Marriage loan: ಮದುವೆ ಮಾಡುವುದಕ್ಕೆ ಹಣಕ್ಕಾಗಿ ಇನ್ನು ಚಿಂತೆ ಬೇಡ; ಈ ಬ್ಯಾಂಕ್ ನೀಡುತ್ತೆ ಮದುವೆಗಾಗಿಯೇ ಅತಿ ಕಡಿಮೆ ಬಡ್ಡಿದರದ ಸಾಲ, ಯಾವ ಅಡಮಾನವೂ ಬೇಡ!

Get Marriage loan by SBI Bank:  ಜೀವನದಲ್ಲಿ ಮದುವೆ ಎಂಬುದು ಒಂದು ದೊಡ್ಡಘಟ್ಟ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆಯೇ ಇದೆ. ಮದುವೆಯ ಜವಾಬ್ದಾರಿಗೆ ಅಷ್ಟೊಂದು ಮಹತ್ವ ಇದೆ. ಶ್ರೀಮಂತರಿಗೆ ಮದುವೆ ಎಂಬುದು ಖರ್ಚಿನ ವಿಷಯದಲ್ಲಿ ಅಷ್ಟೊಂದು ತಲೆಬಿಸಿ ಮಾಡುವ ಸಂಗತಿಯಲ್ಲ. ಆದರೆ ಇಂತಹ ಶ್ರೀಮಂತರು ನಮ್ಮ ಜನಸಂಖ್ಯೆಯ ಒಂದು ಶೇಕಡ ಸಹ ಇಲ್ಲ. ಉಳಿದವರೆಲ್ಲರಿಗೆ ಮದುವೆ (Marriage Loan) ಎಂಬುದು ಒಂದು ಸವಾಲ್.

Get Marriage loan by SBI Bank how to get it, here are the Details

 ದುಡಿಯುವ ಯುವಕ ಅಥವಾ ಯುವತಿ ನನ್ನ ಮನೆಯಲ್ಲಿ ಅಕ್ಕಂದಿರ ಮದುವೆ ಅಣ್ಣಂದಿರ ಮದುವೆ ತಮ್ಮನಿಗೆ ಮದುವೆ ಹೀಗೆ ಅವರೆಲ್ಲರ ಮದುವೆಗಳಲ್ಲಿ ಬರುವ ಖರ್ಚುಗಳನ್ನು ನಿಭಾಯಿಸುವ ಪರಿಸ್ಥಿತಿ ಅನೇಕ ಮಧ್ಯಮ ವರ್ಗದ ಜನರಲ್ಲಿ ಕಾಣಬಹುದು. ಹೀಗೆ ಇದ್ದ ಮಧ್ಯಮ ವರ್ಗದವಳಿಗೆ ಅಥವಾ ಮಧ್ಯಮ ವರ್ಗದವರಿಗೆ ತನ್ನ ಮದುವೆ ಎಂದ ಕ್ಷಣ ಹಣ ಹೊಂದಿಸುವುದು ಒಂದು ಸವಾಲಾಗಿ ಸಮಸ್ಯೆಯಾಗಿ ಎದುರಾಗುತ್ತದೆ. ಇಂದಿನ ದಿನಗಳಲ್ಲಿ ಚಿನ್ನ ಬಟ್ಟೆ ಬರೆಗಳು ಮದುವೆಗೆ ಮಾಡಲೇಬೇಕಾದ ಪೂಜಾ ಪುರಸ್ಕಾರಗಳು ಇತ್ಯಾದಿಗಳಿಗಾಗಿ ದೊಡ್ಡ ಮೊತ್ತದ ಹಣವೇ ಬೇಕಾಗುತ್ತದೆ.

ನೀವು ಉದ್ಯೋಗಿಗಳಾಗಿದ್ದು (Employed)  ಇಂತಹ ಒಂದು ಸಮಸ್ಯೆ ನಿಮಗೆ ಇದ್ದರೆ ಇಂದಿನ ಲೇಖನದಲ್ಲಿ ಮದುವೆಗೆ ಬೇಕಾಗಿ ಸಾಲ ತೆಗೆದುಕೊಳ್ಳುವುದು ಹೇಗೆ ಬಡ್ಡಿದರ ಏನು ಎಂಬುದಾಗಿ ತಿಳಿಸಿಕೊಡುತ್ತೇವೆ ಬನ್ನಿ ನೋಡೋಣ.

