Mudra Scheme: ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದಲೂ ಗುಡ್ ನ್ಯೂಸ್ ! ಮಹಿಳೆಯರಿಗೆ ಈ ಯೋಜನೆಯಲ್ಲಿ ವಿಶೇಷ ಬೆನಿಫಿಟ್!

Mudra Scheme: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಕೆಳ ಮಧ್ಯಮ ವರ್ಗದವರು ಹಾಗೂ ಮಧ್ಯಮ ವರ್ಗದವರ ಸ್ವಾವಲಂಬಿ ಜೀವನಕ್ಕಾಗಿ ಮುದ್ರಾ ಯೋಜನೆ (Mudra Scheme) ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಸಣ್ಣ ಸಣ್ಣ ವ್ಯಾಪಾರ, ಗೃಹೋದ್ಯಮದಂತಹ ಉದ್ಯಮಗಳನ್ನು ಪ್ರಾರಂಭಿಸಲು ಯಾವುದೇ ಸಾಕ್ಷಿದಾರರ ಸಹಿ ಇಲ್ಲದೆ ಸಾಲ ನೀಡಲಾಗುತ್ತದೆ. ಈ ಯೋಜನೆಯನ್ನು 2೦15ರಲ್ಲಿ ಜಾರಿಗೆ ತರಲಾಗಿದೆ. ಇದನ್ನೂ ಓದಿ: UPI update: ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನೇರ ಹಣ ವರ್ಗಾವಣೆ ಮಾಡುವವರಿಗೆ ಆರ್ ಬಿ ಐ ನಿಂದ ಸಿಹಿ ಸುದ್ದಿ! ಸಣ್ಣ ಅಂಗಡಿ ಮಾಲಿಕರಿಗೆ ಬೆನಿಫಿಟ್!

ಮುದ್ರಾ ಸಾಲ ಯೋಜನೆ ಅಡಿಯಲ್ಲಿ ಮೂರು ವಿಭಾಗವಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಶಿಶು ಸಾಲ ಯೋಜನೆ, ಎರಡನೆಯದಾಗಿ ಕಿಶೋರ ಸಾಲ ಯೋಜನೆ ಮೂರನೇಯದಾಗಿ ತರುಣ ಸಾಲ ಯೋಜನೆ ಎನ್ನುವುದಾಗಿ ವಿಂಗಡಿಸಲಾಗಿದೆ. ಕಿಶೋರ ಹಾಗೂ ತರುಣ ಸಾಲ ಯೋಜನೆ ಅಡಿಯಲ್ಲಿ 5೦,೦೦೦ ರೂ.ನಿಂದ 1೦,೦೦೦೦ ರೂ. ವರೆಗೆ ಸಾಲ ನೀಡಲಾಗುತ್ತಿದೆ. ಇದರ ಜೊತೆ ಮಹಿಳಾ ಸಾಲ ಯೋಜನೆ ಕೂಡ ಜಾರಿಗೆ ತರಲಾಗಿದೆ. ಈ ಮಹಿಳಾ ಸಾಲ ಯೋಜನೆ ಪಡೆದುಕೊಳ್ಳುವುದು ಹೇಗೆ? ಎಷ್ಟು ರೂಪಾಯಿ ಸಾಲ ನೀಡಲಾಗುತ್ತದೆ? ಯಾವ ಯಾವ ಕೆಲಸಗಳಿಗಾಗಿ ಸಾಲ ನೀಡಲಾಗುತ್ತದೆ ಎನ್ನುವುದರ ಕುರಿತು ತಿಳಿದುಕೊಳ್ಳೋಣ.

ಮಹಿಳೆಯರಿಗೆ ವಿಶೇಷ ಬೆನಿಫಿಟ್!

