Personal Loan: ನಿಮಗೆ ತಕ್ಷಣ ಸಾಲ ಬೇಕಾ? ಹಾಗಾದ್ರೆ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು; ಹಾಗಾದ್ರೆ ಕೇವಲ 2 ನಿಮಿಷದಲ್ಲಿ ಮಂಜೂರಾಗುತ್ತೇ ಸಾಲ!

Personal Loan by Adhaar Card: ಇಂದಿನ ವೇಗದ ಜಮಾನದಲ್ಲಿ ಸಾಲ ಮಾಡದೆ ಬದುಕುವುದು ಕಷ್ಟಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಸಾಲ ಮಾಡಿಯೇ ಮಾಡಿರುತ್ತಾರೆ. ಅದರಲ್ಲೂ ವೈಯಕ್ತಿಕ ಸಾಲ Personal Loan ಎಷ್ಟು ಸಿಕ್ಕರೂ ಬೇಕು. ಯಾಕೆಂದರೆ ಖಾಸಗಿ ಕಂಪನಿಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವವರಿಗೆ ದೊಡ್ಡ ಪ್ರಮಾಣದ ಸಂಬಳ ಸಿಗುವುದಿಲ್ಲ. ಹಾಗಾಗಿ ಬಂದ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾತ್ರ ಸಾಧ್ಯ.

Personal Loan by Adhaar Card how to get it here are the Details

ಆದರೆ ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದಾಗ ಹೀಗೆ ಹಲವು ಸಂದರ್ಭದಲ್ಲಿ ವೈಯಕ್ತಿಕ ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಹತ್ತು ಸಾವಿರ ರೂಪಾಯಿ ಒಳಗೆ ನಿಮಗೆ ಸಾಲ ಅನಿವಾರ್ಯತೆ ಇದೆ ಎಂದಾದರೆ ನೀವು ನಿಮ್ಮ ಆಧಾರ್ ಕಾರ್ಡ್ ಬಳಕೆ ಮಾಡಿ ಸಾಲ ಮಾಡಬಹುದು. ಬ್ಯಾಂಕ್ಗಳು ಎರಡೇ ನಿಮಿಷದಲ್ಲಿ ಸಾಲ ಮಂಜೂರು ಮಾಡುತ್ತವೆ. ಅದು ಹೇಗೆ ಎಂದು ಈಗ ತಿಳಿದುಕೊಳ್ಳೋಣ.

ಆಧಾರ್ ಕಾರ್ಡ್ ಈಗ ಕೇವಲ ಗುರುತಿನ ದಾಖಲೆಯಾಗಿ ಮಾತ್ರ ಉಳಿದಿಲ್ಲ. ಅದನ್ನು ಉಪಯೋಗಿಸಿಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

10 ಸಾವಿರ ರೂ. ಸಾಲ ಪಡೆದುಕೊಳ್ಳುವುದು ಹೇಗೆ?

ನೀವು ಆಧಾರ್ ಕಾರ್ಡ್ ಬಳಕೆ ಮಾಡಿ ಸಾಲ ಪಡೆದುಕೊಳ್ಳುವುದಾದರೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಬೇಕಾದ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ಬಳಕೆ ಮಾಡಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ನಿಮಗೆ ಸಾಲದ ಮಂಜೂರಾತಿ ಶೀಘ್ರವಾಗಿ ಆಗುತ್ತದೆ. ಬೇರೆ ಸಾಲಗಳಿಗೆ ಹೋಲಿಸಿದರೆ ಆಧಾರ್ ಕಾರ್ಡ್ ಬಳಕೆ ಮಾಡಿ ಮಾಡುವ ಸಾಲಕ್ಕೆ ಸ್ಪರ್ಧಾತ್ಮಕ ಬಡ್ಡಿದರ ವಿಧಿಸುವುದನ್ನು ನೀವು ಕಾಣಬಹುದು. ನೀವು ಆನ್ಲೈನ್ ಇಲ್ಲವೇ ಖುದ್ದಾಗಿ ಬ್ಯಾಂಕ್ಗೆ ಭೇಟಿ ನೀಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು. ಅಲ್ಲದೆ ಮರುಪಾವತಿ ಮಾಡಲು ಸಹ ನಿಮಗೆ ಸೂಕ್ತ ಸಮಯಾವಕಾಶ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮೂಲಕ ನೀವು ಸಾಲ ಪಡೆದುಕೊಂಡಲ್ಲಿ ನೀವು ಬೇರೆ ಯಾವುದೇ ದಾಖಲೆಗಳು, ಅಡಮಾನ ಇಡುವ ಅವಶ್ಯಕತೆ ಇರುವುದಿಲ್ಲ.

ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:

ಆಧಾರ್ ಕಾರ್ಡ್ ಬಳಕೆ ಮಾಡಿ ನೀವು ಸಾಲ ಪಡೆದುಕೊಳ್ಳಲು ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ಗೆ ತೆರಳಿ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡಿ. ಕ್ರೆಡಿಟ್ ಸ್ಕೋರ್ 750೦ಕ್ಕೂ ಅಧಿಕವಾಗಿದ್ದರೆ ನೀವು ಸಾಲ ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ.

ಸಾಲ ನೀಡುವ ಸಂಸ್ಥೆಗಳು ವಿಭಿನ್ನವಾದ ಮಾನದಂಡಗಳನ್ನು, ನಿಯಮಗಳನ್ನು ಹೊಂದಿರುತ್ತವೆ. ಅವುಗಳ ಬಗ್ಗೆ ಡಿಟೈಲ್ ಆಗಿ ತಿಳಿದುಕೊಳ್ಳಿ. ತಿಳಿದುಕೊಂಡ ನಂತರವೇ ನಿಮಗೆ ಸಾಲ ತೀರಿಸುವ ನಂಬಿಕೆ ಇದ್ದರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ. ಕೆಲವೊಂದು ಸಂಸ್ಥೆಗಳು ತೀರಾ ಸರಳ ನಿಯಮಗಳನ್ನು ಹೊಂದಿರುತ್ತವೆ. ಇಂತಹ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುವುದು ಉತ್ತಮ.

ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ:

ಮೊದಲು ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಯಾವ ಯಾವ ಫೈನಾನ್ಸ್ಗಳು ಸಾಲ ನೀಡುತ್ತವೆ ಎನ್ನುವದನ್ನು ತಿಳಿದುಕೊಳ್ಳಿ. ನಿಮ್ಮ ಬಜೆಟ್ಗೆ ತಕ್ಕಂತೆ ಯಾವ ಸಂಸ್ಥೆಯಲ್ಲಿ ಸಾಲ ನೀಡುತ್ತಾರೆ. ಯಾವ ಸಂಸ್ಥೆಯಲ್ಲಿ ಬಡ್ಡಿದರ ಕಡಿಮೆ ಇದೆ ಎನ್ನುವುದನ್ನು ನೋಡಿಕೊಂಡು ಅರ್ಜಿ ಸಲ್ಲಿಸಿ.

ಕ್ರೆಡಿಟ್ ಸ್ಕೋರ್ ಸೇರಿದಂತೆ ಸಾಕಷ್ಟು ಅರ್ಹತೆಗಳನ್ನು ಪರಿಶೀಲನೆ ಮಾಡಿದ ನಂತರ ನೀವು ಅವುಗಳಲ್ಲಿ ಕಾಣಿಸಿಕೊಳ್ಳುತ್ತೀರಿ ಎನ್ನುವುದನ್ನು ದೃಡಿಕರಿಸಿಕೊಂಡು ನಂತರ ಅರ್ಜಿ ಸಲ್ಲಿಸಿ.

ಸಾಲದ ಅರ್ಜಿಯನ್ನು ಸರಿಯಾಗಿ ಓದಿಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿ. ಅಲ್ಲಿ ಕೇಳಲಾಗಿರುವ ದಾಖಲಾತಿಗಳನ್ನು ಒದಗಿಸಬೇಕು.ನಂತರ ಸಬ್ಮಿಟ್ ಮಾಡಬೇಕು. ಇದೇ ಸಂದರ್ಭದಲ್ಲಿ ನೀವು ಸಾಲ ಮರುಪಾವತಿಗೆ ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ಸಹ ಸಂಸ್ಥೆಗೆ ತಿಳಿಸಬಹುದಾಗಿದೆ. ಆದಷ್ಟು ಕಡಿಮೆ ಸಮಯದಲ್ಲಿ ಮರುಪಾವತಿ ಮಾಡಿದರೆ ಸಾಲದ ಮೇಲಿನ ಬಡ್ಡಿದರ ಕಡಿಮೆ ಆಗುವ ಸಾಧ್ಯತೆಯೂ ಇರುತ್ತದೆ.

