Pension Scheme: 3000ರೂ. -5000ರೂ.  ಪೆನ್ಷನ್ ಸಿಗತ್ತೆ ನಿಮಗೂ; ಕೆಂದ್ರ ಸರ್ಕಾರದ ಈ ಹೊಸ ಯೋಜನೆಗೆ ಹೀಗೆ ಅಪ್ಲೈ ಮಾಡಿ!

Pension Scheme: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರಬಹುದು ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ 60 ವರ್ಷದ ನಂತರ ನಿವೃತ್ತಿಯನ್ನು ಘೋಷಿಸಲಾಗುತ್ತಿದೆ ಹಾಗೂ ಅದಾದ ನಂತರ ಅವರು ಮನೆಯಲ್ಲಿ ಕುಳಿತುಕೊಂಡು ಸಾಕು ಅವರಿಗೆ ಪೆನ್ಷನ್ (Pension Scheme) ಹಣ ಸಿಗುತ್ತದೆ. ಹೀಗಾಗಿ ನೀವು ಕೂಡ ವಯಸ್ಸಾದ ನಂತರ ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚುವ ಮುಂಚೆ ಈ ರೀತಿಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ನಿವೃತ್ತಿ ಜೀವನವನ್ನು ನೀವು ಆರ್ಥಿಕ ರೂಪದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ. ಇವತ್ತಿನ ಲೇಖನಿಯಲ್ಲಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವಂತಹ ಕೆಲವೊಂದು ಯೋಜನೆಗಳಲ್ಲಿ ಈಗಿನಿಂದಲೇ ಹೂಡಿಕೆ ಮಾಡುವ ಮೂಲಕ ಜನಸಾಮಾನ್ಯರು ಕೂಡ ನಿವೃತ್ತಿಯ ನಂತರ ಯಾವುದೇ ರೀತಿಯ ಚಿಂತೆ ಇಲ್ಲದೆ ಇರಬಹುದಾಗಿದೆ. ಬನ್ನಿ ಆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Central Government Pension Scheme for non-organized sector workers

 ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ (Pension Scheme)

ಈ ಯೋಜನೆಯಲ್ಲಿ ಅಸಂಘಟಿತವಾಗಿ ದುಡಿಯುವಂತಹ ಕಾರ್ಮಿಕರು ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಇದರ ಮೂಲಕ ಅವರು ತಮ್ಮ ನಿವೃತ್ತಿ ಜೀವನವನ್ನು ಉತ್ತಮವಾಗಿ ಕಳೆಯಬಹುದು.

ಇನ್ನು 6 ತಿಂಗಳು ಇವರು ಆಡಿದ್ದೇ ಆಟ- ಶನಿ ದೇವನೇ ಬೆಂಬಲಕ್ಕೆ ನಿಲ್ಲಲಿದ್ದಾನೆ. ಮುಟ್ಟಿದೆಲ್ಲಾ ಚಿನ್ನ, ಅಡ್ಡ ಬಂದೋರು ಉಡೀಸ್.

 ಪ್ರಧಾನ ಮಂತ್ರಿ ಕರ್ಮ ಯೋಗಿ ಮನ್ ಧನ್ ಯೋಜನೆ (Pension Scheme)

ಸಣ್ಣಪುಟ್ಟ ಪ್ರಮಾಣದಲ್ಲಿ ವ್ಯಾಪಾರ ವ್ಯವಹಾರವನ್ನು ನಡೆಸುವಂತಹ ಜನರು ಪ್ರಧಾನ ಮಂತ್ರಿ ಕರ್ಮ ಯೋಗಿ ಮನ್ ಧನ್ ಯೋಜನೆ ಅಡಿಯಲ್ಲಿ ಹಣವನ್ನು ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದಾಗಿದೆ.

 ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ (Pension Scheme)

ನಮ್ಮ ದೇಶದ ಬೆನ್ನೆಲುಬು ಆಗಿರುವಂತಹ ರೈತರು ಈ ವಿಶೇಷವಾದ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ವೃದ್ಧಾಪ್ಯದಲ್ಲಿ ತಮ್ಮ ಆರ್ಥಿಕ ಸೌಲತ್ತುಗಳನ್ನು ಸರಿ ರೂಪದಲ್ಲಿ ನಿರ್ಧರಿಸಿಕೊಳ್ಳಬಹುದಾಗಿದೆ.

 ಅಟಲ್ ಪೆನ್ಷನ್ ಯೋಜನೆ (Pension Scheme)

ತಿಂಗಳಿಗೆ 15 ಸಾವಿರ ರೂಪಾಯಿಗಳ ಸಂಭಾವನೆಯನ್ನು ಹೊಂದಿರುವಂತಹ ಯಾರು ಬೇಕಾದರೂ ಕೂಡ ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.

