Gold Loan: ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿಲ್ವಾ? ಪರವಾಗಿಲ್ಲ ಬಿಡಿ, ಆದ್ರು ನೀವು ಪಡೆಯಬಹುದು ಸುಲಭ ಸಾಲ, ಹೇಗೆ ಗೊತ್ತಾ?

Gold Loan: ನಾವು ನಮ್ಮ ಸಿಹಿ ಕಹಿ ಚಾನಲ್ (Sihikahi News) ನಲ್ಲಿ ಬೇರೆ ಬೇರೆ ಸಾಲಗಳ ಬಗ್ಗೆ ಈಗಾಗಲೇ ಉಲ್ಲೇಖ ಮಾಡಿದ್ದೇವೆ. ಆದರೆ ಎಲ್ಲಾ ಸಾಲಗಳಿಗೂ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿರುವಂತ ಅವಶ್ಯಕತೆ ಇದೆ. ಅಥವಾ ಜಾಮೀನುದಾರರನ್ನು ಅವಲಂಬಿಸುವ ಅವಶ್ಯಕತೆ ಇದೆ ಇಲ್ಲದಿದ್ದರೆ ಸ್ಯಾಲರಿ ಸರ್ಟಿಫಿಕೇಟ್ ಬೇಕೇ ಬೇಕು. ಕಳೆದ ಕೆಲವು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (Bank Statement)  ಗಳು ಇಲ್ಲದಿದ್ದರೆ ಅಂತೂ ಲೋನ್ ಸಿಗುವ ಹಾಗೆ ಇಲ್ಲ. ಆದರೆ ಇವತ್ತು ಸಿಬಿಲ್ ಸ್ಕೋರಿಲ್ಲದೆ ಸ್ಯಾಲರಿ ಸರ್ಟಿಫಿಕೇಟ್ ಇಲ್ಲದೆ, ಬ್ಯಾಂಕ್ ಸ್ಟೇಟ್ಮೆಂಟ್ ಇಲ್ಲದೆ ಸಿಗುವ ಒಂದು ಸಾಲವನ್ನು ಪರಿಚಯಿಸುತ್ತೇವೆ. ಅದೇನೆಂದರೆ ಗೋಲ್ಡ್ ಲೋನ್ Gold Loan ಅಥವಾ ಚಿನ್ನದ ಮೇಲಿನ ಸಾಲ.

Get Gold Loan without CIBIL Score or No Bank Statement Needed. Here Are the Details.

ಅತ್ಯಂತ ಸುಲಭವಾಗಿ ಸಿಗುವಂತಹ ಸಾಲವೆಂದರೆ ಅದು ಚಿನ್ನದ ಮೇಲಿನ ಸಾಲ.

ನಮಗೆ ಅವಶ್ಯಕತೆ ಇದ್ದಷ್ಟು ಮಾತ್ರ ಸಾಲವನ್ನು ಪಡೆದು ಕೆಲವು ದಿನ ಅಥವಾ ಕೆಲವು ತಿಂಗಳು ಈ ಮೊತ್ತವನ್ನು ಉಪಯೋಗಿಸಿ ಮರುಪಾವತಿ ಮಾಡುವುದಾದರೆ ತುಂಬಾ ಒಳ್ಳೆಯ ಅತ್ಯಂತ ಸುಲಭದಲ್ಲಿ ಸಿಗುವ ಸಾಲ ಇದಾಗಿರುತ್ತದೆ.

ಚಿನ್ನದ ಸಾಲ (Gold Loan) ಅಥವಾ ಗೋಲ್ಡ್ ಲೋನ್ ತೆಗೆದುಕೊಳ್ಳುವ ಮೊದಲು ತುಂಬಾ ಯೋಚಿಸಿ ಕೆಲವು ತಿಂಗಳುಗಳ ಒಳಗೆ ಕಟ್ಟಲು ಸಾಧ್ಯವಾಗದೆ ಇರುವುದಾದರೆ ಚಿನ್ನವನ್ನು ಮಾರಿ ಹಣ ಪಡೆಯುವುದು ಒಳ್ಳೆಯದು ಯಾಕೆಂದರೆ ಚಿನ್ನಕ್ಕೆ ಒಂದು ತಿಂಗಳಿನಿಂದ ಜಾಸ್ತಿ ಅಂದರೆ ಒಂದು ವರ್ಷದ ವರೆಗೆ ಮರುಪಾವತಿ ಅವಧಿಯನ್ನು ನೀಡಲಾಗುತ್ತದೆ.

