How much personal loan can I get: ತಲೆಬಿಸಿ ಮಾಡ್ಕೊಳ್ಳೋದೇ ಬೇಡ, ಇಷ್ಟು ಮಾಡಿದ್ರೆ ಸಾಕು, ಕುಳಿತಲ್ಲೇ ವಯಕ್ತಿಕ ಸಾಲಕ್ಕೆ ಅಪ್ರೋವಲ್ ಸಿಕ್ಕಿಬಿಡುತ್ತೆ, ಕ್ಷಣದಲ್ಲಿ ಖಾತೆಗೆ ಹಣ ಜಮಾ ಆಗುತ್ತೆ!

Instant personal Loan:  ಇವತ್ತಿನ ಯುಗವೇ ಪರ್ಸನಲ್ ಲೋನ್ಗಳ ಯುಗ ಅನ್ನಬಹುದು! ಯಾಕೆಂದರೆ ಪರ್ಸನಲ್ ಲೋನ್ (How much personal loan can I get) ಗಳನ್ನು ನೀಡಲು ಒಂದು ತರಹ ಆರ್ಥಿಕ ಸಂಸ್ಥೆಗಳಲ್ಲಿ ಸ್ಪರ್ಧೆ ಪ್ರಾರಂಭವಾಗಿದೆ. ಗ್ರಾಹಕರು ಇದನ್ನು ಸರಿಯಾಗಿ ತಿಳಿದುಕೊಂಡು ಬಳಸಿದಲ್ಲಿ ಗ್ರಾಹಕರಿಗೆ ಪರ್ಸನಲ್ ಲೋನ್ ಗಳು ಆಪದ್ಬಾಂಧವನಾಗಿ ಕೆಲಸ ಮಾಡುತ್ತವೆ.

How much personal loan can I get without extra fee, processing charges and more. Here are the details.

ಇಂದಿನ ದಿನಗಳಲ್ಲಿ ಯಾವುದೋ ಒಂದು ರಾಜ್ಯದ ವ್ಯಕ್ತಿ ಯಾವುದೋ ಒಂದು ರಾಜ್ಯದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ ಆ ಹೊಸ ಪ್ರದೇಶದಲ್ಲಿ ಯಾರು ನೆಂಟರು ಅಥವಾ ಸ್ನೇಹಿತರು ಅಥವಾ ಆತ್ಮೀಯ  ಪರಿಚಿತರು ಇಲ್ಲದ ಊರಲ್ಲಿ ಹೋಗಿ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ.

ಹಿಂದಿನ ಕಾಲದಲ್ಲಿ ಎಂದಾದರೆ ಯಾವುದಾದರೂ ಒಂದು ತುರ್ತು ಅವಶ್ಯಕತೆ ಬಂದರೆ ಒಂದು ಊರಿನ ಲೇವಾದೇವಿದರರನ್ನು ಸಂಪರ್ಕಿಸಬೇಕಿತ್ತು ಅವರು ಚಾರ್ಜ್ ಮಾಡುತ್ತಿದ್ದ ಹೆಚ್ಚಿನ ಬಡ್ಡಿಯನ್ನು ತೆತ್ತು ಸಾಲವನ್ನು ಪಡೆದುಕೊಳ್ಳಬೇಕಿತ್ತು. ಪ್ರೈವೇಟ್ ಫೈನಾನ್ಸ್ ಕಂಪನಿ (Private Finance Company) ಗಳಲ್ಲಿ ಸಾಲ ಪಡೆಯುವಾಗ ಹೇಗಿತ್ತು ಅಂದರೆ ಒಂದು ಲಕ್ಷ ಸಾಲದ ಪೇಪರಿಗೆ ನಾವು ಸಹಿ ಮಾಡಿದರೆ ನಮಗೆ ಸಿಗುತ್ತಿದ್ದದ್ದು 97,000 ರೂಪಾಯಿ. ಆದರೆ ಬಡ್ಡಿ ಚಾರ್ಜ್ (Interest) ಮಾಡುತ್ತಿದ್ದದ್ದು 1 ಲಕ್ಷಕ್ಕೆ. ಹೆಚ್ಚು ಕಡಿಮೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಾಲಕ್ಕೆ 3000 ಬಡ್ಡಿ ಕಟ್ಟಬೇಕಿತ್ತು ಅಂದರೆ ವಾರ್ಷಿಕ ಶೇಕಡ 36% ಬಡ್ಡಿ ಕಟ್ಟಿದಂತೆ ಆಗುತ್ತಿತ್ತು. ಅದು ಸಹ ಒಂದು ಲಕ್ಷಕ್ಕೆ ಅಲ್ಲ ಅವರು ಕೊಡುತ್ತಿದ್ದ 97 ಸಾವಿರಕ್ಕೆ.

