Best LIC policy: LIC ಯ ಈ 10 ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಮಿಲೇನಿಯರ್ ಆಗೋದ್ರಲ್ಲಿ ನೋ ಡೌಟ್!

Best LIC policy: ಜೀವನದ ಅನಿಶ್ಚಿತತೆಗಳು ಕೆಲವೊಂದು ಸಲ ನಮ್ಮ ಆರ್ಥಿಕ ವ್ಯವಸ್ಥೆಯ (Financial System) ಮೇಲೆ ಅತಿ ಕೆಟ್ಟ ಪ್ರಭಾವವನ್ನು ಬೀರುತ್ತದೆ ಜೀವನವೆಂಬುದು ಒಂದು ನಿರಂತರ ಸವಾಲುಗಳ ಸರಮಾಲೆ ಆದರೂ ಇಂತಹ ಕ್ಲಿಷ್ಟ ಸಂದರ್ಭಗಳಲ್ಲಿ ಮತ್ತು ಆ ಸಂದರ್ಭಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಆರ್ಥಿಕ ಅಪಾಯಗಳನ್ನು ಎದುರಿಸುವಲ್ಲಿ ಧೈರ್ಯವನ್ನು ನೀಡಬಲ್ಲ ಕೆಲವು ಯೋಜನೆಗಳನ್ನು 224ನೇ ಇಸವಿಗೆ ಎಲ್ಐಸಿ ಅಥವಾ ಲೈಫ್ ಕಾರ್ಪೊರೇಷನ್ ಆಫ್ ಇಂಡಿಯಾ (Best LIC policy) ಇವರು ಪರಿಚಯಿಸಿದ್ದಾರೆ.

Introducing Best LIC policy of 2024, invest and get good return, how to invest here are the details.

  1. ಎಲ್ಐಸಿ ನ್ಯೂ ಜೀವನ್ ಆನಂದ್: (Best LIC policy -Jeevan Anand)

 ಇದು ದತ್ತಿ ಯೋಜನೆಯಾಗಿದ್ದು ರಕ್ಷಣೆ ಅದರ ಜೊತೆಗೆ ಉಳಿತಾಯ ಹೀಗೆ ಎರಡು ಪ್ರಯೋಜನಗಳನ್ನು ಪೂರೈಸಲು ವಿನ್ಯಾಸಗೊಂಡಿರುವಂತಹ ಪಾಲಿಸಿ ಆಗಿರುತ್ತದೆ. ಪಾಲಿಸಿದಾರರು ಮೃತಪಟ್ಟರೆ ಅವರ ಕುಟುಂಬದ ಆರ್ಥಿಕ ರಕ್ಷಣೆಯ ಜವಾಬ್ದಾರಿಯನ್ನು ನೀಡುತ್ತದೆ. ಇನ್ನು ಪಾಲಿಸಿ, ಮೆಚೂರ್ ಆಗುವವರೆಗೆ ಪಾಲಿಸಿದಾರನು ಬದುಕಿದ್ದರೆ ಅವನಿಗೆ ದೊಡ್ಡ ಮೊತ್ತವು ಒಮ್ಮೆಗೆ ಸಿಗುತ್ತದೆ. ಪಾಲಿಸಿಗೆ ನಿಗದಿತ ಒಂದು ಪ್ರಮಾಣದ ಬೋನಸ್ಸು ಸಹ ನೀಡಲಾಗುತ್ತದೆ.

ಈ ಬ್ಯಾಂಕ್ ನಲ್ಲಿ ಎಷ್ಟು ಬಡ್ದಿದರಕ್ಕೆ ವಯಕ್ತಿಕ ಸಾಲ ಸಿಗುತ್ತೆ ಗೊತ್ತಾ? ಅಪ್ಲೈ ಮಾಡುವುದಕ್ಕೂ ಮೊದಲು ಬಡ್ಡಿದರ ತಿಳಿದುಕೊಳ್ಳಿ!

ಇನ್ನು ಈ ಪಾಲಿಸಿಯಡಿಯಲ್ಲಿ ವಾಹನ ಸವಾರರಿಗೆ ಕೆಲವು ಸಂದರ್ಭಗಳಲ್ಲಿ ಆಕ್ಸಿಡೆಂಟಲ್ ಡೆತ್ ಅಥವಾ ಅಂಗವಕಲ್ಯಾ ಆದ ಸಂದರ್ಭದಲ್ಲಿ ಈ ಪಾಲಿಸಿಯು ಸಹಾಯವನ್ನು ನೀಡುತ್ತದೆ

2. ಎಲ್ಐಸಿ ಟೆಕ್ ಟರ್ಮ್ – (Best LIC policy – Tech Term). ಈ ಪಾಲಿಸಿಯು ಅಪಾಯದ ವಿರುದ್ಧ ವಿಮಾ ರಕ್ಷಣೆಯನ್ನು ನೀಡುವ ಪಾಲಿಸಿಯಾಗಿರುತ್ತದೆ ಈ ಪಾಲಿಸಿಯಲ್ಲಿ ಪಾಲಿಸಿದ್ದಾರ ಮರಣ ಹೊಂದಿದಾಗ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡುವ ಪಾಲಿಸಿ ಇದಾಗಿರುತ್ತದೆ.

