Instant Personal Loan: ನಿಂತ ಜಾಗದಲ್ಲೇ 15,000 ರೂ. ಪಡೆದುಕೊಳ್ಳಲು ಹೀಗೆ ಮಾಡಿ; ಯಾವ ಗ್ಯಾರಂಟಿಯೂ ಬೇಡ, ಕೈಯಲ್ಲಿ ಮೊಬೈಲ್ ಇದ್ರೆ ಸಾಕು!

Instant Personal Loan by Google Pay: ಗೂಗಲ್ ಪೇ (Google Pay Instant Personal Loan) ಅವರು ಡಿಎಂಐ ಫೈನಾನ್ಸ್ (DMI Finance) ಅವರ ಸಹಯೋಗದೊಂದಿಗೆ ರೋಲ್ ಔಟ್ sachet loan ಲೋನ್ ಇದನ್ನು ಜಿ ಪೇ ಗ್ರಾಹಕರಿಗಾಗಿ ಪ್ರಾರಂಭಿಸಿದೆ. ಇದೊಂದು ಪ್ರೀ ಅಪ್ಪ್ರೋಡ್ (Pre-approved Loan) ಲೋನ್ ಆಗಿದ್ದು ಸಣ್ಣ ವ್ಯಾಪಾರ ವ್ಯವಹಾರ ನಡೆಸುವವರಿಗಾಗಿ ರೂಪಾಯಿ 15,000ವರೆಗೆ ಸಾಲವನ್ನು ನೀಡುವ ಯೋಜನೆ ಇದಾಗಿದೆ. 7ರಿಂದ 12 ತಿಂಗಳು ಮರುಪಾವತಿಯ ಅವಧಿ ನೀಡಲಾಗುತ್ತದೆ.

Instant Personal Loan by Google Pay here are the details.

  • ಗೂಗಲ್ ಪೇ ಸಾಲದ ಬಗ್ಗೆ ವಿವರಗಳು Google Pay Instant Personal Loan Details
  • ಸಾಲದ ಮೊತ್ತ ರೂಪಾಯಿ 15 ಸಾವಿರದವರೆಗೆ
  • ಬಡ್ಡಿಯ ದರ ವಾರ್ಷಿಕ ಶೇಕಡ 14 ರಿಂದ 36
  • ಮರುಪಾವತಿ ಅವಧಿ 7 ರಿಂದ 12 ತಿಂಗಳು
  • ವಯಸ್ಸಿನ ಅರ್ಹತೆ 18 ವರ್ಷದ ಮೇಲ್ಪಟ್ಟು
  • ಯಾವುದೇ ಆದಾಯದ ದಾಖಲೆಗಳು ಬೇಕಾಗಿಲ್ಲ

ಗೂಗಲ್ ಪೇ ಸಾಲದ ವೈಶಿಷ್ಟ್ಯತೆಗಳು Google Pay Instant Personal Loan Benefits

ಈ ಸಾಲದಲ್ಲಿ ನಿರ್ವಹಣಾ ಶುಲ್ಕ ನೀವು ತೆಗೆದುಕೊಂಡ ಸಾಲದ ಮೊತ್ತದ ಮೇಲೆ 5% ಮತ್ತು ಅದಕ್ಕೆ ಜಿಎಸ್ಟಿ (GST) ಸೇರುತ್ತದೆ. ಸ್ವಂತ ಉದ್ಯೋಗ ನಡೆಸುವವರು ಈ ಸಾಲವನ್ನು ಪಡೆದುಕೊಳ್ಳಬಹುದು. ಇದು ತಕ್ಷಣ ಸಿಗುವ ಸಾಲವಾಗಿದ್ದು 15 ಸಾವಿರದ ವರೆಗೆ ಕ್ಷಣಮಾತ್ರದಲ್ಲಿ ಸಣ್ಣ ವ್ಯಾಪಾರಸ್ಥರು ಪಡೆಯಬಹುದಾಗಿದೆ.

