Digital Voter ID: ಇನ್ನುಮುಂದೆ ಪರ್ಸ್ ನಲ್ಲಿ ವೋಟರ್ ID ಇಟ್ಕೋಬೆಕಾಗಿಲ್ಲ; ಮೊಬೈಲ್ ನಲ್ಲಿಯೇ ಡಿಜಿಟಲ್ ID ಡೌನ್ ಲೋಡ್ ಮಾಡ್ಕೊಳ್ಳಿ

How to Download Digital Voter ID Online: ಮತದಾರರ ಗುರುತಿನ ಚೀಟಿ Digital Voter ID ದೇಶದ ಪ್ರತಿಯೊಬ್ಬ ಪ್ರಜೆಯ ಪ್ರಮುಖ ಗುರುತಿನ ಚೀಟಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ೫ ವರ್ಷಗೊಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಈ ವೇಳೆ ಮತ ಚಲಾಯಿಸಲು ಮತದಾರರ ಗುರುತಿನ ಚೀಟಿ ಅವಶ್ಯಕ. ಇಷ್ಟೇ ಅಲ್ಲದೆ ಹಲವು ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಈ ಗುರುತಿನ ಚೀಟಿ ಅವಶ್ಯವಾಗಿದೆ.

ಇಂದಿನ ಡಿಜಿಟಲ್ (Digital) ಯುಗದಲ್ಲಿ ಎಲ್ಲ ಕೆಲಸಗಳನ್ನು ಆನ್ಲೈನ್ ಮೂಲಕವೇ ಮಾಡಬಹದಾಗಿದೆ. ಸ್ಮಾರ್ಟ್ ಫೋನ್ಗಳು ಜನರ ಕೈ ಸೇರಿದ ನಂತರ ಪ್ರಪಂಚ ಹಾಗೂ ದೇಶದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಇದೀಗ ಭಾರತೀಯ ಚುನಾವಣಾ ಆಯೋಗವು ಚುನಾವಣಾ ಗುರುತಿನ ಚೀಟಿಯ Digital Voter ID ಡಿಟಿಟಲ್ ಆವೃತ್ತಿ ಪರಿಚಯಿಸಿದೆ. ಇದನ್ನು ಇ-ಇಪಿಐಸಿ (E-EPIC) ಎಂದು ಕರೆಯಲಾಗಿದೆ.

How to Download Digital Voter ID Online, here are the method

ಇ ಇಪಿಐಸಿ (E-EPIC) ವೋಟರ್ ಕಾರ್ಡ್ ಎಂದರೆ ಏನು?

೧೮ ವರ್ಷದ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಮತದಾನ ಮಾಡುವ ಹಕ್ಕನ್ನು ಪಡೆದುಕೊಳ್ಳುತ್ತಾರೆ. ಮತದಾನ ಮಾಡಲು ಮತದಾರರ ಗುರುತಿನ ಚೀಟಿ Digital Voter ID ಅವಶ್ಯಕವಾಗಿದೆ. ವಾಸ್ತವವಾಗಿ ಇ-ಇಪಿಐಸಿ ವೋಟರ್ ಕಾರ್ಡ್ ಮೂಲಕ ಮತದಾರರ ಗುರುತಿನ ಚೀಟಿ ಸಂಪಾದಿಸಲಾಗದ ಪೋರ್ಟೇಬಲ್ ಡಾಕ್ಯೂಮೆಂಟ್ ಫಾರ್ಮೇಟ್ ಆವೃತ್ತಿಯಾಗಿದೆ. ಈ ಮತದಾರರ ಗುರುತಿನ ಚೀಟಿ ಪಿಡಿಎಫ್ ಆವೃತ್ತಿಯನ್ನು ಎಲ್ಲ ಪ್ರಮುಖ ದಾಖಲೆಯಾಗಿ ಬಳಸಬಹುದಾಗಿದೆ.

40kmpl Mileage ಕೊಡುವ ಮಾರುತಿ ಹೊಸ ಸ್ವಿಪ್ಟ್ ಕಾರು ಹೇಗಿದೆ ಗೊತ್ತಾ? ಇಂದೇ ಬುಕ್ಕಿಂಗ್ ಮಾಡಿ!

