Personal Loan: ಸಾಲ ತೆಗೆದುಕೊಳ್ಳೋಕೆ ಇನ್ನು ಮುಂದೆ ಬ್ಯಾಂಕ್ ಗೆ ಅಲಿಬೇಡಿ, ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ಸಿಗುತ್ತೆ ಸಾಲ!

Get Personal Loan in Post Office: 8೦-9೦ರ ದಶಕದಲ್ಲಿ ಅಂಚೆ ಕಚೇರಿ ಎಂದರೆ ನಾವು ಬರೆದ ಪತ್ರಗಳನ್ನು ತಲುಪಿಸುವುದು, ಬ್ಯಾಂಕ್, ಕೋರ್ಟ್ ಹೀಗೆ ಕಚೇರಿಗಳಿಂದ ಪತ್ರಗಳನ್ನು, ನೋಟಿಸ್ಗಳನ್ನು ನಮಗೆ ತಲುಪಿಸುವುದು, ಸಣ್ಣ ಪುಟ್ಟ ಉಳಿತಾಯ ಯೋಜನೆಗಳು (Saving Schemes), ದೇವಾಲಯಗಳಿಗೆ ಎಂಒ ತಲುಪಿಸುವುದು ಇಷ್ಟೇ ಆಗಿತ್ತು. ಈಗ ಎಲ್ಲವೂ ಡಿಜಟಲೀಕರಣಗೊಂಡಿರುವುದರಿಂದ ಪತ್ರ ಬರೆಯುವ ಪದ್ಧತಿಯೇ ನಿಂತು ಹೋಗಿದೆ. ಕಾಲಕ್ಕೆ ತಕ್ಕ ಹಾಗೆ ಅಂಚೆ ಕಚೇರಿಯೂ ಇದೀಗ ಬ್ಯಾಂಕ್ ತರಹವೇ ಮಾರ್ಪಾಟಾಗಿದೆ. ಇಲ್ಲಿ ಎಲ್ಲ ರೀತಿಯ ಉಳಿತಾಯ ಯೋಜನೆಗಳನ್ನು ಮಾಡಬಹುದಾಗಿದೆ. ಅಲ್ಲದೆ ಇಲ್ಲಿ ಸಾಲ Personal Loan ವನ್ನು ನೀಡಲಾಗುತ್ತದೆ.

Get Personal Loan in Post Office here are the details.

ಬ್ಯಾಂಕಿಂಗ್ ಸೇವೆಯನ್ನೂ ಪಡೆಯಿರಿ: Post Office Banking Services

ಅಂಚೇ ಕಚೇರಿ (Post Office) ಇದೀಗ ಬ್ಯಾಂಕ್ (Bank) ಆಗಿ ಮಾರ್ಪಾಟಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅಂಚೆ ಕಚೇರಿಯಲ್ಲಿ ಉಳಿತಾಯ ಮಾದರಿಯ ಖಾತೆಗಳನ್ನು ತೆರೆಯಬಹುದು, ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು, ಹಣ ಠೇವಣಿ ಇಡಬಹುದು, ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗೆ ಅಂಚೆ ಕಚೇರಿಯಿಂದಲೇ ಹೂಡಿಕೆ ಮಾಡಬಹುದು, ಎಟಿಎಂ ಸೌಲಭ್ಯ ಹೀಗೆ ಒಂದು ರೀತಿಯಲ್ಲಿ ಅಂಚೆ ಕಚೇರಿ ಅಂಚೆ ಬ್ಯಾಂಕ್ ಆಗಿದೆ.

ಇದನ್ನೂ ಓದಿ: ನೀವು ಇಷ್ಟು ಮಾಡಿ ಸಾಕು, ಈ ಬ್ಯಾಂಕ್ ಮನೆಗೇ ಬಂದು ಕೊಡುತ್ತೆ 40 ಲಕ್ಷ ರೂ. ವರೆಗಿನ Loan!

ಆರ್.ಡಿ. ಖಾತೆ ಆರಂಭಿಸಿ (Post Office RD Account):

ಇದೀಗ ಈ ವಿಚಾರಕ್ಕೆ ಒಂದು ಹೊಸ ಸೇರ್ಪಡೆ ಆಗಿದೆ. ಅಂಚೆ ಕಚೇರಿಯಲ್ಲಿ RD ಖಾತೆ ಹೊಂದಿರುವವರಿಗೆ ಇದು ಗುಡ್ ನ್ಯೂಸ್ ಎಂದೇ ಹೇಳಬೇಕು. ಸಾಮಾನ್ಯವಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಆರಂಭಿಸಿದವರು RDಯನ್ನು ಮಾಡಿಸಿರುತ್ತಾರೆ. ಆರ್.ಡಿ. ಎಂದರೆ ಪ್ರತಿ ತಿಂಗಳು ನಿಶ್ಚಿತ ಮೊತ್ತದ ಠೇವಣಿ ಇಡುವುದಾಗಿದೆ.

