Personal Loan for Pensioners: ಇನ್ಮುಂದೆ ಪಿಂಚಣಿದಾರರು ಚಿಂತಿಸುವ ಅಗತ್ಯ ಇಲ್ಲ; ಪಿಂಚಣಿದಾರರಿಗೂ ಸಿಗುತ್ತೆ ವೈಯಕ್ತಿಕ ಸಾಲ; ಎಲ್ಲಿ ಸಿಗುತ್ತೆ? ಇಲ್ಲಿದೆ ವಿವರ!

Personal Loan for Pensioners: ಜೀವನ ಎನ್ನುವುದು ತೀರಾ ಅನಿರೀಕ್ಷಿತವಾದುದು. ಯಾವಾಗ ಯಾವ ರೀತಿಯ ಕಷ್ಟ-ನಷ್ಟಗಳು ಎದುರಾಗುತ್ತವೆ ಎಂದು ಹೇಳಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹೆಚ್ಚಿನ ಜನರು ವೈಯಕ್ತಿಕ ಸಾಲದ ಮೊರೆ ಹೋಗುತ್ತಾರೆ. ಆದರೆ ಹಿರಿಯ ನಾಗರೀಕರಿಗೆ (Senior citizen) , ಪಿಂಚಣಿದಾರರಿಗೆ ಸಾಲ (Personal Loan for Pensioners) ನೀಡುವುದು ಕಷ್ಟದ ವಿಚಾರವಾಗಿದೆ. ಈಗ ಅಂತಹ ಪಿಂಚಣಿದಾರರಿಗೆ ಪಿರಮಾಲ್ (Piramal Finance) ಸಂಸ್ಥೆಯು ಆರ್ಥಿಕ ಸಹಾಯ (Financial Help) ನೀಡಲು ಮುಂದಾಗಿದೆ. ಈಗ ಆ ಕುರಿತು ತಿಳಿದುಕೊಳ್ಳೊಣ.

Personal Loan for Pensioners by Piramal Finance, how to apply for loan, here are the details.

ವೈಯಕ್ತಿಕ ಸಾಲಗಳು (Personal Loan) ಮಾರುಕಟ್ಟೆಯಲ್ಲಿ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡಿದೆ. ಆದರೂ ಪಿಂಚಣಿದಾರರಿಗೆ ಈ ವೈಯಕ್ತಿಕ ಸಾಲ ಪಡೆಯುವುದು ಸ್ವಲ್ಪ ಕಷ್ಟವಾಗಬಹುದು. ಪಿರಮಲ್ ಫೈನಾನ್ಸ್ (Piramal Finance) ಕಂಪನಿಯು ಇಂತಹವರ ಸಹಾಯಕ್ಕೆ ಬರುತ್ತಿದೆ. ನೀವು ನಿವೃತ್ತರಾಗಿದ್ದು, ಪಿಂಚಣಿದಾರರಾಗಿ ವೈಯಕ್ತಿಕ ಸಾಲ (Personal Loan)  ಬಯಸಿದರೆ ಅದನ್ನು ಸುಲಭವಾಗಿ ಯಾವುದೇ ದಾಖಲೆಗಳು ಇಲ್ಲದೆ ನೀಡುತ್ತದೆ.

ಪಿಂಚಣಿದಾರರ ವೈಯಕ್ತಿಕ ಸಾಲದ ವೈಶಿಷ್ಟ್ಯಗಳು: Personal Loan for Pensioners by Piramal Finance Information

