Personal Loan: ನೀವು ವೈಯಕ್ತಿಕ ಸಾಲಕ್ಕಾಗಿ ಇನ್ನು ಬ್ಯಾಂಕ್ ನಿಂದ ಬ್ಯಾಂಕ್ ಗೆ ಅಲೆಯಬೇಕಾಗಿಲ್ಲ; ಕೇವಲ ಇದೊಂದು ಬ್ಯಾಂಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡ್ಕೋಳ್ಳಿ ಸಾಕು, ಕುಳಿತಲ್ಲೇ ಪಡೆಯಬಹುದು ಸಾಲ!

Personal Loan by PGB: ಕಷ್ಟ-ನಷ್ಟಗಳು ಹೇಳಿ ಕೇಳಿ ಬರುವುದಿಲ್ಲ. ಬಂದಾಗ ಅದನ್ನು ಎದುರಿಸಲೇಬೇಕು. ಹಾಗಾಗಿ ಹಣದ ಅವಶ್ಯಕತೆಯೂ ಅಷ್ಟೆ. ನಮ್ಮ ಕೈಯ್ಯಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣದ ಅವಶ್ಯಕತೆ ಯಾವಾಗ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಹಾಗೂ ನಮಗೆ ಬೇಕಾದಷ್ಟು ಹಣವನ್ನು ಸಾಲ (Personal Loan) ವಾಗಿ ನೀಡುವವರ ಅವಶ್ಯಕತೆ ಇರುತ್ತದೆ.

How to get Personal Loan by PGB within few minutes. Here are the details.

ಇಂತಹ ಸಂದರ್ಭದಲ್ಲಿ ನೀವು ವೈಯಕ್ತಿಕ ಸಾಲಕ್ಕಾಗಿ ಪಂಜಾಬ್ ಗ್ರಾಮೀಣ ಬ್ಯಾಂಕ್ಗೆ (Panjab Gramin Bank) ಅರ್ಜಿ ಸಲ್ಲಿಸಬಹುದು. ಇಲ್ಲಿ ನಿಮಗೆ ತ್ವರಿತವಾಗಿ ಸಾಲ ಸಿಗುತ್ತದೆ. ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಪಂಜಾಬ್ ಗ್ರಾಮೀಣ ಬ್ಯಾಂಕ್ (Personal Loan by PGB) ನ ಸಾಲ ಹೇಗೆ ಸಿಗುತ್ತದೆ? ಯಾರ್ಯಾರು ಸಾಲ ಪಡೆಯಬಹುದು? ಬಡ್ಡಿದರ (Interest) ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.

ಅತಿ ಸುಲಭವಾಗಿ ಲೋನ್ ಬೇಕೇ? ಹಾಗಿದ್ದರೆ ಇಲ್ಲಿದೆ ನೋಡಿ ಸುಲಭ ವಿಧಾನ. ರಪ್ ಅಂತ ಸಾಲ ತೆಗೆದುಕೊಳ್ಳಲು ಈ ಲೇಖನ ಓದಿ

ಮಾಸಿಕವಾಗಿ ಸಂಬಳ (Monthly Salary)  ಪಡೆಯುವ ಉದ್ಯೋಗಿಗಳ ಹೆಚ್ಚಿನ ಹಣದ ಅವಶ್ಯಕತೆಯನ್ನು ಬರಿಸುವುದು ಪಂಜಾಬ್ ಗ್ರಾಮೀಣ ಬ್ಯಾಂಕ್ನ ಉದ್ದೇಶವಾಗಿದೆ. ಸಂಬಳದರಾರರ ಎಲ್ಲ ವೈಯಕ್ತಿಕ ಅಂದ್ರೆ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ, ಮಕ್ಕಳ ಮದುವೆ, ವಿದ್ಯಾಭ್ಯಾಸ ಹೀಗೆ ಎಲ್ಲ ರೀತಿಯ ಸಂದರ್ಭದಲ್ಲಿ ವೈಯಕ್ತಿಕ ಸಾಲ ನೀಡಲಾಗುತ್ತದೆ.

ಸಾಲ ಪಡೆಯಲು ಇರುವ ಅರ್ಹತೆಗಳು: Eligibilities to get Personal Loan by PGB

ಪಂಜಾಬ್ ಗ್ರಾಮೀಣ ಬ್ಯಾಂಕ್ನಿಂದ ವೈಯಕ್ತಿಕ ಸಾಲ ಪಡೆದುಕೊಳ್ಳಲು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು, ಪಿಎಸ್ಯುಗಳ ಎಲ್ಲ ದೃಢೀಕೃತ ಅಥವಾ ಖಾಯಂ ಉದ್ಯೋಗಿಗಳು ಕನಿಷ್ಠ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಸಾಲ ನೀಡಲಾಗುತ್ತದೆ. ಇಷ್ಟೆ ಅಲ್ಲದೆ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಂಸ್ಥೆಗಳು, ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರು, ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಕಾರ್ಯನಿರ್ವಹಿಸುವವರಿಗೂ ಸಾಲ ನೀಡಲಾಗುತ್ತದೆ.

ಇತರ ಉದ್ಯೋಗದಲ್ಲಿರುವವರು ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು. ಎಲ್ಐಸಿ ಎಜೆಂಟ್ಗಳು ಸಹ ಸಾಲ ಪಡೆಯಲು ಅರ್ಹರಾಗಿರುತ್ತಾರೆ.