ಈ RD ಖಾತೆ ತೆರೆಯುವುದಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಯಾರೂ ಬೇಕಾದರೂ RD ಖಾತೆ ತೆರೆಯಬಹುದಾಗಿದೆ. ಇದರಲ್ಲಿ ತಿಂಗಳಿಗೆ ಕನಿಷ್ಠ 1೦೦ ರೂ.ನಿಂದ ಹಿಡಿದು ಗರಿಷ್ಟ ಎಷ್ಟು ಬೇಕಾದರೂ ನೀವು ಠೇವಣಿ ಇಡಬಹುದಾಗಿದೆ. RD ಖಾತೆಯ ಮೆಚುರಿಟಿ ಅವಧಿ 5 ವರ್ಷಗಳು. ಒಂದು ವೇಳೆ ನೀವು 5 ವರ್ಷದ ಮಧ್ಯದಲ್ಲಿ RD ಖಾತೆಯಲ್ಲಿ ಠೇವಣಿ ಇಡುವುದನ್ನು ನಿಲ್ಲಿಸಿದರೂ ಈ ಹಣ ನಿಮಗೆ 5 ವರ್ಷದ ನಂತರವೇ ಸಿಗಲಿದೆ.

ಐದು ವರ್ಷಗಳ ಬಳಿಕ ಇದಕ್ಕೆ ಅನ್ವಯವಾಗುವ ಬಡ್ಡಿಯ ಆಧಾರದ ಮೇಲೆ ನಿಮಗೆ ರಿಟರ್ನ್ಸ್ ಸಿಗಲಿದೆ. ಸಣ್ಣ ಹೂಡಿಕೆದಾರರಿಗೆ ಇದು ಒಂದು ರೀತಿಯಲ್ಲಿ ವರದಾನ ಎಂದರೆ ಅತಿಶಯೋಕ್ತಿ ಆಗಲಾರದು. ಹಾಗಾಗಿಯೇ RD ಯೋಜನೆ ದೇಶದಾದ್ಯಂತ ಪ್ರಸಿದ್ಧಿ ಹೊಂದಿದೆ. ಹೆಚ್ಚಿನ ಬಡವರು, ಕೆಳಮಧ್ಯಮ ವರ್ಗದವರು, ಮಧ್ಯಮ ವರ್ಗದವರು RD ಖಾತೆ ಹೊಂದಿರುತ್ತಾರೆ. ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುತ್ತಾರೆ. ಇದೀಗ RD ಮೂಲಕವೇ ವಯಕ್ತಿಕ ಸಾಲ Personal Loan ವನ್ನೂ ನೀಡಲಾಗುತ್ತಿರುವುದು ವಿಶೇಷ.

ಅಂಚೆ ಇಲಾಖೆ ಸಾಲ ಯೋಜನೆ (Post Office personal Loan):

ಅಂಚೆ ಇಲಾಖೆಯಲ್ಲಿ ಸಾಲ ಯೋಜನೆ ಜಾರಿಯಲ್ಲಿದೆ. RD ಖಾತೆ ಹೊಂದಿರುವವರು ಈ ಸಾಲ Personal Loan ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. RD ಖಾತೆ ಹೊಂದಿರುವವರು ತಾವು ಹೂಡಿಕೆ ಆರಂಭಿಸಿದ ಒಂದು ವರ್ಷದ ನಂತರ ಈ ಯೋಜನೆ ಅಡಿ ಸಾಲ ಪಡೆದುಕೊಳ್ಳಬಹುದಾಗಿದೆ. ಈ ರೀತಿ ವೈಯಕ್ತಿಕ ಸಾಲ ನೀಡುವ ಮೂಲಕ ಅಂಚೆ ಇಲಾಖೆ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.

RD ಖಾತೆ ತೆರೆಯಲು ನೀವು ಕನಿಷ್ಠ ದಾಖಲೆಗಳನ್ನು ಒದಗಿಸಿದರೆ ಸಾಕಾಗುತ್ತದೆ. ಈ RD ಖಾತೆಯ ಮೇಲೆ ನಿಮಗೆ 45 ಸಾವಿರ ರೂ.ಗಳವರೆಗೆ ಸಾಲ ಸಿಗಲಿದೆ. RD ಖಾತೆಯನ್ನು ಜಂಟಿಯಾಗಿ ತೆರೆದಲ್ಲಿ ನಿಮಗೆ 9೦ ಸಾವಿರ ರೂ.ಗಳ ವರೆಗೆ ಸಾಲ Personal Loan ಸಿಗಲಿದೆ. ಮತ್ತು ಇನ್ನೊಂದು ವಿಶೇಷವೆಂದರೆ ಈ ರೀತಿ ನೀವು ಪಡೆದ ಸಾಲಕ್ಕೆ ಬಡ್ಡಿದರವೂ ಸಹ ತೀರಾ ಕಡಿಮೆಯಿದೆ.

ಹೀಗಾಗಿ ವೈಯಕ್ತಿಕ ಸಾಲ ಮಾಡಲು ಇಚ್ಚಿಸುವವರು ಈ RD ಯೋಜನೆ ಅಡಿಯಲ್ಲಿಯೂ ಸಾಲ ಪಡೆದುಕೊಂಡು ತಮ್ಮ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳಬಹುದಾಗಿದೆ.

Comments are closed.