ಸಾಲದ ಮೊತ್ತ ಮತ್ತು ಅವಧಿ: Personal Loan for Pensioners amount and Duration  

ಪಿರಮಲ್ ಫೈನಾನ್ಸ್ (Piramal Finance) ಕಂಪನಿಯಲ್ಲಿ 76 ವರ್ಷಕ್ಕಿಂತ ಕೆಳಗಿನ ಪಿಂಚಣಿದಾರರಿಗೆ ಸಾಲವನ್ನು (Personal Loan for Pensioners) ನೀಡಲಾಗುತ್ತದೆ. ಪಿಂಚಣಿದಾರರಿಗೆ ವೈಯಕ್ತಿಕ ಸಾಲವನ್ನು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ಸರ್ಕಾರಿ ಸೇವೆಯಿಂದ ನಿವೃತ್ತರಾದವರು, ಹಾಗೂ ಕುಟುಂಬ ಪಿಂಚಣಿ ಪಡೆಯುವ ಎಲ್ಲರೂ ಈ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಪಿರಮಲ್ ಫೈನಾನ್ಸ್ ಸಂಸ್ಥೆಯಲ್ಲಿ ಗರಿಷ್ಠ 10 ಲಕ್ಷ ರೂಪಾಯಿಗಳ ವರೆಗೆ ಸಾಲ ನೀಡಲಾಗುತ್ತದೆ. ಇದನ್ನು ಮರುಪಾವತಿ ಮಾಡಲು ಒಂದರಿಂದ ಐದು ವರ್ಷಗಳ ಅವಧಿ ನೀಡಲಾಗುತ್ತದೆ.

ನೀವು ವೈಯಕ್ತಿಕ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!

ಯಾವುದೇ ಭದ್ರತೆ ಅವಶ್ಯಕತೆ ಇಲ್ಲ: No Need of security to get Personal Loan for Pensioners

ಪಿರಮಲ್ ಫೈನಾನ್ಸ್ ಸಂಸ್ಥೆ ಪಿಂಚಣಿದಾರರಿಗೆ ತುರ್ತು ಹಣದ (Emergency Amount) ಅವಶ್ಯಕತೆಗಳನ್ನು ತೀರಿಸುತ್ತದೆ. ಹಣದ ಅವಶ್ಯಕತೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ತಕ್ಷಣ ಹಣ ಒದಗಿಸುವುದು ಮುಖ್ಯವಾಗಿರುತ್ತದೆ. ಹಾಗಾಗಿ ಯಾವುದೇ ಹೆಚ್ಚಿನ ಭದ್ರತೆ ಇಲ್ಲದೆ ಸಾಲ ನೀಡಲಾಗುತ್ತದೆ.

ಆಕರ್ಷಕ ಬಡ್ಡಿದರ:  Personal Loan for Pensioners interest rate

ನೀವು ಯಾವುದಾದರೂ ಸಾಲ (Loan) ಪಡೆಯಬೇಕು ಎಂದರೆ ಅದಕ್ಕೆ ಅರ್ಜಿ ಸಲ್ಲಿಸಬೇಕು. ಆ ಅರ್ಜಿಯನ್ನು ಬ್ಯಾಂಕ್ನವರು ಪರಿಶೀಲನೆ ನಡೆಸಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಇದಕ್ಕೆ ವಾರಗಳೇ ಕಳೆದು ಹೋಗುತ್ತವೆ. ಆದರೆ ನೀವು ಪಿರಮಲ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆಯುವುದಾದರೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು. ಕೂಡಲೇ ಸಾಲ ಮಂಜೂರಾತಿ (Loan Sanction) ಮಾಡಲಾಗುತ್ತದೆ.

ಪಿರಮಲ್ ಫೈನಾನ್ಸ್ ಸಂಸ್ಥೆಯ ಸಾಲದ ಮೇಲಿನ ಬಡ್ಡಿದರವು ಶೇ. ೧೨.೯೯ ರಿಂದ ಆರಂಭವಾಗುತ್ತದೆ. ಇದು ಪಿಂಚಣಿದಾರರಿಗೆ ಆಕರ್ಷಕ ಬಡ್ಡಿದರ ಮತ್ತು ಕಡಿಮೆ ಬಡ್ಡಿದರವಾಗಿದೆ. ಅಲ್ಲದೆ ಮರುಪಾವತಿ ಮಾಡಲು ಸಹ ಸಾಕಷ್ಟು ಸಮಯ ನೀಡಲಾಗುತ್ತದೆ. ಯಾವುದೇ ಸಾಲ ನೀಡುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆ ನಡೆಸಲಾಗುತ್ತದೆ. ಕ್ರೆಡಿಟ್ ಸ್ಕೋರ್ (Credit Score)  ಉತ್ತಮವಾಗಿದ್ದಲ್ಲಿ ಕಡಿಮೆ ಬಡ್ಡಿದರಲ್ಲಿ ಕೂಡಲೇ ಸಾಲ ಮಂಜೂರಿ ಸಿಗುತ್ತದೆ.