ಈ ಡಿಜಿಟಲ್ ದಾಖಲೆಯನ್ನು ಸುಲಭವಾಗಿ ಪ್ರವೇಶಿಸಲು ಡಿಜಿ ಲಾಕರ್ನಲ್ಲಿ ಸಂಗ್ರಹಿಸಿಡಬಹುದು. ಹೀಗೆ ಮಾಡಿದಲ್ಲಿ ನಿಮ್ಮ ಪರ್ಸ್ನಲ್ಲಿ ಮತದಾರರ ಗುರುತಿನ ಚೀಟಿ Digital Voter ID ಇಟ್ಟುಕೊಳ್ಳುವ ಅಗತ್ಯ ಬೀಳುವುದಿಲ್ಲ.

ಪಿಡಿಎಫ್ ಆವೃತ್ತಿಗೆ ಇದೆ ಎಲ್ಲ ಕಡೆ ಮಾನ್ಯತೆ:

ಇ-ಇಪಿಐಸಿ ಮತದಾರರ ಗುರುತಿನ ಚೀಟಿಯು ಹಾರ್ಡ್ ಕಾಪಿಯಷ್ಟೆ ಮಹತ್ವದ್ದಾಗಿರುತ್ತದೆ. ಇದನ್ನು ಸಹ ಎಲ್ಲ ಕಡೆ ಮಾನ್ಯ ಮಾಡಲಾಗುತ್ತದೆ. ಆಸ್ತಿ  ಖರೀದಿಸಲು, ಸಾಲ ಪಡೆಯಲು, ಸರ್ಕಾರಿ ಕೆಲಸ ಕಾರ್ಯಗಳಿಗೆ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಬಳಸಬಹುದು. ಇಷ್ಟೆ ಅಲ್ಲದೆ ವಿಳಾಸ ಪರಿಶೀಲನೆಗೂ ಬಳಸಬಹುದಾಗಿದೆ. ಇದು ಒಬ್ಬ ವ್ಯಕ್ತಿಯ ಶಾಶ್ವತ ಪುರಾವೆಯಾಗಿರುತ್ತದೆ.

ಮತದಾರರ ಗುರುತಿನ ಚೀಟಿ ಡೌನ್ಲೋಡ್ ಮಾಡುವುದು ಹೇಗೆ?

ಮತದಾರರ ಗುರುತಿನ ಚೀಟಿ ಡೌನ್ಲೋಡ್ ಮಾಡಿಕೊಳ್ಳಲು ಮೊದಲು ನೀವು ಭಾರತೀಯ ಚುನಾವಣಾ ಆಯೋಗದ ವೆಬ್ಸೈಟ್ಗೆ ಭೇಟಿ ನೀಡಬೇಕು. ಹೊಸ ಬಳಕೆದಾರರಾಗಿದ್ದಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು. ನೀವು ಈಗಾಗಲೇ ಖಾತೆ ಹೊಂದಿದ್ದರೆ ಅಲ್ಲಿ ಸೈನ್ ಇನ್ ಆಗಬೇಕು. ಈಗ ಇ-ಇಪಿಐಸಿ ಡೌನ್ಲೋಡ್ ಮಾಡುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ಇಪಿಐಸಿ ಸಂಖ್ಯೆ ನಮೂದಿಸಬೇಕು. ಇದಾದ ಬಳಿಕ ನೊಂದಾಯಿತ ಮೊಬೈಲ್ಗೆ ಓಟಿಪಿ ಬರುತ್ತದೆ. ಅದನ್ನು ವೆಬ್ಸೈಟ್ನಲ್ಲಿ ಹಾಕಬೇಕು. ನಂತರ ಇ-ಇಪಿಐಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮತದಾರರ ಗುರುತಿನ ಚೀಟಿಯ ಪಿಡಿಎಫ್ ಕಾಪಿ ಡೌನ್ಲೋಡ್ ಆಗುತ್ತದೆ.

Comments are closed.