ನೀವು ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ನಡೆಸುತ್ತಾರೆ. ನೀವು ಸಲ್ಲಿಸಿದ ಅರ್ಜಿ ಸರಿಯಾಗಿ ಇದ್ದಲ್ಲಿ ಅವರು ನಿಮ್ಮನ್ನು ಸಂಪರ್ಕಿಸಿ ಸಾಲ ಮಂಜೂರಿ ನೀಡುತ್ತಾರೆ. ಇದಾದ ಬಳಿಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಸಾಲ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು:

  • ಸಾಲ ಪಡೆದುಕೊಳ್ಳಲು ಪ್ರಮುಖವಾಗಿ ಆಧಾರ್ ಕಾರ್ಡ್ ಬೇಕೇ ಬೇಕು. ಇದರ ಜೊತೆ ಐಡಂಟಿಟಿ ಪ್ರೂಫ್ ರೂಪದಲ್ಲಿ ಪಾಸ್ಪೋರ್ಟ್ ಇಲ್ಲವೇ ಚಾಲನಾ ಪರವಾನಿಗೆಯನ್ನು ನೀವು ನೀಡಬಹುದಾಗಿದೆ.
  • ಯುಟಿಲಿಟಿ ಬಿಲ್ ಅಥವಾ ಪಾಸ್ ಪೋರ್ಟ್ನ್ನು ವಿಳಾಸ ದೃಢೀಕರಣ ಪತ್ರದ ರೂಪದಲ್ಲಿ ನೀಡಬಹುದಾಗಿದೆ.
  • ಆದಾಯ ದೃಢೀಕರಣ ಪತ್ರದ ರೂಪದಲ್ಲಿ ನಿಮ್ಮ ಸ್ಯಾಲರಿ ಸ್ಲಿಪ್, ಬ್ಯಾಂಕ್ ಸ್ಟೇಟ್ಮೆಂಟ್, ಇನ್ಕಂ ಟ್ಯಾಕ್ಸ್ ಕಟ್ಟಿದ ರಸೀದಿ ನೀಡಬಹುದು.

ಸಾಲ ಪಡೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ:

ಆಧಾರ್ ಕಾರ್ಡ್ ಮೂಲಕ ಸಾಲ ನೀಡುವ ಎಲ್ಲ ಸಂಸ್ಥೆಗಳನ್ನು ಹಾಗು ಅವುಗಳ ಬಡ್ಡಿದರವನ್ನು ಹೋಲಿಕೆ ಮಾಡಿ. ಸಾಲ ಪಡೆದುಕೊಳ್ಳಲು ನಿಮಗೆ ಎಲ್ಲ ರೀತಿಯ ಅರ್ಹತೆ ಇದೆಯೇ ಎನ್ನುವುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಸಾಲ ಪಡೆದ ನಂತರ ಮರುಪಾವತಿ ಮಾಡದಿದ್ದರೆ ಭಾರೀ ಪ್ರಮಾಣದ ದಂಡ ಪಾವತಿ ಮಾಡಬೇಕಾಗುತ್ತದೆ. ಕೆಲವೊಂದು ಸಂಸ್ಥೆಗಳನ್ನು ಸಾಲಕ್ಕೆ ಹಿಡನ್ ಚಾರ್ಜ್ಸ್ಗಳನ್ನು ವಿಧಿಸುತ್ತವೆ. ಇವುಗಳನ್ನು ಸಹ ಪರೀಕ್ಷಿಸುವುದು ಅಗತ್ಯ. ಯಾವುದೇ ರೀತಿಯ ಪಿನ್ ಅಥವಾ ಓಟಿಪಿ ಶೇರ್ ಮಾಡುವುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ಎಚ್ಚರ ವಹಿಸುವುದು ಸಹ ಅಗತ್ಯವಾಗಿರುತ್ತದೆ.

Comments are closed.