Scholarship for Students: ವಿದ್ಯಾರ್ಥಿಗಳು ಖುಷಿ ಪಡೋ ಸುದ್ದಿ ಇದು; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿದೆ ವಿದ್ಯಾರ್ಥಿ ವೇತನ; ಪ್ರತಿ ವರ್ಷ ಸಿಗುತ್ತೆ 1೦ ಸಾವಿರ ರೂ.

Scholarship for Students from SBI Foundation: ಪ್ರತಿಯೊಬ್ಬ ವಿದ್ಯಾರ್ಥಿಗೂ ತಾನು ಓದಬೇಕು, ಹೆಚ್ಚಿನ ಅಂಕ ಗಳಿಸಬೇಕು, ಈ ಮೂಲಕ ಉತ್ತಮ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಕೆಲವೊಬ್ಬರಿಗೆ ಇದು ಸಾಧ್ಯವಾಗುತ್ತದೆ. ಪಾಲಕರ ಆರ್ಥಿಕ ಸ್ಥಿತಿ ಉತ್ತಮವಾಗಿರುವವರು, ಮೇಲ್ಮದ್ಯಮ ವರ್ಗದವರು ಸಾಲ ಮಾಡಿಯಾದರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಆದರೆ ಬಡವರು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದರೂ ಆರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಗಿ ಬರುತ್ತದೆ.

SBI Foundation Giving Scholarship for Students from Last Few Years. Students Can apply Here.

ಕೇವಲ ಆರ್ಥಿಕ ಸಮಸ್ಯೆ ಒಂದೇ ಶಿಕ್ಷಣ ಮೊಟಕುಗೊಳಿಸಲು ಕಾರಣವಾಗಿದ್ದರೂ ಆರ್ಥಿಕ ಸಮಸ್ಯೆಯೂ ಒಂದು ಮಹತ್ವದ ಕಾರಣವಾಗಿರುತ್ತದೆ. ಆದರೆ ಈಗ ಹಣದ ಚಿಂತೆ ಮಾಡುವ ಅಗತ್ಯವಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ Scholarship for Students ನೀಡಲು ಮುಂದಾಗಿದೆ.

ಎಸ್ಬಿಐಎಫ್ ಆಶಾ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಇದು ಎಸ್ಬಿಐ ಫೌಂಡೇಶನ್ (SBI Foundation) ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವಾಗಿದೆ. ಹಾಗಾದರೆ ಈ ವಿದ್ಯಾರ್ಥಿವೇತನ Scholarship for Students ಪಡೆದುಕೊಳ್ಳಲು ಯಾವ ಯಾವ ಅರ್ಹತೆ ಇರಬೇಕು, ಎಷ್ಟು ಓದಿರಬೇಕು, ಯಾವ ರೀತಿ ಅರ್ಜಿ ಸಲ್ಲಿಸಬೇಕು, ಎಷ್ಟು ಹಣ ಸಿಗುತ್ತದೆ ಎನ್ನುವುದರ ಕುರಿತು ಈಗ ತಿಳಿದುಕೊಳ್ಳೋಣ.

ಕಡೆಗೂ ration card ಸಿಗದೇ ಬೇಸೆತ್ತ ಜನರಿಗೆ ಗುಡ್ ನ್ಯೂಸ್ ನೀಡಿದೆ ಸರ್ಕಾರ. ಯಾವಾಗ ಸಿಗಲಿದೆ ಗೊತ್ತಾ ಹೊಸ ಬಿಪಿಎಲ್ ಕಾರ್ಡ್?

ಆಶಾ ವಿದ್ಯಾರ್ಥಿ ವೇತನ-2023

ಆಶಾ ವಿದ್ಯಾರ್ಥಿವೇತನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಎಸ್ಆರ್ ಅಂಗವಾಗಿದೆ. ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಸುಧಾರಣೆಗಾಗಿ ಈ ರೀತಿ ಶಿಷ್ಯವೇತನವನ್ನು Scholarship for Students ನೀಡಲಾಗುತ್ತದೆ. ಎಸ್ಬಿಐ ಫೌಂಡೇಶನ್, ಎಸ್ಬಿಐ ಗ್ರುಪ್ ನೈತಿಕತೆ ಪ್ರತಿಬಿಂಬಿಸುವಲ್ಲಿ, ನೈತಿಕವಾದ ಬೆಳವಣಿಗೆ ಮತ್ತು ಸಮಾನತೆ ಉತ್ತೇಜಿಸುವ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಹೊಂದಲಾಗಿದೆ. ದೇಶಾದ್ಯಂತ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣದ ನಿರಂತರತೆ ಖಚಿತಪಡಿಸಲು ಹಣಕಾಸಿನ ನೆರವು ನೀಡಲಾಗುತ್ತದೆ.

ಶಿಷ್ಯವೇತನ ಪಡೆಯಲು ಬೇಕಾಗಿರುವ ಅರ್ಹತೆಗಳು:

ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 6ರಿಂದ 12 ನೇ ತರಗತಿ ಒಳಗಡೆ ಓದುತ್ತಿರುವವರಾಗಿರಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ.75 ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು. ಎಲ್ಲಾ ಮೂಲಗಳಿಂದ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷ ರೂ. ಮೀರಿರಬಾರದು. ಭಾರತದಲ್ಲಿರುವ ಎಲ್ಲ ವಿದ್ಯಾರ್ಥಿಗಳು Scholarship for Students ಇದಕ್ಕೆ ಅರ್ಜಿ ಸಲ್ಲಿಸಬಹುದು.

ಈ ಶಿಷ್ಯವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಅಥವಾ ಅವರ ಪಾಲಕರ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ 1೦,೦೦೦ ರೂ. ಜಮಾ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬ ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ರಸಕ್ತ ವರ್ಷದ ಶಾಲೆಯ ಪ್ರವೇಶಾತಿ ರಸಿದಿ, ಅರ್ಜಿದಾರ ವಿದ್ಯಾರ್ಥಿಯ ಅಥವಾ ಆತನ ಪಾಲಕರ ಬ್ಯಾಂಕ್ ಖಾತೆಯ ವಿವರಗಳು, ಅರ್ಜಿದಾರರ ಭಾವಚಿತ್ರವನ್ನು ನೀಡಲಾಗುತ್ತದೆ.

ಎಸ್ಬಿಐನ ಆಶಾ ವಿದ್ಯಾರ್ಥಿ ವೇತನದ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ Scholarship for Students : https://www.buddy4study.com/page/sbi-asha-scholarship-program

Comments are closed.