UPI Payment: ಬೇರೆಯವರಿಗೆ ಖಾತೆಗೆ ಯುಪಿಐ ಬಳಸಿ 50 ಸಾವಿರಕ್ಕಿಂತ ಅಧಿಕ ಹಣ ವರ್ಗಾವಣೆ ಮಾಡ್ತೀರಾ? ಹಾಗಾದ್ರೆ RBI ನ ಈ ನಿಯಮ ನಿಮಗೂ ಅಪ್ಲೈ ಆಗುತ್ತೆ!

UPI Payment: ಭಾರತದಲ್ಲಿ ಇಂದು ಆನ್ಲೈನ್ (Online) ವ್ಯವಹಾರಗಳು ಹೆಚ್ಚಾಗುತ್ತಿವೆ. ತರಕಾರಿ ಮಾರುವವನಿಂದ ಹಿಡಿದು ದೊಡ್ಡ ದೊಡ್ಡ ವ್ಯವಹಾರ ಮಾಡುವವರು ಸಹ ಆನ್ಲೈನ್ ಮೂಲಕವೇ ಹಣ ವರ್ಗಾವಣೆ ಮಾಡುತ್ತಾರೆ. ಆರ್ಥಿಕ ವ್ಯವಹಾರ ಅಷ್ಟೇ ಅಲ್ಲದೆ ಎಷ್ಟೋ ದಾಖಲೆಗಳನ್ನು, ಸರ್ಕಾರಿ ವ್ಯವಹಾರನ್ನು ಇಂದು ಆನ್ಲೈನ್ ಮಾಡಲಾಗಿದೆ. ಅದರಲ್ಲೂ ಆರ್ಥಿಕ ವ್ಯವಹಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವ್ಯವಹಾರ ಹೆಚ್ಚಾದ ಹಾಗೆ ಮೋಸ ಮಾಡುವವರು ಹೆಚ್ಚಾಗುತ್ತಿದ್ದಾರೆ. 1 ರೂಪಾಯಿ ಇರಲಿ, ಸಾವಿರ ರೂಪಾಯಿ ಇರಲಿ ಈಗ ಜನಸಾಮಾನ್ಯರೂ ಗೂಗಲ್ ಪೇ (Google Pay), ಫೋನ್ ಪೇ (Phone Pay), ಪೇ ಎಟಿಂ (PayTM), ಭಾರತ್ ಪೇ ಅಂತಹ ಅಪ್ಲಿಕೇಶನ್ ಬಳಸಿ ಹಣ ವರ್ಗಾವಣೆ ಮಾಡುತ್ತಾರೆ. ಇದೇ ವೇಳೆ ಇದನ್ನೇ ಬಳಸಿಕೊಂಡು ಮೋಸ ಮಾಡುವವರು ಹುಟ್ಟಿಕೊಂಡಿದ್ದಾರೆ. ಹಾಗಾಗಿ ಆರ್ಬಿಐ ನಗದು ವರ್ಗಾವಣೆ ಮಾಡುವವರು ಮೋಸ ಹೋಗಬಾರದು ಎನ್ನುವ ಕಾರಣಕ್ಕೆ ಹೊಸ ನಿಯಮ ಜಾರಿಗೆ ತಂದಿದೆ. ಇದನ್ನೂ ಓದಿ: Gruhalakshmi Scheme: ಎಲ್ಲ ದಾಖಲೆಗಳು ಸರಿ ಇದ್ರೂ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲವೇ? ಹಾಗಾದ್ರೆ ಈ ರೀತಿ ಮಾಡಿ ನೋಡಿ ಕೂಡಲೇ ಜಮಾ ಆಗುತ್ತೆ!

ಸರ್ಕಾರದ ಈ ನಿಯಮ ಪಾಲಿಸಲೇಬೇಕು!

