New rules for new buildings: ಹೊಸದಾಗಿ ಮನೆ ಕಟ್ಟೋರಿಗೆ RBIನಿಂದ ಗುಡ್ ನ್ಯೂಸ್ ! ಪಡೆದುಕೊಳ್ಳಿ ಈ ಯೋಜನೆಯ ಬೆನಿಫಿಟ್!

New rules for new buildings: ಪ್ರತಿಯೊಬ್ಬ ವ್ಯಕ್ತಿಯು ಸ್ವಂತ ಉದ್ಯಮ ಮಾಡಿಯೋ, ವ್ಯಾಪಾರ ವ್ಯವಹಾರ ಮಾಡಿಯೋ ಅಥವಾ ಉದ್ಯೋಗ ಮಾಡುವುದು ಬದುಕು ಕಟ್ಟಿಕೊಳ್ಳುವ ಸಲುವಾಗಿ. ಈ ರೀತಿ ದುಡಿದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸಿಕೊಂಡು ಹೋಗುತ್ತಾನೆ. ಯಾಕೆಂದರೆ ಮುಂದಿನ ಜೀವನ ಚೆನ್ನಾಗಿರಬೇಕು ಎಂದು. ಅಲ್ಲದೆ ಪ್ರತಿಯೊಬ್ಬರಿಗೂ ತಮ್ಮದೆ ಆದ ಸ್ವಂತ ಮನೆ, ವಾಹನ ಇರಬೇಕು ಎಂದು ಬಯಸುವುದು ಸಹಜ. ಆದರೆ ಈ ಮನೆ ನಿರ್ಮಾಣದ ವಿಚಾರ ಎಂದರೆ ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಇದನ್ನೂ ಓದಿ: EV vehicle: ಹೀರೋ ಬೈಕ್ ಇದ್ದವರಿಗೆ ಗುಡ್ ನ್ಯೂಸ್ ನೀಡಿದ ಆರ್ ಟಿ ಒ; ನಿಮ್ಮ ಬೈಕ್ ಗೂ ಸಿಕ್ತು ಈ ಪರ್ಮಿಶನ್!

ಮನೆ ನಿರ್ಮಾಣಕ್ಕಾಗಿ ಹೆಚ್ಚಿನ ಜನರು ಬ್ಯಾಂಕ್ಗಳಲ್ಲಿ ಸಾಲ ಮಾಡುತ್ತಾರೆ. ಸಾಮಾನ್ಯವಾಗಿ ಅರ್ಹರಿಗೆ ಬ್ಯಾಂಕ್ಗಳು ಹೆಚ್ಚಿನ ಯೋಚನೆ ಮಾಡದೆ ಸಾಲವನ್ನೂ ನೀಡುತ್ತದೆ. ಈ ಮಧ್ಯೆ ಆರ್ಬಿಐ ರೆಪೋ ದರದ ವ್ಯತ್ಯಯದಿಂದ ಗೃಹ ಸಾಲದ ಬಡ್ಡಿದರ ಏರಿಕೆ ಕಂಡಿತ್ತು. ಆದರೆ ಇದೀಗ ಕೆಲವು ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲಾಗುತ್ತಿದೆ. ಹೊಸ ಮನೆ, ಅಪಾರ್ಟ್ಮೆಂಟ್ ಖರೀದಿ ಇಲ್ಲವೇ ಮನೆ ನಿರ್ಮಾಣಕ್ಕೆ ಸಾಲ ಪಡೆದುಕೊಳ್ಳಬಹುದು.

