Home Loan: ನಿಮ್ಮ ಆದಾಯ ಇಷ್ಟು ಇದ್ದರೆ ಮಾತ್ರ ಹೋಮ್ ಲೋನ್ ಆಲೋಚನೆ ಮಾಡಿ; ಇಲ್ದಿದ್ರೆ ಹೋಮ್ ಲೋನ್ ಸಹವಾಸಕ್ಕೂ ಹೋಗದಿರಿ!

Get Home Loan If you have good salary: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮದೆ ಆದ ಸ್ವಂತ ನಿರ್ಮಾಣ ಮಾಡಬೇಕು ಎಂದು ಇರುತ್ತದೆ. ಆದರೆ ಇನ್ನು ಕೆಲವರಿಗೆ ಬಾಡಿಗೆ ಮನೆಯಲ್ಲಿರುವುದೇ ಬೆಸ್ಟ್ ಎನ್ನುವ ಭಾವನೆ ಇರುತ್ತದೆ. ಕಾರಣ ಮನೆ ನಿರ್ಮಾಣಕ್ಕೆ ಕೈ ಹಾಕಿದರೆ ಲಕ್ಷಾಂತರ ರೂ.ಗಳನ್ನು ನೀರಿನಂತೆ ವ್ಯಯಿಸಬೇಕಾಗುತ್ತದೆ. ಆದರೆ ಸ್ವಂತ ಮನೆ ನಿರ್ಮಾಣ (Own house built) ಮಾಡಿಕೊಂಡವರು ಬಾಡಿಗೆ ಮನೆಯಲ್ಲಿ ಬೇಡದ ಖರ್ಚುಗಳೇ ಜಾಸ್ತಿ. ಆದ್ದರಿಂದ ನಮ್ಮ ಸ್ವಂತ ಜಾಗದಲ್ಲಿ ನಾವಿವುರುವುದು ನಮಗೆ ನೆಮ್ಮದಿ ನೀಡುತ್ತದೆ ಎನ್ನುತ್ತಾರೆ. ಅವರವರ ಜಾಗದಲ್ಲಿ ನಿಂತು ಆಲೋಚನೆ ಮಾಡಿದಾಗ ಎರಡು ಸರಿ.

Get Loan:You can plan for home loan if you have sufficient salary

ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಹಿರಿಯರ ಮಾತು. ಅದೇ ಮಾತನ್ನು ಮನೆ ನಿರ್ಮಾಣಕ್ಕೆ ಅನ್ವಯಿಸುವುದಾದರೆ ನಿಮ್ಮ ಆದಾಯ ಎಷ್ಟಿದೆ ನೋಡಿಕೊಂಡು ಹೋಮ್ ಲೋನ್ಗೆ Get Loan ಅರ್ಜಿ ಸಲ್ಲಿಸಿ ಪಡೆದುಕೊಳ್ಳುವುದು ಉತ್ತಮ. ಸಾಮಾನ್ಯ ಲೆಕ್ಕಾಚಾರದ ಪ್ರಕಾರ ಹೇಳುವುದಾದರೆ ನಿಮ್ಮ ಶೇ.2೦ ರಿಂದ ಶೇ.25 ರಷ್ಟು ಮಾತ್ರ ಹೋಮ್ ಲೋನ್ (Home Loan) ಮರುಪಾವತಿಗೆ ಬಳಕೆ ಆಗುವಂತೆ ಇರಬೇಕು. ಇಲ್ಲದಿದ್ದರೆ ನಿಮ್ಮ ಆದಾಯವೆಲ್ಲ ಸಾಲ ಮರುಪಾವತಿಗೆ ಬಳಕೆಯಾದರೆ ನೀವು ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ.