ಇನ್ನು ಮುಂದೆ ನೀವು 5೦ ಸಾವಿರ ರೂ.ಗಿಂತ ಅಧಿಕ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಬೇಕಾದರೆ ಈ ನಿಯಮ ಪಾಲಿಸಬೇಕಾಗುತ್ತದೆ. ಸದ್ಯ ಇದು ಭಾರತೀಯ ಹಣ ವರ್ಗಾವಣೆಗಷ್ಟೇ ಸೀಮಿತವಾಗಿದ್ದು, ಇನ್ಮುಂದೆ ವಿದೇಶಿ ಹಣ ವರ್ಗಾವಣೆಗೂ ಹೊಸ ನಿಯಮ ಜಾರಿಗೆ ತರಲು ಆರ್ಬಿಐ ನಿರ್ಧರಿಸಿದೆ. 5೦ ಸಾವಿರ ರೂ.ಗಳಿಂತ ಅಧಿಕ ಹಣ ವರ್ಗಾವಣೆ ಮಾಡಬೇಕಾದರೆ ನೀವು ಯಾರಿಗೆ ವರ್ಗಾವಣೆ ಮಾಡುತ್ತೀರಾ? ಹಣದ ಮೂಲ ಏನು? ಎಲ್ಲಿಂದ ನೀಡುತ್ತಿದ್ದೀರಿ ಎನ್ನುವ ಮಾಹಿತಿ ನೀಡಬೇಕಾಗುತ್ತದೆ.

ನಗದು ವಹಿವಾಟು:

ಇದೀಗ ಬ್ಯಾಂಕ್ಗಳಲ್ಲಿ ಗ್ರಾಹಕರು ನಡೆಸುವ ನಗದು ವಹಿವಾಟಿನ ಮೇಲೂ ಆರ್ಬಿಐ ನಿಗಾ ಇಟ್ಟಿದೆ. ಯಾರ್ಯಾರು ಎಷ್ಟು ಪಾವತಿ ಮಾಡುತ್ತಾರೆ, ಎಷ್ಟು ಹಣ ವಾಪಸ್ ಪಡೆಯುತ್ತಾರೆ? ಪ್ರತಿದಿನ ಹಣ ಡ್ರಾ ಮಾಡುತ್ತಿದ್ದಾರಾ? ಅಥವಾ ಯಾರ ಖಾತೆಗೆ ಹಣ ಜಮಾ ಮಾಡಿದ್ದಾರೆ? ಆ ಖಾತೆದಾರರನ ವಿವರಗಳನ್ನು ಆರ್ಬಿಐ ಪಡೆದುಕೊಳ್ಳುತ್ತಿದೆ. ಬ್ಯಾಂಕ್ ಖಾತೆಗಳಿಂದಲೂ ದೊಡ್ಡ ಮೊತ್ತದ ಹಣ ಪಡೆದುಕೊಳ್ಳಲು ನಿಯಮ ಜಾರಿ ಮಾಡಲಾಗಿದೆ. ಇದನ್ನೂ ಓದಿ: EV vehicle: ಹೀರೋ ಬೈಕ್ ಇದ್ದವರಿಗೆ ಗುಡ್ ನ್ಯೂಸ್ ನೀಡಿದ ಆರ್ ಟಿ ಒ; ನಿಮ್ಮ ಬೈಕ್ ಗೂ ಸಿಕ್ತು ಈ ಪರ್ಮಿಶನ್!

ಆನ್ಲೈನ್ ಪೇಮೆಂಟ್ ಮಾಡುವ ವೇಳೆ ಹುಷಾರು:

ಆನ್ಲೈನ್ ಪೇಮೆಂಟ್ ವಿಚಾರದಲ್ಲಿ ಜನರು ಬಹಳ ಜಾಗರೂಕರಾಗಿರಬೇಕು. ದಿನ ದಿನೇ ಸೈಬರ್ ಮೋಸದ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಮ್ಮ ಖಾತೆಯಿಂದ ನಿಮಗೆ ತಿಳಿಯದಂತೆ ಹಣವನ್ನು ಕಳವು ಮಾಡಲಾಗುತ್ತದೆ. ಹಾಗಾಗಿ ನೀವು ಯುಪಿಐ ಬಳಸಿ ಹಣ ಪಾವತಿ ಮಾಡುವ ವೇಳೆ ನಿಮ್ಮ ಸಿಕ್ರೆಟ್ ಕೋಡ್ ಯಾರಿಗೂ ಕಾಣದಂತೆ ನಮೂದಿಸಿ. ಸಿಕ್ರೆಟ್ ಕೋಡ್ ಆಗಾಗ ಬದಲಾಯಿಸುತ್ತೀರಿ, ಅಲ್ಲದೆ ಪ್ರತಿ ಪಾವತಿ ನಂತರ ನಿಮ್ಮ ಖಾತೆಯಲ್ಲಿ ಇರುವ ಹಣ ಎಷ್ಟು ಎನ್ನುವುದನ್ನು ನೋಡುತ್ತೀರಿ. ಇಲ್ಲದಿದ್ದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ಹಣವನ್ನು ಎಗರಿಸಿ ಬಿಡುತ್ತಾರೆ.

Comments are closed.