 ನಿಮಗಿದು ಗೊತ್ತೇ? ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ Loan, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!

ಅಂದು ಎಷ್ಟು ವಯಕ್ತಿಕ ಸಾಲ ಪಡೆಯಬಹುದಿತ್ತು ಗೊತ್ತೇ? (How much personal loan can I get)

ಆಪತ್ ಕಾಲಕ್ಕೆ ಇನ್ನೊಂದು ಸಾಧ್ಯತೆ ಇದ್ದದ್ದು ಊರಿನ ಧನಿಕರಲ್ಲಿ ಹೋಗಿ ಕಾಡಿಬೇಡಿ ಸಾಲ ಪಡೆದುಕೊಳ್ಳುವುದು. ಈ ಸಾಲ ಸರಿಯಾದ ಸಮಯಕ್ಕೆ ಹಿಂದಿರುಗಿಸದೆ ಇದ್ದರೆ ಅಥವಾ ಬಡ್ಡಿ ಬಾಕಿಯಾದರೆ ಅವರು ಊರಿನಲ್ಲಿ ಅಲ್ಲಲ್ಲಿ ಹೇಳುತ್ತಾ ಹೋಗುತ್ತಿದ್ದರು ಇಂತಹವನು ಇಂತಿಷ್ಟು ಕೊಡಲಿಕ್ಕೆ ಬಾಕಿ ಇದೆ ಎಂದು ಹೇಳುತ್ತಾ ಹೋಗುತ್ತಿದ್ದರು. ಅನಿವಾರ್ಯತೆಗಾಗಿ ಸಾಲ ಪಡೆದವನು (How much personal loan can I get) ಹೀಗಾದಾಗ ಮರ್ಯಾದೆಯನ್ನು ಕಳೆದುಕೊಳ್ಳುವ ಪ್ರಸಂಗಗಳು ಎದುರಾದದ್ದು ಇದೆ. ಇಂತಹವರಲ್ಲಿ ಸಾಲ ಪಡೆಯುವಾಗ ನಾವು ಡಿಪ್ರೋ ನೋಟ್ ಬರೆದು ಕೊಡಬೇಕಿತ್ತು ಮತ್ತು ಒಂದು ಜಾಮೀನು ಅಥವಾ ಸಾಕ್ಷಿ ಕೊಡಬೇಕು. ಸಾಲ ಮರುಪಾವತಿಸಲು ಆಗದಿದ್ದರೆ ಬರೆದುಕೊಟ್ಟ ಡಿಪ್ರೋ ನೋಟಿನ ಆಧಾರದಲ್ಲಿ ನ್ಯಾಯಾಲಯಕ್ಕೆ ಹೋಗಿ ವಸೂಲು ಮಾಡಿಕೊಳ್ಳುತ್ತಿದ್ದರು.

ಅಂದಿನ ಕಾಲದಲ್ಲಿ ವಯಕ್ತಿಕ ಸಾಲ ಪಡೆದುಕೊಳ್ಳುವುದಿದ್ದರೆ ಎಷ್ಟು ಬಡ್ಡಿದರ ಇತ್ತು? (How much personal loan can I get)

ಇನ್ನೂ ಕೆಲವರು ಬಡ್ಡಿಗೆ ಹಣ ಕೊಡುವವರು ಹಣ ಪಡೆದುಕೊಳ್ಳಲು ಹೋದಾಗ ತುಂಬಾ ಸುಲಭವಾಗಿ ತಮ್ಮ ಬಡ್ಡಿ ತೀರಾ ಕಡಿಮೆ ಅನ್ನುವ ದೃಷ್ಟಿಯಲ್ಲಿ ಹೇಳುತ್ತಿದ್ದರು ಏನೆಂದರೆ ನನಗೆ ಒಂದು ರೂಪಾಯಿಗೆ ದಿನಕ್ಕೆ ಒಂದು ಪೈಸೆ ಬಡ್ಡಿ ಸಿಕ್ಕಿದರೆ ಸಾಕು. ಅಂದರೆ ಒಂದು ವರ್ಷಕ್ಕೆ ಒಂದು ರೂಪಾಯಿಗೆ 3.65 ಪೈಸೆ ಬಡ್ಡಿ ಆಗುತ್ತಿತ್ತು. ಆದರೂ ಬೇರೆ ನಿರ್ವಾಹ ಇಲ್ಲದೆ ಮದುವೆಗೋ ಇಲ್ಲ ತುರ್ತು ಅನಾರೋಗ್ಯದ ಸಂದರ್ಭಗಳಲ್ಲಿ ಇಂತಹ ಹಣವನ್ನು ಪಡೆದು ಸಾಲದ ಸುಳಿಯಲ್ಲಿ ಸಿಕ್ಕಿ ಎಷ್ಟೋ ಜನರ ಮನೆಮಠ ಕಳೆದು ಹೋಗಿದೆ.

