Instant Personal Loan: ಅರ್ಜಂಟಾಗಿ ಹಣ ಬೇಕಾ? ಹಾಗಾದ್ರೆ ಇದೊಂದು ದಾಖಲೆ ಇದ್ರೆ ಕ್ಷಣಮಾತ್ರದಲ್ಲಿ ಪಡೆಯಬಹುದು ಸಾಲ; ಹೇಗೆ ಗೊತ್ತಾ?

How to Get Instant Personal Loan: ನಿಮ್ಮಯಾವುದೇ ತುರ್ತು ಅವಶ್ಯಕತೆಗಳನ್ನು ಪೂರೈಸಲು ನೀವು Instant Personal Loan ಗಳನ್ನು ಪಡೆದುಕೊಳ್ಳಬಹುದು.

ಯಾವಾಗ ಯಾರಿಗೆ ಯಾವ ಸಂದರ್ಭದಲ್ಲಿ ತುರ್ತು ಹಣ ಅಗತ್ಯವಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಕೈಯಲ್ಲಿ ಒಂದೇ ಒಂದು ರೂ. ಇಲ್ಲದೇ ಇರುವಾಗಲೂ ಹಣದ ಅವಶ್ಯಕತೆ ಇರುತ್ತದೆ. ಆಗ ನಾವು ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಸಾಮಾನ್ಯ.

How to Get Instant Personal Loan here are the Details.

ಆದರೆ, ನಿಮಗೇ ಗೊತ್ತಿರುವಂತೆ ನಮ್ಮ ಅವಶ್ಯಕತೆಗಳನ್ನು ಪೂರೈಸಲು ತುರ್ತಾಗಿ ಬ್ಯಾಂಕಿನಿಂದ ಸಾಲವನ್ನು (Bank Loan) ಪಡೆದುಕೊಳ್ಳಲು ಸಾಧ್ಯವಿಲ್ಲ. ಬ್ಯಾಂಕಿನಿಂದ ಸಾಲ ಪಡೆಯುವುದು ಅಂದರೆ ಕನಿಷ್ಠ 15 ರಿಂದ 20 ದಿವಸಗಳು ಬೇಕಾಗಬಹುದು. ಅದು ಅಲ್ಲದೆ ಬ್ಯಾಂಕಿನಿಂದ ಸಾಲ ಪಡೆಯಲು ನೀವು ಎಲ್ಲಾ ದಾಖಲೆಗಳನ್ನು ಪೇಪರ್ (No paper Documents Needed) ಮೂಲಕ ಹಾಜರುಪಡಿಸಬೇಕಾಗುತ್ತದೆ. ಜೊತೆಗೆ ಒಂದು ಲೋನ್ ತೆಗೆದುಕೊಳ್ಳುವುದಿದ್ದರೆ ನೀವು ಬ್ಯಾಂಕಿಗೆ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಇನ್ಸ್ಟಂಟ್ ಪರ್ಸನಲ್ ಲೋನ್ Instant Personal Loan ಗಳನ್ನು ನೀವು ಕೇವಲ 24 ಗಂಟೆಯಿಂದ 72 ಗಂಟೆಗಳ ಒಳಗೆ ಪಡೆಯಬಹುದು.

ಇನ್ಸ್ಟಂಟ್ ಪರ್ಸನಲ್ ಲೋನ್ Instant Personal Loan ಕೊಡುವ ಸಂಸ್ಥೆಗಳು ನಿಮ್ಮ ದಾಖಲೆಗಳನ್ನು ವೇಗವಾಗಿ ಪರಿಶೀಲಿಸಿ ಸಾಲದ ಮಂಜೂರಾತಿ  ಪ್ರಕ್ರಿಯೆ ಯನ್ನು ತುಂಬಾ ಸುಲಭಗೊಳಿಸಿವೆ. ನೂರಕ್ಕೆ ನೂರು ನಿಮ್ಮ ಅಪ್ಲಿಕೇಶನ್ ಪ್ರೋಸೆಸ್ ಡಿಜಿಟಲ್ (Digital loan process) ಆಗಿರುತ್ತದೆ. ಸಾಲದ ಮಂಜೂರಾತಿಯ ನಂತರ ನೀವು ಮೂರರಿಂದ ನಾಲ್ಕು ಗಂಟೆ ಒಳಗೆ ಸಾಲವನ್ನು ಪಡೆದುಕೊಳ್ಳಬಹುದು. ಈ ಇನ್ಸ್ಟಂಟ್ ಪರ್ಸನಲ್ ಲೋನ್ Instant Personal Loan ಸಂಪೂರ್ನ ಆನ್ ಲೈನ್ ಮೂಲಕವೇ ಸಿಗಬಹುದಾದ ಲೋನ್ ಆಗಿದ್ದು, ನೀವು ಯಾವುದೇ ಬ್ಯಾಂಕ್ ಬ್ರಾಂಚ್ ಗಳಿಗೆ ಅಲೆದಾಡುವ ಅಗತ್ಯವಿಲ್ಲ.