ಕೆಲವು ಬ್ಯಾಂಕ್ಗಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ. ಮನೆ ನಿರ್ಮಾಣಕ್ಕೆ ಮುಂದಾಗಿರುವವರು ಈ ಪ್ರಯೋಜನ ಪಡೆದುಕೊಳ್ಳಬಹುದು. ದೇಶದಲ್ಲಿರುವ ಹತ್ತು ಬ್ಯಾಂಕ್ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗೃಹ ಸಾಲವನ್ನು ರೀಟೇಲ್ ಕ್ರೆಡಿಟ್ ಎಂದು ಕರೆಯಬಹುದು.ಯಾಕೆಂದರೆ ನೀವು ಗೃಹ ಸಾಲ ಪಡೆದ ನಂತರ ಇಎಂಐ ಮೂಲಕ ಸಾಲ ವಾಪಸ್ ಪಾವತಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಗೃಹ ಸಾಲ ಪಡೆದವರಿಗೆ ಅದನ್ನು ವಾಪಸ್ ಪಾವತಿ ಮಾಡಲು ಇಪ್ಪತ್ತು ವರ್ಷದ ಅವಧಿ ಇರುತ್ತದೆ. ಈ ಇಪ್ಪತ್ತು ವರ್ಷದಲ್ಲಿ ನೀವು ಕಂತುಗಳ ಮೂಲಕ ಸಾಲ ಮರುಪಾವತಿ ಮಾಡಬಹುದಾಗಿದೆ. ಈ ರೀತಿ ಕಂತುಗಳಲ್ಲಿ ಮರುಪಾವತಿ ಮಾಡುವುದರಿಂದ ನಿಮ್ಮ ಮೇಲೆ ಹೊರೆ ಬಿದ್ದಂತೆ ಅನಿಸುವುದಿಲ್ಲ. ನಿಮಗೆ ತಿಳಿಯದಂತೆಯೇ ಸಾಲ ಮರುಪಾವತಿಯಾಗಿರುತ್ತದೆ. ಇದನ್ನು ಓದಿ: Social Media: ಇದನ್ನ ನೋಡ್ತಾ ಇದ್ರೆ ತಲೆ ತಿರುಗುತ್ತೆ; ಇಲ್ಲಿ ನಿಮಗೆ ಕಾಣುವ ಸಂಖ್ಯೆ ಯಾವುದು? ಟ್ರೆಂಡ್ ಸೆಟ್ ಮಾಡಿದ ಬ್ರೇನ್ ಟೀಸರ್!

ಯಾವ ಯಾವ ಬ್ಯಾಂಕ್ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರ ಎಷ್ಟಿದೆ ಎಂದು ತಿಳಿದುಕೊಳ್ಳೊಣ. ಇಂಡಿಯನ್ ಬ್ಯಾಂಕ್: 8.45-9.೦1%, ಎಚ್ಡಿಎಫ್ಸಿ ಬ್ಯಾಂಕ್: 8.45-9.85%, ಇಂಡಸ್ಇಂಡ್ ಬ್ಯಾಂಕ್: 8.5-9.75%, ಪಂಜಾಬ್ ನ್ಯಾಶನಲ್ ಬ್ಯಾಂಕ್: 8.6-9.45%, ಬ್ಯಾಂಕ್ ಆಫ್ ಮಹಾರಾಷ್ಟ್ರ: 8.6-10.3%, ಬ್ಯಾಂಕ್ ಆಫ್ ಬರೋಡಾ: 8.2-10.5%, ಬ್ಯಾಂಕ್ ಆಫ್ ಇಂಡಿಯಾ: 8.65-10.2%, ಕರ್ನಾಟಕ ಬ್ಯಾಂಕ್: 8.75-1೦.43%, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ: 8.75-1೦.5%, ಕೋಟಕ್ ಮಹೀಂದ್ರಾ ಬ್ಯಾಂಕ್: 8.85-9.35%.

ಗೃಹಸಾಲ ಪಡೆದುಕೊಳ್ಳುವ ಮುನ್ನ ಇರಲಿ ಎಚ್ಚರ:

ಬ್ಯಾಂಕ್ಗಳು ನಿಮಗೆ ಎಷ್ಟು ಬೇಕಾದರೂ ಹಣವನ್ನು ಸಾಲದ ರೂಪದಲ್ಲಿ ನೀಡಬಹುದು. ಆದರೆ ಸಾಲ ಪಡೆಯುವ ಮುನ್ನ ನೀವು ಕೆಲವೊಂದು ಎಚ್ಚರಿಕೆ ವಹಿಸಬೇಕು. ಮನೆ ನಿರ್ಮಾಣಕ್ಕೆ ಎಷ್ಟು ಹಣ ಬೇಕೋ ಅಷ್ಟೇ ಸಾಲವನ್ನು ಪಡೆದುಕೊಳ್ಳಬೇಕು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಪ್ರತಿ ತಿಂಗಳು ಕಂತು ಪಾವತಿ ಮಾಡುವುದನ್ನು ಮರೆಯಬಾರದು, ಹೀಗಾಗಿ ಉಳಿತಾಯ ಮತ್ತು ಖರ್ಚಿನ ನಂತರ ನಿಮಗೆ ಸಾಲ ಮರುಪಾವತಿ ಮಾಡುವ ಶಕ್ತಿ ಇದ್ದರೆ ಮಾತ್ರ ಸಾಲ ಪಡೆಯಲು ಮುಂದಾಗಬೇಕು. ಇದನ್ನೂ ಓದಿ: Relationship Laws: ಸೊಸೆಯಾದವಳು ಅತ್ತೆ ಮಾವ ಬೇಡ ಗಂಡ ಮಾತ್ರ ಸಾಕು ಎಂದು ಹೇಳುವಂತಿಲ್ಲ; ಕೋರ್ಟ್ ಆದೇಶ!  

Comments are closed.