Personal Loan by Jio: ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಡಾಟಾ ಖಾಲಿ ಆಗಿದ್ಯಾ? ರಿಚಾರ್ಜ್ ಮಾಡಕ್ಕೆ ಹಣ ಇಲ್ವಾ? ಜಿಯೋನೇ ಕೊಡತ್ತೆ ತತ್ ಕ್ಷಣಕ್ಕೆ ಸಾಲ!

Personal Loan by Jio to get Data:  ಜಿಯೋಡಾಟಾ ಲೋನ್ 2023 (Jio Data Loan 2023). ನಿಮ್ಮ ದಿನ ನಿತ್ಯದ ಡಿಜಿಟಲ್ ವ್ಯವಹಾರಕ್ಕೆ ಯಾವುದೇ ಅಡೆತಡೆ ಇಲ್ಲದೆ ಕನೆಕ್ಟಿವಿಟಿ ಮತ್ತು ಸಂಪರ್ಕಕ್ಕಾಗಿ ಸಾಲ.

ಇಂದಿನ ಡಿಜಿಟಲ್ ಲೋಕದಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ ಯಾವ ವಿಚಾರಕ್ಕೆ ಬೇಕಿದ್ದರೂ ಇವತ್ತಿನ ಜೀವನದ ಒಂದು ಭಾಗವಾಗಿ ಡಿಜಿಟಲ್ ವ್ಯವಸ್ಥೆ ಮಾರ್ಪಟ್ಟಿದೆ. ನೀವು ಕೆಲಸ ಮಾಡುತ್ತಿರಬೇಕಾದರೆ ಹಾಯ್ ಸ್ಪೀಡ್ ಇಂಟರ್ನೆಟ್ ಡಾಟಾ ಎಲ್ಲಿಯಾದರೂ ಖಾಲಿ ಆದರೆ ನೀವು ಕೂಡಲೇ ಇದನ್ನು ರಿಚಾರ್ಜ್ ಮಾಡಿಕೊಳ್ಳಲು ಆಗುವುದಿಲ್ಲ ಹಾಗಾಗಿ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಿಯೋ ದೇಶದಲ್ಲೇ ಅತಿ ಮುಖ್ಯ ಡಿಜಿಟಲ್ ಸೇವೆಯನ್ನು ಒದಗಿಸುವ ಸಂಸ್ಥೆ ನಿಮಗಾಗಿ ಒಂದು ಹೊಸ ಆಫರನ್ನು ಅಂದರೆ ಒಂದು ಹೊಸ ಸೇವೆಯನ್ನು ನೀಡಲು ಮುಂದೆ ಬಂದಿದೆ.

Personal Loan by Jio to get Data recharge Immediately.

ಈ ಅದ್ವಿತೀಯ ಯೋಜನೆಯೇ ಎಮರ್ಜೆನ್ಸಿ ಡಾಟಾ ಲೋನ್ (Emergency Data Loan) ಎಂಬ ಹೊಸ ಯೋಜನೆ. ಈ ಲೇಖನದಲ್ಲಿ ಜಿಯೋ ಡಾಟಾ ಲೋನ್ ಅಂದರೆ ಏನು ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದನ್ನು ಗ್ರಾಹಕರು ಹೇಗೆ ಪಡೆಯಬಹುದು ಮತ್ತು ಅವರ ಡಾಟಾ ಕನೆಕ್ಟಿವಿಟಿ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿಸಿದ್ದೇವೆ ಮುಂದೆ ಓದಿ.

ಏನದು ಜಿಯೋ ಡಾಟಾ ಸಾಲ ಅಂದರೆ ಎಂದು ನಿಮಗೂ ಕೇಳಿಯೇ ಆಶ್ಚರ್ಯವಾಗಬಹುದು. ಇಂದು ಭೂಮಿಯ ಮೆಲೆ ಮನುಷ್ಯನಿಗೆ ಏನು ಬೇಕಾದ್ರೂ ಸಿಗುತ್ತೆ, ಅಂತದ್ರಲ್ಲಿ ಇಂಟರ್ನೆಟ್ ರಿಚಾರ್ಜ್ ಗಾಗಿ ಸಾಲ ಸಿಗುವುದು ದೊಡ್ದ ವಿಚಾರವೇನು ಅಲ್ಲ.