ಸಾಲ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು:  Documents to get Personal Loan for Pensioners

ಚಾಲನಾ ಪರವಾನಿಗೆ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಪುರಾವೆ ಒದಗಿಸಬೇಕಾಗುತ್ತದೆ.

ಪಾನ್ ಕಾರ್ಡ್

ಪಿಂಚಣಿ ಪಾವತಿ ಆದೇಶ ಪತ್ರ

ಪಿಂಚಣಿ ಖಾತೆ ಹೇಳಿಕೆ, ವಿಳಾಸ ದೃಢಿಕರಿಸುವ ಪುರಾವೆಗಳನ್ನು ಒದಗಿಸಬೇಕಾಗುತ್ತದೆ.

ಸಾಲ ಪಡೆಯಲು ಇರಬೇಕಾದ ಅರ್ಹತೆಗಳು: Eligibilities to get Personal Loan for Pensioners interest rate

ಪಿಂಚಣಿದಾರರ (Pensioners ) ಸಾಲದ ಅರ್ಹತಾ ಮಾನದಂಡವು ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ನೀವು ಸೈನ್ಯದಲ್ಲಿ ಕೆಲಸ ಮಾಡಿದವರೆ, ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಿದವರೇ ಎನ್ನುವುದನ್ನು ಆಧರಿಸಿ ಸಾಲದ ಅರ್ಹತಾ ಮಾನದಂಡ ನಿರ್ಧರಿಸಲಾಗುತ್ತದೆ.

ಸರ್ಕಾರಿ ಪಿಂಚಣಿದಾರರಿಗೆ: Government Pensioners

76 ವರ್ಷಗಳಿಗಿಂತ ಕೆಳಗಿನವರಾಗಿರಬೇಕು. ಉತ್ತಮವಾಗಿ ನಿರ್ವಹಿಸಲಾದ ಪಿಂಚಣಿ ಆದೇಶ ಪತ್ರ ಹೊಂದಿರಬೇಕು. ಯಾವುದೇ ಮೂರನೇ ವ್ಯಕ್ತಿ ನಿಮಗೆ ಗ್ಯಾರಂಟಿ ನೀಡಬೇಕು.

ಕುಟುಂಬ ಪಿಂಚಣಿದಾರರಿಗೆ Family Pensioners

ಮೂಲ ಪಿಂಚಣಿದಾರರ ಮರಣದ ನಂತರ ನೀವು ಪಿಂಚಣಿ ಪಡೆಯಲು ಅಧಿಕಾರ ಹೊಂದಿರಬೇಕು. ಪಿಂಚಣಿದಾರರ ವಯಸ್ಸು 76 ವರ್ಷಗಳಿಗಿಂತ ಕಡಿಮೆ ಇರಬೇಕು. ಪಿಂಚಣಿ ಖಾತೆ ವಿವರಗಳಿಗೆ ಪ್ರವೇಶ ಹೊಂದಿರಬೇಕು.

ರಕ್ಷಣಾ ಪಿಂಚಣಿದಾರರಿಗೆ: Security Pensioners

ನೀವು ನೌಕಾ ಪಡೆ, ಭಾರತೀಯ ಸೇನೆ, ಇಲ್ಲವೇ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು. ಸಾಲಕ್ಕೆ ಅರ್ಜಿ ಸಲ್ಲಿಸುವ ವೇಳೆ ನಿಮ್ಮ ವಯಸ್ಸು 76 ವರ್ಷ ಮೀರಿರಬಾರದು. ಉತ್ತಮವಾಗಿ ನಿರ್ವಹಿಸಲಾದ ಪಿಂಚಣಿ ಆದೇಶ ಪತ್ರ ಹೊಂದಿದ್ದರೆ ನಿಮಗೆ ವೈಯಕ್ತಿಕ ಸಾಲ ದೊರೆಯುತ್ತದೆ.

Comments are closed.