Monthly Income Scheme: ಪ್ರತಿ ತಿಂಗಳು 9 ಸಾವಿರ ರೂ. ಗೂ ಅಧಿಕ ಬಡ್ಡಿ ನೀಡುವ ಅಂಚೆ ಕಚೇರಿ ಯೋಜನೆ; ಹೂಡಿಕೆ ಮಾಡಿದ್ರೆ ಕೈತುಂಬಾ ಆದಾಯ ಪಕ್ಕಾ!

Monthly Income Scheme Introduced by Indian Post Office: ಅಂಚೆ ಕಚೇರಿಯು ಕಾಲಕ್ಕೆ ತಕ್ಕ ಹಾಗೆ ಬದಲಾಗಿದೆ. ಮೊದಲು ಅಂಚೆ ಕಚೇರಿಯು ಪತ್ರಗಳು, ದಾಖಲೆಗಳನ್ನು ಮನೆ ಮನೆಗೆ ತಲುಪಿಸುವುದಾಗಿತ್ತು. ಈಗ ಅಂಚೆ ಕಚೇರಿಯೂ ಹೂಡಿಕೆಯ ತಾಣವಾಗಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿಯೂ ಇರುತ್ತದೆ. ಜೊತೆಗೆ ಹೆಚ್ಚಿನ ಲಾಭವು ಸಿಗುತ್ತದೆ. ಹಾಗಾಗಿಯೇ ಹೆಚ್ಚಿನ ಜನರು ಅಂಚೆ ಕಚೇರಿಯಲ್ಲಿ ಹೂಡಿಕೆ ಆರಂಭಿಸಿದ್ದಾರೆ.

Monthly Income Scheme Introduced by Indian Post Office. You can Invest here to get more income. Here are the details.

ಅಂಚೆ ಕಚೇರಿಯಲ್ಲಿ ಇದೀಗ ಹೊಸ ಸ್ಕೀಮ್ Monthly Income Scheme ಒಂದನ್ನು ತರಲಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಲಿದ್ದೀರಿ. ಇದು ಅಲ್ಪಾವಧಿಯ ಯೋಜನೆಯಾಗಿದ್ದರೂ ನೀವು ಹೂಡಿಕೆ ಮಾಡಿದ ಹಣದ ಡಬಲ್ ನಿಮಗೆ ವಾಪಸ್ ಬರಲಿದೆ. ಹಾಗಾದರೆ ಅಂಚೆ ಕಚೇರಿಯಲ್ಲಿ ಜಾರಿಗೆ ಬಂದ ಈ ಹೊಸ ಯೋಜನೆಯ ಮಾಹಿತಿ ತಿಳಿದುಕೊಳ್ಳೊಣ.

Ration Card ಯಾವಾಗ ಸಿಗುತ್ತೆ ಅನ್ನೋದಕ್ಕೆ ಸಿಕ್ತು ಉತ್ತರ. ನವೆಂಬರ್ ನಿಂದಲೇ ಹೊಸ BPL,APL ಕಾರ್ಡ್ ಪಡೆದುಕೊಳ್ಳಿ.

ಅಂಚೆ ಕಚೇರಿ ಹೊಸ ಯೋಜನೆ:

ಅಂಚೆ ಕಚೇರಿಯಲ್ಲಿ ಜಾರಿಗೆ ತರಲಾದ ಹೊಸ ಯೋಜನೆ ಹೆಸರು ಪೋಸ್ಟ್  ಆಫೀಸ್ ಮಂತ್ಲಿ ಇನ್ಕಮ್ ಸ್ಕೀಂ Monthly Income Scheme. ಇದರಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕವಾಗಿ 7.4ರಷ್ಟು ಬಡ್ಡಿದರ ನೀಡಲಾಗುತ್ತದೆ. ಗರಿಷ್ಟ 9250 ರೂ. ಮಾಸಿಕವಾಗಿ ನೀವು ಆದಾಯ ಪಡೆಯಬಹುದು. ಇದರಲ್ಲಿ ನೀವು ಗರಿಷ್ಟ 9 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ನೀವೇನಾದರೂ ಜಂಟಿ ಖಾತೆ ತೆರೆದು ಹೂಡಿಕೆ ಮಾಡಲು ಇಚ್ಚಿಸುವುದಾದರೆ 15  ಲಕ್ಷ ರೂ. ವರೆಗೂ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನೀವು ಜಂಟಿ ಖಾತೆ ಆರಂಭಿಸಿ 15 ಲಕ್ಷ ರೂ ಹೂಡಿಕೆ ಮಾಡಿದರೆ ನಿಮಗೆ ವಾರ್ಷಿಕವಾಗಿ 1.11 ಲಕ್ಷ ರೂ. ಬಡ್ಡಿ ಸಿಗಲಿದೆ. ತಿಂಗಳಿಗೆ 9250 ರೂ. ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಬಹುದು.

