FASTag: ಇದೇ ಬರುವ ಏಪ್ರಿಲ್ ನಿಂದ ಫಾಸ್ಟ್ ಟ್ಯಾಗ್ ಬಂದ್! ಬದಲಿ ವ್ಯವಸ್ಥೆ ಬಗ್ಗೆ ಸರ್ಕಾರದ ಕೊಟ್ಟ ಹೊಸ ಅಪ್ಡೇಟ್!
FASTag: ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಟೋಲ್ ಪ್ಲಾಜಗಳು (Toll Plaza) ಹೆಚ್ಚಾಗಿ ಕಂಡುಬರುತ್ತವೆ. ಇನ್ನು ಈ ಟೋಲ್ ಪ್ಲಾಜಾ ಗಳಲ್ಲಿ ಶುಲ್ಕವನ್ನು ಸಂಗ್ರಹಿಸುವ ಪದ್ಧತಿಯಿದ್ದು ಇಲ್ಲಿ ಹೆಚ್ಚು ಕಾಯಬಾರದು ಎನ್ನುವ ಕಾರಣಕ್ಕಾಗಿ ಜನರಿಗೆ ಫಾಸ್ಟ್ ಟ್ಯಾಗ್ (FASTag) ಎನ್ನುವಂತಹ ಪದ್ಧತಿಯನ್ನು ಕೂಡ ಜಾರಿಗೆ ತರಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಪದ್ಧತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್ ತಿಂಗಳಲ್ಲಿ ನಿಲ್ಲಿಸುವಂತಹ ಸಾಧ್ಯತೆ ದಟ್ಟವಾಗಿದೆ.
From april there is no FASTag system, instead of FASTag GPS Based system will activate by government
ಇನ್ನು ಈ ವ್ಯವಸ್ಥೆಯನ್ನು ತೆಗೆದುಹಾಕುತ್ತಿರುವುದಕ್ಕೆ ಒಂದು ಕಾರಣ ಎಂದರೆ ಅದು ಜಿಪಿಎಸ್ ಪದ್ಧತಿ (GPS System). ಏಪ್ರಿಲ್ ತಿಂಗಳಿಂದ ದೇಶದ ಪ್ರತಿಯೊಂದು ಕೂಡ ಕೇಂದ್ರ ಸರ್ಕಾರದ (Central Government) ದ ಆದೇಶದ ಮೇರೆಗೆ ಜಿಪಿಎಸ್ ತೆರಿಗೆ ಪದ್ಧತಿಯನ್ನು ಜಾರಿಗೆ ತರುವಂತಹ ಸಿದ್ಧತೆಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನುವಂತಹ ಮಾಹಿತಿ ಸಿಕ್ಕಿವೆ. ಈ ಕಾರಣಕ್ಕಾಗಿ ಫಾಸ್ಟ್ ಟ್ಯಾಗ್ (FASTag) ಶುಲ್ಕ ಪದ್ಧತಿಯನ್ನು ಏಪ್ರಿಲ್ ತಿಂಗಳಿನಿಂದ ತೆಗೆದು ಹಾಕಲಾಗುತ್ತದೆ ಎನ್ನುವಂತಹ ಮಾಹಿತಿ ಇದೆ.
ಇದು ನಿಜಾನಾ? ಬೇರೆ ಯಾವ ದಾಖಲೆಯೂ ಬೇಡ ಕೇವಲ ಒಂದು ಪ್ಯಾನ್ ಕಾರ್ಡ್ ತೋರಿಸಿ, 50,000 ಲೋನ್ ಪಡೆಯಿರಿ; ಎರಡು ನಿಮಿಷದ ಕೆಲಸ ಅಷ್ಟೇ!
ಕೇಂದ್ರ ಸರ್ಕಾರದ ಸಚಿವ ಆಗಿರುವಂತಹ ನಿತಿನ್ ಗಡ್ಕರಿ (Nitin Gadkari) ಅವರು ಈ ಜಿಪಿಎಸ್ ಆಧಾರಿತ ಶುಲ್ಕ ಪದ್ಧತಿಯನ್ನು ಈ ಬಾರಿಯ ಲೋಕಸಭಾ ಚುನಾವಣೆಗಿಂತ ಮುಂಚೆ ಜಾರಿಗೆ ತರಲು ಅವಿರತವಾಗಿ ಪರಿಶ್ರಮ ಪಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಯಾಕೆಂದರೆ ಲೋಕಸಭೆ ಚುನಾವಣೆ ಆಗುವುದಕ್ಕಿಂತ ಮುಂಚೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆ ಸಂದರ್ಭದಲ್ಲಿ ಯಾವುದೇ ರೀತಿಯ ಯೋಜನೆಗಳನ್ನು ಜಾರಿಗೆ ತರುವುದು ಅಥವಾ ಹೊಸ ನಿಯಮಗಳನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ (FASTag) ಬದಲು ಈ ವ್ಯವಸ್ಥೆಯನ್ನು ಜಾರಿಗೆ ತರಲು ಸಲಹೆಗಾರರನ್ನು ಕೂಡ ನೇಮಿಸಲಾಗಿದೆ.
ಫಾಸ್ಟ್ ಟ್ಯಾಗ್ (FASTag) ಇತಿಹಾಸವನ್ನು ಗಮನಿಸುವುದಾದರೆ 2021 ರಂದು ಇದು ಜಾರಿಗೆ ಬಂದಿತ್ತು. ಟೋಲ್ ಪ್ಲಾಜಗಳಿಂದ ಹೋಗುವಂತಹ ಪ್ರತಿಯೊಂದು ವಾಹನಗಳ ಮೇಲೆ ಕೂಡ ಫಾಸ್ಟ್ ಟ್ಯಾಗ್ ಇರಲೇಬೇಕು ಎಂಬುದಾಗಿ ಸರ್ಕಾರ ಕಡ್ಡಾಯ ನಿಯಮ ಹೇರಿತ್ತು. ಆದರೆ ಈಗ ಅದೇ ಫಾಸ್ಟ್ ಟ್ಯಾಗ್ ಏಪ್ರಿಲ್ ತಿಂಗಳ ನಂತರ ಕಣ್ಮರೆ ಆಗಲಿದೆ ಅಂತ ಸುದ್ದಿ ದಟ್ಟವಾಗಿ ಹರಡುತ್ತಿದೆ. GPS ಆಧಾರಿತ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಸ್ಯಾಟಲೈಟ್ ಮೂಲಕ ನೇರವಾಗಿ ನಿರ್ವಹಣೆ ಮಾಡಲಾಗುತ್ತದೆ.
ಈ ಮೂಲಕ ದೇಶದ ಹೆದ್ದಾರಿಗಳಲ್ಲಿ ಟೋಲ್ (FASTag) ಸಂಗ್ರಹ ಪ್ರಕ್ರಿಯೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವಂತಹ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಸಾಕಷ್ಟು ಅತ್ಯಾಧುನಿಕ ಹಾಗೂ ಉತ್ತಮವಾದ ರಸ್ತೆಗಳನ್ನು ಕೂಡ ನಿರ್ಮಾಣ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಪ್ರಕ್ರಿಯೆ ಜಾರಿಗೆ ಬರುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.
Comments are closed.