Pradhan Mantri Awas Yojana: ಮೋದಿ ಸರ್ಕಾರದಿಂದ ಪ್ರತಿಯೊಬ್ಬರಿಗೂ ಸಿಗುತ್ತೆ 3 ಲಕ್ಷ ರೂಪಾಯಿಗಳವರೆಗೂ ಉಚಿತ ಹಣ ಹಾಗೂ 12 ಲಕ್ಷ ರೂಪಾಯಿಗಳ ವರೆಗೆ ಸಾಲ; ಅಪ್ಲೈ ಮಾಡೋ ಡೈರೆಕ್ಟ್ ಲಿಂಕ್ ಇಲ್ಲಿದೆ!

Pradhan Mantri Awas Yojana: ನಮಸ್ಕಾರ ಸ್ನೇಹಿತರೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಬಡವರಿಗೆ ಹಾಗೂ ಜನಸಾಮಾನ್ಯರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿದ್ದು ಇದರಿಂದಾಗಿ ಸಾಕಷ್ಟು ಜನರು ತಮ್ಮ ಬದುಕನ್ನು ಕೂಡ ಕಟ್ಟಿಕೊಂಡಿದ್ದಾರೆ. ಮಾತನಾಡಲು ಹೊರಟಿರೋದು ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana). ಈ ಯೋಜನೆ ಪ್ರಾರಂಭವಾಗಿ ಸಾಕಷ್ಟು ದಿನಗಳೇ ಕಳೆದಿದ್ದರೂ ಕೂಡ ಸಾಕಷ್ಟು ಜನರಿಗೆ ಇದರ ಸಂಪೂರ್ಣ ಮಾಹಿತಿ ತಿಳಿದಿಲ್ಲ. ಸ್ನೇಹಿತರೆ ಈ ಯೋಜನೆ ಅಡಿಯಲ್ಲಿ ನೀವು 12 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಅದರಲ್ಲಿ 3 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ಕೂಡ ನೀವು ರಿಯಾಯಿತಿ ರೂಪದಲ್ಲಿ ಪಡೆದುಕೊಳ್ಳಬಹುದು. ಬನ್ನಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ.

ಈ ಯೋಜನೆಯನ್ನು ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಯ ಅಧಿಕೃತ ವೆಬ್ಸೈಟ್ನಲ್ಲಿ ಕೂಡ ಅರ್ಜಿ ಹಾಕುವ ಮೂಲಕ ಪಡೆದುಕೊಳ್ಳಬಹುದು ಇಲ್ಲವೇ ನಿಮ್ಮ ಹತ್ತಿರದ ಬ್ಯಾಂಕಿನಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಕೂಡ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಬೇಕಾಗುವಂತಹ ಡಾಕ್ಯುಮೆಂಟ್ಗಳ ಬಗ್ಗೆ ಮಾತನಾಡುವುದಾದರೆ ಅಡ್ರೆಸ್ ಪ್ರೂಫ್ ಅನ್ನು ನೀಡುವಂತಹ ಆಧಾರ್ ಕಾರ್ಡ್, ಪಾನ್ ಕಾರ್ಡ್ ಬೇಕಾಗಿರುತ್ತದೆ. ಇದರ ಜೊತೆಗೆ ನಿಮ್ಮ ಆದಾಯದ ಪ್ರೂಫ್ ಅಂದ್ರೆ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಸಂಬಳವನ್ನು ಪಡೆದುಕೊಳ್ಳುತ್ತಿದ್ದೀರಿ ಎಂದಾದರೆ ಸ್ಯಾಲರಿ ಸ್ಲಿಪ್ಪನ್ನು ನೀಡಬೇಕಾಗಿರುತ್ತದೆ.

 ಪ್ರಧಾನಮಂತ್ರಿ ಆವಾಸ್ ಯೋಜನೆ

ಒಂದು ವೇಳೆ ಯಾರಾದ್ರೂ ಮನೆ ಕಟ್ಟುವಂತಹ ಯೋಜನೆಗೆ ಕೈ ಹಾಕಿದ್ರೆ ಅವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಅಂದರೆ ಬಡವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ಯೋಜನೆಯ ಮೂಲಕ 12 ಲಕ್ಷ ರೂಪಾಯಿಗಳವರೆಗೆ ಸಾಲ ಸಿಗುತ್ತದೆ ಹಾಗೂ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಕೂಡ ದೊರಕುತ್ತದೆ. ಇನ್ಮುಂದೆ ಮನೆ ಕಟ್ಟುವುದಕ್ಕಾಗಿ ನೀವು, ದೊಡ್ಡ ಮಟ್ಟದ ಬಡ್ಡಿಯನ್ನು ತೆಗೆದುಕೊಳ್ಳುವಂತಹ ಬ್ಯಾಂಕುಗಳ ಸಾಲಕ್ಕೆ ಮೊರೆ ಹೋಗಬೇಕಾದ ಅಗತ್ಯವಿಲ್ಲ ಎಂಬುದಾಗಿ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ಊರಲ್ಲಿ ನೀವೇ ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿ ಪಡೆದು ಹಣ ಗಳಿಸಿ! ಹೇಗೆ ಆರಂಭಿಸಬಹುದು ಗೊತ್ತಾ?