ನೀವು ವೈಯಕ್ತಿಕ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!

ತುರ್ತು ಸಂದರ್ಭಗಳಲ್ಲಿ ಆಪದ್ಬಾಂಧವ ಆಗಿಯೂ ಬಳಸಿಕೊಳ್ಳಲು ಆಗುತ್ತದೆ ಆದರೆ ಗೋಲ್ಡ್ ಲೋನ್ ಅಥವಾ ಚಿನ್ನದ ಮೇಲಿನ ಸಾಲ ಪಡೆಯುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ಕೆಲವು ದಿನಗಳು ಅಥವಾ ಕೆಲವು ತಿಂಗಳಲ್ಲಿ  ಮರುಪಾವತಿಸಲು ಸಾಧ್ಯವಾದರೆ ಆ ಚಿನ್ನವನ್ನು ಮಾರುವ ಬದಲು ಅದರ ಮೇಲೆ ಸಾಲ ತೆಗೆದುಕೊಳ್ಳುವುದೇ ಒಳ್ಳೆಯ ಮಾರ್ಗ. ಒಂದು ಸಾರಿ ಚಿನ್ನವನ್ನು ಮಾರಿ ನಾವು ಇಷ್ಟು ನಷ್ಟ ಮಾಡಿಕೊಂಡು ಪುನಹ ಒಮ್ಮೆ ಅಷ್ಟೇ ಚಿನ್ನವನ್ನು ಪುನಃ ಖರೀದಿಸುವಾಗ ಪುನಃ ವೇಸ್ಟೇಜ್ ಮತ್ತು ಮಜೂರಿ ಕೊಟ್ಟು ಪುನಹ ಲಾಸ್ ಮಾಡಿಕೊಳ್ಳಬೇಕಾಗುತ್ತದೆ.

ಎಲ್ಲಿ ಸಿಗುತ್ತೆ ಚಿನ್ನದ ಮೇಲಿನ ಸಾಲ (Where can get Gold Loan)

ಸಾಧಾರಣವಾಗಿ ಎನ್ ಬಿ ಎಫ್ ಸಿ (NBFC) ಅಂದರೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳು (Non-Banking Finnace Company) ಅಂದರೆ ಮಣಪುರಂ ಫೈನಾನ್ಸ್ (Manappuram Finance) ಅಥವಾ ಮುತ್ತೂಟ್ ಫೈನಾನ್ಸ್ (Muthoot Finance)  ಅಥವಾ ಇನ್ಯಾವುದೇ ಖಾಸಗಿ ಚಿನ್ನದ ಮೇಲೆ ಸಾಲ ಕೊಡುವ ಸಂಸ್ಥೆಗಳು. ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರಿ ಸಂಘಗಳು ಈ ಸಾಲವನ್ನು ನೀಡುತ್ತವೆ. ಅಂದಾಜು ಎಷ್ಟು ಸಾಲವನ್ನು ಕೊಡುತ್ತವೆ ಅಂದರೆ ಚಿನ್ನದ ಮಾರ್ಕೆಟ್ ವ್ಯಾಲ್ಯೂ ಎಷ್ಟಿದೆ ಅದರ ಶೇಕಡಾ 75% ಕೊಡುತ್ತವೆ ಒಂದೊಂದು ಬ್ಯಾಂಕಿನ ಧೋರಣೆ ಒಂದೊಂದು ತರ ಇರುತ್ತದೆ ಉದಾರಣೆಗೆ ಒಂದು ಗ್ರಾಂ ಚಿನ್ನದ ಬೆಲೆ ಆರು ಸಾವಿರ ಇದ್ದರೆ ನಿಮ್ಮಲ್ಲಿ 10 ಗ್ರಾಂ ಚಿನ್ನದ ಒಂದು ಆಭರಣ ಇದ್ದರೆ ನಿಮಗೆ 45000 ಸಾಲ ಸಿಗುತ್ತದೆ. 24 ಕ್ಯಾರೆಟ್ ಅಥವಾ 22 ಕ್ಯಾರೆಟ್ ಚಿನ್ನಕ್ಕೆ ಸಾಧಾರಣ ಎಲ್ಲ ಸಂಸ್ಥೆಗಳು ಸಾಲವನ್ನು ನೀಡುತ್ತವೆ.

