Ration Card: ನವೆಂಬರ್ 1೦ರಿಂದ ರೇಶನ್ ಅಂಗಡಿ ಬಂದ್; ಇನ್ನು ಮುಂದೆ ಸಿಗಲ್ಲ ಪಡಿತರ ವಸ್ತು?

Ration Card Shops will close: ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ (Pradhana mantri Garib Kalyan Yojana) ಅಡಿಯಲ್ಲಿ ಪ್ರತಿ ತಿಂಗಳು ಐದು ಕೆ.ಜಿ. ಅಕ್ಕಿ ನೀಡಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ತಾವು ಸಹ ಐದು ಕೆ.ಜಿ. ಸೇರಿಸಿ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅಕ್ಕಿ ದೊರೆಯದ ಕಾರಣ ಅಕ್ಕಿಯ ಬದಲು ಹಣ ಹಾಕುವ ವ್ಯವಸ್ಥೆ ಮಾಡಿದೆ. ರಾಜ್ಯ ಸರ್ಕಾರವು ಇದನ್ನು ಈಗ ಅನ್ನ ಭಾಗ್ಯ ಯೋಜನೆ (Annabhagya Yojana) ಅಡಿಯಲ್ಲಿ ವಿತರಣೆ ಮಾಡುತ್ತಿದೆ. ಇದೀಗ ಪಡಿತರ ಅಂಗಡಿ Ration Card ಮಾಲೀಕರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದು, ಈ ತಿಂಗಳ ೧೦ರಂದು ಪಡಿತರ ಅಂಗಡಿ ಬಂದ್ ಮಾಡಲಿದ್ದಾರೆ.

Ration Shop may close from November 10 BPL ration Card holders not possible to get ration.

ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ಮಾತಿನಂತೆ ಕೇಂದ್ರದ ೫ ಕೆ.ಜಿ ಅಕ್ಕಿಯ ಜೊತೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ತಾನು ಸಹ ಐದು ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತು. ಆದರೆ ದೇಶದಲ್ಲಿ ಎಲ್ಲಿಯೂ ಸಹ ಅಕ್ಕಿ ಸಿಗದ ಕಾರಣ ಅಕ್ಕಿಯ ಬದಲು ಹಣ ನೀಡುವುದಾಗಿ ಘೋಷಣೆ ಮಾಡಿದೆ. ಅದರಲ್ಲಿಯೂ ಪ್ರತಿ ತಿಂಗಳು ಪಡಿತರ Ration Card ಪಡೆಯುತ್ತಿರುವವರ ಖಾತೆಗೆ ಮಾತ್ರ ಹಣ ಹಾಕುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಪ್ರತಿಭಟನೆಗೆ ಸಿದ್ಧರಾದ ಪಡಿತರ ಅಂಗಡಿ ಮಾಲೀಕರು

ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಪಡಿತರ ಅಂಗಡಿ ಮಾಲೀಕರು ತಿರುಗಿ ಬಿದ್ದಿದ್ದಾರೆ. ಕೇವಲ ಕೇಂದ್ರ ಸರ್ಕಾರ ನೀಡುವ ಅಕ್ಕಿ ವಿತರಣೆ ಮಾಡುವುದರಿಂದ ನಮಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತಿದೆ. ಹೀಗಾಗಿ ಈ ತಿಂಗಳು ಪಡಿತರ ಅಂಗಡಿಗೆ ಬಂದಿರುವ ಅಕ್ಕಿ ಚೀಲಗಳನ್ನು ಬಿಡಿಸದೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧಾರ ಕೈಗೊಂಡಿದ್ದಾರೆ.

ಅಕ್ಕಿ ಬದಲು ಬೇರೆ ಧಾನ್ಯ ಪೂರೈಕೆ ಮಾಡಿ:

ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಅಷ್ಟೆ ಪ್ರಮಾಣದ ರಾಗಿ, ಜೋಳ ಇಲ್ಲವೇ ಸಕ್ಕರೆ ಪೂರೈಕೆ ಮಾಡಲಿ ಎಂದು ಪಡಿತರ ಅಂಗಡಿ Ration Card ಮಾಲೀಕರು ಒತ್ತಾಯಿಸಿದ್ದಾರೆ. ಅಲ್ಲದೆ ಈ ನೇರ ನಗದು ವರ್ಗಾವಣೆಯಡಿ ಎಲ್ಲ ಫಲಾನುಭವಿಗಳಿಗೂ ಹಣ ಸಿಗುತ್ತಿಲ್ಲ. ಕೇವಲ ಕೆಲವರ ಖಾತೆಗೆ ಮಾತ್ರ ಹಣ ವರ್ಗಾವಣೆ ಆಗುತ್ತಿದೆ. ಈ ವಿಚಾರದಲ್ಲೂ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿಯೇ ಇದಕ್ಕೊಂದು ಅಂತ್ಯ ಕಾಣಿಸಲು ಪಡಿತರ ಅಂಗಡಿ ಮಾಲೀಕರು ಮುಂದಾಗಿದ್ದಾರೆ.

ರಾಜ್ಯ ಸರ್ಕಾರವು ಹೆಚ್ಚುವರಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ ಹೇಗೂ ಕೇಂದ್ರದಿಂದ ಪೂರೈಕೆ ಆಗಲಿದೆ ಎಂದು ಭಾವಿಸಿತ್ತು. ಆದರೆ ಕೇಂದ್ರ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ವೇಳೆ ಬೇರೆ ಕಡೆ ವಿಚಾರಣೆ ನಡೆಸಿತ್ತು. ಎಲ್ಲ ಕಡೆ ಹೆಚ್ಚಿನ ದರ ಹೇಳಿದ ಕಾರಣ ಅಷ್ಟು ದರ ಕೊಟ್ಟು ಅಕ್ಕಿ ಕೊಂಡುಕೊಳ್ಳಲು ರಾಜ್ಯ ಸರ್ಕಾರ ಮನಸ್ಸು ಮಾಡಿಲ್ಲ.

Comments are closed.