Grama One: ನಿಮ್ಮ ಊರಲ್ಲಿ ನೀವೇ ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿ ಪಡೆದು ಹಣ ಗಳಿಸಿ! ಹೇಗೆ ಆರಂಭಿಸಬಹುದು ಗೊತ್ತಾ?

Grama One: ನಮಸ್ಕಾರ ಸ್ನೇಹಿತರೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಒಂದಲ್ಲ ಒಂದು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತವೆ. ಆದರೆ ಅವುಗಳನ್ನು ನಿಜಕ್ಕೂ ಜನಸಾಮಾನ್ಯರಿಗೆ ತಲುಪಿಸುವಂತಹ ಕೆಲಸವನ್ನು ಮಾಡುವುದು ನಮ್ಮ ಊರಿನಲ್ಲಿ ಇರುವಂತಹ ಸಹಾಯ ಕೇಂದ್ರಗಳು ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳನ್ನು ಜನರು ಪಡೆಯೋದಕ್ಕೆ ಕಾರಣ ಆಗ್ತಿರೋದು ಗ್ರಾಮ ಒನ್ (Grama One), ಬೆಂಗಳೂರು ಒನ್ ಗಳಂತಹ ಸಹಾಯ ಕೇಂದ್ರಗಳು. ಇಂಥ ಕೇಂದ್ರಗಳನ್ನು ನೀವು ಕೂಡ ಪ್ರಾರಂಭಿಸುವ ಇಚ್ಚೆ ಇದ್ದರೆ ಏನೆಲ್ಲಾ ಮಾಡಬೇಕಾಗುತ್ತದೆ ಅನ್ನೋದನ್ನ ಇವತ್ತಿನ ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

How to get Grama One franchise? Here are the Details

Grama One franchise ಅರ್ಜಿ ಸಲ್ಲಿಸುವುದಕ್ಕೆ ಮೊದಲಿಗೆ ಬೇಕಾಗಿರುವ ಡಾಕ್ಯುಮೆಂಟ್ಗಳು

ಮೊದಲಿಗೆ ಪ್ರಮುಖವಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಡೀಟೇಲ್ಸ್ ನೀಡಬೇಕಾಗಿರುತ್ತದೆ. ಇದರ ಜೊತೆಗೆ ನೀವು ಪ್ರಾರಂಭ ಮಾಡಬೇಕೆರುವಂತಹ ಸ್ಥಳದ ಅವಕಾಶ ಮತ್ತು ಅದಕ್ಕೆ ಬಳಸುವಂತಹ ಉಪಕರಣಗಳು ಬೇಕಾಗಿರುತ್ತವೆ. ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಅರ್ಜಿ ಸಲ್ಲಿಸುವುದಕ್ಕೆ ಫೆಬ್ರವರಿ 15 ಕೊನೆಯ ದಿನಾಂಕ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ನಿಗದಿಪಡಿಸಿರುವಂತಹ ಈ ಸಮಯದ ಒಳಗೆ ಅರ್ಜಿ ಸಲ್ಲಿಸುವುದು ಉತ್ತಮ.

ಸರ್ಕಾರದ ಗ್ರಾಮ ಒನ್ (Grama One)  ಕೇಂದ್ರದ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತುಂಬಿ, ಕೇಳಲಾಗುವಂತಹ ಪ್ರತಿಯೊಂದು ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅಲ್ಲಿ ಕೂಡ ಕೆಲವೊಂದು ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ಗ್ರಾಮ ಒನ್ ಕೇಂದ್ರ ಬೇಕಾದಲ್ಲಿ ನಿಮಗೆ ಫ್ರಾಂಚೈಸಿಯನ್ನು ತೆರೆಯುವಂತಹ ಅವಕಾಶವನ್ನು ನೀಡಲಾಗುತ್ತದೆ. ಈ ನಿಯಮ ಹಾಗೂ ಕಂಡಿಶನ್ಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಮುಂದುವರೆಯಬೇಕಾಗಿರುತ್ತದೆ.

ಸಾರ್ವಜನಿಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರದ; ಖರೀದಿಸಿ ಕೇವಲ 29 ರೂ.ಗೆ ಕೆ.ಜಿ. ಅಕ್ಕಿ!

ಗ್ರಾಮ ಒನ್ (Grama One) ಕೇಂದ್ರಗಳು ಬೆಳಗೆ ಎಂಟರಿಂದ ರಾತ್ರಿ 8ರವರೆಗೂ ಕೂಡ ಕಾರ್ಯನಿರ್ವಹಿಸುವಂತಹ ಅವಕಾಶವನ್ನು ಹೊಂದಿರುತ್ತದೆ. ಫ್ರಾಂಚೈಸಿ ಅನ್ನು ಪಡೆದುಕೊಳ್ಳುವವರು ತಮ್ಮ ಪ್ರದೇಶದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಪಿಯುಸಿ ಡಿಪ್ಲೋಮಾ ಐಟಿಐ ಪಾಸ್ ಆಗಿರುವಂತಹ ವ್ಯಕ್ತಿಗಳು ಗ್ರಾಮ ಒನ್ (Grama One)  ಕೇಂದ್ರವನ್ನು ಪ್ರಾರಂಭಿಸಬಹುದಾಗಿದ್ದು ಒಂದರಿಂದ ಎರಡು ಲಕ್ಷ ರೂಪಾಯಿಗಳ ಹೂಡಿಕೆಯನ್ನು ಆರಂಭದಲ್ಲಿ ಮಾಡಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನೀವು ಗ್ರಾಮ ಒನ್ (Grama One)  ಕೇಂದ್ರದ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿನ ನಿಯಮಾವಳಿಗಳನ್ನು ತಿಳಿದುಕೊಳ್ಳುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಕೂಡ ಕೇಂದ್ರವನ್ನು ಪ್ರಾರಂಭಿಸಬೇಕು ಎನ್ನುವಂತಹ ಇಚ್ಛೆಯನ್ನು ಹೊಂದಿದ್ದರೆ ಬೇಕಾಗಿರುವಂತಹ ಮಾಹಿತಿ ಹಾಗೂ ಡಾಕ್ಯುಮೆಂಟ್ ಗಳನ್ನು ನೀಡಿ ಮತ್ತು ಪ್ರತಿಯೊಂದು ಅರ್ಹತೆಗಳನ್ನು ಪೂರೈಸಿದ್ದೀರಿ ಅನ್ನೋದನ್ನ ಖಚಿತಪಡಿಸಿಕೊಂಡು ಮುಂದುವರಿಯಬಹುದಾಗಿದೆ.

Comments are closed.