UPI Payments: UPI ಪೇಮೆಂಟ್ ಬೈ ಮಿಸ್ಟೇಕ್ ಆಗಿ ಬೇರೆಯವರ ಖಾತೆಗೆ ಹೋಯ್ತಾ? ನಿಮ್ಮ ಹಣ ಎಲ್ಲೂ ಹೋಗಲ್ಲ, ಹೀಗೆ ಮಾಡಿ ಹಣ ಹಿಂಪಡೆದುಕೊಳ್ಳಿ!

 UPI Payments: ನಮಸ್ಕಾರ ಸ್ನೇಹಿತರೆ ಕಳೆದ ಸಾಕಷ್ಟು ವರ್ಷಗಳಿಂದಲೂ ನಮ್ಮ ಭಾರತ ದೇಶದಲ್ಲಿ ಜನಸಾಮಾನ್ಯರ ನಡುವೆ ಹಣದ ಟ್ರಾನ್ಸಾಕ್ಷನ್ ಅತ್ಯಂತ ಸುಲಭವಾಗಿ ಬಿಟ್ಟಿದೆ ಎಂದು ಹೇಳಬಹುದು. UPI (UPI Payments) ಬಳಕೆ ಇಡೀ ವಿಶ್ವದಲ್ಲಿಯೇ ಭಾರತದಲ್ಲಿ ಹೆಚ್ಚಾಗಿದೆ ಎಂದು ಈಗಾಗಲೇ ಸಮೀಕ್ಷೆಗಳು ಕೂಡ ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನು ನೀಡಿವೆ. ಅಷ್ಟರ ಮಟ್ಟಿಗೆ ಯುಪಿಐ ಬಳಕೆಯನ್ನು ಚಿಕ್ಕ ವ್ಯಾಪಾರಿಗಳಿಂದ ಪ್ರಾರಂಭಿಸಿ ದೊಡ್ಡ ದೊಡ್ಡ ಮಾಲ್ ಅಥವಾ ಬ್ಯುಸಿನೆಸ್ ಗಳಲ್ಲಿ ಕೂಡ ಬಳಸಲಾಗುತ್ತದೆ. ಈ ಮೂಲಕ ಕ್ಯಾಶ್ ಲೆಸ್ ಟ್ರಾನ್ಸಾಕ್ಷನ್ (Cashless Transaction)  ಅನ್ನು ಸುಲಭವಾಗಿ ನೀವು ಮಾಡಬಹುದಾಗಿದೆ. ಭಾರತ ಡಿಜಿಟಲೀಕರಣಕ್ಕೆ ತೆರೆದುಕೊಂಡ ಮೇಲೆ ಯುಪಿಐ ಅತ್ಯಂತ ವೇಗವಾಗಿ ಬೆಳೆದಿದೆ ಎನ್ನಬಹುದಾಗಿದೆ.

if your UPI Payments sent to other account, how to get it back?

ಇನ್ನು ಇವುಗಳನ್ನು ಯಾರ ಖಾತೆಗೆ ಹಣವನ್ನು ಕಳಿಸಬೇಕು ಅವರ ಹತ್ತು ಫೋನ್ ನಂಬರ್ ಗಳ ಡಿಜಿಟ್ ಅನ್ನು ಹಾಕುವ ಮೂಲಕ ಅವರಿಗೆ ಹಣವನ್ನು ನೀವು ಕಳುಹಿಸಬಹುದಾಗಿದೆ. ಆದರೆ ಸರಿಯಾದ ರೀತಿಯಲ್ಲಿ 10 ನಂಬರ್ ಗಳನ್ನು ನಮೂದಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಒಂದೇ ಒಂದು ಸಂಖ್ಯೆ ಕೂಡ ಮಿಸ್ ಆದ್ರೂ ಖಂಡಿತವಾಗಿ ನೀವು ಯಾರಿಗೆ ಹಣವನ್ನು ಹಾಕಬೇಕು ಅದು ಸಂಪೂರ್ಣವಾಗಿ ಮಿಸ್ ಆಗುತ್ತದೆ. ಇದರ ಮೂಲಕ ನೀವು ಹಣವನ್ನು ಹಾಕಬೇಕಾಗಿರುವರಿಗೆ ಹಣ ತಲುಪುವುದಿಲ್ಲ ಬದಲಾಗಿ ಬೇರೆಯವರಿಗೆ ಹಣ ತಲುಪುತ್ತದೆ. ಈ ರೀತಿಯಾಗಿ ತಪ್ಪಾಗಿ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದಾಗ ಏನು ಮಾಡಬೇಕು ಅನ್ನೋದನ್ನ ಇವತ್ತಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ.

