Gruhalakshmi Scheme: ಎಲ್ಲ ದಾಖಲೆಗಳು ಸರಿ ಇದ್ರೂ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲವೇ? ಹಾಗಾದ್ರೆ ಈ ರೀತಿ ಮಾಡಿ ನೋಡಿ ಕೂಡಲೇ ಜಮಾ ಆಗುತ್ತೆ!

Gruhalakshmi Scheme: ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು (Congress Government) ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿತಿಂಗಳು ಮನೆಯ ಯಜಮಾನಿಗೆ 2೦೦೦ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಈ ಯೋಜನೆ ಆರಂಭದಿಂದಲೂ ಗೊಂದಲ ಗೂಡಾಗಿದೆ. ಇದುವರೆಗೂ ಲಕ್ಷಾಂತರ ಫಲಾನುಭವಿಗಳಿಗೆ ಈ ಯೋಜನೆಯ ಹಣ ಜಮಾ ಆಗಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಇದನ್ನೂ ಓದಿ: Bank Update: ಚೆಕ್ ಮೇಲೆ ಸಂಖ್ಯೆ ಮುಂದೆ “Only” ಅಂತ ಬರೆಯದೇ ಇದ್ರೆಚೆಕ್ ಬೌನ್ಸ್ ಆಗುತ್ತಾ? ಶಿಕ್ಷೆಯೂ ಆಗುತ್ತಾ? ಆರ್ ಬಿ ಐ ಏನ್ ಹೇಳತ್ತೆ?

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಅರ್ಜಿ ಸಲ್ಲಿಸಿದ ತಕ್ಷಣ ನಿಮ್ಮ ಅರ್ಜಿ ಸ್ವಿಕೃತವಾಗಿದ್ದರೆ ಅವರ ಮೊಬೈಲ್ಗೆ ಸಂದೇಶ ರವಾನಿಸಲಾಗುತ್ತದೆ. ಹೀಗೆ ಸಂದೇಶ ಸ್ವೀಕರಿಸಿದ ಹಲವು ಮಹಿಳೆಯರಿಗೆ ಇದುವರೆಗೂ ಹಣ ಜಮಾ ಆಗಿಲ್ಲ. ರಾಜ್ಯದಲ್ಲಿ ಸುಮಾರು 1೦ ಲಕ್ಷ ಮಹಿಳೆಯರ ಖಾತೆ ಹಣ ಜಮಾ ಆಗಿಲ್ಲ ಎಂದು ತಿಳಿದು ಬಂದಿದೆ. ಹಣ ಬಾರದ ಮಹಿಳೆಯರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ನಮ್ಮ  ದಾಖಲೆಗಳೆಲ್ಲ ಸರಿಯಾಗಿದೆ. ನಾವು ಅರ್ಜಿ ಸಲ್ಲಿಸಿದ ವಿಧಾನವೂ ಸರಿಯಾಗಿದೆ ಎಂದು ನಮಗೆ ಸಂದೇಶ ಬಂದಿದೆ. ಆದರೂ ನಮ್ಮ ಖಾತೆಗೆ ಹಣ ಜಮಾ ಆಗಿಲ್ಲ. ಈ ಹಣ ಬರುತ್ತೋ ಇಲ್ಲವೋ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಅರ್ಜಿ ಸಲ್ಲಿಸುವ ಮಹಿಳೆಯರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಲ್ಲಿ ಅಂತಹವರ ಖಾತೆಗೆ ಹಣ ಜಮಾ ಮಾಡಲಾಗಿಲ್ಲ.  ಇದರ ಜೊತೆ ಕಳೆದ ಎರಡು ವರ್ಷಗಳಿಂದ ಬ್ಯಾಂಕ್ ಖಾತೆ ನಿರ್ವಹಣೆ ಮಾಡದವರಿಗೂ ಹಣ ಜಮಾ ಮಾಡಲಾಗಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

ಗ್ರಾಮೀಣ ಭಾಗದಲ್ಲಿ ಅನೇಕ ಮಹಿಳೆಯರು ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದು ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಅದನ್ನು ನಿರ್ವಹಣೆ ಮಾಡಿಲ್ಲ. ಇದರ ಜೊತೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕೂಡ ಮಾಡಿಲ್ಲ. ಇಂತಹ ಬ್ಯಾಂಕ್ ಖಾತೆಗಳನ್ನು ಗೃಹಲಕ್ಷ್ಮಿ ಯೋಜನೆಗೆ ನೀವು ನೀಡಿದ್ದರೆ ನಿಮಗೆ ಹಣ ಜಮಾ ಆಗುವುದಿಲ್ಲ. ಇದನ್ನೂ ಓದಿ: UPI update: ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನೇರ ಹಣ ವರ್ಗಾವಣೆ ಮಾಡುವವರಿಗೆ ಆರ್ ಬಿ ಐ ನಿಂದ ಸಿಹಿ ಸುದ್ದಿ! ಸಣ್ಣ ಅಂಗಡಿ ಮಾಲಿಕರಿಗೆ ಬೆನಿಫಿಟ್!

ಆಧಾರ್ ಕಾರ್ಡ್ (Adhaar card) ಹಾಗೂ ಪಡಿತರ ಚೀಟಿಯ (ration Card) ಆಧಾರದ ಮೇಲೆಯೇ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಯ ಆಯ್ಕೆ ಮಾಡಲಾಗುತ್ತದೆ. ಇನ್ನು ಅನೇಕ ಮಹಿಳೆಯ ಪಡಿತರ ಚೀಟಿಯಲ್ಲಿ ಪತಿಯ ಹೆಸರು ಮೊದಲು ಇರುವುದರಿಂದಲೂ ಹಣ ಜಮಾ ಆಗಿಲ್ಲ. ಅಲ್ಲದೆ ಸರ್ಕಾರವು ಸಹ ಈ ಪಡಿತರ ಚೀಟಿ ತಿದ್ದುಪಡಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಆರಂಭಿಸುವ ವೇಳೆ ಸರ್ಕಾರವು ತೋರಿದ ಉತ್ಸಾಹ ಎರಡೇ ತಿಂಗಳಲ್ಲೇ ಕಡಿಮೆ ಆದಂತೆ ಭಾಸವಾಗುತ್ತಿದೆ. ಬಾಯಿಯಲ್ಲಿ ಎಲ್ಲರಿಗೂ ಯೋಜನೆ ತಲುಪಿಸುತ್ತೇವೆ ಎಂದು ಭರವಸೆ ನೀಡಿದರೂ ತಾಂತ್ರಿಕ ಕಾರಣ ನೀಡಿ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವ ಹುನ್ನಾರ ನಡೆಸುತ್ತಿದೆಯೇ ಎನ್ನುವ ಅನುಮಾನವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟು ಇಷ್ಟವಿಲ್ಲದಿದ್ದರೆ ಯೋಜನೆಯನ್ನು ರದ್ದು ಮಾಡಿ ಎಂದು ಜನರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

Comments are closed.