ಜಿಯೋದಿಂದ ಡಾಟಾ ರಿಚಾರ್ಜ್ ವಯಕ್ತಿಕ ಸಾಲ; Personal Loan by Jio

ನೀವು ಜಿಯೋ ನೆಟ್ವರ್ಕ್ ನ ಗ್ರಾಹಕರು ಜಿಯೋ ನೆಟ್ವರ್ಕ್ ಡಾಟಾವನ್ನು ಎಷ್ಟೋ ಅವಧಿಗೆ ಹಾಕಿಕೊಂಡಿರುತ್ತೀರಿ. ನೀವು ನಿಮ್ಮ ಕೆಲಸಗಳ ಕಾರ್ಯಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಸ್ಪೀಡ್ ಡಾಟಾ ಎಲ್ಲಾದರೂ ಮುಗಿದು ಹೋದರೆ ನಿಮಗೆ ತೊಂದರೆ ಆಗುತ್ತದೆ ಅದಕ್ಕಾಗಿ ಎಮರ್ಜೆನ್ಸಿ ಡಾಟಾ ಲೋನ್ ಎಂಬ ಒಂದು ಯೋಜನೆಯನ್ನು ಜಿಯೋ ನೀಡಿದೆ ಇದರಲ್ಲಿ ಒಂದು ಸ್ವಲ್ಪ ಡಾಟಾ ನಿಮ್ಮ ರಿಚಾರ್ಜ್ನ ಅವಧಿ ಮುಗಿದ ನಂತರ ನಿಮಗೆ ಕೊಡಲ್ಪಡುತ್ತದೆ. ನೀವು ಇನ್ನೊಂದು ರಿಚಾರ್ಜ್ ಹಾಕಿ ಅದು ಕಾರ್ಯ ಪ್ರಾರಂಭಿಸುವವರೆಗೂ ಈ ಎಮರ್ಜೆನ್ಸಿ ಡಾಟಾ ಕೆಲಸ ಮಾಡುತ್ತದೆ.

ಜಿಯೋದಿಂದ ಡಾಟಾ ರಿಚಾರ್ಜ್ ವಯಕ್ತಿಕ ಸಾಲದ ಬಗ್ಗೆ ಮಾಹಿತಿ; Personal Loan by Jio – Information

ನೀವು ಇಂಟರ್ನೆಟ್ (Internet)  ನಲ್ಲಿ ಕೆಲಸ ಮಾಡುತ್ತಿರುವ ವೇಳೆ ನೀವು ಮಾಡಿದ ರಿಚಾರ್ಜ್ ಪ್ಲಾನ್ ಮುಗಿದು ಹೋದರೆ ಕೂಡಲೇ ನಿಮಗೆ ಪಡೆದುಕೊಳ್ಳಬಹುದು. ನೀವು ಇಂತಹ 5 ಪ್ಯಾಕ್ ಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು ಪ್ರತಿ ಒಂದು ಪ್ಲಾನ್ ಒಂದು ಜಿಬಿ ಡಾಟಾವನ್ನು ಹೊಂದಿರುತ್ತದೆ. ಈ ಯೋಜನೆ ನಿಮ್ಮ ಡಾಟಾ ಮುಗಿದರು ನಿಮಗೆ ಕೆಲಸ ಮಾಡುವ ಭದ್ರತೆಯನ್ನು ನೀಡುತ್ತದೆ.

ಜಿಯೋದಿಂದ ಡಾಟಾ ರಿಚಾರ್ಜ್ ವಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ? ; Personal Loan by Jio – how to apply