ಅನಿರೀಕ್ಷಿತ ಹಣದ ಮುಗ್ಗಟ್ಟು ಬಂದಾಗ ಇನ್ನೊಂದು ನಮೂನೆಯಲ್ಲಿ ಸಾಲ (Loan) ವನ್ನು ಪಡೆಯಬಹುದಿತ್ತು ಅದೇನೆಂದರೆ ತಮ್ಮಲ್ಲಿರುವ ಒಡವೆಗಳನ್ನು ಅಡಮಾನ ಇಡುವ ಮೂಲಕ. ಇದು ಸಹ ಯಾರಾದರೂ ಲೇವಾದೇವಿ ವ್ಯವಹಾರದವರು ಅಥವಾ ಧನಿಕರ ಮೂಲಕ ಆಗುತ್ತಿತ್ತು. ಹೇಳಿದ ದಿನಕ್ಕೆ ಸಾಲ ಕೊಡಲಿಕ್ಕಾಗದೆ ಅಡವಿಟ್ಟ ಒಡವೆಗಳು ಧನಿಕರ ಪಾಲಾದ ಉದಾಹರಣೆಗಳಿವೆ.

ಚಿನ್ನವನ್ನು ಅಡವಿಟ್ಟು ವಯಕ್ತಿಕ ಸಾಲ ತೆಗೆದುಕೊಳ್ಳುವುದು ಚಾಲ್ತಿಯಲ್ಲಿತ್ತು (How much personal loan can I get by Gold)

ಇನ್ನೊಂದು ದಾರಿ ಇದ್ದದ್ದು ಆಭರಣಗಳನ್ನು ಮಾರಿ ತುರ್ತು ಹಣವನ್ನು ಹೊಂದಿಸಿಕೊಳ್ಳುವ ಪದ್ಧತಿ ಇಲ್ಲದಿದ್ದರೆ ತಮ್ಮ ಜಾಗ ಖಾಸಗಿಯವರಲ್ಲಿ ಅಡಮಾನ ಮಾಡಿ ಜಾಗದ ಮೇಲೆ ಇಂತಿಷ್ಟು ಅಂತ ಸಾಲ ತೆಗೆದುಕೊಳ್ಳುವುದು. ಅದಕ್ಕೂ ಜಬರ್ದಸ್ತ್ ಬಡ್ಡಿ ಹಾಕುತ್ತಿದ್ದರು. ಇಂತಹ ಸಾಲಗಳನ್ನು ಕಟ್ಟಲಾಗದೆ ಕಷ್ಟದಿಂದ ಕಂಗಾಲಾದವರ ಎಷ್ಟು ಆಸ್ತಿಗಳು ಧನಿಕರ ಪಾಲಾದ ಉದಾಹರಣೆಗಳು ಇವೆ.