18 ರಿಂದ 40 ವರ್ಷಗಳ ನಡುವೆ ಇರುವಂತಹ ಯಾರು ಬೇಕಾದರೂ ಕೂಡ ಈ ನಾಲ್ಕು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಮೊದಲ ಮೂರು ಯೋಜನೆಗಳಲ್ಲಿ ಯಾರು 60 ವರ್ಷದವರೆಗೆ ಹಣವನ್ನು ಹೂಡಿಕೆ ಮಾಡುತ್ತಾರೆ ಅವರಿಗೆ ಅರವತ್ತು ವರ್ಷದ ನಂತರ ಪ್ರತಿ ತಿಂಗಳಿಗೆ 3000 ಗಳಂತೆ ಹಣ ದೊರೆಯುತ್ತದೆ. ಒಂದು ವೇಳೆ ಅವರು ಮರಣ ಹೊಂದಿದರೆ ಅದರ ಅರ್ಧದಷ್ಟು ಅಂದರೆ 1,500 ಪ್ರತಿ ತಿಂಗಳಿಗೆ ಅವರ ಪತ್ನಿ ಅಥವಾ ಕುಟುಂಬಸ್ಥರಿಗೆ ದೊರಕುತ್ತದೆ. ಯಾರು ನಾಮಿನಿ ಹಾಕಿರುತ್ತಾರೆ ಅವರಿಗೆ ಸೇರುತ್ತದೆ.

 18ನೇ ವಯಸ್ಸಿನಿಂದ ನೀವು ಪ್ರತಿ ತಿಂಗಳು 55 ರೂಪಾಯಿಗಳ ಹೂಡಿಕೆ ಮಾಡಿದರೆ ಅದಕ್ಕೆ 55 ರೂಪಾಯಿಗಳನ್ನು ಸರ್ಕಾರ ಹೂಡಿಕೆ ಮಾಡುತ್ತದೆ ಅಂದರೆ ಒಟ್ಟಾರೆಯಾಗಿ ನಿಮ್ಮ ತಿಂಗಳ ಹೂಡಿಕೆ 110 ಆಗಿರುತ್ತದೆ. ವಯಸ್ಸಿನ ಆಧಾರದ ಮೇಲೆ ಹೆಚ್ಚುತ್ತಾ ಹೋದಂತೆ ಪ್ರೀಮಿಯಂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ಅಟಲ್ ಪೆನ್ಷನ್ ಯೋಜನೆ ಬಗ್ಗೆ ಮಾತನಾಡುವುದಾದರೆ ಇದು ಕೂಡ 60 ವರ್ಷಗಳ ಒಳಗೆ ನೀವು ಮಾಡಬೇಕಾಗಿರುವಂತಹ ಹೂಡಿಕೆಯಾಗಿದೆ. ಒಂದು ವೇಳೆ ಮರಣ ಹೊಂದಿದರೆ ಅಷ್ಟರವರೆಗೆ ಅವರು ಕಟ್ಟಿರುವಂತಹ ಹಣ ಎಷ್ಟಾಗಿದೆ ಹಾಗೂ ಅದರ ಮೇಲೆ ಎಷ್ಟು ಬಡ್ಡಿ ಸಿಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಅವರ ನಾಮಿನಿಗೆ ನೀಡಲಾಗುತ್ತದೆ. ಈ ನಾಲ್ಕು ಯೋಜನೆಗಳನ್ನು ಕೂಡ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ ಇಲ್ಲವೇ ಹತ್ತಿರದಲ್ಲಿರುವ CSC ಸೆಂಟರ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

 ಬೇಕಾಗುವ ಡಾಕ್ಯುಮೆಂಟ್ಗಳು ( Needed Documents for Pension Scheme)

1. ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಡೀಟೇಲ್ಸ್ ಗಳನ್ನು ನೀವು ನೀಡಬೇಕಾಗಿರುತ್ತದೆ.

2. ನಿಮ್ಮ ಯೋಜನೆಗೆ ನಾಮಿನಿ ಆಗಿರುವಂತಹ ವ್ಯಕ್ತಿಗಳ ವಿವರದ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಒದಗಿಸಬೇಕಾಗಿರುತ್ತದೆ ‌

ಈ ಮೂಲಕ ನೀವು ಈ ನಾಲ್ಕು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ನಿವೃತ್ತಿ ಜೀವನವನ್ನು ಸರಿಯಾದ ರೀತಿಯಲ್ಲಿ ಜೀವಿಸಬಹುದಾಗಿದೆ.

Comments are closed.