Bigg Boss:   ಮತ್ತೆ ಮನೋರಂಜನೆ ನೀಡಲು ಒಂದಾದ ಕಿಶನ್‌ ಬಿಳಗಲಿ ನಮ್ರತಾ ಗೌಡ ಜೋಡಿ; ಗಾಳಿ ಸ್ಪಲ್ಪ ಜೋರಾಗಿಯೇ ಬೀಸಿದೆ ಎಂದ ಅಭಿಮಾನಿಗಳು!

Bigg Boss:   ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ (Bigg boss) ಮುಗಿದಿದ್ದು, ಕಾರ್ತಿಕ್ ಮಹೇಶ್ ಮೊದಲನೇ ಹಾಗೂ ಡ್ರೋನ್ ಪ್ರತಾಪ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಗೆದ್ದಿರುವಂತಹ ಸ್ಪರ್ದಿಗಳಿಗಿಂತ ಹೆಚ್ಚಾಗಿ ಬೇರೆ ಸ್ಪರ್ಧಿಗಳೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರಲ್ಲಿ ವಿಶೇಷವಾಗಿ ಇವತ್ತಿನ್ನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ನಮೃತ ಗೌಡ (Namratha Gowda) ಅವರ ಬಗ್ಗೆ.

Bigg boss couple kishen bilagali and namrata dance super dance on Social Media.

ಈ ಹಿಂದೆ ಬಿಗ್ ಬಾಸ್ (Bigg boss) ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಿಶನ್ ಜೊತೆಗೆ ನಮೃತ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಡ್ಯಾನ್ಸ್ ಮಾಡಿರುವಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಹಿಂದೆ ಮಧ್ಯರಾತ್ರಿಲಿ ಹೈವೇ ರಸ್ತೆಯಲ್ಲಿ ಹಾಡಿಗೆ ಸ್ಟೆಪ್ ಹಾಕಿದ್ದ ಈ ಜೋಡಿ, ಈಗ ಪರವಶನಾದೆನು ಹಾಡಿಗೆ ಡಾನ್ಸ್ ಮಾಡುವ ಮೂಲಕ ನೆಟ್ಟಿಗರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದ್ದಾರೆ. ಈ ರೋಮ್ಯಾಂಟಿಕ್ ಹಾಡಿಗೆ ನಮೃತ ಹಾಗೂ ಕಿಶನ್ ಇಬ್ಬರ ಕೆಮಿಸ್ಟ್ರಿ ಸಕ್ಕತ್ ಆಗಿ ಮ್ಯಾಚ್ ಆಗಿದ್ದು ವಿಡಿಯೋ ಕೂಡ ಸೊಗಸಾಗಿ ಮೂಡಿ ಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕೂಡ ಕಿಶನ್ ಹಾಗೂ ನಮ್ರತಾ ಗೌಡ ಇಬ್ಬರ ಡ್ಯಾನ್ಸಿಂಗ್ ವಿಡಿಯೋ ಹಲ್ಚಲ್ ಸೃಷ್ಟಿಸಿದೆ ಅಂತ ಹೇಳಬಹುದು. ಈ ವಿಡಿಯೋಗಳಲ್ಲಿ ಕಾಮೆಂಟ್ನಲ್ಲಿ ಸ್ನೇಹಿತ್ ಅವರ ಹೆಸರನ್ನು ಕೂಡ ನೆಟ್ಟಿಗರು ಸುಖಾ ಸುಮ್ಮನೆ ಎಳೆದು ತರುತ್ತಿರುವುದು ಕೂಡ ಕಂಡು ಬಂದಿದೆ. ಬಿಗ್ ಬಾಸ್ ನಲ್ಲಿ ನಡೆದಿರುವ ಸ್ಟೋರಿಯನ್ನ ಇವತ್ತಿಗೂ ಕೂಡ ಪ್ರೇಕ್ಷಕರು ಎಳೆದು ತರುತ್ತಿರುವುದು ಈ ಮೂಲಕ ಕಂಡು ಬರುತ್ತದೆ. ಇದರ ಹಿಂದೆ ಬಿಗ್ ಬಾಸ್ (Bigg boss) ನಲ್ಲಿ ನಮೃತ ಗೌಡ ಹಾಗೂ ಸ್ನೇಹಿತ್ ಇಬ್ಬರು ಇದ್ದ ರೀತಿಯನ್ನು ನೀವು ನೆನಪಿಸಿಕೊಳ್ಳಬಹುದಾಗಿದೆ. ಬಿಗ್ ಬಾಸ್ ಮನೆಯ ಒಳಗಡೆನೆ ಸ್ನೇಹಿತ್ ಅವರ ಪ್ರೀತಿಯನ್ನು ನಮೃತ ಗೌಡ ನಿರಾಕರಿಸಿದ್ರು.

ರಶ್ಮಿಕ ಹಾಗೂ ಶೀಲೀಲಾ ಅವರನ್ನು ಇದೊಂದು ವಿಚಾರದಲ್ಲಿ ನಟಿ ಜಾಹ್ನವಿ ಮೀರಿಸುತ್ತಾರಂತೆ. ಯಾವ ವಿಚಾರದಲ್ಲಿ ಗೊತ್ತಾ?

ನಮೃತಗೌಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಗಿಣಿ 2 ಧಾರವಾಹಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರ ಪರಿಚಯದ ಹುಡುಗಿಯಾಗಿದ್ದಾರೆ. ಈ ಕಡೆ ಕಿಶನ್ ಕೂಡ ಬಿಗ್ ಬಾಸ್ (Bigg boss)  ಕನ್ನಡ ಸೀಸನ್ 7 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಪರ್ಧಿಯಾಗಿದ್ದರು. ಸಾಕಷ್ಟು ಡ್ಯಾನ್ಸಿಂಗ್ ಕಾಂಪಿಟಿಷನ್ ಕಾರ್ಯಕ್ರಮಗಳಲ್ಲಿ ಕೂಡ ಕಿಶನ್ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಚಿರಪಚಿತರಾಗಿದ್ದಾರೆ. ಈ ಜೋಡಿಯ ಡ್ಯಾನ್ಸಿಂಗ್ ಸ್ಕಿಲ್ ನೋಡಿದ ನಂತರ ನಿಮಗೇನು ಅನ್ನಿಸಿತು ಅನ್ನೋದನ್ನ ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.