ನೀವು ಹೀಗೆ ನಿಮ್ಮ ಮನೆಯಲ್ಲಿ ನಡೆಯುವ ಶುಭ ವಿವಾಹ (marriage)  ಸಮಾರಂಭಕ್ಕೆ ಸಾಲವನ್ನು ಪಡೆಯಲು ಇಚ್ಚಿಸಿದಲ್ಲಿ ಸ್ಟೇಟ್ ಬ್ಯಾಂಕ್ ಆಫ್ Marriage loan (State Bank Of India – SBI) ಇಂಡಿಯಾ ಇದರ ಗ್ರಾಹಕರಾಗಿದ್ದಲ್ಲಿ ಒಂದು ಒಳ್ಳೆಯ ಅವಕಾಶ ಇದೆ. ಎಸ್ ಬಿ ಐ 20 ಲಕ್ಷದವರೆಗೆ ಮದುವೆಗಾಗಿ ಸಾಲ ನೀಡುತ್ತದೆ. ಈ ಸಾಲಕ್ಕಾಗಿ ನೀವು ಸ್‌ಬಿಐನ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಬ್ಯಾಂಕಿಂಗ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಎಸ್ ಬಿ ಐ ನ ಯು ನೋ ಆಪ್ (YONO Bank) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಬಳಿ ಪ್ಯಾನ್ ಕಾರ್ಡ್ ಒಂದಿದ್ರೆ ಸಾಕು, ಇಲ್ಲಿ ಸಿಗುತ್ತೆ ಸುಲಭ Loan, ಮೊದಲು ಹಣ ಬಳಸಿಕೊಳ್ಳಿ, ನಿಧಾನಕ್ಕೆ ಸಾಲ ಪರುಪಾವತಿಸಿ!

ಯೋನೋ ಆಪ್ ಮೂಲಕ ಅಪ್ಲೈ ಮಾಡುದಿದ್ದಲ್ಲಿ  ಆಪ್ ಓಪನ್ ಮಾಡಿದ ಕೂಡಲೇ ಮೇಲ್ಭಾಗದಲ್ಲಿ ಮೂರು ಚುಕ್ಕೆಗಳು ಕಾಣುತ್ತವೆ ಅದರ ಮೇಲೆ ಕ್ಲಿಕ್ ಮಾಡಿ ಆಗ ವಿವಿಧ ಸಾಲಗಳ ಆಯ್ಕೆಯನ್ನು ಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಇಲ್ಲಿ ನೀವು ಪರ್ಸನಲ್ ಲೋನ್ ನಿಗೆ ಕ್ಲಿಕ್ ಕೊಟ್ಟಾಗ ಪರ್ಸನಲ್ ಲೋನ್ ಊಟ ತೆರೆದುಕೊಳ್ಳುತ್ತದೆ.

ಎಕ್ಸ್ಪ್ರೆಸ್ ಕ್ರೆಡಿಟ್ ಲೋನ್ ಇದನ್ನು ಆಯ್ಕೆ ಮಾಡಿ (Express Credit Loan)

  • ಈಗ ನಿಮಗೆ ಸಾಲದ ಫಾರ್ಮ್ ನೋಡಲು ಸಿಗುತ್ತದೆ ಅದರಲ್ಲಿ ಬ್ಯಾಂಕು ಕೇಳಿದ ಎಲ್ಲ ಮಾಹಿತಿಯನ್ನು ನಮೂದಿಸಿ
  • ಅಪ್ಲೋಡ್ ಮಾಡುವ ಮೊದಲು ಪುನಹ ಎಲ್ಲ ಕಾಲಂಗಳನ್ನು ಜಾಗರೂಕತೆಯಿಂದ ಅವಲೋಕಿಸಿ
  • ಮುಂದೆ ಪ್ರೋಸೀಡ್ ಬಟನ್ ಆಯ್ಕೆ ಮಾಡಿ.
  • ಕೆಲ ದಿನಗಳ ನಂತರ ನಿಮಗೆ ಬ್ಯಾಂಕಿನಿಂದ ಕರೆ ಬರುತ್ತದೆ. ಸಾಲ ಮರು ಪಾವತಿಸಲು ನೀವು ಅರ್ಹರು ಎಂದು ಬ್ಯಾಂಕಿಗೆ ಕಂಡರೆ ನಿಮಗೆ ಸಾಲ ಮಂಜೂರಾಗಿ ನಿಮ್ಮ ಖಾತೆಗೆ ಜಮಯಾಗುತ್ತದೆ.