  • ಮೊದಲಿಗೆ ಮೈ ಜಿಯೋ ಆಪ್ (MyJio App) ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಓಪನ್ ಮಾಡಿ.
  • ಆಗ ಮೆನು ಐಕಾನ್ ಎಂದು ಎಡಗಡೆಯ ಮೇಲ್ಭಾಗದಲ್ಲಿ ಕಾಣುತ್ತದೆ ಅದಕ್ಕೆ ಕ್ಲಿಕ್ ಕೊಡಿ.
  • ಅಲ್ಲಿ ಮೊಬೈಲ್ ಸರ್ವಿಸಸ್ ಸೆಕ್ಷನ್ ಅಂತ ಇದೆ ಅದರಲ್ಲಿ ಎಮರ್ಜೆನ್ಸಿ ಡಾಟಾ ಲೋನ್ ಅಥವಾ ಎಮರ್ಜೆನ್ಸಿ ಡಾಟಾ ಓಚರ್ ಅಂತ ಇರುತ್ತದೆ.
  • ಅಲ್ಲಿ ನಿಮಗೆ ಬೇಕಾದಂತಹ ಪ್ಲಾನನ್ನು ಆಯ್ಕೆ ಮಾಡಿಕೊಳ್ಳಿ.
  • ಆಯ್ಕೆ ಮಾಡಿ ಕೊಂಡ ನಂತರ ಆಕ್ಟಿವ್ ನೌ ಎಂಬುದರ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಎಮರ್ಜೆನ್ಸಿ ಡಾಟಾ ಲೋನ್ ಮಂಜೂರಾಗುತ್ತದೆ.
  • ಜಿಯೋ ಎಮರ್ಜೆನ್ಸಿ ಡಾಟಾ ಲೋನ್ ಇದರ ಉಪಯೋಗಗಳು ಬಹಳಷ್ಟು ಇಲ್ಲಿ ಇದನ್ನು ತಿಳಿದುಕೊಳ್ಳಿ.
  • ನಿಮ್ಮ ರಿಚಾರ್ಜ್ ನ ಡಾಟಾ ಅವಧಿ ಮುಗಿದ ಕೂಡಲೇ ನೀವು ಖರೀದಿಸಿದ ಡಾಟಾ ಪ್ಯಾಕೇಜ್ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ಜಿಯೋದಿಂದ ಡಾಟಾ ರಿಚಾರ್ಜ್ ವಯಕ್ತಿಕ ಸಾಲ ಎಂದು ಪರಿಗಣಿಸುವುದು ಹೇಗೆ? Personal Loan by Jio – Information

ನಿಮಗೆ ಖರೀದಿ ಮಾಡುವ ಈ ಡಾಟಾ ಪ್ಯಾಕ್ ಲೋನ್ ಅಥವಾ ಸಾಲ ಹೇಗಾಗುತ್ತದೆ. ಎಂದು ಯೋಚಿಸುತ್ತೀರಾ. ಇಲ್ಲಿದೆ ನೋಡಿ ಅದರ ವಿವರಣೆ. ನೀವು ಒಂದು ಜಿಬಿಯ ಐದು ಡಾಟಾ ಪ್ಯಾಕ್ಗಳನ್ನು ಖರೀದಿಸುವಾಗ ರಿಚಾರ್ಜ್ ನೌ ಅಂಡ್ ಪೇ ಲೇಟರ್ (Recharge now and pay later)  ಅಂದರೆ ಈಗ ರಿಚಾರ್ಜ್ ಮಾಡಿ ಅದಕ್ಕೆ ಸಂಬಂಧಪಟ್ಟ ಹಣವನ್ನು ನಂತರ ಕೊಡಿ ಎಂಬ ಅರ್ಥ ಹಾಗಾಗಿ ನೀವು ಕೂಡಲೇ ಹಣ ಪಾವತಿಸದೆ ಡಾಟಾ ಪಡೆಯಬಹುದು ಆದುದರಿಂದ ಇದನ್ನು ಡಾಟಾ ಲೋನ್ ಎಂದು ಪರಿಗಣಿಸಿದ್ದಾರೆ.

ಇದನ್ನೂ ಓದಿ: ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದಿದ್ರೂ ಸಿಗುತ್ತೆ Personal Loan; ತುರ್ತು ಸಾಲ ನೀಡುತ್ತೆ ಈ ಕಂಪನಿ!