ಒಂದು ಉದಾಹರಣೆ ನೀಡುವುದಾದರೆ ನಿಮಗೆ ತಿಂಗಳ ಒಂದು ಲಕ್ಷ ರೂ.ಗೂ ಅಧಿಕ ಸಂಬಳ ಬರುತ್ತದೆ ಎಂದಾದರೆ ಅದರಲ್ಲಿ 2೦ ರಿಂದ 25 ಸಾವಿರ ರೂ. ಮನೆ ಸಾಲಕ್ಕೆ Home Loan ಬಳಕೆಯಾದರೆ ನೀವು ಜೀವನ ನಿರ್ವಹಣೆ ಮಾಡಬಹುದು. ಅದೇ ನಿಮ್ಮ ಸಂಬಳ ಐವತ್ತು ಸಾವಿರ ರೂ. ಆದರೆ ಅದರಲ್ಲಿ 25 ಸಾವಿರ ರೂ. ಸಾಲಕ್ಕೆ ಬಳಕೆಯಾದರೆ ನೀವು ಸಂಸಾರ ನಿಬಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ ನೀವು ಹೋಮ್ ಪಡೆಯುವ ಮುನ್ನ ನಿಮ್ಮ ಆದಾಯದ ಶೇ.25 ರಷ್ಟು ಮಾತ್ರ ಅದಕ್ಕೆ ಬಳಕೆಯಾಗುವಂತೆ ಪ್ಲಾನ್ ಮಾಡಿಕೊಳ್ಳಬೇಕು.

Aadhaar Link ಆಗದೇ ಇದ್ದರೂ ಸರಿ, ಮಹಿಳೆಯರ ಖಾತೆಗ ಹಣ ಜಮಾ ಆಗುತ್ತೆ; ಸರ್ಕಾರದ ಮಹತ್ವದ ನಿರ್ಧಾರ; ನಿಮ್ಮ ಖಾತೆಗೂ ಹಣ ಬಂದಿರುತ್ತೆ ಚೆಕ್ ಮಾಡಿ!

ನೀವು ನಿಮ್ಮ ಸಂಬಳದ ಶೇ.25 ರಷ್ಟು ಹಣವನ್ನು ಸಾಲ ಮರುಪಾವತಿಗೆ ಬಳಸಲು ಅರ್ಹರಾಗಿದ್ದರೆ ಮಾತ್ರ ಹೋಮ್ ಲೋನ್ ಪಡೆದು ಮನೆ ನಿರ್ಮಾಣ ಮಾಡಿಕೊಳ್ಳಬಹುದು. ತಜ್ಞರು ಹೇಳುವ ಪ್ರಕಾರ 5೦ ರಿಂದ 75 ಸಾವಿರ ರೂ. ಆದಾಯ ಇರುವವರು ಹೋಮ್ ಲೋನ್ Home Loan ಪಡೆದುಕೊಳ್ಳುವುದಕ್ಕಿಂತ ಬಾಡಿಗೆ ಮನೆಯಲ್ಲಿರುವುದೇ ಉತ್ತಮ. ಯಾಕೆಂದರೆ ಬಾಡಿಗೆ ಮನೆಯಲ್ಲಿ ಇದ್ದು, ಹಣ ಉಳಿತಾಯ ಮಾಡಿ ನೀವು ಸಾಲ ಮರುಪಾವತಿಗೆ ಅರ್ಹರಾದ ನಂತರ ಸಾಲ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ನಿಮ್ಮ ಸಂಬಳ ಅಥವಾ ತಿಂಗಳ ಆದಾಯ 1 ಲಕ್ಷ ರೂ.ಗೂ ಮೀರಿ ಇದ್ದರೆ ನೀವು 35 ಲಕ್ಷ ರೂ. ವರೆಗೂ ಹೋಮ್ ಲೋನ್ ಪಡೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ತಿಂಗಳ ಆದಾಯ 1.5 ಲಕ್ಷ ರೂ.ಗೂ ಮೀರಿದ್ದರೆ ಆಗ ನೀವು 5೦ ಲಕ್ಷ ರೂ. ಹೋಮ್ ಲೋನ್ Home Loan ಪಡೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ನೀವು ಸಾಲ ಮಾಡುವ ವೇಳೆ ಸರಿಯಾದ ಪ್ಲಾನ್ ಇರದೆ ಸಾಲ ಮಾಡಲು ಹೋಗಬೇಡಿ. ಒಂದು ವೇಳೆ ಹೋದರೆ ನೀವೇ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ.

Comments are closed.