ಮ್ಯಾರೇಜ್ ಸಾಲವನ್ನು ಪಡೆಯಬೇಕಾದರೆ ಇಲ್ಲಿ ಕೊಟ್ಟ ಕೆಲವು ವಿಚಾರಗಳನ್ನು ಗಮನಿಸಿ ((Information about Marriage Loan)

  • ಸಾಲಗಾರರು ಭಾರತೀಯ ಪ್ರಜೆಯಾಗಿರಬೇಕು
  • ವಯಸ್ಸು 21 ಮೀರಿರಬೇಕು
  • ಎಸ್ ಬಿ ಐ ಬ್ಯಾಂಕಿನಲ್ಲಿ ಈಗಾಗಲೇ ಖಾತೆಯನ್ನು ಹೊಂದಿರಬೇಕು
  • ಸಾಲಗಾರರ ತಿಂಗಳ ಆದಾಯ ನಿವ್ವಳ 15 ಸಾವಿರಕ್ಕಿಂತ ಮೇಲಿರಬೇಕು
  • ಕ್ರೆಡಿಟ್ ಸ್ಕೋರ್ 750ಕ್ಕಿಂತ ಜಾಸ್ತಿ ಇರಬೇಕು
  • ಎಸ್‌ಬಿಐ ಮದುವೆ ಸಾಲಕ್ಕೆ ಬೇಕಾಗಿರುವ ಕೆಲವು ದಾಖಲೆಗಳನ್ನು ಕೊಡಬೇಕಾಗುತ್ತದೆ
  • ಗುರುತಿಗಾಗಿ ಅಂದರೆ ಐಡೆಂಟಿಟಿ ಇದಕ್ಕಾಗಿ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್
  • ಪಾನ್ ಕಾರ್ಡ್
  • ನೀವು ಕೊಡುವಂತಹ ವಿಳಾಸದಲ್ಲಿ ವಾಸವಾಗಿ ಇದ್ದೀರಿ ಎಂಬುದಕ್ಕೆ ಅಡ್ರೆಸ್ ಪ್ರೂಫ್ ಆಗಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ಪೋರ್ಟ್ ಡ್ರೈವಿಂಗ್ ಲೈಸೆನ್ಸ್ ಇದರಲ್ಲಿ ಯಾವುದನ್ನಾದರೂ ಕೊಡಬೇಕಾಗುತ್ತದೆ
  • ಪಾಸ್ ಪೋರ್ಟ್ ಸೈಜ್ ಅಳತೆಯ ಎರಡು ಫೋಟೋಗಳು
  • ಇನ್ನು ನೀವು ಹೇಳಿದಂತಹ ವೇತನ ನಿಮ್ಮ ಕೈಗೆ ಸಿಗುತ್ತದೆ ಎಂಬ ಬಗ್ಗೆ ದಾಖಲೆಯನ್ನು ಕೊಡಬೇಕು ಫಾರಂ ನಂಬರ್ 16 ಇತ್ಯಾದಿ.
  • ಕಳೆದ ವರ್ಷಗಳಲ್ಲಿ ಇನ್ಕಮ್ ಟ್ಯಾಕ್ಸ್ ಕಟ್ಟಿದ ಮಾಹಿತಿ ಐ ಟಿ ಆರ್ ದಾಖಲೆ ಕೊಡಬೇಕು

ಮದುವೆ ಸಾಲದ ಬಡ್ದಿದರ (Rate of information for Marriage Loan)

  1. ಸಾಲದ ಲಭ್ಯತೆ 20 ಲಕ್ಷದವರೆಗೆ
  2. ಸಾಲದ ಬಡ್ಡಿ ವಾರ್ಷಿಕ ಶೇಕಡ 10.55 ರಿಂದ 13.05
  3. ಪ್ರೋಸೆಸಿಂಗ್ ಫೀಸ್ ಏನು ಇರುವುದಿಲ್ಲ
  4. ಕಂತುಗಳು ಆರು ವರ್ಷಗಳವರೆಗೆ ಅಂದರೆ 72 ತಿಂಗಳು ಕಂತು ಸಿಗುತ್ತದೆ
  5. ನೀವು ಹೇಳಿದ ಅವರಿಗಿಂತ ಮೊದಲು ಸಾಲ ಪಾವತಿಸಿದರೆ ಶೇಕಡ 3 ಹೆಚ್ಚುವರಿ ಕೊಡಬೇಕಾಗುತ್ತದೆ

ಮದುವೆಗಾಗಿ ಸಾಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India Marriage Loan) ಇಲ್ಲಿ ಮಾತ್ರ ಅಲ್ಲದೆ ಇತರ ಬ್ಯಾಂಕುಗಳಲ್ಲೂ ಸಿಗುತ್ತದೆ

ಎಚ್ ಡಿ ಎಫ್ ಸಿ ಬ್ಯಾಂಕ್ HDFC Bank

ಐಸಿಐಸಿಐ ಬ್ಯಾಂಕ್ ICICI Bank

ಬ್ಯಾಂಕ್ ಆಫ್ ಇಂಡಿಯಾ Bank Of india

ಬ್ಯಾಂಕ್ ಆಫ್ ಬರೋಡ Bank of baroda

ಈ ಬ್ಯಾಂಕುಗಳನ್ನು ಕೂಡ ನೀವು ಪರಿಶೀಲಿಸಬಹುದು.

Comments are closed.