HSRP ನಂಬರ್ ಪ್ಲೇಟ್ ಅಳವಡಿಕೆ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಸಿಕ್ತು ಬಿಗ್‌ ಅಪ್ಡೇಟ್!

ಪ್ರಮುಖವಾಗಿ ನೀವು ತಪ್ಪಾಗಿ ಹಣವನ್ನು ಯಾರು ನಂಬರ್ ಗೆ ಹಾಕಿದ್ದಿರೋ ಆ ನಂಬರ್ಗೆ ಕರೆ ಮಾಡಿ ನೀವು ತಪ್ಪಾಗಿ ಹಣವನ್ನು ಹಾಕಿದ್ದೀರಿ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ. ಅದಾದ ನಂತರ ಅವರು ಬಳಿ ವಿನಯವಾಗಿ ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಳ್ಳಿ ಆಗ ಅವರು ಮಾಡಬಹುದಾಗಿದೆ. ಒಂದು ವೇಳೆ ಅವರು ಅದಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಹೋದಲ್ಲಿ ತಡಮಾಡದೆ ಕೂಡಲೇ ನಿಮ್ಮ ಬ್ಯಾಂಕಿಗೆ ಇದರ ಬಗ್ಗೆ ರಿಪೋರ್ಟ್ ಮಾಡಿ. ನೀವು ತಪ್ಪಾಗಿ ಹಣವನ್ನು ತಪ್ಪಾದ ಖಾತೆಗೆ ವರ್ಗಾವಣೆ ಮಾಡಿದ್ದೀರಿ ಅನ್ನುವಂತಹ ಪ್ರೂಫ್ ಅನ್ನು ಬ್ಯಾಂಕಿನವರಿಗೆ ನೀಡಿದರೆ ಅದನ್ನು ಕೂಡಲೇ ಅವರು ಸರಿಪಡಿಸುವಂತಹ ಸಾಧ್ಯತೆ ಇರುತ್ತದೆ.

NPCI ನ ವೆಬ್ಸೈಟ್ನಲ್ಲಿ ಕೂಡ ನೀವು ಈ ಬಗ್ಗೆ ದೂರನ್ನು ದಾಖಲು ಮಾಡಿ ಅವರಿಂದ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳುವಂತಹ ಸಾಧ್ಯತೆ ಕೂಡ ಇರುತ್ತದೆ. ಈ ವೆಬ್ಸೈಟ್ ಅನ್ನು ತೆರೆದು ಅಲ್ಲಿ ತಪ್ಪಾದ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದು ಎನ್ನುವುದನ್ನು ದಾಖಲೆಯ ಜೊತೆಗೆ ನೀಡಿ ನಿಮ್ಮ ಕಂಪ್ಲೇಂಟ್ ಅನ್ನು ರೈಸ್ ಮಾಡಬೇಕಾಗಿರುತ್ತದೆ. ಈ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ನಿಮ್ಮ ಹಣ ನಿಮ್ಮ ಖಾತೆಗೆ ಮರುವಾಪಸಾತಿ ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಪ್ರತಿಯೊಂದು ಟ್ರಾನ್ಸಾಕ್ಷನ್ ಮಾಡುವಾಗ ನೀವು ಟೈಪ್ ಮಾಡಿರುವಂತಹ 10 ನಂಬರ್ಗಳು ಸರಿಯಾಗಿವೆಯೇ ಎನ್ನುವುದನ್ನು ಸರಿಯಾದ ರೀತಿಯಲ್ಲಿ ಗಮನಿಸಿ ನಂತರ ಹಣವನ್ನು ವರ್ಗಾವಣೆ ಮಾಡುವಂತಹ ಅಭ್ಯಾಸವನ್ನು ಪ್ರಾರಂಭಿಸಿಕೊಳ್ಳಿ.

Comments are closed.