Bank: ಬ್ಯಾಂಕ್ ನಲ್ಲಿ ಇಡುವ ಹಣಕ್ಕೂ ಶಾಕ್ ಕೊಟ್ಟ RBI- ಇಷ್ಟು ಹಣ ಇಟ್ಟರೆ, ತೆಗೆದರೆ ಬೀಳುತ್ತದೆ ಟ್ಯಾಕ್ಸ್. ಎಷ್ಟು ಗೊತ್ತೇ??

Bank: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ದುಡಿಮೆಯ ಹಣವನ್ನು ಉಳಿತಾಯ ಮಾಡುವಾಗ ಬ್ಯಾಂಕಿ (Bank) ನಲ್ಲಿ ಖಾತೆಯನ್ನು ಮಾಡಿ ಅದರಲ್ಲಿ ಹಣವನ್ನು ಠೇವಣಿ ಇಡುತ್ತಾರೆ. ಇನ್ನು ಈಗ ಜಾರಿಗೆ ಬಂದಿರುವಂತಹ ಹೊಸ ನಿಯಮಗಳ ಪ್ರಕಾರ ನೀವು ಕೆಲವೊಂದು ಮಿತಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಬೇಕು ಎನ್ನುವುದಾಗಿ ನಿರ್ಧರಿಸಿದರೆ ಆ ಸಂದರ್ಭದಲ್ಲಿ ನೀವು ಹೆಚ್ಚಿನ ತೆರಿಗೆಯನ್ನು ನೀಡಬೇಕಾಗಿರುತ್ತದೆ. ಬನ್ನಿ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Bank limitation of deposit money

ತೆರಿಗೆ ಇಲಾಖೆಯ ನಿಯಮ ಸೆಕ್ಷನ್ 194 N ಪ್ರಕಾರ ಒಂದು ವೇಳೆ ನೀವು ಒಂದು ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ಹಣಕ್ಕಿಂತ ಹೆಚ್ಚಿನ ಹಣವನ್ನು ನಿಮ್ಮ ಖಾತೆಯಿಂದ ಹಿಂಪಡೆದರೆ ಅದರ ಮೇಲೆ ತೆರಿಗೆಯನ್ನು ನೀಡಬೇಕಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ. ITR ಅನ್ನು ಸತತ ಮೂರು ವರ್ಷದಿಂದ ಪಾವತಿಸದೆ ಇರುವವರಿಗೆ ಈ ನಿಯಮ ಅನ್ವಯ ಆಗುತ್ತದೆ. ತೆರಿಗೆಯನ್ನು ಪಾವತಿಸುತ್ತಿರುವಂತಹ ನಾಗರಿಕರು ಒಂದು ಕೋಟಿ ರೂಪಾಯಿಗಳ ವರೆಗೂ ಕೂಡ ತೆರಿಗೆ ರಹಿತ ಹಣವನ್ನು ಹಿಂಪಡೆದುಕೊಳ್ಳಬಹುದಾಗಿದೆ.

 ಎಷ್ಟು ಹಣವನ್ನು ಕಟ್ಟಬೇಕಾಗುತ್ತೆ?

ಒಂದು ವೇಳೆ ನೀವು ಕಳೆದ ಮೂರು ವರ್ಷಗಳಿಂದ ಐ ಟಿ ಆರ್ (ITR) ಪಾವತಿಸದೆ ಹೋದಲ್ಲಿ, ಆ ಸಂದರ್ಭದಲ್ಲಿ ನೀವು ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದುಕೊಂಡರೆ ಅದರ ಮೇಲೆ ಎರಡು ಪ್ರತಿಶತ ಟಿಡಿಎಸ್ (TDS) ಟ್ಯಾಕ್ಸ್ ಅನ್ನು ಕಟ್ಟಬೇಕಾಗುತ್ತದೆ ಹಾಗೂ ಒಂದು ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದು ಕೊಂಡರೆ ಅದರ ಮೇಲೆ ಐದು ಪ್ರತಿಶತ ಟಿಡಿಎಸ್ ಟ್ಯಾಕ್ಸ್ ಅನ್ನು ಕಟ್ಟ ಬೇಕಾಗುತ್ತದೆ. ಇನ್ನು ಹೆಚ್ಚಿನ ಟ್ರಾನ್ಸಾಕ್ಷನ್ ಮೇಲೆ ಎಟಿಎಂ ನಲ್ಲಿ ಕೂಡ ಟ್ಯಾಕ್ಸ್ ಅನ್ನು ವಿಧಿಸುವಂತಹ ನಿಯಮಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ ಅದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ತಂದೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಇದೆಯಾದರೂ, ತಂದೆಯೇ ಆಸ್ತಿ ಕೊಡಲು ನಿರಾಕರಿಸಿದರೆ ಹೆಣ್ಣು ಮಗಳು ಅದನ್ನ ಪಡೆದುಕೊಳ್ಳಲು ಸಾಧ್ಯವೇ? ಏನನ್ನುತ್ತೆ ಕಾನೂನು?

ATM ಟ್ರಾನ್ಸಾಕ್ಷನ್ ಬಗ್ಗೆ ಮಾತನಾಡುವುದಾದರೆ ನಿಮ್ಮ ಬ್ಯಾಂಕಿನ ಎಟಿಎಂ (ATM) ನಿಂದ ನೀವು ಉಚಿತವಾಗಿ ಐದು ಟ್ರಾನ್ಸಾಕ್ಷನ್ ಗಳನ್ನು ಮಾಡಬಹುದಾಗಿದೆ ಹಾಗೂ ಬೇರೆ ಎಟಿಎಂ ಗಳಿಂದ ತಿಂಗಳಿಗೆ ಮೂರು ಉಚಿತ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. ಒಂದು ವೇಳೆ ನೀವು ಯಾವುದೇ ರೀತಿಯಲ್ಲಿ ಇದಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಗಳನ್ನು ಮಾಡಿದರೆ ಅದರ ಮೇಲೆ ಪ್ರತಿ ಟ್ರಾನ್ಸಾಕ್ಷನ್ ಮೇಲೆ 21 ರೂಪಾಯಿಗಳ ಶುಲ್ಕವನ್ನು ನೀವು ಕಟ್ಟಬೇಕಾಗಿರುತ್ತದೆ. ಈ ಮೂಲಕವೇ ನಿಮ್ಮ ಟ್ರಾನ್ಸಾಕ್ಷನ್ ಪ್ರಕ್ರಿಯೆಗಳು ನಡೆಯಲಿವೆ. ಇನ್ನು ಮುಂದೆ ನೀವು ಟ್ಯಾಕ್ಸ್ ಇಲ್ಲದೆ ಹಣವನ್ನು ಬ್ಯಾಂಕಿನಿಂದ ಹಿಂಪಡೆದುಕೊಳ್ಳಬೇಕು ಎನ್ನುವುದಾದಲ್ಲಿ ಈ ಮೇಲೆ ಹೇಳಿರುವಂತಹ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ಟ್ರಾನ್ಸಾಕ್ಷನ್ ಗಳನ್ನು ಮಾಡುವುದು ಒಳ್ಳೆಯದು.

Comments are closed.