ಚಿನ್ನದ ಸಾಲಕ್ಕೆ ಬಡ್ಡಿ ದರ (Gold Loan Interest)

ಚಾರ್ಜ್ ಮಾಡುವ ಬಡ್ಡಿ 8% ನಿಂದ 24% ವರೆಗೂ ಚಾರ್ಜ್ ಮಾಡುತ್ತಾರೆ ಒಂದು ತಿಂಗಳಿಂದ ಮೂರು ನಾಲ್ಕು ವರ್ಷಗಳ ವರೆಗೂ ಮರುಪಾವತಿ ಅವಧಿಯನ್ನು ಕೊಡುವಂತಹ ಬ್ಯಾಂಕುಗಳು ಇಲ್ಲ ಸಂಸ್ಥೆಗಳು ಇವೆ ಪ್ರೋಸೆಸಿಂಗ್ ಫೀಸ್ (Processing Fee)  ಅಂತ 0.5% ಚಾರ್ಜ್ ಮಾಡುತ್ತಾರೆ. ಮತ್ತು ಚಿನ್ನ ದ ಗುಣಮಟ್ಟವನ್ನು ಪರೀಕ್ಷಿಸಲು ಬಂದ ಚಿನಿವಾರ ಚಾರ್ಜ್ ಕೂಡ ನಮ್ಮ ಸಾಲಕ್ಕೆ ಸೇರಿಕೊಳ್ಳುತ್ತದೆ ಚಿನ್ನದ ಸಾಲವನ್ನು ಪಡೆದರೆ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ.

ಯಾರು ಪಡೆಯಬಹುದು ಚಿನ್ನದ ಸಾಲ (Who can get Gold Loan)

  • ಎಷ್ಟೇ ಕಡಿಮೆ ಸಿಬಿಲ್ ಸ್ಕೋರ್ ಇದ್ದರು ಈ ಸಾಲ ಸಿಗುತ್ತದೆ
  • ಉದ್ಯೋಗಿ ಇರಲಿ ನಿರುದ್ಯೋಗಿ ಇರಲಿ ಸಾಲ ಸಿಗುತ್ತದೆ
  • ಯಾವುದೇ ಬ್ಯಾಂಕಿನ ಸ್ಟೇಟ್ಮೆಂಟು ಅಗತ್ಯ ಇರುವುದಿಲ್ಲ
  • ಯಾವುದೇ ಸ್ಯಾಲರಿ ಸರ್ಟಿಫಿಕೇಟ್ ಹಾಜರುಪಡಿಸುವ ಅಗತ್ಯ ಇಲ್ಲ
  • ಪೀ ಅಂಡ್ ಎಲ್ ಸ್ಟೇಟ್ಮೆಂಟ್ ಕೊಡುವ ಅಗತ್ಯ ಇಲ್ಲ
  • ಯಾವುದೇ ಜಾಮೀನುದಾರರನ್ನು ವಿನಂತಿಸುವ ಅಗತ್ಯ ಇಲ್ಲ
  • ಯಾವುದೇ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿದ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ
  • ನಿಮ್ಮ ವಿಳಾಸದ ಬಗ್ಗೆ ಒಂದು ದಾಖಲೆ
  • ಆಧಾರ್ ಕಾರ್ಡ್ (Adhaar Card) ನ ಕಾಪಿ ನಿಮ್ಮ ಭಾವಚಿತ್ರದ ಪಾಸ್ಪೋರ್ಟ್ ಸೈಜ್ ಹೀಗೆ ಅತ್ಯಲ್ಪ ದಾಖಲೆಗಳನ್ನು ನೀಡಿದರೆ ಸಾಕಾಗುತ್ತದೆ.

