Personal Instant Loan: ನಿಮ್ಮ ಬಳಿ ಪ್ಯಾನ್ ಕಾರ್ಡ್ ಒಂದಿದ್ರೆ ಸಾಕು, ಇಲ್ಲಿ ಸಿಗುತ್ತೆ ಸುಲಭ ಸಾಲ, ಮೊದಲು ಹಣ ಬಳಸಿಕೊಳ್ಳಿ, ನಿಧಾನಕ್ಕೆ ಸಾಲ ಪರುಪಾವತಿಸಿ!
Personal Instant Loan with PAN Card: ಇಂದಿನ ದಿನಗಳಲ್ಲಿ ಏನಾದರೂ ಸಮಸ್ಯೆಗಳು ಆದಾಗ ಅಂದರೆ ತಿಂಗಳ ಕೊನೆಗೆ ಪಾವತಿಸಬೇಕಾದ ಬಿಲ್ಲುಗಳು ಅಥವಾ ವೈಯಕ್ತಿಕ ಖರ್ಚುಗಳ ಸಲುವಾಗಿ ಸಾಲದ ಅವಶ್ಯಕತೆ ತುಂಬಾ ಇರುವುದನ್ನು ಕಾಣುತ್ತೇವೆ. ಅನುಭವಿಸುತ್ತೇವೆ. ಕರೋನ ವೈರಸ್ ಬಂದ ನಂತರ ಹಲವರು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ತನ್ನ ತನ್ನ ಖರ್ಚಿಗಾಗಿ ಮತ್ತೊಬ್ಬರಿಂದ ಹಣವನ್ನು ಪಡೆಯುವುದು ತುಂಬಾ ಕಷ್ಟಕರವೂ ಹೌದು.
Personal Instant Loan with only PAN Card, how to get it, here are the Details.
ಯಾವುದೇ ಪರಿಚಯದರಲ್ಲಿ ಕೇಳಿದರು ಧನ ಸಹಾಯ ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕೆಂದರೆ ಎಲ್ಲರದ್ದೂ ಇದೇ ಸಮಸ್ಯೆ! ಈ ನಿಟ್ಟಿನಲ್ಲಿ ನಾವೊಂದು ನಿಮಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸುತ್ತೇವೆ ಈ ಆಪ್ ನ ಮೂಲಕ ನೀವು ನಿಮ್ಮ ಪಾನ್ ಕಾರ್ಡ್ ಸಂಖ್ಯೆ ಕೊಡುವ ಮೂಲಕ Loan ವನ್ನು ಪಡೆಯಬಹುದು.
ಪ್ಯಾನ್ ಕಾರ್ಡ್ ಆಧಾರಿತ ವಯಕ್ತಿಕ ಸಾಲ (Personal Instant Loan with only PAN Card)
ಪಾನ್ ಕಾರ್ಡ್ ಇದರ ಆಧಾರದಿಂದ ನೀವು ಸಾಲವನ್ನು ಪಡೆಯಬೇಕು ಎಂದಾದರೆ ಗೂಗಲ್ ಪ್ಲೇ ಸ್ಟೋರ್ (Google Play Store) ಗೆ ಹೋಗಿ ಲೇಜಿ ಪೆ (Llzy Pay) ಅಪ್ಲಿಕೇಶನ್ ನ್ನು ಡೌನ್ಲೋಡ್ (Download) ಮಾಡಿಕೊಳ್ಳಿ. ಈ ಅಪ್ಲಿಕೇಶನ್ 2014 ರಿಂದ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದ್ದು ಬಹಳ ಹಳೆಯ ಮತ್ತು ನಂಬಿಕಸ್ಥ ಅಪ್ಲಿಕೇಶನ್ ಅಂತ ಖ್ಯಾತಿ ಪಡೆದಿದೆ. ಈ ಆಪ್ ಪೇ ಯು ಫೈ ನಾನ್ಸ್ ಪ್ರೈವೇಟ್ ಲಿಮಿಟೆಡ್ (Pay you finance Privet. Ltd) ಎಂಬ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯವರೆಗೆ 50 ಲಕ್ಷ ಗ್ರಾಹಕರನ್ನು ಹೊಂದಿದೆ ಈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕೇವಲ 23 ಎಂಬಿ ಮೆಮೊರಿ ಇದ್ದರೆ ಸಾಕಾಗುತ್ತದೆ.
