Electric Vehicle Loans: ಈ ಬ್ಯಾಂಕ್ ಗಳು ನೀಡುತ್ತವೆ, ಅತೀ ಕಡಿಮೆ ಬಡ್ದಿದರದಲ್ಲಿ ಇಲೆಕ್ಟ್ರಿಕ್ ವಾಹನದ ಮೇಲೆ ಸಾಲ; ಈ ಆಫರ್ ಮಿಸ್ ಮಾಡ್ಕೋಬೇಡಿ!

Electric Vehicle Loans: ನೀವು ಒಂದು ವೇಳೆ ಎಲೆಕ್ಟ್ರಿಕ್ ಕಾರನ್ನು ಖರೀದಿಸಬೇಕು ಅಂತಿದ್ದರೆ ಯಾವ ಬ್ಯಾಂಕ್ನಿಂದ ಸಾಲ (Electric Vehicle Loans) ಪಡೆದರೆ ನಿಮಗೆ ಬಡ್ಡಿದರ ಉಳಿತಾಯವಾಗುವುದು ಗೊತ್ತಿದೆಯೇ? ಇಲ್ಲದಿದ್ದರೆ ಬನ್ನಿ ತಿಳಿದುಕೊಳ್ಳೋಣ. ನಾಲ್ಕು ಬ್ಯಾಂಕಗಳ ಬಡ್ಡಿ ದರಗಳಲ್ಲಿ ವಿಶೇಷ ವಿನಾಯತಿ ಕೊಡುಗೆ ನೀವು ಗಮನಿಸಬೇಕು.

These Banks provide Electric Vehicle Loans with Low Interest Rate, Compare Interest rate with other banks.

ಸುಲಭವಾಗಿ ಸಿಗುತ್ತೆ ಇಲೆಕ್ಟ್ರಿಕ್ ವಾಹನದ ಮೇಲೆ ಸಾಲ (Electric Vehicle Loans)

ವಾಹನಗಳಿಂದ ಪರ್ಯಾವರಣದ ಮೇಲೆ ಬೀಳುವ ಕೆಟ್ಟ ಪರಿಣಾಮವನ್ನು ಗಮನಿಸಿ ಎಲೆಕ್ಟ್ರಿಕ್ ಕಾರು (Electric Car) ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇವರಿಗೆ ಸರಕಾರ ಸಾಕಷ್ಟು ಹೆಜ್ಜೆಗಳನ್ನು ಇಟ್ಟಿದೆ. ಕಾರನ್ನು ಉತ್ಪಾದಿಸುವವರಿಗೆ ಟ್ಯಾಕ್ಸ್ (Tax) ನಲ್ಲಿ ವಿಶೇಷ ರಿಯಾಯಿತಿ ಹಾಗೂ ಇತರ ಕಾರುಗಳೊಂದಿಗೆ ಸ್ಪರ್ಧೆಗಾಗಿ ಹೊಸ ಹೊಸ ವಿನ್ಯಾಸಗಳನ್ನು ಮಾಡಿ ಈ ಬ್ಯಾಟರಿ ಕಾರುಗಳು ಸಾಕಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಇದಲ್ಲದರ ಮೂಲ ಕಾರಣ ವಾಹನಗಳಿಂದಾಗಿ ಉಂಟಾಗುವ ವಾಯುಮಾಲಿನ್ಯತೆಯನ್ನು ದೂರ ಮಾಡಿ ಪರ್ಯಾವರಣವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಹಾಗಾಗಿ ಕಾರು ಪ್ರಿಯರು ಬ್ಯಾಟರಿ ಕಾರಿನ (Battry Car) ಮೇಲೆ ತಮ್ಮ ಗಮನವನ್ನು ಹರಿಸುವಂತಾಗಲು ಇನ್ನೂ ಕೆಲವು ಹೆಜ್ಜೆಗಳನ್ನು ಸರಕಾರ ಇಟ್ಟಿದೆ ಅದರಲ್ಲಿ ಒಂದು ಅಂದರೆ ಬ್ಯಾಟರಿ ಕಾರ್ ಸಾಲದ (Electric Vehicle Loans) ಮೇಲೆ ವಿಶೇಷ ಬಡ್ಡಿ ಕಡಿತ.

