Get Loan: ಸ್ವಂತ ಉದ್ಯೋಕ್ಕೆ ಸರ್ಕಾರದಿಂದ  ಸಿಗುತ್ತೆ 50 ಸಾವಿರ ರೂ. ಇಂದೇ ಅಪ್ಲೈ ಮಾಡಿ; ಮಹಿಳೆಯರಿಗೂ ಅವಕಾಶ

Get Loan by State Government: ರಾಜ್ಯ ಸರ್ಕಾರವೇ ಇರಲಿ, ಕೇಂದ್ರ ಸರ್ಕಾರವೇ ಇರಲಿ ಅವುಗಳ ಮೂಲ ಗುರಿ ಬಡವರ, ದೀನ ದಲಿತರ ಏಳಿಗೆ ಆಗಿರುತ್ತದೆ. ಅವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಜನರ ಜವಾಬ್ದಾರಿ ಆಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮೊದಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು.

Get Loan by State Government, loan facility for SC/ST Community. Here are the details.

 ಈಗಾಗಲೇ ಲಕ್ಷಾಂತರ ಜನರು ಈ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಹಾಗೂ ಕೆಲವೊಂದು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳಲ್ಲಿ ಎಸ್ಸಿ ಎಸ್ಟಿ ಸಮುದಾಯದವರ ಏಳ್ಗೆಗಾಗಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದರ ಕುರಿತು ಮಾಹಿತಿ ಇಲ್ಲಿದೆ.

ಎಸ್ಸಿ, ಎಸ್ಟಿ ಸಮುದಾಯದವರಿಗಾಗಿ ಯೋಜನೆ ಜಾರಿ;

ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎಸ್ಸಿ ಹಾಗೂ ಎಸ್ಟಿ ಸಮುದಾಯದವರ ಅಭಿವೃದ್ಧಿಗಾಗಿ ಯೋಜನೆ ಜಾರಿಗೆ ತಂದಿದೆ. ಎಸ್ಸಿ ಹಾಗೂ ಎಸ್ಟಿ ಸಮುದಾಯದ ಯುವಕರು ಹಾಗೂ ಯುವತಿಯರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯಬಹುದು. ಸ್ವಂತ ಉದ್ಯಮ ಆರಂಭಿಸುವ ಯೋಚನೆ ಇದ್ದವರು ಮಾತ್ರ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು. ಈ ಸೌಲಭ್ಯ Get Loan ನೀಡುತ್ತಿರುವುದು ಸ್ವಂತ ಉದ್ಯಮ ಆರಂಭಕ್ಕಾಗಿ ಮಾತ್ರ.

ಪರಿಶಿಷ್ಟ ಜಾತಿ, ಮಾದಿಗ ಹಾಗೂ ಇದಕ್ಕೆ ಸಂಬಂಧಿತ ಸಮುದಾಯದವರು ಮಾತ್ರ ಈ ಯೋಜನೆ ಅಡಿ ಅರ್ಜಿ ಸಲ್ಲಿಸಬೇಕು. ಈ ಯೋಜನೆ ಅಡಿ ಸ್ವಂತ ಉದ್ಯಮ ಪ್ರಾರಂಬಿಸುವವರು ಕೈಗಾಡಿ ಖರೀದಿಸಬೇಕು. ನಂತರ ರೈತರಿಂದ ತರಕಾರಿ ಖರೀದಿ ಮಾಡಿ ಅದನ್ನು ಮಾರಾಟ ಮಾಡಲು ಈ ಯೋಜನೆ ರೂಪಿಸಲಾಗಿದೆ. ಇದಕ್ಕೆ ಅವಶ್ಯ ಇರುವ ಸಹಾಯ ಹಾಗೂ ಸಾಲ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ.

ಈ ಯೋಜನೆಯನ್ನು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಪರಿಶಿಷ್ಟ ವರ್ಗದ ಮಾದಿಗ ಜಾತಿಗೆ ಸೇರಿದ ನಿರುದ್ಯೋಗಿ ಮಹಿಳೆಯರು, ಪುರುಷರು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 1 ಲಕ್ಷ ರೂ. ನೀಡಲಾಗುತ್ತದೆ. ಇದರಲ್ಲಿ 5೦ ಸಾವಿರ ರೂ.ಗಳನ್ನು ಸಹಾಯಧನದ Get Loan ರೂಪದಲ್ಲಿ ನೀಡಿದರೆ ಇನ್ನುಳಿದ 5೦ ಸಾವಿರ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಹಣಕ್ಕೆ ಶೇ. 4 ಬಡ್ಡಿದರದಲ್ಲಿ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕಾಗುತ್ತದೆ.

ಯೋಜನೆ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು:

ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯ ಅಥವಾ ಅದಕ್ಕೆ ಸಂಬಂಧಿತ ಜಾತಿಯವರಾಗಿರಬೇಕು. ಅರ್ಜಿಯಲ್ಲಿ ಆದಿಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ನಮೂದಿಸಿದಲ್ಲಿ ಕಡ್ಡಾಯವಾಗಿ ಜಾತಿ ಪ್ರಮಾಣಪತ್ರವನ್ನು ಒದಗಿಸಬೇಕು. ಅರ್ಜಿದಾರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಭಾಗದಲ್ಲಿ 1.5೦ ಲಕ್ಷ ರೂ., ಪಟ್ಟಣದಲ್ಲಿ 2 ಲಕ್ಷ ರೂ. ಮೀರಿರಬಾರದು. ಅರ್ಜಿದಾರರು 21 ವರ್ಷದಿಂದ 5೦ ವರ್ಷದೊಳಗಿನವರಾಗಿರಬೇಕು. ಯಾವ ಉದ್ದೇಶದಕ್ಕಾಗಿ ಈ ಸಾಲ ಸೌಲಭ್ಯ Get Loan ಪಡೆದಿರುತ್ತಾರೋ ಅದೇ ಉದ್ಯೋಗ ಆರಂಭಿಸಬೇಕು. ಹಣ ದುರುಪಯೋಗ ಆಗಿರುವುದು ಕಂಡುಬಂದಲ್ಲಿ ಅಂತಹವರನ್ನು ಯೋಜನೆಯ ಪಟ್ಟಿಯಿಂದ ಕೈಬಿಡಲಾಗುತ್ತದೆ. ಅರ್ಜಿದಾರರ ಕುಟುಂಬಸ್ಥರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರಬಾರದು.

ಈ ಎಲ್ಲ ಅರ್ಹತೆಗಳು ನಿಮಗಿದ್ದಲ್ಲಿ ನಿಮಗೆ ಸ್ವಂತ ಉದ್ಯೋಗ ಆರಂಭಿಸಲು ಸರ್ಕಾರ ನಿಮಗೆ ಸಹಾಯಧನ Get Loan ನೀಡುತ್ತದೆ. ನೀವು ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಜೀವನ ಕಟ್ಟಿಕೊಳ್ಳಬಹುದು.

Comments are closed.