ಇನ್ಸ್ಟಂಟ್ ಪರ್ಸನಲ್ ಲೋನ್ ಗಳು ಬಗ್ಗೆ ಮಾಹಿತಿ Information about Instant Personal Loan:

  • ಸಾಲದ ಮೊತ್ತ 5 ಲಕ್ಷದವರೆಗೆ ಇರುತ್ತದೆ.
  • ಈ ಸಾಲಕ್ಕೆ ವಿಧಿಸುವ ಬಡ್ಡಿ ದರಗಳು (rate of Interest-Yearly ) ವಾರ್ಷಿಕ ಶೇಕಡ 16 ರಿಂದ 21%.
  • ಸಾಲ ಮರುಪಾವತಿ ಅವಧಿ 12 ತಿಂಗಳಿಂದ 36 ತಿಂಗಳು
  • ಕ್ರೆಡಿಟ್ ಸ್ಕೋರ್ ಅಂದರೆ ಸಿಬಿಲ್ ಸ್ಕೋರ್ 700 ಕ್ಕೆ ಮೇಲ್ಪಟ್ಟು ಇರಬೇಕು
  • ವಯೋಮಿತಿ (Age Limit) 23 ವರ್ಷಗಳ ಮೇಲ್ಪಟ್ಟು 55 ವರ್ಷಗಳ ಒಳಗೆ ಇರಬೇಕು
  • ತಿಂಗಳಿನ ಕನಿಷ್ಠ ವೇತನ (Salary) ಎಲ್ಲ ಖರ್ಚು ಕಳೆದು 12,000 ಇರಬೇಕು
  • ಪ್ರೋಸೆಸಿಂಗ್ ಪಿ (Processing Fee) ಅಥವಾ ನಿರ್ವಹಣಾ ಶುಲ್ಕ ನೀವು ಪಡೆದುಕೊಳ್ಳುವ ಸಾಲದ ಮೊತ್ತದ ಮೇಲೆ ಶೇಕಡ 3% ಚಾರ್ಜ್ ಮಾಡುತ್ತಾರೆ
  • ಪ್ರತಿ ತಿಂಗಳು ವೇತನ ಪಡೆಯುವ ಉದ್ಯೋಗಿಗಳು ಮಾತ್ರ ಈ ಸಾಲಕ್ಕೆ ಅರ್ಹರಾಗಿರುತ್ತಾರೆ

ಇನ್ಸ್ಟೆಂಟ್ ಪರ್ಸನಲ್ ಸಾಲದ ಅನುಕೂಲತೆಗಳು Instant Personal Loan Benefits:

ಈ ಸಾಲ ಪಡೆಯಲು ತುಂಬಾ ದಾಖಲೆಗಳ ಅವಶ್ಯಕತೆ ಇರುವುದಿಲ್ಲ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಈ ಸಾಲ ಬಿಡುಗಡೆ ಆಗುತ್ತದೆ