ಹಾಗಾದರೆ ಯಾವ ಬ್ಯಾಂಕು ಯಾವ ಹೆಜ್ಜೆಯನ್ನು ಇಟ್ಟಿದೆ ನೋಡೋಣ ಬನ್ನಿ Which Banks provide Electric Vehicle Loans

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India – SBI) ಇವರ ಎಲೆಕ್ಟ್ರಿಕ್ ವೆಹಿಕಲ್ ಲೋನ್ (Electric Vehicle Loans) ತೆಗೆದುಕೊಂಡರೆ 25 ಬಿಪಿಎಸ್ ಅಂದರೆ . 25% ಬಡ್ಡಿ ಕಡಿಮೆ ಇದೆ. ಎಸ್‌ಬಿಐನವರು ಫೆಸ್ಟಿವಲ್ ಧಮಾಕ ಅಂತ ಒಂದು ಯೋಜನೆಯನ್ನು ಪ್ರಕಟಿಸಿ, ಈ ಯೋಜನೆಯಲ್ಲಿ ಸಾಲ ಪಡೆದವರು ಸಾಲಕ್ಕೆ ಪ್ರೋಸೆಸಿಂಗ್ ಫೀಸನ್ನು ಕೊಡಬೇಕಾಗಿಲ್ಲ ಈ ಯೋಜನೆ ಜನವರಿ 31 2024ರ ವರೆಗೆ ಇರುತ್ತದೆ.

ಈ ಬ್ಯಾಂಕ್ ನಲ್ಲಿ ಎಷ್ಟು ಬಡ್ದಿದರಕ್ಕೆ ವಯಕ್ತಿಕ ಸಾಲ ಸಿಗುತ್ತೆ ಗೊತ್ತಾ? ಅಪ್ಲೈ ಮಾಡುವುದಕ್ಕೂ ಮೊದಲು ಬಡ್ಡಿದರ ತಿಳಿದುಕೊಳ್ಳಿ!

ಎಸ್ ಬಿ ಐ ಗ್ರೀನ್ ಕಾರ್ ಲೋನ್ (SBI Green Electric Vehicle Loans) ಅಂದರೆ ಎಲೆಕ್ಟ್ರಿಕ್ ಕಾರ್ ಗಳಿಗೆ ಮಾತ್ರ ಸೀಮಿತವಾದ ಲೋನ್ ಇದು. ಈ ಸಾಲದ ಬಡ್ಡಿ 8.75% ಇಂದ 9.45% ವರೆಗೆ ಇರುತ್ತದೆ. ಈ ಸಾಲದ ಬಡ್ಡಿದರಗಳನ್ನು ಪರಿಶೀಲಿಸುವಾಗ ಬೇರೆ ಕಾರುಗಳ ಸಾಲದ ಬಡ್ಡಿದರಕ್ಕಿಂತ 20 ಬಿಪಿಎಸ್ ಪಾಯಿಂಟ್ (BPS Point) ಬಡ್ಡಿ ಕಡಿಮೆ ಇದೆ ಮತ್ತೆ ಎಲೆಕ್ಟ್ರಿಕ್ ಕಾರು ಅದರ ಬೆಲೆ ಎಷ್ಟಿದೆಯೋ ಆಮೇಲೆಯ ಶೇಕಡ 90ರಷ್ಟು ಸಾಲವನ್ನು ನೀಡುತ್ತಾರೆ. ಕೆಲವು ಮೋಡಲ್ ಗಳಿಗೆ ಶೇಕಡ 100 ಸಾಲವನ್ನು ನೀಡುತ್ತಾರೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union bank of India) ಇದರ ಗ್ರೀನ್ ಮೈಲ್ಸ್ ಈ ಯೋಜನೆ ಅಡಿ ಸಾಲ ಪಡೆದುಕೊಂಡರೆ ಸಾಲದ ಬಡ್ಡಿದರ ಅವರವರ ಕ್ರೆಡಿಟ್ ಸ್ಕೋರ್ (Credit Score)  ಅನ್ನು ಆಧರಿಸಿ 9.15 % ನಿಂದ 12.25% ವರೆಗೆ ಸಾಲ ಬಡ್ಡಿ (Loan Interest) ಇರುತ್ತದೆ ಮತ್ತು ಏನಾದರೂ ಬೇರೆ ಹಣವನ್ನು ಹೊಂದಿಸಿ ಈ ಸಾಲವನ್ನು ಪ್ರೀ ಪೇಮೆಂಟ್ ಅಂದರೆ ಅವಧಿಗೆ ಮೊದಲು ಮರುಪಾವತಿಸಿದರೆ ಯಾವುದೇ ದಂಡ ಶುಲ್ಕ ಇರುವುದಿಲ್ಲ.

