BOB Personal Loan: ನೀವು ವೈಯಕ್ತಿಕ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!

Get BOB Personal Loan Short time: ನಮ್ಮ ದೇಶದಲ್ಲಿ ಇದೀಗ ಎಲ್ಲವೂ ಡಿಜಿಟಲ್ ಆಗಿದೆ. ತಾಂತ್ರಿಕವಾಗಿ ಭಾರತವು ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಯಾವುದೇ ಕೆಲಸವನ್ನಾದರೂ ನಾವು ಕುಳಿತಲ್ಲಿಯೇ ಮಾಡಬಹುದಾಗಿದೆ. ಇದಕ್ಕೆ ಬ್ಯಾಂಕಿಂಗ್ ಕ್ಷೇತ್ರ ಹೊರತಾಗಿಲ್ಲ. ಡಿಜಿಟಲಿಕರಣದಿಂದ ಪ್ರತಿಯೊಬ್ಬರೂ ಬ್ಯಾಂಕ್ನಲ್ಲಿ ಖಾತೆ ಹೊಂದುವಂತಾಗಿದೆ. ಬ್ಯಾಂಕುಗಳು ಸಹ ಜನರ ಜೀವನ ಮಟ್ಟವನ್ನು ಎತ್ತರಿಸಲು ಬಹಳಷ್ಟು ಪ್ರಯತ್ನ ಪಡುತ್ತಿವೆ. ಹಲವಾರು ವಿದಧ ಸಾಲ BOB Personal Loan ನೀಡುವ ಮೂಲಕ ಜನರಿಗೆ ಆರ್ಥಿಕ ಶಕ್ತಿ ತುಂಬುತ್ತ ಅಭಿವೃದ್ಧಿ ಹೊಂದುತ್ತಿದೆ.

Get BOB Personal Loan here are the details how to get loan.

ನಮ್ಮ ದೇಶದಲ್ಲಿ ಹಲವಾರು ಬ್ಯಾಂಕ್ಗಳು ಇವೆ. ಅವುಗಳಲ್ಲಿ ಬ್ಯಾಂಕ್ ಆಫ್ ಬರೋಡಾ ಕೂಡಾ ಒಂದು. ಬ್ಯಾಂಕ್ ಆಫ್ ಬರೋಡಾ ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರಿಗೆ ಹತ್ತಿರವಾಗಿದೆ. ಇದೀಗ ಈ ಬ್ಯಾಂಕ್ನಲ್ಲಿ ವೈಯಕ್ತಿಕ ಸಾಲ Personal Loan ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಇದನ್ನೂ ಓದಿ: ಮನೆಯಲ್ಲಿಯೇ ಕುಳಿತು ಅರ್ಜಿ ಹಾಕಿ. ಗ್ಯಾರಂಟಿ ಇಲ್ಲದೆ 20 ಲಕ್ಷ Loan – ಟಕ್ ಅಂತ ಬ್ಯಾಂಕ್ ಖಾತೆಗೆ ದುಡ್ಡು.

ಬ್ಯಾಂಕ್ ಆಫ್ ಬರೋಡಾ ಇನ್ಸಟಂಟ್ ಲೋನ್ (Bank of Baroda instant loan) :

ನಿಮಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಎದುರಾದರೂ ಅದಕ್ಕೆ ಬ್ಯಾಂಕುಗಳು ಸ್ಪಂದಿಸುತ್ತವೆ. ಇದೀಗ ಎಲ್ಲವೂ ಆನ್ಲೈನ್ (Online) ಆಗಿರುವುದರಿಂದ ಸಾಲ ಪಡೆಯಲು ನೀವು ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದು. ಸಾಲ ಮಂಜೂರಾಗಲು ಹೆಚ್ಚು ಸಮಯವನ್ನೂ ತೆಗೆದುಕೊಳ್ಳುವುದಿಲ್ಲ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಬಹಳ ಬೇಗ ಕಡಿಮೆ ಬಡ್ಡಿದರದಲ್ಲಿ BOB ವಯಕ್ತಿಕ ಸಾಲ BOB Personal Loan ನೀಡುತ್ತದೆ.

ನಿಮಗಿದು ಗೊತ್ತೇ? ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ Loan, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!

ಸಾಲದ ವಿವರಗಳು: (Details of Personal Loan)