ಬ್ಯಾಂಕಿನಿಂದ ಅರ್ಜಿ ಫಾರ್ಮ್ ಅನ್ನು ತೆಗೆದುಕೊಂಡು ಅದಕ್ಕೆ ಸರಿಯಾದ ರೀತಿಯಲ್ಲಿ ವಿವರವನ್ನು ತುಂಬಿಸಿ ಈಗಾಗಲೇ ಈ ಮೇಲೆ ಹೇಳಿರುವಂತಹ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಿ ಬ್ಯಾಂಕಿಗೆ ನೀಡಿದರೆ, ನೀವು 12 ಲಕ್ಷ ರೂಪಾಯಿಗಳವರೆಗೂ ಸಾಲವನ್ನು ನಿಮ್ಮ ಮನೆಯ ಕಟ್ಟುವಿಕೆಯ ಮೇಲೆ ಪಡೆದುಕೊಳ್ಳಬಹುದಾಗಿದೆ ಹಾಗೂ ಒಂದು ವೇಳೆ ನೀವು 12 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆದುಕೊಂಡರೆ ಅದರಲ್ಲಿ ಕೇವಲ 9 ಲಕ್ಷ ರುಪಾಯಿಗಳನ್ನು ಮಾತ್ರ ನೀವು ಕಟ್ಟಿದರೆ ಸಾಕಾಗಿರುತ್ತದೆ.

ಇನ್ನು ಒಂದು ವೇಳೆ ನೀವು ಒಂದು ವರ್ಷಕ್ಕೆ 3 ಲಕ್ಷ ರೂಪಾಯಿಗಳವರೆಗೆ ಹಣವನ್ನು ದುಡಿಯುತ್ತಿದ್ದೀರಿ ಎಂದಾದರೆ ನಿಮಗೆ 6 ಲಕ್ಷ ರೂಪಾಯಿಗಳವರೆಗೆ ಈ ಯೋಜನೆ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ. ಇದನ್ನು ಮರುಪಾವತಿ ಮಾಡುವುದಕ್ಕೆ 20 ವರ್ಷಗಳ ಸಮಯವನ್ನು ನೀಡಲಾಗುತ್ತದೆ. ವಾರ್ಷಿಕ 9 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಇನ್ನು 6 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳುವವರಿಗೆ 2.60 ಲಕ್ಷ ರೂಪಾಯಿಗಳ ಆಸ್ಪಾಸಿನಲ್ಲಿ ಸಬ್ಸಿಡಿ ದೊರಕುತ್ತದೆ. ಇನ್ನು ಎರಡನೇದಾಗಿ 6 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ದುಡಿಯುವವರು ಎರಡನೇ ವರ್ಗಕ್ಕೆ ಸೇರುತ್ತಾರೆ. ಇವರಿಗೂ ಕೂಡ ಮೊದಲನೇ ವರ್ಗದಷ್ಟೇ ಸಾಲ ಹಾಗೂ ಸಬ್ಸಿಡಿ ದೊರಕುತ್ತದೆ.

 ಮೂರನೇ ವರ್ಗ ವಾರ್ಷಿಕವಾಗಿ 12 ಲಕ್ಷ ರೂಪಾಯಿ ಆದಾಯವನ್ನು ಪಡೆದುಕೊಳ್ಳುವವರಾಗಿರುತ್ತಾರೆ. ಇದರಲ್ಲಿ 9 ಲಕ್ಷ ರೂಪಾಯಿಗಳವರೆಗೆ ಲೋನ್ (Loan) ನೀಡಲಾಗುತ್ತದೆ ಹಾಗೂ ಸಬ್ಸಿಡಿ (Subsidy)  2.35 ಲಕ್ಷ ರೂಪಾಯಿ ಆಗಿರುತ್ತದೆ. ನಾಲ್ಕನೇ ವರ್ಗದಲ್ಲಿ ವಾರ್ಷಿಕವಾಗಿ 18 ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿರುವವರಾಗಿರುತ್ತಾರೆ. ನಿಮಗೆ 12 ಲಕ್ಷ ರೂಪಾಯಿಗಳ ವರೆಗೆ ಹೋಮ್ ಲೋನ್ ನೀಡಲಾಗುತ್ತದೆ ಹಾಗೂ ಇದರಲ್ಲಿ ಕೂಡ ಸಬ್ಸಿಡಿ 2.35 ಲಕ್ಷ ರೂಪಾಯಿಗಳವರೆಗಿರುತ್ತದೆ. ಇವರಿಗೂ ಕೂಡ 20 ವರ್ಷಗಳ ಕಾಲ ಮರುಪಾವತಿ ಮಾಡುವಂತಹ ಸಮಯವಕಾಶವನ್ನು ನೀಡಲಾಗುತ್ತದೆ.

ಇದೇ ರೀತಿ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana – Direct link) ಯ ಮೂಲಕ ನಿಮ್ಮ ಕನಸಿನ ಮನೆಯನ್ನು ಕಟ್ಟುವಂತಹ ಕೆಲಸಕ್ಕೆ ಮುನ್ನುಡಿಯನ್ನು ಹಾಡಬಹುದಾಗಿದೆ.

Comments are closed.