ಮಹಿಳೆಯರಿಗೆ ಈ ಸಾಲವನ್ನು ಎನ್ಬಿಎಫ್ಸಿ (NBFC) ಸಂಸ್ಥೆಯ ಮೂಲಕ ನೀಡಲಾಗುತ್ತದೆ. ಮಹಿಳೆಯರು ಯಾವ ಉದ್ಯಮ ಅಥವಾ ವ್ಯಾಪಾರ ಶುರು ಮಾಡುತ್ತಿದ್ದೇವೆ ಎನ್ನುವುದನ್ನು ಮೊದಲು ದಾಖಲೆ ಸಮೇತ ತಿಳಿಸಬೇಕಾಗುತ್ತದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರು ಒಂದರಿಂದ ಏಳು ವರ್ಷಗಳ ಕಾಲಾವಧಿಯನ್ನು ಸಾಲ ತೀರಿಸಲು ಪಡೆದುಕೊಳ್ಳಬಹುದು. ಈ ಸಾಲಕ್ಕೆ ಶೇ.7.3೦ ರೂ. ಬಡ್ಡಿದರವನ್ನು ವಿಧಿಸಲಾಗುತ್ತದೆ. ಯಾವ ಯಾವ ಕೆಲಸಗಳಿಗೆ ಈ ಸಾಲ ನೀಡಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ಇದನ್ನೂ ಓದಿ: Gruhalakshmi Scheme: ಬರಗಾಲದಿಂದ ಗೃಹಜ್ಯೋತಿ ಗ್ಯಾರೆಂಟಿಗೆ ಬಿತ್ತಾ ಹೊಡೆತ? ಸದ್ಯದಲ್ಲೇ ರದ್ದಾಗುತ್ತಾ ಗೃಹಜ್ಯೋತಿ ಯೋಜನೆ!

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಮುದ್ರಾ ಯೋಜನೆ ಅಡಿ ಸಾಲ ನೀಡುವ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಅಲ್ಲಿ ಬ್ಯಾಂಕ್ ಮ್ಯಾನೇಜರ್ ಅಥವಾ ಅಲ್ಲಿರುವ ಅಧಿಕಾರಿಗಳಿಗೆ ನೀವು ಯಾವ ಉದ್ಯಮ ಅಥವಾ ವ್ಯಾಪಾರ ಆರಂಭಿಸಲಿದ್ದೀರಿ ಎನ್ನುವ ಸಂಪೂರ್ಣ ಮಾಹಿತಿ ನೀಡಬೇಕು. ಈ ಎಲ್ಲ ಮಾಹಿತಿ ನೀಡಿದ ನಂತರ ಅಧಿಕಾರಿಗಳು ನಿಮಗೆ ಮುದ್ರಾ ಯೋಜನೆ ಅರ್ಜಿಯನ್ನು ನೀಡುತ್ತಾರೆ. ಅದನ್ನು ಭರ್ತಿ ಮಾಡಿ ಅಲ್ಲಿ ಕೇಳಲಾಗಿರುವ ದಾಖಲೆಗಳನ್ನು ನೀವು ಒದಗಿಸಬೇಕು.

ಅಧಿಕಾರಿಗಳು ನೀವು ಮುದ್ರಾ ಯೋಜನೆ ಅಡಿ ಸಾಲ ಸೌಲಭ್ಯ ಪಡೆಯಲು ಅರ್ಹರೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ನಿಮ್ಮ ಅರ್ಜಿ ಸ್ವಿಕೃತವಾದರೆ ಅದನ್ನು ಮುಂದಿನ ಹಂತಕ್ಕೆ ತಲುಪಿಸಲಾಗುತ್ತದೆ. ಇದಾದ ಬಳಿಕ ಮುದ್ರಾ ಯೋಜನೆಯ ಕಂಡಿಶನ್ ಹಾಗೂ ನಿಯಮಗಳನ್ನು ನಿಮಗೆ ತಿಳಿಸಿ ಅದಕ್ಕೆ ಸಹಿ ಪಡೆದುಕೊಳ್ಳುತ್ತಾರೆ. ಇದನ್ನು ಓದಿ: Social Media: ಇದನ್ನ ನೋಡ್ತಾ ಇದ್ರೆ ತಲೆ ತಿರುಗುತ್ತೆ; ಇಲ್ಲಿ ನಿಮಗೆ ಕಾಣುವ ಸಂಖ್ಯೆ ಯಾವುದು? ಟ್ರೆಂಡ್ ಸೆಟ್ ಮಾಡಿದ ಬ್ರೇನ್ ಟೀಸರ್!

ಈ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ನಿಮಗೆ ನೀಡಲಾಗುವ ಸಾಲದ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಮುಗಿದ ಹತ್ತರಿಂದ ಹದಿನೈದು ದಿನದ ಒಳಗಡೆ ನಿಮ್ಮ ಖಾತೆ ಸಾಲದ ಹಣ ಜಮಾ ಮಾಡಲಾಗುತ್ತದೆ.

Comments are closed.