Personal Loan: ನಿಮಗೆ ತಕ್ಷಣಕ್ಕೆ ವೈಯಕ್ತಿಕ ಸಾಲ ಬೇಕಾದರೆ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ; ಆರ್ ಬಿ ಐ ಅನುಮೋದಿತ ಅಪ್ಲಿಕೇಶನ್ ಕಣ್ರೀ ಇದು!
Get Personal Loan by money view: ಇಂದಿನ ದಿನಮಾನಗಳಲ್ಲಿ ಸಾಲ ಮಾಡದೆ ಬದುಕುವುದು ಕಷ್ಟಸಾಧ್ಯ. ಒಂದಲ್ಲ ಒಂದು ವಿಚಾರಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಬೀಳುತ್ತದೆ. ಆಗ ಸಣ್ಣ ಪ್ರಮಾಣದ ಹಣದ ಅವಶ್ಯಕತೆ ಬಿದ್ದರೆ ಸ್ನೇಹಿತರು ಸಹಾಯ ಮಾಡಬಹುದು. ಅದೇ ದೊಡ್ಡ ಪ್ರಮಾಣದ ಹಣದ ಅವಶ್ಯಕತೆ ಬಿದ್ದಾಗ ಸಾಲ Personal Loan ಮಾಡುವುದು ಅನಿವಾರ್ಯವಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಹಲವು ಸಂಸ್ಥೆಗಳು ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲೇ ಸಾಲ ನೀಡುತ್ತವೆ.
Get Personal Loan by money view how to apply here are the details.
ಅವುಗಳಲ್ಲಿ ಮನಿ ವಿವ್ ಅಪ್ಲಿಕೇಶನ್ (moneyview Application) ಕೂಡ ಒಂದಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅನುಮೋದನೆಗೊಂಡ ಅಪ್ಲಿಕೇಶನ್ ಆಗಿದೆ. ಹಣದ ಅವಶ್ಯಕತೆ ಇದೆ ಎಂದು ಯಾವುದೋ ಅಪ್ಲಿಕೇಶನ್ನಲ್ಲಿ ಸಾಲ ಪಡೆದು ನಂತರ ತೊಂದರೆ ಅನುಭವಿಸುದಕ್ಕಿಂತ ಆರ್ಬಿಐ ಅನುಮೋದನೆ ನೀಡಿದ ಅಪ್ಲಿಕೇಶನ್ ಮೂಲಕ ಸಾಲ ಪಡೆಯುವುದು ಉತ್ತಮ. ಇದರ ಮೇಲೆ ಆರ್ಬಿಐ ಸದಾ ಕಾಲ ನಿಗಾ ಇಟ್ಟಿರುತ್ತದೆ. ಮನಿ ವಿವ್ ಅಪ್ಲಿಕೇಶನ್ನಲ್ಲಿ ಸಾಲ Personal Loan ಪಡೆಯುವುದು ಹೇಗೆ ಒಂದು ಈಗ ನೋಡೋಣ.
ಮನಿ ವಿವ್ ಅಪ್ಲಿಕೇಶನ್ ಕಾರ್ಯ ನಿರ್ವಹಣೆ:
ನೀವು ಹಣದ ಅವಶ್ಯಕತೆ ಬಿದ್ದಾಗ ಗೂಗಲ್ ಪ್ಲೇ ಸ್ಟೋರಿಗೆ ಹೋಗಿ ಮನಿ ವಿವ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಇದು ಜನರ ತಕ್ಷಣದ ಹಣದ ಅವಶ್ಯಕತೆ ಪೂರೈಸುತ್ತದೆ. ನಿಮಗೆ ಎಲ್ಲೋ ಪ್ರವಾಸಕ್ಕೆ ಕುಟುಂಬ ಸಮೇತ ಹೋಗಬೇಕು, ಅನಾರೋಗ್ಯಗೊಂಡು ಆಸ್ಪತ್ರೆಯಲ್ಲಿ ದಾಖಲಾದಾಗ, ಮಕ್ಕಳ ಶಾಲಾ ಫೀಸು ಕಟ್ಟಲು ಹೀಗೆ ಹಣದ ಅವಶ್ಯಕತೆ ಬಿದ್ದಾಗ ಇದನ್ನು ಉಪಯೋಗಿಸಿಕೊಳ್ಳಬಹುದು.
ಇದನ್ನೂ ಓದಿ: ಮನೆಯಲ್ಲಿಯೇ ಕುಳಿತು ಅರ್ಜಿ ಹಾಕಿ. ಗ್ಯಾರಂಟಿ ಇಲ್ಲದೆ 20 ಲಕ್ಷ ಲೋನ್– ಟಕ್ ಅಂತ ಬ್ಯಾಂಕ್ ಖಾತೆಗೆ ದುಡ್ಡು.
ಬಡ್ಡಿದರ ಎಷ್ಟು?