ಪ್ಯಾನ್ ಕಾರ್ಡ್ ಆಧಾರಿತ ವಯಕ್ತಿಕ ಸಾಲದ ಬಗ್ಗೆ ಮಾಹಿತಿ (Information about Personal Instant Loan with only PAN Card)
- ಈ ಅಪ್ಲಿಕೇಶನ್ ನನ್ನು 1,37,154 ಜನರು 4.4 ಸ್ಟಾರ್ ರೇಟಿಂಗ್ ನೀಡುವ ಮೂಲಕ ಇದೊಂದು ಅತಿ ವಿಶ್ವಾಸಾರ್ಹ App ಎಂದು ಸಾಬೀತು ಮಾಡಿದ್ದಾರೆ. ಈ ಆಪ್ ಓಪನ್ ಮಾಡಿದ ಕೂಡಲೇ ನಿಮಗೆ ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ಉಚಿತವಾಗಿ ಮಾಹಿತಿ ನೀಡಲಾಗುತ್ತದೆ.
- ಲೇಜಿ ಆ ಪ್ ನ ಮೂಲಕ 3,000 ರೂ. ದಿಂದ ಒಂದು ಲಕ್ಷದವರೆಗೆ ಸಾಲ ಪಡೆದ 15 ದಿನಗಳೊಳಗೆ ಮರುಪಾವತಿಸಿದರೆ ಅದಕ್ಕೆ ಯಾವುದೇ ಬಡ್ಡಿದರ ಇರುವುದಿಲ್ಲ. ಈ ಆಪ್ ನ ಮೂಲಕ ಪಾವತಿಗಳನ್ನು ಹೇಗೆ ಮಾಡಬಹುದು ಎಂದರೆ ಒಂದು ಯುಪಿಐ ವ್ಯವಸ್ಥೆ ಇರಬೇಕು ಇಲ್ಲದಿದ್ದರೆ ಕ್ಯು ಆರ್ ಕೋಡ್ ನ ಮೂಲಕ ಸಹ ಪಾವತಿಸಬಹುದು.
- ಒಂದು ವೇಳೆ ನೀವು ಲೇಜಿ ಪೇಯ ಮೂಲಕ 3000 ಕಿಂತ ಮೇಲ್ಪಟ್ಟು ಏನಾದರೂ ಖರೀದಿ ಮಾಡಿ ಲೇಜಿ ಪೆ ಮೂಲಕ ಪೇಮೆಂಟ್ ಮಾಡಿದ್ದಲ್ಲಿ ಹೆಚ್ಚುವರಿ ಮೊತ್ತವನ್ನು ನೀವು ಇಎಂಐ ಆಗಿ ಕನ್ವರ್ಟ್ ಮಾಡಿ ಕೊಳ್ಳಬಹುದು.
- ಲೇಜಿ ಪೇಯ ಇನ್ನೊಂದು ಆಕರ್ಷಣೆ ಏನೆಂದರೆ ನೀವು ಸ್ವಿಗ್ಗಿ ಕೂಪನ್, ಝೋಮ್ಯಾಟೋ ಕೂಪನ್, ಟಾಟಾ ಸ್ಕೈ ಕೂಪನ್, ಮಿಡ್ ಲೈಫ್ ಕೂಪನ್ ಅಥವಾ ಇಂತಹದೇ ಇನ್ನಿತರ ಕಂಪನಿಗಳ ಆಫರ್ ಗಳನ್ನು ಪಡೆಯಬಹುದು. ನೀವು ಈ ಅಪ್ಲಿಕೇಶನ್ ಮೂಲಕ ಫ್ರೀ ಯಾಗಿ ಕ್ರೆಡಿಟ್ ಸ್ಕೋರ್ (Credit Score) ತಿಳಿದುಕೊಳ್ಳಬಹುದು ಬೇರೆ ಕಡೆ ಇದಕ್ಕೆ 1,200 ಚಾರ್ಜ್ ಮಾಡುತ್ತಾರೆ.
ಇದನ್ನೂ ಓದಿ: Jio Loan– ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಡಾಟಾ ಖಾಲಿ ಆಗಿದ್ಯಾ? ರಿಚಾರ್ಜ್ ಮಾಡಕ್ಕೆ ಹಣ ಇಲ್ವಾ? ಜಿಯೋನೇ ಕೊಡತ್ತೆ ತತ್ ಕ್ಷಣಕ್ಕೆ ಸಾಲ!
ಪ್ಯಾನ್ ಕಾರ್ಡ್ ಆಧಾರಿತ ವಯಕ್ತಿಕ ಸಾಲದ ಬಗ್ಗೆ ಬಡ್ಡಿದರ (Rate of Interest of Personal Instant Loan with only PAN Card)
Lazy Pay ಅಪ್ಲಿಕೇಶನ್ ನಲ್ಲಿ 3,000ರೂ. ಗಳಿಂದ 1,00,000 ರೂ. ವರೆಗೆ ಸಾಲ ಪಡೆಯಬಹುದು. ಇದು Pay later Scheme ಆಗಿದ್ದು 15 ದಿನಗಳಲ್ಲಿ ಪಾವತಿ ಮಾಡಿದರೆ ಬಡ್ದಿ ಪಾವತಿಸುವ ಅಗತ್ಯವೇ ಇಲ್ಲ. ಈ ಅವಧಿ ಮೀರಿದರೆ ಶುಲ್ಕ ಪಾವತಿಸಬೇಕು.