  • ನಿಮ್ಮ ಸಾಲದ ಅರ್ಜಿಯ ಪರಿಶೀಲನೆ ತುಂಬಾ ಸರಳವಾಗಿ ಸುಲಭವಾಗಿ ಆಗುತ್ತದೆ. ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಲು ಅಪ್ಲಿಕೇಶನ್ ಮೇಲೆ ಕ್ಲಿಕ್ ಕೊಟ್ಟರೆ ಸಾಕಾಗುತ್ತದೆ.
  • ಕೇವಲ ಕೆಲವೇ ಕೆಲವು ದಾಖಲೆಗಳನ್ನು ಸಲ್ಲಿಸಿದರೆ ಸಾಕಾಗುತ್ತದೆ ಇನ್ಸ್ಟೆಂಟ್ ಪರ್ಸನಲ್ ಲೋನ್ Instant Personal Loan ನೀಡುವ ಸಂಸ್ಥೆಗಳು ಅತಿ ಕನಿಷ್ಠ ದಾಖಲೆಗಳನ್ನು ಪಡೆದುಕೊಂಡು ಸಾಲವನ್ನು ನೀಡುತ್ತವೆ
  • ಸಾಲ ಮಂಜೂರಾಗಿ ಬಿಡುಗಡೆಯಾಗುವ ಪ್ರಕ್ರಿಯೆಯು ತುಂಬಾ ಸರಳವಾಗಿ ಇರುತ್ತದೆ
  • ಕೆಲವು ಸಂಸ್ಥೆಗಳು ಮೊದಲೇ ಕ್ರೆಡಿಟ್ ಲೋನ್ (credit Loan)  ಗಳನ್ನು ಪಡೆದುಕೊಂಡಿದ್ದರೆ ನಾಲ್ಕು ಐದು ಕಂತುಗಳನ್ನು ಕಟ್ಟಿದ ನಂತರ ಟಾಪ್ ಅಪ್ ಲೋನ್ (Top up Loan) ಸೌಲಭ್ಯವನ್ನು ಕೂಡ ನೀಡುತ್ತವೆ.
  • ಸಾಧಾರಣವಾಗಿ ಎಲ್ಲ ಸಂಸ್ಥೆಗಳು 5 ಲಕ್ಷದವರೆಗೆ ಸಾಲವನ್ನು ನೀಡಲು ತಿಂಗಳ ವೇತನ ಎಲ್ಲ ಖರ್ಚು ಕಳೆದು 12 ಸಾವಿರ ಮೇಲ್ಪಟ್ಟು ಅಪೇಕ್ಷಿಸುತ್ತವೆ.

ಇದನ್ನೂ ಓದಿ: ನಿಂತ ಜಾಗದಲ್ಲೇ 15,000 ರೂ. Loan ಪಡೆದುಕೊಳ್ಳಲು ಹೀಗೆ ಮಾಡಿ; ಯಾವ ಗ್ಯಾರಂಟಿಯೂ ಬೇಡ, ಕೈಯಲ್ಲಿ ಮೊಬೈಲ್ ಇದ್ರೆ ಸಾಕು!

ಇನ್ಸ್ಟೆಂಟ್ ಪರ್ಸನಲ್ ಸಾಲಗಳನ್ನು ಪಡೆಯಲು ಬೇಕಾಗುವ ಸಾಮಾನ್ಯ ಅರ್ಹತೆಗಳು Eligibilities to get Instant Personal Loan Benefits:

  • ಈ ಪರ್ಸನಲ್ ಎಮರ್ಜೆನ್ಸಿ ಸಾಲ (Emergency loan) ಗಳನ್ನು ಪಡೆಯಲು ಬೇಕಾಗುವ ಸಾಮಾನ್ಯ ಅರ್ಹತೆಗಳು
  • ಮಾಸಿಕ ವೇತನವನ್ನು ಪಡೆಯುವವ ಅರ್ಜಿದಾರನಿಗೆ ಈ ಸಾಲ ಸೌಲಭ್ಯ ಸಿಗುತ್ತದೆ
  • ಕ್ರೆಡಿಟ್ ಸ್ಕೋರ್ ಅಂದ್ರೆ ಸಿಬಿಲ್ ಸ್ಕೋರ್ (CIBIL Score)  700 ಗಿಂತ ಅಧಿಕವಾಗಿ ಇರಬೇಕಾಗುತ್ತದೆ
  • ಹಾಗೆಯೇ ಉದ್ಯೋಗಿಗೆ ಕನಿಷ್ಠ 12 ತಿಂಗಳ ಕೆಲಸದ ಅನುಭವ ಇರಬೇಕಾಗುತ್ತದೆ ಎಂದರೆ ನೀವು ಕೆಲಸಕ್ಕೆ ಸೇರಿ ಒಂದೆರಡು ತಿಂಗಳಲ್ಲಿ ಈ ಸಾಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ
  • ಮತ್ತು ಉದ್ಯೋಗಿಯ ವೇತನವು ಪ್ರತಿ ತಿಂಗಳು ಬ್ಯಾಂಕಿಗೆ ಜಮೆಯಾಗುವ ವ್ಯವಸ್ಥೆ ಇರಬೇಕು.