ಇದರ ವಿಶೇಷತೆ ಏನೆಂದರೆ ಪಾಲಿಸಿದಾರರ ಮರಣದ ನಂತರ ಒಮ್ಮೆಗೆ ಎಲ್ಲಾ ವೀಮಾ ಮೊತ್ತವನ್ನು ಪಡೆಯುವ ಬದಲು ಅವರ ನಾಮಿನಿಗೆ ಕಂತು ಕಂತುಗಳಲ್ಲಿ ಸ್ವೀಕರಿಸುವ ಆಯ್ಕೆಯನ್ನು ಈ ಯೋಜನೆಯಲ್ಲಿ ಎಲ್ಐಸಿ ಕೊಟ್ಟಿದೆ. ಈ ಯೋಜನೆಯ ಜೊತೆ ಎಲ್ಐಸಿಯ ಆಕ್ಸಿಡೆಂಟಲ್ ಬೆನಿಫಿಟ್ ಇರುವಂತಹ ಯಾವುದಾದರೂ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ಇದರ ಜೊತೆಗೆ ಅದನ್ನು ಸಹ ನಾಮಿನಿಗೆ ಪಡೆದುಕೊಳ್ಳುವ ಅವಕಾಶ ಇದೆ.

3. ಎಲ್ಐಸಿ ನ್ಯೂ ಎಂಡೋಮೆಂಟ್ ಪ್ಲಸ್ (Best LIC policy – Endowment Plus)

ಇದು ಯೂನಿಟ್ ಲಿಂಕ್ ಎಂಡೋಮೆಂಟ್ ಯೋಜನೆಯಾಗಿದ್ದು ಈ ಯೋಜನೆಯ ನಿಮ್ಮ ಹಣವನ್ನು ಬೇರೆ ಬೇರೆ ಹೂಡಿಕೆಗಳಲ್ಲಿ ಆಯ್ಕೆ ಮಾಡಿ ತೊಡಗಿಸಿ ಅದರ ಪ್ರಯೋಜನದ ಜೊತೆಗೆ ವಿಮೆಯ ಪ್ರಯೋಜನವನ್ನು ಸಹ ನೀಡುವ ಯೋಜನೆ ಆಗಿದೆ. ಇದು ಮುಖ್ಯವಾಗಿ ಉಳಿತಾಯ ಹೆಚ್ಚಿಸುವ ಸಲುವಾಗಿ ಪಾಲಿಸಿದಾರರು ಯೋಚಿಸಬಹುದಾದ ಯೋಜನೆ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಪ್ರೀಮಿಯಂ ಅನ್ನು ನೀವು ಹೇಗೆ ಬೇಕು ಹಾಗೆ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ವಾರ್ಷಿಕ ಅರ್ಧವಾರ್ಷಿಕ ಕಾಲು ವಾರ್ಷಿಕ ಅಥವಾ ಪ್ರತಿ ತಿಂಗಳು ಹೇಗೆ ಬೇಕೋ ಹಾಗೆ ಆಯ್ಕೆ ಮಾಡಿಕೊಳ್ಳಬಹುದು ಈ ಪಾಲಿಸಿಯಲ್ಲಿ ಕೂಡ ಪಾಲಿಸಿದರನ್ನು ಪಾಲಿಸಿಯನ್ನು ಮಾಡಿದ ಅವಧಿಗಿಂತ ಮೊದಲು ಮೃತ ಆಗ ಎಲ್ಲಾ ಬೆನಿಫಿಟ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಪಾಲಿಸಿಯ ಜೊತೆಗೆ ಸ್ವಲ್ಪ ಜಾಸ್ತಿ ಪ್ರೀಮಿಯಂ ಕಟ್ಟಿ ಅಪಘಾತ ವಿಮೆಯನ್ನು ಸಹ ಪಡೆದುಕೊಳ್ಳುವ ಆಯ್ಕೆ ನಿಮ್ಮ ಮುಂದಿದೆ.