ಈ ಪರ್ಸನಲ್ ಲೋನ್ಗಳ (Personal Loan)  ಸೌಲಭ್ಯದಿಂದಾಗಿ ಹಣದ ತುರ್ತು ಅವಶ್ಯಕತೆ ಸಂದರ್ಭಗಳಲ್ಲಿ ನಾವು ಯಾವುದೋ ಉದ್ದೇಶಕ್ಕೆ ಉಳಿತಾಯ ಮಾಡಿ ಫಿಕ್ಸೆಡ್ ಡಿಪಾಸಿಟ್ (Fixed Deposit)  ಮಾಡಿ ಇಟ್ಟಂತಹ ಹಣವನ್ನು ಪ್ರಿಮೆಚೂರ್ ಆಗಿ ತೆಗೆಯುವ ಅವಶ್ಯಕತೆ ಅಥವಾ ಯಾವುದಾದರೂ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ನಾವು ಖಾತೆ ಹೊಂದಿರುವ ಬ್ಯಾಂಕಿನ ಜೊತೆ ಒಳ್ಳೆಯ ವ್ಯವಹಾರದ ಟ್ರ್ಯಾಕ್ ಮೆಂಟೇನ್ ಮಾಡುತ್ತಾ ಇದ್ದರೆ ನಮ್ಮ ತಿಂಗಳ ಮಿನಿಮಮ್ ಬ್ಯಾಲೆನ್ಸ್ ಒಂದು ಒಳ್ಳೆಯ ಮಟ್ಟದಲ್ಲಿ ಕಾಪಾಡಿಕೊಂಡು ಬಂದರೆ ಅದೇ ತುರ್ತು ಸಂದರ್ಭಗಳಲ್ಲಿ ನಮಗೆ ಆಪದ್ಬಾಂಧವನಾಗಿ ನಿಲ್ಲುತ್ತದೆ. ಒಂದು ಒಳ್ಳೆಯ ಗುಣಮಟ್ಟದ ಗ್ರಾಹಕನಾಗಿ ಬ್ಯಾಂಕ್ ನೊಂದಿಗೆ ಯಾವುದೇ ತಕರಾರಿಲ್ಲದೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸಿಕೊಂಡು ಹೋಗುವ ಗ್ರಾಹಕನ ಬೆಲೆ ಬ್ಯಾಂಕಿನ ದೃಷ್ಟಿಯಿಂದ ತುಂಬಾ ಎತ್ತರದಲ್ಲಿರುತ್ತದೆ. ಹೀಗಿರುವಾಗ ನಮ್ಮ ಸಿಬಿಲ್ ಸ್ಕೋರ್ ಸಹ ಚೆನ್ನಾಗಿದ್ದರೆ ಪರ್ಸನಲ್ ಲೋನ್ ಪಡೆದುಕೊಳ್ಳುವ ಅವಶ್ಯಕತೆ ಬಂದಾಗ ಶೀಘ್ರವಾಗಿ ಹಣ ಮಂಜೂರಾಗುತ್ತದೆ.

ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯ ಪರ್ಸನಲ್ ಸಾಲುಗಳು ಸಿಗುತ್ತವೆ ಎಂದು ಆ ಕಡೆ ಈ ಕಡೆ ಎಲ್ಲೆಂದರಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಸಿಬಿಲ್ ಸ್ಕೋರ್ ಬಿದ್ದು ಹೋಗುವ ಚಾನ್ಸಸ್ ಇದೆ. ಅಂದರೆ ಇಂತಹ ಒಬ್ಬ ಗ್ರಾಹಕ ತುಂಬಾ ಆರ್ಥಿಕ ಸಂಕಷ್ಟಕ್ಕೆ  ಒಳಗಾಗಿದ್ದಾನೆ ಎಂಬ ಮಾಹಿತಿಯ ಕಾರಣದಿಂದ ಸಿಬಿಲ್ ಸ್ಕೋರ್ ಬಿದ್ದು ಹೋಗುವ ಚಾನ್ಸಸ್ ತುಂಬಾನೇ ಇದೆ. ಹಾಗಾಗಿ ಜಾಗರೂಕರಾಗಿರಿ.

ಬ್ಯಾಂಕ್ ನಲ್ಲಿ ನಾನು ಎಷ್ಟು ವಯಕ್ತಿ ಸಾಲ ಪಡೆಯಬಹುದು (How much personal loan can I get)

ಸಾಧಾರಣವಾಗಿ ಎಲ್ಲಾ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ ಗಳಿಗೆ ಅತ್ಯಂತ ಕಡಿಮೆ ದಾಖಲೆಗಳು ಸಾಕಾಗುತ್ತವೆ ಮತ್ತು ಜಾಮೀನಿನ ಅವಶ್ಯಕತೆ ಇರುವುದಿಲ್ಲ. ದಾಖಲೆಗಳು ಕಡಿಮೆ ಯಾಕೆ ಸಾಕಾಗುತ್ತವೆ ಅಂದರೆ ನೀವು ಈಗಾಗಲೇ ಆ ಬ್ಯಾಂಕಿನ ಗ್ರಾಹಕರಾಗಿರುತ್ತಿರಿ ಹಾಗಾಗಿ ನಿಮ್ಮ ಬಗ್ಗೆ ನಿಮ್ಮ ವ್ಯವಹಾರದ ಬಗ್ಗೆ ನಿಮ್ಮ ಆರ್ಥಿಕ ಶಕ್ತಿಯ ಬಗ್ಗೆ ಬ್ಯಾಂಕಿಗೆ ಪೂರ್ಣ ಮಾಹಿತಿ ತಿಳಿದಿರುತ್ತದೆ. ಆದರೂ ಸಾಲ ಕೊಡುವುದು ಅನ್ನುವಾಗ ಕೆಲವು ದಾಖಲೆಗಳನ್ನು ಕೇಳುತ್ತಾರೆ.