ಗೂಗಲ್ ಪೇ ಸಾಜೆಟ್ ಲೋನ್ (sachet loan ) ಪೇಪರ್ ಲೆಸ್ ಅಂದರೆ ಡಿಜಿಟಲ್ ರೂಪದಲ್ಲಿ ಸಿಗುವ ಸಾಲ. ಯಾವುದೇ ಕಾಗದ ಪತ್ರಗಳನ್ನು ಹಾಜರುಪಡಿಸದೆ  ಈ ಸಾಳವನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯ. ಸಾಲ ಮರುಪಾವತಿಯ ಅವಧಿ 7ರಿಂದ 12 ತಿಂಗಳು. ನೀವು ಸಾಲ ತೆಗೆದುಕೊಳ್ಳುವಾಗ ಹೆಚ್ಚಿನ ಅವಧಿಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಮಾಸಿಕ ಸಾಲ (EMI) ಕಟ್ಟಲು ಸುಲಭವಾಗುತ್ತದೆ. Google pay sachet loan ಮಂಜೂರಾತಿಗಾಗಿ ಯಾವುದೇ ದಾಖಲೆಗಳು ಬೇಕಾಗಿಲ್ಲ ಎನ್ನುವುದೇ ವಿಶೇಷ. ಆದರೆ ನೀವು ಗೂಗಲ್ ಪೇಯ  ಗ್ರಾಹಕರಾಗಿರಬೇಕು. ಹೀಗಿದ್ದಲ್ಲಿ ನೀವು ಈ ಸಾಲವನ್ನು ಕೂಡಲೇ ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ಇನ್ನು ಬಡ್ಡಿಯ ದರ ಗೂಗಲ್ ಪೇ ಡಿ ಎಂ ಐ ಫೈನಾನ್ಸ್ ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ ಗೂಗಲ್ ಫೇ ಸ್ಯಾಚೆಟ್ ಲೋನ್ ಅನ್ನು ನೀಡುತ್ತಿದ್ದು ವಾರ್ಷಿಕ ಬಡ್ಡಿ (Yearly Interest)  14% ರಿಂದ 36% ಚಾರ್ಜ್ ಮಾಡಲಾಗುತ್ತದೆ.

ಇದನ್ನೂ ಓದಿ: ಸಾಲ ತೆಗೆದುಕೊಳ್ಳೋಕೆ ಇನ್ನು ಮುಂದೆ ಬ್ಯಾಂಕ್ ಗೆ ಅಲಿಬೇಡಿ, ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ಸಿಗುತ್ತೆ ಸಾಲ!

ಗೂಗಲ್ ಪೇ ಚಾಟ್ ಸ್ಯಾಜೆಟ್ ಲೋನ್ ಪಡೆಯಲು ಬೇಕಾದ ಅರ್ಹತೆಗಳು Google Pay Instant Personal Loan Eligibilities

  1. ಭಾರತೀಯ ಪ್ರಜೆಯಾಗಿರಬೇಕು
  2. 18 ವರ್ಷದ ಮೇಲ್ಪಟ್ಟವರಾಗಿರಬೇಕು
  3. ಈ ಹಿಂದೆ ಯಾವುದೇ ಸಾಲವನ್ನು ಪಡೆದುಕೊಂಡು ಬಾಕಿ ಉಳಿಸಿಕೊಂಡವರಾಗಿರಬಾರದು.
  4. ಮೊಬೈಲ್ ನಂಬರ್ ಆಧಾರ್ ಕಾರ್ಡಿನೊಂದಿಗೆ ಲಿಂಕ್ ಆಗಿರಬೇಕು.
  5. ಇದು ಡಿಜಿಟಲ್ ಲೋನ್ ಆಗಿರುವುದರಿಂದ ಸಾಲವನ್ನು ಪಡೆಯುವವರು ತಮ್ಮ ಎಲ್ಲಾ ಮಾಹಿತಿಗಳನ್ನು / ದಾಖಲೆಗಳನ್ನು (Documents)  ಅಪ್ಲೋಡ್ ಮಾಡಿದರೆ ಸಾಕು.
  6. ಅಪ್ಲೋಡ್ ಮಾಡಬೇಕಾದ ದಾಖಲೆಗಳು:  ಕೆ ವೈ ಸಿ ಡಾಕ್ಯುಮೆಂಟ್. ಇದಕ್ಕಾಗಿ ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಅಪ್ಲೋಡ್ ಮಾಡಬೇಕು.
  7. ಇನ್ನಿತರ ದಾಖಲೆಗಳು ಎಂದರೆ ನಿಮ್ಮ ಚಾಲ್ತಿಯಲ್ಲಿ ಇರುವ ಬ್ಯಾಂಕ್ ಅಕೌಂಟ್