4. ಎಲ್ಐಸಿ ಜೀವನ್ ಶಿರೋಮಣಿ (Best LIC policy Jeevan Shiroman)

ಈ ಪಾಲಿಸಿಯು ಹೈ ಪ್ರೊಫೈಲ್ ಆಗಿದ್ದು ಅಂದರೆ ಈ ಪಾಲಿಸಿಯಲ್ಲಿ ಸಿಗಬಹುದಾದ ಮೊತ್ತ ಒಂದು ಕೋಟಿ ರೂಪಾಯಿಗಳು ಇದಲ್ಲದೆ ಇದಕ್ಕೆ ಇನ್ನೂ ವಿವಿಧ ಬೋನಸ್ ಗಳು ಸೇರಿ ದೊಡ್ಡ ಮೊತ್ತ ಸಿಗಬಹುದಾದ ಪಾಲಿಸಿ ಇದಾಗಿರುತ್ತದೆ. ಈ ಪಾಲಿಸಿಯ ವಿಶೇಷತೆ ಏನೆಂದರೆ ಒಂದು ವೇಳೆ ಪಾಲಿಸಿದರನ್ನು ಮರಣ ಹೊಂದಿದರೆ ಅಂತಹ ಸಂದರ್ಭದಲ್ಲಿ ಎಷ್ಟು ಮೊತ್ತಕ್ಕೆ ಪಾಲಿಸಿ ಮಾಡಿರುತ್ತಾನೋ ಅದರ 25% ಹೆಚ್ಚುವರಿ ಮೊತ್ತವನ್ನು ಪಡೆಯುತ್ತಾನೆ.

5. ಎಲ್ಐಸಿ ಜೀವನ್ ಅಮರ್  (Best LIC policy – Jeevan Amar)

ಈ ಪಾಲಿಸಿ ಅಡಿಯಲ್ಲಿ ಯಾವುದೇ ಹೂಡಿಕೆಗಳಿಗೆ ಒಂದಿಸಲಾಗದ ಕೇವಲ ಜೀವನದ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾದ ಯೋಜನೆ ಇದಾಗಿರುತ್ತದೆ. ನಿಮ್ಮ ನಿಮ್ಮ ಆರ್ಥಿಕ ಶಕ್ತಿಯನ್ನು ಪರಿಗಣಿಸಿ ನಿಮಗೆ ಬೇಕಾದ ಆಯ್ಕೆಯನ್ನು ಮಾಡಿಕೊಳ್ಳುವ ಅವಕಾಶ ಈ ಯೋಜನೆ ಅಡಿ ಇರುತ್ತದೆ. ಪಾಲಿಸಿದಾರರು ಪಾಲಿಸಿಯ ಅವಧಿಯ ಮೊದಲು ಮೃತಪಟ್ಟರೆ ದೊಡ್ಡ ಪ್ರಮಾಣದ ಆರ್ಥಿಕ ಮೊತ್ತವನ್ನು ಪಡೆಯಲು ನಾಮಿನಿಯು ಈ ಯೋಜನೆಯಲ್ಲಿ ಅರ್ಹನಾಗಿರುತ್ತಾನೆ

6. ಎಲ್ಐಸಿ ನ್ಯೂ ಜೀವನ್ ಶಾಂತಿ (Best LIC policy Jeevan Shanti)

ವಿಶೇಷವಾಗಿ ಇದು ನಿವೃತ್ತಿಯ ಯೋಜನೆಯಾಗಿರುತ್ತದೆ ಅಂದರೆ ರಿಟೈರ್ಮೆಂಟ್ ಪ್ಲಾನ್ ಆಗಿರುತ್ತದೆ ಈ ಪಾಲಿಸಿಯ ಮೇಲೆ ಒಂದೇ ಸಲ ಊರಿಗೆ ಮಾಡಬೇಕಾಗುತ್ತದೆ. ವಿಮಾ ಭದ್ರತೆ ಈ ಯೋಜನೆಗೆ ಸಹ ಇರುತ್ತದೆ. ಈ ಪಾಲಿಸಿ ಅಡಿಯಲ್ಲಿ ಪಾಲಿಸಿದಾರ ಮರಣ ಹೊಂದುವವರೆಗೆ ನಿರಂತರವಾಗಿ ಆರ್ಥಿಕ ಗಳಿಕೆಯನ್ನು ಹೊಡೆಯುತ್ತಿರುತ್ತಾನೆ. ಈ ಪಾಲಿಸಿಯ ಮೇಲೆ ಪಾಲಿಸಿ ನಿಮ್ಮ ಕೈಗೆ ಸೇರಿ ಮೂರು ತಿಂಗಳಾದ ನಂತರ ಇದರ ಮೇಲೆ ಸಾಲವನ್ನು ಅಥವಾ ಲೋನ್ ಪಡೆದುಕೊಳ್ಳುವ ಅವಕಾಶ ಇದೆ