ಮನಿ ವಿವ್ ಅಪ್ಲಿಕೇಶನ್ನಲ್ಲಿ ವೈಯಕ್ತಿಕ ಸಾಲವನ್ನು ಸುಲಭವಾಗಿ ಹಾಗೂ ವೇಗವಾಗಿ ನೀಡಲಾಗುತ್ತದೆ. ಇಲ್ಲಿ ಪ್ರತಿ ತಿಂಗಳಿಗೆ 1.33 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಇನ್ನು ವಾರ್ಷಿಕ ಬಡ್ಡಿದರದ ವಿಚಾರಕ್ಕೆ ಬಂದರೆ ಶೇ.16 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಇದು ನೀವು ಮರುಪಾವತಿ ಮಾಡುವ ವೇಳೆ ಭಿನ್ನವಾಗಬಹುದು. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನಿಮಗೆ ಕಡಿಮೆ ಬಡ್ಡಿದರದಲ್ಲೂ ಸಾಲ Personal Loan ಸಿಗುತ್ತದೆ.
ಮನಿ ವಿವ್ ಅಪ್ಲಿಕೇಶನ್ ನಲ್ಲಿ ವಿಧಿಸುವ ಚಾರ್ಜಸ್ ! (moneyview application charges)
ನೀವು ಮನಿ ವಿವ್ ಅಪ್ಲಿಕೇಶನ್ನಲ್ಲಿ ಪಡೆದುಕೊಳ್ಳುವ ವೈಯಕ್ತಿಕ ಸಾಲದ ಪ್ರೊಸೆಸಿಂಗ್ ಚಾರ್ಜ್ಸ್ (Processing fee) ವಿಚಾರವಾಗಿ ಹೇಳುವುದಾದರೆ ಶೇ.2ರಿಂದ ಶೇ.8ರವರೆಗೆ ಚಾರ್ಜ್ಸ್ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಸಾಲ ಮರುಪಾವತಿ ಮಾಡುವ ವೇಳೆ ಇಎಂಐ ತುಂಬುವುದು ತಡವಾದರೆ ನಿಮ್ಮ ಸಾಲದ ಮೇಲಿನ ಶೇ. 2ರಷ್ಟು ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ನೀವು ಸಾಲ Personal Loan ಪಡೆದುಕೊಂಡ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಾಲವನ್ನು ಮರುಪಾವತಿ ಮಾಡುವ ಇಚ್ಚೆ ಹೊಂದಿದ್ದರೆ ಅದಕ್ಕೆ ನೀವು ಕನಿಷ್ಟ ಮೂರು ತಿಂಗಳ ಕಾಲ ಕಾಯಬೇಕಾಗುತ್ತದೆ. ಮೂರು ತಿಂಗಳ ನಂತರದಲ್ಲಷ್ಟೇ ಪೂರ್ಣ ಪ್ರಮಾಣದ ಸಾಲ ಮರುಪಾವತಿ ಸಾಧ್ಯ.
ಒಂದು ವೇಳೆ ನೀವು ಸಾಲ ಮರುಪಾವತಿ ವೇಳೆ ಚೆಕ್ ನೀಡಿ ಅದು ಬೌನ್ಸ್ ಆದಲ್ಲಿ ಅದಕ್ಕೆ ನೀವು 5೦೦ ರೂ. ದಂಡ ಪಾವತಿ ಮಾಡಬೇಕಾಗುತ್ತದೆ. ನೀವು ಒಂದು ವೇಳೆ ಪಡೆದ ಸಾಲವನ್ನು ಕ್ಯಾನ್ಸಲ್ ಮಾಡಬೇಕು ಎಂದಾದರೆ ಅದಕ್ಕೆ ಮಾತ್ರ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಒಂದು ಸಲ ನೀವು ಸಾಲ ಪಡೆದುಕೊಂಡ ಮೇಲೆ ಅದರ ಬಡ್ಡಿ ಹಾಗೂ ಎಲ್ಲ ರೀತಿಯ ಚಾರ್ಜ್ಸ್ ಭರಿಸಲು ನೀವು ಸಿದ್ಧರಿರಬೇಕಾಗುತ್ತದೆ.
ಹಾಗಾಗಿ ನೀವು ವೈಯಕ್ತಿಕ ಸಾಲ ಪಡೆಯುವ ಮುನ್ನ ಎಲ್ಲವನ್ನು ಆಲೋಚಿಸಿ ನೀವು ಸಾಲ ಮರುಪಾವತಿ ಮಾಡಲು ಶಕ್ತರಿದ್ದೀರಿ. ನಿಮಗೆ ಅಷ್ಟು ಹಣ ನಿಮಗೆ ಬರಲಿದೆ ಎಂದಾದರೆ ಮಾತ್ರ ಸಾಲ ಪಡೆದುಕೊಳ್ಳಿ.
Comments are closed.