ಪಿ ಎನ್ ಬಿ ಅಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (Panjab National Bank Electric Vehicle Loans) ಇವರ ಗ್ರೀನ್ ಕಾರ್ ಈ ವೆಹಿಕಲ್ ಲೋನ್ (Electric Vehicle Loans) ಈ ಸಾಲದ ಯೋಜನೆ ಅಡಿ ಹೊಸ ಕಾರು ಖರೀದಿಸುವವರಿಗೆ ಎಕ್ಸ್ ಶೋ ರೂಂ ಪ್ರೈಸ್ (Ex Showroom Price)  ಏನಿದೆಯೋ ಅದನ್ನು ಎಲ್ಲಾ ಸಾಲವಾಗಿ ನೀಡುತ್ತದೆ ಇಲ್ಲದಿದ್ದಲ್ಲಿ ಆನ್ ರೋಡ್ ಪ್ರೈಸ್ (On Road Price) ಅಂದರೆ ಷೋ ರೂಂ ನಿಂದ ಹೊರಗಡೆ ಬಂದು ನಮ್ಮ ಕೈಗೆ ಸಿಗಬೇಕಾದರೆ ಕೆಲವೆಲ್ಲ ಟ್ಯಾಕ್ಸ್ ಗಳು ಇತ್ಯಾದಿ ಖರ್ಚುಗಳಿವೆ ಆ ಖರ್ಚುಗಳಲ್ಲಿ 10% ಸಾಲವನ್ನು ಹೆಚ್ಚುವರಿ ಯಾಗಿ ಕಾರು ಸಾಲದೊಂದಿಗೆ ನೀಡುತ್ತಾರೆ. ಈ ಸಾಲಕ್ಕೆ ವಾರ್ಷಿಕ 9.75% ಬಡ್ಡಿದರ ವಿಧಿಸಲಾಗುತ್ತದೆ

ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra Electric Vehicle Loans) ಇವರು ಕೂಡ ಬ್ಯಾಟರಿ ಕಾರ್ ಖರೀದಿಗೆ ವಿಶೇಷ ಯೋಜನೆಯನ್ನು ಹೊರಗೆ ತಂದಿದ್ದಾರೆ ಇವರ ಯೋಜನೆ ಏನೆಂದರೆ, ಬ್ಯಾಟರಿ ಕಾರ್ ಸಾಲಕ್ಕೆ ಪ್ರೋಸೆಸಿಂಗ್ ಫೀಸ್ ಇರುವುದಿಲ್ಲ ಮತ್ತು ಡಾಕ್ಯುಮೆಂಟೇಶನ್ (Documentation)  ಅಂತ ಯಾವುದೇ ಚಾರ್ಜ್ ಮಾಡುವುದಿಲ್ಲ. ಬೇರೆ ಕಾರ್ಗಳ ಸಾಲಕ್ಕಿಂತ .25% ಕಡಿಮೆ ಬಡ್ಡಿಯನ್ನು ಚಾರ್ಜ್ ಮಾಡಲಾಗುತ್ತದೆ ಮಹಾರಾಷ್ಟ್ರ ಬ್ಯಾಂಕ್ ಕಾರ್ ಲೋನ್ ಬಡ್ಡಿದರ 8.8% ಇಂದ 13% ವರೆಗೆ ಸಾಲ ಬಡ್ಡಿ ಚಾರ್ಜ್ ಮಾಡಲಾಗುತ್ತದೆ. ಈ ಬಡ್ಡಿ ದರಗಳು ನಿರ್ಣಯವಾಗುವುದು ಅವರವರ ಸಿಬಿಲ್ ಸ್ಕೋರ್ (CIBIL Score) ಅಥವಾ ಕ್ರೆಡಿಟ್ ಸ್ಕೋರ್ ಆಧರಿಸಿ ಮಾಡಲಾಗುತ್ತದೆ. ಅವಧಿ ಒಳಗಡೆ ಸಾಲ ಮರುಪಾವತಿಸಿದರೆ ಯಾವುದೇ ದಂಡನ ಶುಲ್ಕ ಇರುವುದಿಲ್ಲ

