HSRP : HSRP ನಂಬರ್ ಪ್ಲೇಟ್ ಅಳವಡಿಕೆ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಸಿಕ್ತು ಬಿಗ್‌ ಅಪ್ಡೇಟ್!

HSRP: ನಮಸ್ಕಾರ ಸ್ನೇಹಿತರೆ ಈಗಾಗಲೇ ಸಾರಿಗೆ ಸಚಿವಾಲಯದಿಂದ ಹೊರಬಂದಿರುವಂತಹ ಘೋಷಣೆಯ ಪ್ರಕಾರ ಪ್ರತಿಯೊಬ್ಬರು ಕೂಡ ತಮ್ಮ ವಾಹನಕ್ಕೆ (HSPR) ನಂಬರ್ ಪ್ಲೇಟ್ ಅನ್ನು ಶೀಘ್ರದಲ್ಲಿ ಅಳವಡಿಸಬೇಕು ಎನ್ನುವುದಾಗಿ ಆದೇಶ ಹೊರಬಂದಿದೆ. ತಿಳಿದು ಬಂದಿರುವ ಮಾಹಿತಿ ಪ್ರಕಾರ ಫೆಬ್ರವರಿ 17ರಂದು HSPR ನಂಬರ್ ಪ್ಲೇಟ್ ಮಾಡಿಸಿಕೊಳ್ಳುವುದಕ್ಕೆ ಕೊನೆಯ ದಿನಾಂಕ ಎಂಬುದಾಗಿ ತಿಳಿದು ಬಂದಿದೆ.

Big update on HSRP last date, government new rules.

ಸದ್ಯದ ಮಟ್ಟಿಗೆ ಜನರಲ್ಲಿ ಈ ಫೆಬ್ರವರಿ 17 ಕೊನೆಯ ದಿನಾಂಕ ಎನ್ನುವುದನ್ನು ಮುಂದಕ್ಕೆ ಹಾಕುವಂತೆ ಒತ್ತಾಯ ಕೂಡ ಕೇಳಿ ಬರುತ್ತಿದೆ. ಇದರ ಬಗ್ಗೆ ಸಾರಿಗೆ ಸಚಿವ ಆಗಿರುವಂತಹ ರಾಮಲಿಂಗ ರೆಡ್ಡಿ(Ramalinga Reddy) ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ (HSPR)  ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಸಿಕೊಳ್ಳುವಂತಹ ದಿನಾಂಕವನ್ನು ಒಂದು ಬಾರಿ ಮುಂದಕ್ಕೆ ಹಾಕಿದ್ದೇವೆ. ಜನರು ಕೊನೆಯ ಸಮಯದಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಬರುತ್ತಾರೆ ಹಾಗೂ ಈ ಸಂದರ್ಭದಲ್ಲಿ ಅಪ್ಲೋಡ್ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಹೀಗಿದ್ರು ಕೂಡ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತೇನೆ ಇದಕ್ಕೆ ಇನ್ನೂ ಸಮಯ ಇದೆ ಎನ್ನುವುದಾಗಿ ಹೇಳಿದ್ದಾರೆ.

ಸಾರ್ವಜನಿಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರದ; ಖರೀದಿಸಿ ಕೇವಲ 29 ರೂ.ಗೆ ಕೆ.ಜಿ. ಅಕ್ಕಿ! ಭಾರತ್ ಅಕ್ಕಿ

(HSPR)  ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ ಫೆಬ್ರವರಿ 17 ಎನ್ನುವುದು ಕೊನೆಯ ದಿನಾಂಕವಾಗಿದ್ದು ಈ ಹಿಂದೆ ಇದ್ದ ದಿನಾಂಕವನ್ನು ಮುಂದೂಡಲಾಗಿದ್ದು ಇನ್ನು ಕೆಲವು ದಿನಗಳ ಸಮಯ ಇದೆ ಎಂಬುದಾಗಿ ರಾಮಲಿಂಗ ರೆಡ್ಡಿ ಅವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಕೊನೆಯ ಗಳಿಗೆಯಲ್ಲಿ ಅಪ್ಲೋಡ್ ಸಮಸ್ಯೆ ಉಂಟಾಗಿ ಒತ್ತಡ ಹೆಚ್ಚಾದಲ್ಲಿ ಆ ಸಂದರ್ಭದಲ್ಲಿ ಸಮಯೋಚಿತವಾಗಿರುವಂತಹ ಪರಿಹಾರವನ್ನು ನೋಡಿಕೊಳ್ಳೋಣ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸವನ್ನು ರಾಮಲಿಂಗ ರೆಡ್ಡಿ ಮಾಡಿದ್ದಾರೆ.

(HSPR) ನಂಬರ್ ಪ್ಲೇಟ್ ಪಡೆದುಕೊಳ್ಳುವ ವಿಧಾನ

1. https://transport.karnataka.gov.in/  (ಅಥವಾ www.siam.in ಲಿಂಕ್ ಕ್ಲಿಕ್ ಮಾಡಿ) ವೆಬ್ ಸೈಟ್ ನಲ್ಲಿ ನೀವು ಮೊದಲಿಗೆ ಲಾಗಿನ್ ಆಗಬೇಕಾಗಿರುತ್ತದೆ.

2. (HSPR)  ಬುಕ್ ಮಾಡಿಕೊಳ್ಳುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವಾಹನವನ್ನು ಆಯ್ಕೆ ಮಾಡಬೇಕಾಗಿರುತ್ತದೆ.

3. ನಿಮ್ಮ ವಾಹನ ಯಾವ ಕ್ಯಾಟಗರಿಯಲ್ಲಿ ಬರುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಿದ ನಂತರ ನಿಮ್ಮ ಹತ್ತಿರ ಇರುವಂತಹ ಶೋರೂಮ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ.

4. ನಿಗದಿಪಡಿಸಲಾಗಿರುವಂತಹ ಶುಲ್ಕವನ್ನು ಪಾವತಿ ಮಾಡಿದ ನಂತರ (HSPR)  ನಂಬರ್ ಪ್ಲೇಟ್ ಅಳವಡಿಸಲು ಮೊದಲಿಗೆ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ ಓಟಿಪಿಯನ್ನು ಸಬ್ಮಿಟ್ ಮಾಡಿ. ನಂತರ ನಂಬರ್ ಪ್ಲೇಟ್ ಅಳವಡಿಸಲು ಯಾವ ದಿನಾಂಕ ಸರಿ ಹೊಂದುತ್ತದೆ ಎನ್ನುವುದನ್ನು ಕ್ಲಿಕ್ ಮಾಡಿ ನೀವು ಈ ಪ್ರಕ್ರಿಯೆಯನ್ನು ಪೂರೈಸಿದಂತಾಗುತ್ತದೆ.

Comments are closed.