Government Scheme: ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣಕ್ಕೆ 5 ಲಕ್ಷ ರೂ. ವರೆಗೆ ಸಹಾಯಧನ; ಸರ್ಕಾರದ ಮತ್ತೊಂದು ಯೋಜನೆ! ಸಬ್ಸಿಡಿ ಪಡೆದುಕೊಳ್ಳುವುದು ಹೇಗೇ?

Government Scheme Mahatma Gandhi Narega Scheme : ರಾಜ್ಯದಲ್ಲಿ ಈ ವರ್ಷದ ಬರ ಪರಿಸ್ಥಿತಿ ಇದೆ. ಸಕಾಲಕ್ಕೆ ಮಳೆ ಆಗದ ಕಾರಣ ಕಷ್ಟಪಟ್ಟು ಸಾಲ ಸೋಲ ಮಾಡಿ ಬಿತ್ತಿದ ಬೆಳೆಗಳೆಲ್ಲ ಒಣಗಿವೆ. ರೈತನಿಗೆ ದಾರಿ ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ರೈತರು ಮನೆ ಮಠ ಎಲ್ಲವನ್ನು ಬಿಟ್ಟು ಗುಳೆ ಹೋಗಲು ನಿರ್ಧಾರ ಕೈಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ಆಳುವ ಸರ್ಕಾರದ ಪ್ರಥಮ ಕರ್ತವ್ಯವಾಗಿರುತ್ತದೆ. ಹಾಗಾಗಿಯೇ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನುGovernment Scheme ಹಮ್ಮಿಕೊಂಡಿದೆ. ಹೀಗೆ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಮನರೇಗಾ ಕೂಡ ಒಂದು.

Government Mahatma Gandhi Narega Scheme for Farmers. to get subsidy for Dairy farming.

ರೈತರ ಕೈ ಹಿಡಿಯಲಿದೆ ಉದ್ಯೋಗ ಖಾತ್ರಿ

ಗ್ರಾಮೀಣ ಭಾಗದ ಒಂದು ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂ. ವರೆಗಿನ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮಾ ಗಾಂಧಿ ನರೇಗಾ ಯೋಜನೆ (Mahatma Gandhi Narega Yojana) ಮೂಲಕ ಅವಕಾಶ ಕಲ್ಪಿಸಲಾಗಿದೆ. ಈ ಬರಗಾಲದಲ್ಲಿ ಇಂತಹ ನರೇಗಾ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಲಿ ಎನ್ನುವ ಸಲುವಾಗಿ ಜಿಲ್ಲಾಡಳಿತದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ನರೇಗಾ ಜಾಗೃತಿ ಕಾರ್ಯಕ್ರಮಗಳನ್ನುGovernment Scheme ಆಯೋಜಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಎನ್ನುವ ವಿಶೇಷ ರೋಜಗಾರ ದಿವಸ ಅಭಿಯಾನ ನಡೆಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಇದಕ್ಕಿಂತ ಬೆಸ್ಟ್ scholarship ಬೇರೆ ಯಾವುದಿದೆ ಹೇಳಿ? ವಿದ್ಯಾರ್ಥಿಗಳಿಗಾಗಿ SBI ಪರಿಚಯಿಸಿರುವ ವಿದ್ಯಾರ್ಥಿವೇತನ. ಇಂದೇ ಅಪ್ಲೈ ಮಾಡಿ

ಕ್ರಿಯಾ ಯೋಜನೆ ತಯಾರಿ:

ರಾಜ್ಯದಲ್ಲಿ 2024-25 ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ವಿಶೇಷ ಕ್ರಿಯಾ ಯೋಜನೆ Government Scheme ತಯಾರಿಸಲಾಗುತ್ತಿದೆ. ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆಯಲು ಇಚ್ಚಿಸುವ ರೈತರು  ಕೂಲಿಕಾರರು ತಮ್ಮ ಗ್ರಾಮ ಪಂಚಾಯತ್ಗೆ ತೆರಳಿ ಅರ್ಜಿ ಸಲ್ಲಿಬಹುದು. ಗ್ರಾಮೀಣ ಭಾಗದ ಜನರು ತಮ್ಮ ವೈಯಕ್ತಿಕ ಕಾಮಗಾರಿ ಸಂಬಂಧಿಸಿದ ಹೆಸರನ್ನು ಗ್ರಾಮ ಪಂಚಾಯತ್ನಲ್ಲಿ ನೋಂದಾಯಿಸಬಹುದು.

ಯಾವ ಯಾವ ಕೆಲಸಕ್ಕೆ ಸಿಗಲಿದೆ ನೆರವು?

ರೈತರು ಹಾಗೂ ಜಮೀನು ಇಲ್ಲದಂತಹ ಕೂಲಿಕಾರ್ಮಿಕರು ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆಯಂತಹ ಸ್ವ-ಉದ್ಯೋಗ ಮಾಡಲು ಬಯಸುವವರು ಶೆಡ್, ಕೊಟ್ಟಿಗೆ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿ, ರೈತರು ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕಾ ಬೆಳೆ, ರೇಷ್ಮೆ, ಅರಣ್ಯ ಬೆಳೆಗಳು ಸೇರಿದಂತೆ ಇತರ ವೈಯಕ್ತಿಕ ಕಾಮಗಾರಿಗಳನ್ನು ನಡೆಸಬಹುದು. ನರೇಗಾ ಯೋಜನೆಯಡಿ Government Schemeತೋಟಗಾರಿಕಾ ಇಲಾಖೆಯಿಂದ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾವ ಯಾವ ಕಾಮಗಾರಿಗೆ ಎಷ್ಟು ಸಹಾಯಧನ?:

ತೆರೆದ ಬಾವಿ ನಿರ್ಮಾಣ: 1,5೦,೦೦೦ ರೂ., ಕೊಳವೆ ಬಾವಿ ಮರುಪೂರಣ: 27,೦೦೦ರೂ., ಜಮೀನು ಸಮತಟ್ಟು: 1೦,೦೦೦ರೂ., ಕಂದಕ ಬದು ನಿರ್ಮಾಣ: 35,೦೦೦ರೂ. ನಿಂದ 84,೦೦೦ರೂ., ಬಚ್ಚಲು ಗುಂಡಿ ನಿರ್ಮಾಣ: 11,೦೦೦ ರೂ., ಪೌಷ್ಠಿಕ ತೋಟ ನಿರ್ಮಾಣ: 4915 ರೂ., ದನದ ಕೊಟ್ಟಿಗೆ ನಿರ್ಮಾಣ: 57,೦೦೦ ರೂ., ಕುರಿ ದೊಡ್ಡಿ ನಿರ್ಮಾಣ: 7೦,೦೦೦ ರೂ., ಮೇಕೆ ಶೆಡ್ ನಿರ್ಮಾಣ: 7೦,೦೦೦ ರೂ., ಹಂದಿ ಶೆಡ್ ನಿರ್ಮಾಣ: 87,೦೦೦ ರೂ., ಕೋಳಿ ಶೆಡ್ ನಿರ್ಮಾಣ: 6೦,೦೦೦ ರೂ., ನೀಡಲಾಗುತ್ತದೆ.

Comments are closed.