ವಯಕ್ತಿಕ ಸಾಲಕ್ಕೆ ಬೇಕಾಗುವ ದಾಖಲೆಗಳು (documents you need for Personal Loan)

  • ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಜೋಡಣೆಯಾದ ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಮೂರರಿಂದ ಆರು ತಿಂಗಳವರೆಗಿನ ಬ್ಯಾಂಕ್ ಸ್ಟೇಟ್ಮೆಂಟ್
  • ಕಳೆದ ಮೂರರಿಂದ ಆರು ತಿಂಗಳ ಸ್ಯಾಲರಿ ಸ್ಲಿಪ್.
  • ಕೊಟ್ಟಿರುವ ವಿಳಾಸದಲ್ಲಿ ನೀವು ವಾಸವಾಗಿದ್ದೀರಿ ಎಂಬುದಕ್ಕೆ ದಾಖಲೆ ಈ ದಾಖಲೆಗಾಗಿ ಕರೆಂಟ್ ಬಿಲ್ ಅಥವಾ ಲ್ಯಾಂಡ್ಲೈನ್ ಫೋನ್ ಬಿಲ್ ಅಥವಾ ಇನ್ಯಾವುದಾದರೂ ದಾಖಲೆಗಳನ್ನು ನೀಡಬೇಕಾಗುತ್ತದೆ
  • ಕನಿಷ್ಠ 750ಕ್ಕೆ ಮೇಲ್ಪಟ್ಟು ಸಿಬಿಲ್ ಸ್ಕೋರ್ ಇರಬೇಕಾಗುತ್ತದೆ.
  • ಈ ಎಲ್ಲಾ ಅರ್ಹತೆಗಳು ಇದ್ದರೆ ನೀವು ಆನ್ಲೈನ್ ಮೂಲಕ ಸಾಲಕ್ಕೆ ಅಪ್ಲೈ ಮಾಡಬಹುದು ಸಾಲಕ್ಕೆ ಅಪ್ಲೈ ಮಾಡುವ ಮೊದಲು ಬ್ಯಾಂಕು ನಿಮಗೆ ಏನಾದರೂ ಫ್ರೀ ಅಪ್ಲೋಡ್ ಸಾಲ ಮಂಜೂರು ಮಾಡಿದೆಯೇ ನೋಡಿಕೊಳ್ಳಿ ಹಾಗಿದ್ದರೆ ನೀವು ಆ ಸಾಲವನ್ನು ತಕ್ಷಣ ಪಡೆದುಕೊಳ್ಳಬಹುದು.

ಅಂತೂ ಅನಿವಾರ್ಯ ಸಂದರ್ಭಗಳಲ್ಲಿ ನಾನು ಎಷ್ಟು ವಯಕ್ತಿಕ ಸಾಲ ಪಡೆಯಬಹುದು (How much personal loan can I get) ಎಂಬುದನ್ನು ತಿಳಿದುಕೊಂಡು ಬ್ಯಾಂಕ್ ನಿಂದ ಮಾಹಿತಿ ಪಡೆದು, ಸುಲಭವಾಗಿ ಕ್ಷಣಮಾತ್ರದಲ್ಲಿ ಸಾಲ ಪಡೆಯಬಹುದು. ಈ ಪರ್ಸನಲ್ ಸಾಲುಗಳು ನಮಗೆ ಆರ್ಥಿಕ ಶಕ್ತಿಯನ್ನು ಕೊಡುವುದರಲ್ಲಿ ಸಂಶಯವಿಲ್ಲ. ಅಗತ್ಯವಿರುವಷ್ಟೇ ಸಾಲ ಪಡೆಯುವ ಜಾಣ್ಮೆ ನಿಮ್ಮದಾಗಿರಲಿ.

Comments are closed.