ನೀವು ಬ್ಯಾಂಕ್ ಬರೋಡಾದಿಂದ ವೈಯಕ್ತಿಕ ಸಾಲದ ಅಡಿಯಲ್ಲಿ 5೦ ಸಾವಿರ ರೂ.ನಿಂದ ಹಿಡಿದು 1೦ ಲಕ್ಷ ರೂ.ಗಳ ವರೆಗೆ ಸಾಲ ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ಆಫ್ ಬರೋಡಾದಲ್ಲಿ ಶೇ. 11.75 ರಿಂದ 17.1೦ ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ನೀವು ಪಡೆದುಕೊಂಡಿರವ ಸಾಲವನ್ನು ಮರುಪಾವತಿ ಮಾಡಲು ಒಂದು ವರ್ಷದಿಂದ ಐದು ವರ್ಷಗಳ ವರೆಗೆ ಸಮಯ ನೀಡಲಾಗುತ್ತದೆ. ಸಾಲ ಪಡೆಯುವ ವೇಳೆ ಒಂದು ಸಾವಿರ ರೂ.ಗಳವರೆಗೆ ಪ್ರೊಸೆಸಿಂಗ್ ಫೀಸ್ ಹಾಗೂ ಸ್ಟಾಂಪ್ ಡ್ಯೂಟಿಯನ್ನು ನೀವು ಕಟ್ಟಬೇಕಾಗುತ್ತದೆ. ನೀವು ವಾರದ ಏಳು ದಿನವೂ ದಿನದ 24ಗಂಟೆಯೂ ವೈಯಕ್ತಿಕ ಸಾಲ Personal Loan ಕ್ಕಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸರಿಯಿದ್ದಲ್ಲಿ ನಿಮ್ಮನ್ನು ಸಂಪರ್ಕಿಸಿ ಸಾಲದ ಹಣ ಮಂಜೂರು ಮಾಡಲಾಗುತ್ತದೆ.

ಸಾಲ ಪಡೆದುಕೊಳ್ಳಲು ಒದಗಿಸಬೇಕಾದ ದಾಖಲೆಗಳು: (Documents)

ನೀವು ಪ್ರತಿನಿತ್ಯ ಉಪಯೋಗಿಸುವ ಆಧಾರ್ಗೆ ಲಿಂಕ್ (Adhaar Link) ಆಗಿರುವ ಮೊಬೈಲ್ ನಂಬರ್ ನೀಡಬೇಕು. ನಿಮ್ಮ ಪಾನ್ ಕಾರ್ಡ್ ಕಾಪಿಯನ್ನು ಒದಗಿಸಬೇಕಾಗುತ್ತದೆ. ನೆಟ್ ಬ್ಯಾಂಕಿಂಗ್ ಹಾಗೂ ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಎಸ್ಟಿ ರಿಟರ್ನ್ ಕಾಪಿಯನ್ನು ಬ್ಯಾಂಕಿಗೆ ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ (How to apply):

ಮೊದಲು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಲೋನ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಬ್ಯಾಂಕ್ನಲ್ಲಿ ಸಿಗುವ ಸಾಲದ ವಿವರಗಳು ನಿಮಗೆ ಕಾಣಿಸುತ್ತವೆ. ಅದನ್ನು ಸರಿಯಾಗಿ ಓದಿಕೊಂಡು ವೈಯಕ್ತಿಕ ಸಾಲದ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಪ್ರೋಸೀಡ್ ಎನ್ನುವ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಭರ್ತಿ ಮಾಡಬೇಕು. ಆಗ ನಿಮ್ಮ ಮೊಬೈಲ್ಗೆ ಒಂದು ಒಟಿಪಿ ಬರುತ್ತದೆ. ಅದನ್ನು ಅಲ್ಲಿ ಎಂಟ್ರಿ ಮಾಡಿ ಸಬ್ಮಿಟ್ (Submit)  ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಪೇಜೊಂದು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಸಾಲಕ್ಕೆ ಸಂಬಂಧಪಟ್ಟ ವಿವರಗಳನ್ನು ತುಂಬಬೇಕಾಗುತ್ತದೆ.

ಈಗ ನಿಮ್ಮ ಮುಂದೆ ವೈಯಕ್ತಿಕ ಸಾಲದ ಅರ್ಜಿ ಫಾರಂ ಕಾಣಿಸಿಕೊಳ್ಳುತ್ತದೆ. ಅಲ್ಲಿ ಕೇಳಲಾಗಿರುವ ವಿವರಗಳು ಹಾಗೂ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ.

ಒಂದೊಮ್ಮೆ ಯಾವುದಾದರೂ ತಪ್ಪಿದ್ದಲ್ಲಿ ಕೂಡಲೇ ತಿದ್ದಿ ಮತ್ತೊಮ್ಮೆ ಅಪ್ಲೋಡ್ ಮಾಡಿ. ನೀವು BOB Personal Loan ವೈಯಕ್ತಿಕ ಸಾಲ ಪಡೆಯಲು ಅರ್ಹರಾಗಿದ್ದರೆ ನಿಮ್ಮ ಅರ್ಜಿ ಸ್ವೀಕಾರವಾಗುತ್ತದೆ. ಅರ್ಜಿ ಸ್ವೀಕೃತಿಗೊಂಡ ರಸೀದಿ ನಿಮಗೆ ಸಿಗುತ್ತದೆ. ಅದರ ಒಂದು ಪ್ರಿಂಟ್ಔಟ್ ತೆಗೆದಿಟ್ಟುಕೊಳ್ಳಿ. ಇವಿಷ್ಟು ಪ್ರಕ್ರಿಯೆಗಳು ಮುಗಿದ ನಂತರ ಬ್ಯಾಂಕ್ ಅಧಿಕಾರಿಗಳು ನಿಮ್ಮನ್ನು ಫೋನ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಗೆ ಹಣ ಜಮಾ ಮಾಡುತ್ತಾರೆ.

Comments are closed.