವಾರದ ದಿನ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಶುಭಯೋಗಗಳು ಪ್ರಾಪ್ತಿಯಾಗಲಿದೆ.

ಉಪವಾಸ:

ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಶುದ್ಧ ಮನಸ್ಸು ಹಾಗೂ ದೇಹದಿಂದ ಲಕ್ಷ್ಮಿ ದೇವಿಯ ಧ್ಯಾನ ಮಾಡಬೇಕು.  ಲಕ್ಷ್ಮಿ ದೇವಿಯ ಜೊತೆ ಆಕೆ ಪತಿ ಜಗದೊದ್ದಾರಕ ಶ್ರೀಮನ್ನಾರಾಯಣನನ್ನು ಪೂಜಿಸಬೇಕು. ಪೂಜೆಗಳು ಮುಗಿದ ನಂತರ ಉಪವಾಸ ವೃತ ಕೈಗೊಳ್ಳಬೇಕು. ಈ ವೃತದ ಸಂದರ್ಭದಲ್ಲಿ ಸದಾ ಕಾಲ ಮನಸ್ಸಿನಲ್ಲಿ ಲಕ್ಷ್ಮಿ ನಾರಾಯಣರ ಸ್ಮರಣೆ ಮಾಡಬೇಕು. ಹೀಗೆ ಮಾಡುವುದರಿಂದ ನೀವು ಲಕ್ಷ್ಮಿನಾರಾಯಣರ ಕೃಪೆಗೆ ಪಾತ್ರರಾಗುತ್ತೀರಿ.

ಮಹಾವಿಷ್ಣುವಿಗೆ ಜಲಾಭಿಷೇಕ:

ಶುಕ್ರವಾರ ದಿನ ನೀವು ಮಹಾವಿಷ್ಣುವನ್ನು ಎಷ್ಟು ಆರಾಧನೆ ಮಾಡುತ್ತೀರೊ ಅಷ್ಟು ನೀವು ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಈ ದಿನ ವಿಶೇಷವಾಗಿ ದಕ್ಷಿಣಾವರ್ತಿ ಶಂಖದಿಂದ ವಿಷ್ಣುವಿಗೆ ಜಲಾಭಿಷೇಕ ಮಾಡಿದರೆ ನಿಮ್ಮ ಜೀವನದಲ್ಲಿ ಭಾಗ್ಯೋದಯವಾಗಲಿದೆ.

ಮನೆಯೊಳಗೆ ಗಂಟೆಯ ಶಬ್ಧ ಮೊಳಗಿಸಿ:

ಮಾತೃ ದೇವತೆಯಾದ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ವೇಳೆ ನೀವು ಗಂಟಾನಾದವನ್ನು ಮಾಡಬೇಕು. ಗಂಟೆಯ ಶಬ್ದ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಿಕೊಳ್ಳುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಗೋ ಗ್ರಾಸವನ್ನು ನೀಡಿ:

ಊರ ತಳಿಯ ಹಸುವಿಗೆ ಪ್ರತಿದಿನ ರೊಟ್ಟಿ ಮತ್ತು ಬೆಲ್ಲವನ್ನು ನೀಡಬೇಕು. ಪ್ರತಿದಿನ ಸಾಧ್ಯವಾಗದಿದ್ದಲ್ಲಿ ಶುಕ್ರವಾರದ ದಿನವಾದರೂ ರೊಟ್ಟಿ, ಬೆಲ್ಲವನ್ನು ಗೋ ಗ್ರಾಸದ ರೂಪದಲ್ಲಿ ನೀಡಬೇಕು. ಇದರಿಂದ ಲಕ್ಷ್ಮಿ ನಾರಾಯಣರು ಸಂತುಷ್ಟರಾಗುತ್ತಾರೆ. ಗೋ ಮಾತೆಯಲ್ಲಿ ಸಾಕ್ಷಾತ್ ಮೂವತ್ತ ಮೂರು ಕೋಟಿ ದೇವರುಗಳು ವಾಸವಾಗಿದ್ದಾರೆ. ಗೋವಿಗೆ ಗ್ರಾಸ ನೀಡುವುದರಿಂದ ಆ ಎಲ್ಲ ದೇವತೆಗಳು ಸಂತುಷ್ಟರಾಗುತ್ತಾರೆ. ದೇವತೆಗಳು ಸಂತುಷ್ಟರಾದರೆ ಲಕ್ಷ್ಮಿ ನಾರಾಯಣರು ಅನುಗ್ರಹ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.

ಶುಕ್ರವಾರ ಲಕ್ಷ್ಮಿ ಸಹಸ್ರನಾಮ ಪಠಿಸಿ:

ಶುಕ್ರವಾರದ ದಿನ ದೇವರ ಕೋಣೆಯನ್ನು ಪೂಜೆಗೆ ಮುಂಚೆ ಸ್ವಚ್ಛಗೊಳಿಸಬೇಕು. ಸ್ವಚ್ಛತೆ ಇದ್ದಲ್ಲಿ ಮಾತ್ರ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ. ಶುಕ್ರವಾರದ ದಿನ ಮುಸ್ಸಂಜೆ ವೇಳೆಗೆ ಲಕ್ಷ್ಮಿ ಸಹಸ್ರನಾಮ ಪಠಣ ಮಾಡಬೇಕು. ಇದರಿಂದ ನಿಮ್ಮ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.

Comments are closed.