ಜಿಯೋದಿಂದ ಡಾಟಾ ರಿಚಾರ್ಜ್ ವಯಕ್ತಿಕ ಸಾಲ ಪಡೆಯಲು ಸಂಪರ್ಕಿಸಿ: Personal Loan by Jio – Contact Details

ನಿಮ್ಮ ಜಿಯೋ ಮೊಬೈಲ್ ಸಂಖ್ಯೆಯಿಂದಲೂ ಈ ಎಮರ್ಜೆನ್ಸಿ ಡಾಟಾ ಲೋನ್ ಅನ್ನು ಪಡೆಯಬಹುದು ಹೇಗೆಂದರೆ *129# ಈ ಸಂಖ್ಯೆಗೆ ನಿಮ್ಮ ಜಿಯೋ ನಂಬರ್ ಇಂದ ಡಯಲ್ ಮಾಡಿ ಆಗ ಒಂದು ಸೆಲೆಕ್ಟ್ ಡಾಟಾ ಲೋನ್ ಎಂಬ ಆಪ್ಷನ್ ಕಾಣುತ್ತದೆ ಅಲ್ಲಿ ನೀವು ಒಂದು ಜಿಬಿ ದಾಟ ಲೋನ್ ಕ್ಲಿಕ್ ಮಾಡಿದರೆ ಸಾಕು. ಯೋಜನೆ ಯಾವಾಗ ಉಪಯೋಗಕ್ಕೆ ಬರುತ್ತದೆ ಎಂದರೆ ನಿಮ್ಮ ಎಲ್ಲಾ ಡಾಟಾ ಮುಗಿದಾಗ ಈ ರೀತಿ ಮಾಡುವುದರಿಂದ ಕೂಡಲೇ ನಿಮಗೆ ನಾಟಕ ಸಿಗುತ್ತದೆ.

ಸಾಂಪ್ರದಾಯಿಕ ರಿಚಾರ್ಜ್ ವ್ಯವಸ್ಥೆಯನ್ನು ಇದರಲ್ಲಿ ಹೋಲಿಸಿ ನೋಡುವಾಗ ಇದರಲ್ಲಿ ನಿಮಗೆ ಕಾಣುವ ಲಾಭ ಏನೆಂದರೆ ನಿಮ್ಮ ಡಾಟಾದ ಅವಧಿ ಮುಗಿದ ಕೂಡಲೇ ನೀವು ತೆಗೆದಿಟ್ಟ ಯೋಜನೆಗಳ ಆಕ್ಟಿವೇಶನ್ ಕೂಡಲೇ ತನ್ನಿಂದಾನೆ ಆಗುವುದರಿಂದ ನೀವು ರಿಚಾರ್ಜ್ ಮಾಡುವ ಸಂದರ್ಭದಲ್ಲಿ ಏನಾದರೂ ತೊಂದರೆ ಆದರೆ ಅಥವಾ ಮಾಡಲಾಗದಿದ್ದರೆ ಅಂತ ಸಂದರ್ಭದಲ್ಲಿ ನಿಮ್ಮ ಕಂಪ್ಯೂಟರ್ ಕನೆಕ್ಟಿವಿಟಿಯನ್ನು ಕಳೆದುಕೊಳ್ಳುವುದಿಲ್ಲ.

ಇನ್ನೊಂದು ರೀತಿಯಲ್ಲಿ ಇದನ್ನು ಬಳಸಬಹುದು ಹೇಗೆಂದರೆ, ನಿಮ್ಮ ಡಾಟಾ ಮುಗಿದ ನಂತರ ನೀವು ಬಳಸಿದ ಡಾಟಾವನ್ನು ನಿಮ್ಮ ರೆಗ್ಯುಲರ್ ರಿಚಾರ್ಜ್ ಮಾಡಿದ ನಂತರ ಹೊಸ ರಿಚಾರ್ಜ್ ನಲ್ಲಿ ಸಿಕ್ಕ ಡಾಟಾ ದಿಂದ ಮೊದಲು ಸಾಲವಾಗಿ ಉಪಯೋಗಿಸಿದ ಡಾಟಾವನ್ನು ಮರುಪಾವತಿ ಮಾಡಬಹುದು. ಈ ಯೋಜನೆಯ ಬಗ್ಗೆ ಎಲ್ಲಾ ಗ್ರಾಹಕರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ನೀವೂ ಜೀಯೋ ಗ್ರಾಹಕರಾಗಿದ್ದರೆ Personal Loan by Jio ಪ್ರಯೊಜನವನ್ನು ಪಡೆದುಕೊಳ್ಳಿ.

Comments are closed.