ಅಂಚೆ ಕಚೇರಿಯಲ್ಲಿ ಈ ಒಂದು ಯೋಜನೆ ಮಾತ್ರವಲ್ಲದೆ ಇನ್ನು ಹತ್ತು ಹಲವಾರು ನಿಮಗೆ ಹೆಚ್ಚಿನ ಲಾಭ ತಂದುಕೊಡುವ ಯೋಜನೆಗಳಿವೆ. ಇವೆಲ್ಲವೂ ಸರ್ಕಾರಿ ಬೆಂಬಲಿತ ಸ್ಕೀಂಗಳಾಗಿದ್ದು, ಇಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಈ ಮಧ್ಯೆ ಮಾಸಿಕ ಆದಾಯ ಸೃಷ್ಟಿಸುವ ಉದ್ದೇಶದಿಂದ ಮಂತ್ಲಿ ಇನ್ಕಮ್ ಸ್ಕೀಂ Monthly Income Scheme ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ನೀವು ಹಣವನ್ನು ಡಿಪಾಸಿಟ್ ತರಹ ಹೂಡಿಕೆ ಮಾಡಿ ಪ್ರತಿ ತಿಂಗಳು ಆದಾಯ ಗಳಿಸಬಹುದು.

ಅಬ್ಬಬ್ಬಾ! ವಿದ್ಯಾರ್ಥಿಗಳಿಗೆ ಇಷ್ಟೋಂದು ಹಣ ಸ್ಕಾಲರ್ ಶಿಪ್ ಕೊಡ್ತಿದ್ಯಾ SBI? ಮತ್ಯಾಕೆ ತಡ, ವಿದ್ಯಾರ್ಥಿಗಳೇ ಇಂದೇ ಅಪ್ಲೈ ಮಾಡಿ!

ಅಂಚೆ ಕಚೇರಿ ಪಿಂಚಣಿ ಯೋಜನೆ:

ನೀವು ಈ ಮಂತ್ಲಿ ಇನ್ಕಮ್ ಸ್ಕೀಂ (Monthly Income Scheme) ಅಡಿಯಲ್ಲಿ 5 ಲಕ್ಷ ರೂ. ಠೇವಣಿ ಇಟ್ಟರೆ ನಿಮಗೆ ಪ್ರತಿ ತಿಂಗಳು 3೦೦೦ರೂ. ಸಿಗಲಿದೆ. ಹಾಗಾಗಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿಕೊಳ್ಳುವಂತಹ ಅತ್ಯುತ್ತಮ ಯೋಜನೆ ಇದಾಗಿದೆ.

ಎಷ್ಟು ಅವಧಿಯ ಯೋಜನೆ:

ಮಂತ್ಲಿ ಇನ್ಕಮ್ ಸ್ಕೀಂ ಯೋಜನೆಯು ಐದು ವರ್ಷದ್ದಾಗಿದೆ. ಇದರಲ್ಲಿ ಸಿಗುವ  ಬಡ್ಡಿ ಹಣವನ್ನು ಪ್ರತಿ ತಿಂಗಳು ಗ್ರಾಹಕರಿಗೆ ನೀಡಲಾಗುತ್ತದೆ. ಐದು ವರ್ಷಗಳ ನಂತರ ನಿಮಗೆ ಹಣದ ಅವಶ್ಯಕತೆ ಇದ್ದರೆ ಹಣ ಹಿಂಪಡೆಯಬಹುದು, ಇಲ್ಲವೇ ಮತ್ತೊಮ್ಮೆ ಹೊಸದಾಗಿ ಇದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು.

Comments are closed.