ಪ್ಯಾನ್ ಕಾರ್ಡ್ ಆಧಾರಿತ ವಯಕ್ತಿಕ ಸಾಲದ ಬಗ್ಗೆ ಶುಲ್ಕ ( Processing Fee for Personal Instant Loan with only PAN Card)
ಈ Lazy Pay ಪರ್ಸನಲ್ ಮಂಜೂರಾಗಲು ಕೇವಲ 200 ರೂಪಾಯಿ ಪ್ರೊಸೆಸಿಂಗ್ ಚಾರ್ಜ್ (Processing Charge) ಕೊಟ್ಟರೆ ಸಾಕು ಸಾಲಕ್ಕೆ 15% ರಿಂದ 32% ಚಾರ್ಜ್ ಮಾಡುತ್ತಾರೆ. ಇದರ ಇಎಂಐ ಅವಧಿ (EMI) ಮೂರು ತಿಂಗಳಿಂದ 24 ತಿಂಗಳಿನವರೆಗೆ ಸಿಗುತ್ತದೆ. ನೀವು ಹೇಗೆ ಸಾಲವನ್ನು ಪಡೆದುಕೊಂಡು ಏನಾದರೂ ನಿಮಗೆ ಬೇಕಾಗಿರುವ ಎಲೆಕ್ಟ್ರಾನಿಕ್ ಉಪಕರಣ ಖರೀದಿ (Purchase of electronic equipment) ಅಥವಾ ಏನಾದರೂ ನಿಮ್ಮ ಸ್ವಂತ ಖರ್ಚಿ (Personal Expenses) ಗಾಗಿ ಈ ಹಣವನ್ನು ಉಪಯೋಗಿಸಿಕೊಳ್ಳಿ.
ಪ್ಯಾನ್ ಕಾರ್ಡ್ ಆಧಾರಿತ ವಯಕ್ತಿಕ ಸಾಲ ಯಾರು ಪಡೆಯಬಹುದು (Who can get Personal Instant Loan with only PAN Card)
- ಅರ್ಜಿದಾರ ಭಾರತೀಯ ಪ್ರಜೆ ಆಗಿರಬೇಕು
- ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) ಇರಬೇಕು
- 22 ರಿಂದ 55 ವರ್ಷದ ಒಳಗಿನ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
- ಪ್ರತಿ ತಿಂಗಳು ಆದಾಯ ಗಳಿಸುವವರು (Salaried Person) ಆಗಿರಬೇಕು.
ಪ್ಯಾನ್ ಕಾರ್ಡ್ ಆಧಾರಿತ ವಯಕ್ತಿಕ ಸಾಲಕ್ಕಾಗಿ ಅಪ್ಲೈ ಮಾಡುವುದು ಹೇಗೆ? (How to apply for Personal Instant Loan with only PAN Card)
- ಲೇಜಿ ಪೇ ಪರ್ಸನಲ್ ಲೋನ್ ಎನ್ನುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ರಿಜಿಸ್ಟ್ರರ್ ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ಸೈನ್ ಅಪ್ ಆಗಿ ಮತ್ತು ಈಗ ಪಾನ್ ಕಾರ್ಡ್ ನ ವಿವರಗಳನ್ನು ನೀಡಿ.
- ಮುಂದಿನ ಹಂತದಲ್ಲಿ ಕೆವೈಸಿ ಡಾಕ್ಯೂಮೆಂಟ್ (KYC Documents) ಅಂದರೆ ಆಧಾರ್ ಕಾರ್ಡ್ (Adhaar Card) ಮತ್ತು ಪಾನ್ ಕಾರ್ಡ್ (PAN Card) ಅನ್ನು ಅಪ್ಲೋಡ್ ಮಾಡಿ
- ನೀವು ಅರ್ಹರಾಗಿದ್ದರೆ auto bill payment system ಪೂರ್ಣಗೊಳಿಸಬೇಕು.
- ಈಗ ನಿಮ್ಮ ಕ್ರೆಡಿಟ್ ಮಿತಿ (Credit Limit) ಯನ್ನು ತ್ವರಿತ ಸಾಲವಾಗಿ ಬಳಸಿ ಅಥವಾ ಅದನ್ನು EMI ಗೆ ಪರಿವರ್ತಿಸಬಹುದು.
Comments are closed.