DA Increase: ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಉಳಿದ ಎಲ್ಲಾ ವೇತನ, ಭತ್ಯೆ ಸರ್ಕಾರಿ ನೌಕರರ ಖಾತೆಗೆ ಜಮಾ!

DA Increase for government employees: ಕೇಂದ್ರ ಸರ್ಕಾರದ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಶೀಘ್ರವೇ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಖಜಾನೆಯನ್ನೇ ನೀಡಲು ಮುಂದಾಗಿದೆ. ಹೊಸ ವರ್ಷದ ವೇಳೆಗೆ ಇಲ್ಲಿಯವರೆಗೆ ಬಾಕಿ ಉಳಿದಿರುವ ಡಿಎ (Dearness Allowance) ಹಣ ವರ್ಗಾವಣೆ ಮಾಡಲು ಮುಂದಾಗಿದೆ. ಹೀಗಾದರೆ ಇದು ಕೇಂದ್ರ ಸರ್ಕಾರಿ ನೌಕರರಿಗೆ ಇದು ದೊಡ್ಡ ಉಡುಗೊರೆ ಎನ್ನಬಹುದು.

DA Increase for government employees this month. Government announced.

ಇದರ ಹೊರತಾಗಿ ಫಿಟ್ಮೆಂಟ್ ಫ್ಯಾಕ್ಟರ್ ಬಗ್ಗೆ ಕೂಡಾ ಒಳ್ಳೆಯ ಸುದ್ದಿ ಇದೆ. ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳದ ಬಗ್ಗೆಯೂ ಕೇಳಿ ಬರುತ್ತಿದೆ. ಆದರೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಅಧಿಕೃತವಾಗಿ ಈ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ. ಆದರೂ ಶೀಘ್ರದಲ್ಲಿ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಸಂತಸ ಸುದ್ದಿ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಹಲವು ತಿಂಗಳಿಂದ ಇರುವ ಡಿಎ ಬಾಕಿಗೆ ಸಿಗಲಿದೆ ಮುಕ್ತಿ

ಕೋವಿಡ್ ಸಮಯದಲ್ಲಿ ಮೋದಿ ಸರ್ಕಾರವು ಕೇಂದ್ರ ಸರ್ಕಾರದ ನೌಕರರಿಗೆ ಹಾಗೂ ಪಿಂಚಣಿದಾರರಿಗೆ (Pension) 19 ತಿಂಗಳಿಂದ ಡಿಎ ಹಣ ವರ್ಗಾಯಿಸಿಲ್ಲವಾಗಿತ್ತು. ಅಂದಿನಿಂದ ಕೇಂದ್ರ ಸರ್ಕಾರಿ ನೌಕರರು ಡಿಎ ಬಿಡುಗಡೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬರುತ್ತಿದ್ದಾರೆ.

ಈಗ ಹೊಸ ವರ್ಷದ ವೇಳೆಗೆ ಇಲ್ಲಿಯವರೆಗೆ ಬಾಕಿ ಇರುವ ಡಿಎ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅಲ್ಲದೆ ಮುಂದಿನ ವರ್ಷ ಲೋಕಸಭಾ ಚುನಾವಣೆ ಸಹ ಬರುವುದರಿಂದ ಈ ಮೂಲಕವು ಕಾರ್ಮಿಕ ವರ್ಗವನ್ನು ಓಲೈಸಿಕೊಳ್ಳಲು ಮುಂದಾಗಿ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಹೊರ ಬಿತ್ತು ಖುಷಿ ಸುದ್ದಿ; PAN Card ವಿಚಾರದಲ್ಲಿ ಹೊಸ ನಿಯಮ ಜಾರಿ!

ಹೀಗಾದಲ್ಲಿ ಪ್ರತಿಯೊಬ್ಬ ಕೇಂದ್ರ ಸರ್ಕಾರಿ ನೌಕರರ ಖಾತೆಗೆ ದೊಡ್ಡ ಮೊತ್ತದ ಹಣವೇ ಜಮಾ ಆಗಲಿದೆ. ಈಗಾಗಲೇ ಹಲವು ಸಂಘಟನೆಗಳು ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ಫಿಟ್ಮೆಂಟ್ ಫ್ಯಾಕ್ಟರ್ನಲ್ಲಿ ಹೆಚ್ಚಳ:

ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಮಾಡುವ ಮೂಲಕ ಕಾರ್ಮಿಕರನ್ನು ಒಲೈಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಕೂಡ ನೌಕರರು ಬಹಳ ದಿನಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಫಿಟ್ಮೆಂಟ್ ಫ್ಯಾಕ್ಟರ್ನ್ನು 2.6೦ಎಕ್ಸ್ನಿಂದ 3.೦ಎಕ್ಸ್ಗೆ ಹೆಚ್ಚಳ ಮಾಡಬಹುದು ಎನ್ನಲಾಗುತ್ತಿದೆ. ಫಿಟ್ಮೆಂಟ್ ಫ್ಯಾಕ್ಟರ್ನಲ್ಲಿ ಹೆಚ್ಚಳವಾದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲೂ ಭಾರೀ ಹೆಚ್ಚಳವಾಗಲಿದೆ.

Comments are closed.