ಇನ್ಸ್ಟೆಂಟ್ ಪರ್ಸನಲ್ ಸಾಲಗಳನ್ನು ಪಡೆಯಲು ನೀಡಬೇಕಾದ ಸಾಮಾನ್ಯ ದಾಖಲೆಗಳು Needed Documents to get Instant Personal Loan Benefits:

  1. ಆಧಾರ್ ಕಾರ್ಡ್ (Adhaar Card)
  2. ಪಾನ್ ಕಾರ್ಡ್ (PAN Card)
  3. ಹಿಂದಿನ ಒಂದು ವರ್ಷದಲ್ಲಿ ನೀವು ಪಡೆದ ವೇತನದ ದಾಖಲೆ
  4. ಕಳೆದ ತಿಂಗಳಿನ ಸ್ಯಾಲರಿ ಸ್ಲೀಪ್ / 3 ತಿಂಗಳ ಸ್ಯಾಲರಿ ಸ್ಲಿಪ್ (Salary Slip)
  5. ಬ್ಯಾಂಕ್ ಸ್ಟೇಟ್ಮೆಂಟ್ (6 ತಿಂಗಳಿನದ್ದು) (Bank Statement)
  6. ಹಾಗೆಯೇ ನಿಮ್ಮ ವಾಸ ಸ್ಥಳದ ಬಗ್ಗೆ ದಿಢೀಕರಣಕ್ಕೆ ದಾಖಲೆ
  7.  ಈ ದಾಖಲೆಗಾಗಿ ನೀವು ಕರೆಂಟ್ ಬಿಲ್, ಗ್ಯಾಸ್ ಬಿಲ್, ಪ್ರಾಪರ್ಟಿ ಪತ್ರ ಅಥವಾ ರೆಂಟ್ ಅಗ್ರಿಮೆಂಟ್ ಹೀಗೆ ಹಲವಾರು ವಿಧದ ಡಾಕ್ಯುಮೆಂಟ್ಗಳಲ್ಲಿ ಯಾವುದಾದರೂ ಒಂದನ್ನು ನೀಡಿದರೆ ಸಾಕು
  8. ಈ ಸಾಲಗಳಿಗಾಗಿ ಬಹುತೇಕ ಜಾಮೀನುದಾರರ (Surety) ಅವಶ್ಯಕತೆ ಇರುವುದಿಲ್ಲ

ಈ ರೀತಿಯ Instant Personal Loan ಗಳನ್ನು ಬೇರೆ ಬೇರೆ ಕಂಪನಿಗಳು, ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳು ನೀಡುತ್ತವೆ. ಇತ್ತೀಚಿಗೆ ಸಂಪೂರ್ಣ ಡಿಜಿಟಲೀಕರಣ (Digitalization) ಆಗಿರುವ ಹಿನ್ನೆಲೆಯಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ ಲೋನ್ ಅರ್ಜಿ ಸ್ಪೀಕಾರವಾಗುತ್ತದೆ. ಅಷ್ಟೇ ಅಲ್ಲದೇ, ಅರ್ಹರು Pre-approved Loan ತೆಗೆದುಕೊಳ್ಳಲೂ ಕೂಡ ಸಾಧ್ಯವಿದೆ. ಆದರೆ ಈ ತರಹದ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕೂ ಮೊದಲು Terms and conditions ಗಳನ್ನು ಸರಿಯಾಗಿ ಓದಿ ತಿಳಿದುಕೊಂಡು, ಕಂಪನಿಯ ಬಗ್ಗೆ ಮಾಹಿತಿ ಪಡೆದುಕೊಂಡ ನಂತರವಷ್ಟೇ ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ಮೋಸ ಆಗುವ ಸಾಧ್ಯತೆಗಳು ಇರುತ್ತವೆ. ಸಾಲ ಪಡೆಯುವ ಮುನ್ನ ಮುತುವರ್ಜಿ ವಹಿಸಿ.

Comments are closed.