Government Land: ಸರ್ಕಾರದಿಂದ ಸೈಟ್ ವಿತರಣೆ; ಕುದಲೇ ಅರ್ಜಿ ಸಲ್ಲಿಸಿ ಚಿಲ್ಲರೆ ದುಡ್ಡಿಗೆ ಸೈಟ್ ಖರೀದಿಸಿ!

Government Land: ಸ್ವಂತ ಮನೆ ನಿರ್ಮಾಣ ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಅದಕ್ಕಾಗಿಯೇ ಜೀವನವೀಡಿ ದುಡಿಯುತ್ತಾನೆ. ಸಾಲ ಸೋಲ ಮಾಡಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಾನೆ. ಮನೆ ನಿರ್ಮಾಣ ಮಾಡಲು ಜಾಗ ಅವಶ್ಯ. ಜಮೀನು ಇರುವವರು ತಮ್ಮ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ ಸಿಟಿಯಲ್ಲಿ ಇರುವವರು, ಜಮೀನು ಇಲ್ಲದವರು ಸೈಟ್ ಕೊಂಡುಕೊಂಡು ಮನೆ ನಿರ್ಮಾಣ ಮಾಡಬೇಕಾಗುತ್ತದೆ. ಆದರೆ ಇದೀಗ ಸೈಟ್ಗಳ ಬೆಲೆ ಗಗನಮುಖಿಯಾಗಿದೆ. ಹಾಗಾಗಿ ಬಡವರಿಗಾಗಿ ಸರ್ಕಾರವೇ ಗೃಹಮಂಡಳಿ ಮೂಲಕ ಸೈಟ್ಗಳ Government Land ವಿತರಣೆಗೆ ಮುಂದಾಗಿದೆ. ಹಾಗಾದರೆ ಎಲ್ಲೆಲ್ಲಿ ಸೈಟ್ಗಳ ಮಾರಾಟ ನಡೆಯುತ್ತಿದೆ ಎಂದು ತಿಳಿದುಕೊಳ್ಳೋಣ.

ರಾಜ್ಯ ಸರ್ಕಾರವು ಗೃಹಮಂಡಳಿ ಮೂಲಕ ವಿವಿಧ ಬಡಾವಣೆಗಳ ಅಭಿವೃದ್ಧಿಗಾಗಿ ಹಲವು ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ:

ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು Government Land ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಿದ ನಂತರ ಬಾಕಿ ಉಳಿದಿರುವ ನಿವೇಶನಗಳನ್ನು ಮಾರಾಟ ಮಾಡಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಮಾಹಿತಿ ಬೇಕಾದವರು [email protected]  ಭೇಟಿ ನೀಡಬಹುದು. ಅಲ್ಲದೆ ಹೆಚ್ಚಿನ ಮಾಹಿತಿ ಬೇಕಾದವರು ಕರ್ನಾಟಕ ಗೃಹಮಂಡಳಿ ಫೋನ್ ನಂಬರ್ ೦8೦22273511೧ಗೆ ಕರೆ ಮಾಡಿ ವಿಚಾರಿಸಬಹುದು.

ಎಲ್ಲೆಲ್ಲಿ ಲಭ್ಯವಿದೆ ಸೈಟ್?:

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಬಾದವಾಡಿ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅನಂತನಹಳ್ಳಿ, ಮೆಳ್ಳೆಕಟ್ಟೆ, ಎನ್ಜಿಒ (ಮುಂಡ್ರಗಿ) ಹುಲಕುಂದಿ, ಬಳ್ಳಾರಿ ಜಿಲ್ಲೆ, ವಿಜಯಪುರ ಜಿಲ್ಲೆಯ ಬಬಲೇಶ್ವರ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ 2ನೇ ಹಂತದಲ್ಲಿ ಸೈಟ್ಗಳು ಲಭ್ಯ ಇದೆ.

ಸೈಟ್ ದರ ಎಷ್ಟು?

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಬಾದವಾಡಿಯಲ್ಲಿ ಪ್ರತಿ ಚದರ್ ಅಡಿಗೆ 5೦೦ ರೂ. ಇದೆ. ಲಭ್ಯ ಇರುವ ಸೈಟ್ಗಳು ಎಲ್ಐಜಿ 44, ಎಂಐಜಿ 78, ಎಚ್ಐಜಿ-1 19, ಎಚ್ಐಜಿ-2 6.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲಕಿನ ಅನಂತನಹಳ್ಳಿ, ಮೆಳ್ಳೆಕಟ್ಟೆಯಲ್ಲಿ ಪ್ರತಿ ಚದರ್ ಅಡಿಗೆ 65೦ ರೂ. ನಿಗದಿ ಮಾಡಲಾಗಿದೆ. ಲಭ್ಯ ಇರುವ ಸೈಟ್ಗಳು: ಎಲ್ಐಜಿ-12, ಎಂಐಜಿ-7,ಎಚ್ಐಜಿ-16 ಎಚ್ಐಜಿ-2 13.

ಬಳ್ಳಾರಿ ಜಿಲ್ಲೆ ಎನ್ಜಿಒ (ಮುಂಡ್ರಗಿ) ಹುಲಕುಂದಿಯಲ್ಲಿ ಪ್ರತಿ ಚದರ್ ಅಡಿಗೆ 55೦ ರೂ. ನಿಗದಿ ಮಾಡಲಾಗಿದೆ.ಇಲ್ಲಿ ಎಂಐಜಿ-19 ಸೈಟ್ Government Land ಮಾತ್ರ ಲಭ್ಯ ಇದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಪ್ರತಿ ಚದರ್ ಅಡಿಗೆ 43೦ ರೂ. ನಿಗದಿ ಮಾಡಲಾಗಿದೆ. ಇಲ್ಲಿ ಎಲ್ಐಜಿ-54, ಎಂಐಜಿ 65, ಎಚ್ಐಜಿ-1,45 ಸೈಟ್ ಲಭ್ಯ ಇದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ 2ನೇ ಹಂತದಲ್ಲಿ ಎಡಬ್ಲ್ಯೂಎಸ್-17, ಎಲ್ಐಜಿ-57,ಎಂಐಜಿ 108 ಎಚ್ಐಜಿ-1,51 ಎಚ್ಐಜಿ 16 ಸೈಟ್ಗಳು ಲಭ್ಯ ಇದೆ.

ನಿವೇಶನ ಪಡೆಯಲು ಇರುವ ಅರ್ಹತೆಗಳು:

ನಿವೇಶನ ಪಡೆದುಕೊಳ್ಳಲು ಇಚ್ಚಿಸುವವರು ಕರ್ನಾಟಕ ರಾಜ್ಯದಲ್ಲಿ 1೦ ವರ್ಷಗಳಿಂದ ನೆಲೆಸಿರಬೇಕು. ಅರ್ಜಿದಾರರ ಕುಟುಂಬಸ್ಥರು ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಕರ್ನಾಟಕ  ಗೃಹ ಮಂಡಳಿ ಅಥವಾ ಇನ್ನಿತರ ಯಾವುದೇ ಸ್ಥಳೀಯ ಸಂಸ್ಥೆ/ ಪ್ರಾಧಿಕಾರದಿಂದ ಸೈಟ್ Government Land ಪಡೆದುಕೊಂಡಿಲ್ಲ ಎಂದು ನೋಟರಿ ಮಾಡಿಸಿದ ದಾಖಲಾತಿ ಒದಗಿಸಬೇಕು.

Comments are closed.