ನೀವು ಕೊಟ್ಟ ಚಿನ್ನದಲ್ಲಿ ಇರುವ ಹರಳುಗಳನ್ನು ಅಂದಾಜು ಲೆಕ್ಕಹಾಕಿ ನಿವ್ವಳ ಚಿನ್ನ ಎಷ್ಟು ಇದೆ ಎಂದು ಅಂದಾಜಿಸಿ ಚಿನ್ನದ ಬೆಲೆ ಕಳೆದ 30 ದಿನಗಳ ಸರಾಸರಿಯಲ್ಲಿ ಎಷ್ಟು ಇತ್ತು ಎಂಬುದನ್ನು ನೋಡಿ ಆ ಸರಾಸರಿ ಬೆಲೆಯ ಆಧಾರದಲ್ಲಿ ನಿಮ್ಮ ಚಿನ್ನದ ಒಟ್ಟು ಮೌಲ್ಯದ 75 ಶೇಕಡ ಸಾಲವನ್ನು ನಿಮಗೆ ಮಂಜೂರು ಮಾಡುತ್ತಾರೆ.

Get Gold Loan without CIBIL Score or No Bank Statement Needed. Here Are the Details.

ಕೆಲವೇ ದಿನಗಳಲ್ಲಿ ಸಾಲವನ್ನು ಕಟ್ಟಲು ಸಾಧ್ಯವಾದರೆ ಒಮ್ಮೆಲೇ ಸಾಲ ಕಟ್ಟಿದಿರಿ ಅಂತ ಯಾವುದೇ ದಂಡವನ್ನು ಅಥವಾ ಹೆಚ್ಚುವರಿ ಖರ್ಚನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ನೀವು ಒಂದು ಆಭರಣವನ್ನು ಖರೀದಿಸುವಾಗ ಅದರ ವಿನ್ಯಾಸವನ್ನು ಮೆಚ್ಚಿ ಆಭರಣವನ್ನು ಖರೀದಿಸುತ್ತೀರಿ ಇಂತಹ ಆಭರಣವನ್ನು ಮಾರಾಟ ಮಾಡಿದರೆ ಮತ್ತೊಮ್ಮೆ ಇದೇ ವಿನ್ಯಾಸದ ಇಷ್ಟೇ ಸೂಕ್ಷ್ಮ ಕುಸುರಿ ಕೆಲಸದ ಆಭರಣ ಮತ್ತೊಮ್ಮೆ ಸಿಗುತ್ತದೆ ಅಂತ ಹೇಳಲಾಗುವುದಿಲ್ಲ ಆದರೆ ನೀವು ಇದರ ಮೇಲೆ ಸಾಲ ಪಡೆದುಕೊಂಡು ಮತ್ತೆ ಸಾಲವನ್ನು ಹಿಂದೆ ಕೊಟ್ಟಾಗ ಇಂತಹ ಒಂದು ಅದ್ಭುತ ವಿನ್ಯಾಸದ ಸೂಕ್ಷ್ಮವಾದ ಕುಸುರಿ ಕೆಲಸದ ಆಭರಣ ನಿಮ್ಮದಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ಚಿನ್ನದ ಮೇಲಿನ ಸಾಲದ (Gold Loan) ಬಗ್ಗೆ ಯೋಚಿಸುವವರಿಗೆ ನಮ್ಮ ಈ ಲೇಖನ ದಲ್ಲಿ ವಿವರಿಸಿರುವ ವಿಚಾರಗಳು ಹಿತವಾಗಿ ಕಾಣಬಹುದು ಮತ್ತು ಸಾಕಷ್ಟು ಯೋಚನೆಗೆ ಎಡೆ ಮಾಡಿ ಕೊಡಬಹುದು ಎಂಬ ಆಶಯ ನಮ್ದು.

Comments are closed.