Darshan: ದರ್ಶನ್-ವಿಜಯಲಕ್ಷ್ಮಿ ಮದುವೆ ಆಮಂತ್ರಣ ಪತ್ರಿಕೆ ಆಯ್ತು ಸಿಕ್ಕಾಪಟ್ಟೆ ವೈರಲ್; ಇಷ್ಟಕ್ಕೂ ಪತ್ರಿಕೆಯಲ್ಲಿ ಇರುವ ಆ ಸ್ಪೆಷಲ್ ವಿಷಯ ಏನಾಗಿತ್ತು ಗೊತ್ತಾ?

Darshan: ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ರವರ ಜನ್ಮದಿನದ ಶುಭಾಶಯಗಳು ಕೋರುತ್ತಾ ಇವತ್ತಿನ ಈ ಶುಭದಿನದಂದು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತಹ ಒಂದು ವಿಚಾರದ ಬಗ್ಗೆ ಇವತ್ತಿನ ಲೇಖನಿ ಹೇಳೋದಕ್ಕೆ ಹೊರಟಿದ್ದೇವೆ. 2003 ನೇ ಇಸವಿಯ ಮೇ 19ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರು ವಿಜಯಲಕ್ಷ್ಮಿ ದರ್ಶನ್ ಅವರನ್ನು ಪ್ರೀತಿಸಿ ಮದುವೆಯಾಗಿರುತ್ತಾರೆ. ಮನೆಯವರ ಒಪ್ಪಿಗೆಯ ಮೇರೆಗೆ ಮನೆಯವರ ಮುಂದೇನೆ ಮದುವೆಯಾಗಿರುತ್ತಾರೆ.

ಇನ್ನು ವಿಶೇಷ ಎನ್ನುವ ರೀತಿಯಲ್ಲಿ ಇವರಿಬ್ಬರ ಮದುವೆ ನಡೆದಿರುವುದು ಪುಣ್ಯಸ್ಥಳ ಆಗಿರುವಂತಹ ಧರ್ಮಸ್ಥಳದಲ್ಲಿ. ದರ್ಶನ್ (Darshan)  ರವರು ಅದಾಗಲೇ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮದುವೆಗೆ ಕನ್ನಡ ಚಿತ್ರರಂಗದ ಸಾಕಷ್ಟು ದೊಡ್ಡ ಮಟ್ಟದ ಗಣ್ಯ ನಟರು ಕೂಡ ಆಗಮಿಸಿದ್ದರು. ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ಮದುವೆಯ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದನ್ನು ನಿಮಗೆ ಇವತ್ತಿನ ಲೇಖನಿಯಲ್ಲಿ ನಾವು ತೋರಿಸುತ್ತಿದ್ದೇವೆ.

ತಂದೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಇದೆಯಾದರೂ, ತಂದೆಯೇ ಆಸ್ತಿ ಕೊಡಲು ನಿರಾಕರಿಸಿದರೆ ಹೆಣ್ಣು ಮಗಳು ಅದನ್ನ ಪಡೆದುಕೊಳ್ಳಲು ಸಾಧ್ಯವೇ? ಏನನ್ನುತ್ತೆ ಕಾನೂನು?

ಈ ಮದುವೆ ಪತ್ರಿಕೆಯನ್ನು ಸರಿಯಾಗಿ ಗಮನಿಸುವುದಾದರೆ ಮೇಲ್ಭಾಗದಲ್ಲಿ ಮದುವೆಯ ಮಮತೆಯ ಕರೆಯೋಲೆ ಎಂಬುದಾಗಿ ಬರೆಯಲಾಗಿದೆ. ಕೆಳಗೆ ದಿನಾಂಕ ಹಾಗೂ ವಾರವನ್ನು ಉಲ್ಲೇಖಿಸಲಾಗಿದೆ. ನಂತರ ದರ್ಶನ್ ತೂಗುದೀಪ್ (Darshan)  ಹಾಗೂ ವಿಜಯಲಕ್ಷ್ಮಿ ಅವರ ಹೆಸರನ್ನು ಬರೆಯಲಾಗಿದೆ. ಅದಾಗಲೇ ಇವರಿಬ್ಬರೂ ಮದುವೆಯಾಗಿ ಸರಿಸುಮಾರು 21 ವರ್ಷಗಳು ಕಳೆದಿವೆ. ಇವತ್ತಿಗೂ ಕೂಡ ಸಾಕಷ್ಟು ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದು ಲವ್ ಮ್ಯಾರೇಜ್ ಅನ್ನೋ ವಿಚಾರನೆ ತಿಳಿದಿಲ್ಲ ಅಂತ ಹೇಳಬಹುದು.

ಇನ್ನು ಕನ್ನಡ ಚಿತ್ರರಂಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)  ರವರು ಕಾಲಿಟ್ಟು 25 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಕಳೆದಿದ್ದು, ನಾಯಕನಟನಾಗಿ ಪ್ರೊಡ್ಯೂಸರ್ ಆಗಿ ವಿತರಕನಾಗಿ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಡಿ ಬಾಸ್ ತಮ್ಮದೇ ಆದ ರೀತಿಯಲ್ಲಿ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವೊಂದು ಕಾಂಟ್ರವರ್ಸಿಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು ಕೂಡ ಮನಸ್ಸಿನಿಂದ ಡಿ ಬಾಸ್ ಮಗುವಿನ ತರ ಅನ್ನೋದನ್ನ ಅವರನ್ನು ಹತ್ತಿರದಿಂದ ಬಲ್ಲವರು ಹೇಳ್ತಾರೆ.

ಸ್ನೇಹಕ್ಕೆ ಜೀವ ಕೊಡುವ ಸ್ನೇಹಿತ ಅನ್ನುವ ಕಾರಣಕ್ಕಾಗಿಯೇ ಪ್ರತಿಯೊಬ್ಬ ಸ್ಯಾಂಡಲ್ವುಡ್ ಮಂದಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)  ರವರನ್ನು ಕರೆಯೋದು. ತಮ್ಮ ನೇರ ನುಡಿಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇವತ್ತಿಗೂ ಕೂಡ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿರುತ್ತಾರೆ. ಒಬ್ಬ ನಟ ಅಂತ ಹೇಳೋದಕ್ಕಿಂತ ಹೆಚ್ಚಾಗಿ ಅವರನ್ನು ಮನೆಯ ದೇವರ ರೀತಿಯಲ್ಲಿ ಪೂಜೆ ಮಾಡುವಂತಹ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳು ಕನ್ನಡ ಮಣ್ಣಿನಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರಿಗೆ ಮತ್ತೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕೋರೋಣ.

Comments are closed.