ಎಚ್ ಡಿ ಎಫ್ ಸಿ ಬ್ಯಾಂಕಿನ ಇವಿ ಕಾರ್ ಲೋನ್ ಮಾಹಿತಿ (Electric Vehicle Loans By HDFC Bank)

  • ವೇತನ ಪಡೆಯುವ ಅಭ್ಯರ್ಥಿಗಳು ಈ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು
  • ವಯೋಮಿತಿ 21ರಿಂದ 60 ವರ್ಷ
  • ಸ್ವಉದ್ಯೋಗಿಗಳು ಸಹ ಅರ್ಜಿ ಸಲ್ಲಿಸಬಹುದು ಇವರಿಗೆ ವಯೋಮಿತಿ 21ರಿಂದ 65 ವರ್ಷ
  • ಪಾರ್ಟ್ನರ್ಶಿಪ್ ಸಂಸ್ಥೆಗಳು ಅಥವಾ ಪಬ್ಲಿಕ್ ಪ್ರೈವೇಟ್ ಸಂಸ್ಥೆಗಳು ಅಥವಾ ಇನ್ಯಾವುದೇ ಟ್ರಸ್ಟ್ ಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಬ್ಯಾಂಕುಗಳು ಮರುಪಾವತಿ ಅವಧಿಯನ್ನು 12 ತಿಂಗಳಿಂದ 96 ತಿಂಗಳವರೆಗೆ ನೀಡುತ್ತವೆ.

 ಸಾಮಾನ್ಯವಾಗಿ Electric Vehicle Loans ಗೆ ಬೇಕಾಗಿರುವ ದಾಖಲೆಗಳು

ಕೆ ವೈ ಸಿ ಐಡೆಂಟಿಟಿ ಅಡ್ರೆಸ್ ಪ್ರೂಫ್ (KYC Identity Proof)  

ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

ಸ್ಯಾಲರಿ ಸ್ಲಿಪ್

ಇನ್ಕಮ್ ಸರ್ಟಿಫಿಕೇಟ್

ಪಿ ಅಂಡ್ ಎಲ್ ಸ್ಟೇಟ್ಮೆಂಟ್

ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಸ್ಟೇಟ್ಮೆಂಟ್ ಇತ್ಯಾದಿಯಾಗಿ ಬೇಕಾಗುತ್ತದೆ.

ಈ ಎಲ್ಲಾ ಮಾಹಿತಿಗಳು ಇದ್ರೆ, ಮೇಲೆ ತಿಳಿಸಲಾಗಿರುವ ಯಾವುದೇ ಬ್ಯಾಂಕ್ ನಲ್ಲಿ ಸುಲಭ ಸಾಲ ಪಡೆಯಬಹುದು. ಇಲೆಕ್ತ್ರಿಕ್ ಮಾಹನ ಖರೀದಿಯ ಮೇಲೆ ಸಾಲ Electric Vehicle Loans ವನ್ನು ಈಗ ಆಕರ್ಷಕ ಬಡ್ದಿದರದೊಂದಿಗೆ ನೀಡಲಾಗುತ್ತಿದೆ. ಕೂಡಲೇ ಇದರ ಪ್ರಯೋಜನ ಪಡೆದುಕೊಳ್ಳಿ.

Comments are closed.