7. ಎಲ್ಐಸಿ ನ್ಯೂ ಚಿಲ್ದ್ರೆನ್ಸ್ ಮನಿ ಬ್ಯಾಕ್ ಪ್ಲಾನ್ (Best LIC policy Children’s Money-back Plan)

ಈ ಯೋಜನೆಯಲ್ಲಿ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಣ ಸಿಗಬಹುದಾದ ಯೋಜನೆ ಇದಾಗಿರುತ್ತದೆ ಅಂದರೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಮದುವೆಯ ಸಂದರ್ಭದಲ್ಲಿ ಹಣ ಪಡೆಯಬಹುದಾದಂತಹ ಪ್ಲಾನ್ ಎಲ್ಐಸಿ ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ ಆಗಿದೆ ಈ ಪಾಲಿಸಿ ಸಹ ಜೀವ ವಿಮೆಯ ಸೌಲಭ್ಯವನ್ನು ಹೊಂದಿದೆ.

8. ಎಲ್ಐಸಿ ಜೀವನ್ ಉಮಂಗ್ Best LIC policy Jeevan Umang

ಈ ಬಾರಿ ವರ್ನ ಪ್ರಮಾಣದ ಭದ್ರತೆಯನ್ನು ಜೀವನಕ್ಕೆ ಒದಗಿಸಬಹುದಾದ ಅಂತಹ ಪಾಲಿಸಿ ಆಗಿರುತ್ತದೆ ಪಾಲಿಸಿದರು ಅಕಾಲದಲ್ಲಿ ಮರಣ ಹೊಂದಿದರೆ ಅವನ ಕುಟುಂಬಕ್ಕೆ ಹಾರ್ದಿಕ ಭದ್ರತೆಯನ್ನು ನೀಡಬಹುದಾದಂತಹ ಪಾಲಿಸಿ ಇದಾಗಿರುತ್ತದೆ. ಈ ಪಾಲಿಸಿಯನ್ನು ಮಾಡಿದವರು ಸಹ ಪಾಲಿಸಿಯ ಮೇಲೆ ಸಾಲವನ್ನು ಪಡೆಯಬಹುದು ಈ ಪಾಲಿಸಿಯ ಮೇಲೆ ಡೆತ್ ಬೆನಿಫಿಟ್ ಮೆಚುರಿಟಿ ಬೆನಿಫಿಟ್ ಮತ್ತು ಅನಿವಲ್ ಸರ್ವೈವಲ್ ಬೆನಿಫಿಟ್ ಪಡೆಯಬಹುದು

9. ಎಲ್ ಸಿ ಎಸ್ಐಐಪಿ Best LIC policy – SIIP

ಯೂನಿಟ್ ಲಿಂಕ ಇನ್ಸೂರೆನ್ಸ್ ಪ್ಲಾನ್ ಇದಾಗಿದೆ. ಈ ಪಾಲಿಸಿಯಲ್ಲಿ ಸಹ ನಿಮ್ಮಿಂದ ಪಡೆದುಕೊಂಡ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅದರಿಂದ ಬಂದ ಲಾಭದ ಜೊತೆಗೆ ವಿಮೆಯ ಸೌಲಭ್ಯವನ್ನು ಹೊಂದಿರುತ್ತದೆ

10. ಎಲ್ಐಸಿ ಜೀವನ್ ಅಕ್ಷಯ್ 7 Best LIC policy – Jeevan Akshay VII

ಎಲ್ಐಸಿಐ ಪ್ಲ್ಯಾನ್ ವಾರ್ಷಿಕವಾಗಿ ಹಣ ಹೂಡಾಬಹುದಾದಂತಹ ಪ್ಲಾನ್ ಆಗಿದ್ದು ಈ ಪ್ಲಾನ್ ಅಡಿಯಲ್ಲಿ ಹೂಡಿಕೆ ಮಾಡಲು ಬೇರೆ ಬೇರೆ 10 ಅವಕಾಶಗಳು ಆಯ್ಕೆಗಳು ಇವೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮಗೆ ಪರಿಚಯವಿರುವ ಎಲ್ಐಸಿ ಏಜೆಂಟರನ್ನು ಭೇಟಿಯಾಗಿ ವಿವರವಾಗಿ ಮೇಲೆ ಹೇಳಿದ 10 ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ

Comments are closed.