ಎಷ್ಟು ಸಾಲ ನೀಡಲಾಗುತ್ತದೆ?  Personal Loan by PGB Amount

ನೌಕರರಿಗೆ ಅವರ ವೇತನದ 24 ಪಟ್ಟು ಹಣವನ್ನು ಸಾಲವಾಗಿ ನೀಡಲಾಗುತ್ತದೆ. ಅಥವಾ ಮರುಪಾವತಿ ಸಾಮರ್ಥ್ಯ ಅರಿತು 2೦ ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತದೆ.

ಎಲ್ಐಸಿ ಎಜೆಂಟರಿಗೆ (LIC Agent) ಅವರ ವೇತನದ 15 ಪಟ್ಟು ಸಾಲ ಅಥವಾ 1೦ ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.

ಭದ್ರತೆಗಾಗಿ ಏನನ್ನು ಒದಗಿಸಬೇಕು? Guarantee to get  Personal Loan by PGB Amount

ಸಾಲದ ಭದ್ರತೆಗಾಗಿ ನೌಕರರು ಅಥವಾ ಇತರೆ ವಲಯದಲ್ಲಿ ಕೆಲಸ ಮಾಡುವವರು ಮೂರನೇ ವ್ಯಕ್ತಿಯಿಂದ ಶೂರಿಟಿ ಕೊಡಿಸಬೇಕಾಗುತ್ತದೆ.

ಎಲ್ಐಸಿ ಎಜೆಂಟರಿಗೆ  ಬ್ಯಾಂಕ್ಗೆ ಸ್ವೀಕಾರಾರ್ಹವಾದ ಮೂರನೇ ವ್ಯಕ್ತಿಯಿಂದ ಗ್ಯಾರಂಟಿ ಅಥವಾ ಸಾಲದ ಮೊತ್ತಕ್ಕೆ ಸಮಾನವಾದ ವಿಮಾ ಮೊತ್ತದೊಂದಿಗೆ ಸ್ವಯಂ ಎಲ್ಐಸಿ ನೀತಿ ಯೋಜನೆ ನೀಡಬೇಕಾಗುತ್ತದೆ.

ಸಾಲದ ಮೊತ್ತದ ಶೇ.1೦೦ ರಷ್ಟು ಮೇಲಾಧಾರ ಭದ್ರತೆ ಒದಗಿಸಬೇಕಾಗುತ್ತದೆ.

ಮರುಪಾವತಿ ಹೇಗೆ? ಅವಧಿ ಎಷ್ಟು?:

ಸಂಪೂರ್ಣ ಸಾಲವನ್ನು ಬಡ್ಡಿಯೊಂದಿಗೆ 72 ಸಮಾನ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಸಾಲ ಪಡೆದುಕೊಂಡ ಒಂದು ತಿಂಗಳಿಂದ ಮರುಪಾವತಿ ಇಎಂಐ ಪ್ರಾರಂಭವಾಗುತ್ತದೆ.

ಓವರ್ ಡ್ರಾಫ್ಟ್: ಓವರ್ ಡ್ರಾಫ್ಟ್ (Over Draft)  ಮಿತಿಯನ್ನು ಸೇವೆಯ ಉಳಿದ ಅವಧಿಯೊಳಗೆ ಇಲ್ಲವೇ ಗರಿಷ್ಟ 72  ಇಎಂಐಗಳಲ್ಲಿ ಮೊತ್ತಕ್ಕೆ ಸಮಾನವಾದ ಡಿಪಿಯನ್ನು ಪ್ರತಿ ತಿಂಗಳ ಆರಂಭದಲ್ಲಿಯೇ ಕಡಿಮೆ ಮಾಡುವ ಮೂಲಕ ಹೊಂದಿಸಲಾಗುತ್ತದೆ.

ಎಲ್ಐಸಿ ಏಜೆಂಟರಿಗೆ ಸಹ 72 ಸಮಾನ ಕಂತುಗಳಲ್ಲಿ ಸಾಲ ಮರುಪಾವತಿ ಮಾಡುವ ಸಮಯ ಇರುತ್ತದೆ. ಅಥವಾ 65 ವರ್ಷದ ಮೊದಲು ಎಲ್ಲ ಸಾಲವನ್ನು ಮರುಪಾವತಿ ಮಾಡಿರಬೇಕು.

ಪಂಜಾಬ್ ಗ್ರಾಮೀಣ ಬ್ಯಾಂಕ್ನಲ್ಲಿ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವು ಶೇ. 12.25 ರಿಂದ ಆರಂಭಗೊಳ್ಳುತ್ತದೆ.

ಇತರೇ ಶುಲ್ಕಗಳು: Processing fee

ಪಂಜಾಬ್ ಗ್ರಾಮೀಣ ಬ್ಯಾಂಕ್ನಲ್ಲಿ ವೈಯಕ್ತಿಕ ಸಾಲದ (Personal Loan by PGB) ಮೇಲೆ ಮುಂಗಡ ಸಾಲದ ಮೊತ್ತದ ಶೇ.1 ಹಾಗೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಸಂಸ್ಕರಣಾ ಶುಲ್ಕವು 2 ಲಕ್ಷ ರೂ. ಒಳಗಿನ ಸಾಲಕ್ಕೆ 270 ರೂ. ಹಾಗೂ 2 ಲಕ್ಷ ರೂ. ಮೇಲ್ಪಟ್ಟ ಸಾಲಕ್ಕೆ 45೦ ರೂ. ಹಾಗೂ ಜಿಎಸ್ಟಿ ಪಾವತಿಸಬೇಕಾಗುತ್ತದೆ.

Comments are closed.