ಗೂಗಲ್ ಪೇ ಸ್ಯಾಚೆಟ್ ಲೋನ್  ಬಡ್ಡಿ ದರಗಳು ಮತ್ತು ಶುಲ್ಕಗಳು Google Pay Instant Personal Loan Interest and Processing fee

  • ಈ ಲೋನ್ ನ ಕನಿಷ್ಠ ಬಡ್ಡಿದರ ಎಂದರೆ ವಾರ್ಷಿಕ ಶೇಕಡ 14%
  • ಗರಿಷ್ಠ ಬಡ್ಡಿ ದರ ಅಂದರೆ ವಾರ್ಷಿಕ ಶೇಕಡ 36%
  • ಪ್ರೋಸೆಸಿಂಗ್ ಫೀಸ್ (Processing fee) ಅಥವಾ ನಿರ್ವಹಣಾ ಶುಲ್ಕ ನೀವು ಪಡೆದುಕೊಳ್ಳುವ ಮೊತ್ತದ ಮೇಲೆ 5% ಚಾರ್ಜ್ ಮಾಡಲಾಗುತ್ತದೆ ಇದರೊಂದಿಗೆ ಜಿ ಎಸ್ ಟಿ ಯನ್ನು ಪಾವತಿಸಬೇಕು.
  • ಮಾಸಿಕ ಕಂತು ಕಟ್ಟಲು ತಡ ಮಾಡಿದರೆ ಸಂಸ್ಥೆಯು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಂಡು ಹೆಚ್ಚುವರಿ ಬಡ್ಡಿಯನ್ನು ವಿಧಿಸುತ್ತದೆ.

ಗೂಗಲ್ ಪೇ ಸ್ಯಾಚೆಟ್ ಸಾಲವನ್ನು ಪಡೆಯಲು ಅಪ್ಲೈ ಮಾಡುವ ವಿಧಾನ Google Pay Instant Personal Loan how to apply.

  • ಗೂಗಲ್ ಪೇ ಬ್ಯುಸನೆಸ್ ಆಪ್ (Business App) ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಈಗ ನೀವು ಜಿಪೆ application ಲೋನ್ ಸೆಕ್ಷನ್ ಗೆ ಹೋಗಿ.
  • ಬಳಿಕ ಆಫರ್ ಟ್ಯಾಬ್ (Offer Tab) ನ ಮೇಲೆ ಕ್ಲಿಕ್ ಮಾಡಿ
  • ಆಗ ನಿಮಗೆ ಎಷ್ಟು ಸಾಲ ಪಡೆಯಲು ಅರ್ಹತೆ ಇದೆ ಎಂಬುದು ತಿಳಿಯುತ್ತದೆ
  • ಮತ್ತು ಕೆ ವೈ ಸಿ ಹಾಜರುಪಡಿಸಿ ನಿಮ್ಮ ಸಾಲವನ್ನು ಪಡೆದುಕೊಳ್ಳಿ.

ಇಷ್ಟು ಮಾಡಿದರೆ ಸುಲಭ ಸಾಲ ನಿಮ್ಮ ಕೈಲಿರುತ್ತದೆ.

Comments are closed.