Business Tips: ವ್ಯಾಪಾರದಲ್ಲಿ ನಿಮ್ಮ ನಿರಿಕ್ಷೆಗೂ ಮೀರಿ ಹಣ ಸಂಪಾದನೆ ಆಗ್ಬೇಕಾ; ತಕ್ಷಣ ಈ ಕೆಲಸ ಮಾಡಿ!

Business Tips: ಸ್ನೇಹಿತರೆ ವ್ಯಾಪಾರ ಮಾಡುವಂತಹ ಪ್ರತಿಯೊಂದು ವ್ಯಾಪಾರಿಗಳಿಗೂ ಕೂಡ ತಾವು ಮಾಡುವಂತಹ ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಲಾಭವನ್ನು ಗಳಿಸಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಕೆಲವರು ಲಾಭ ಸಿಕ್ಕದೆ ಹೋದಲ್ಲಿ ಅಡ್ಡಮಾರ್ಗವನ್ನು ಹಿಡಿಯುವವರು ಕೂಡ ಇದ್ದಾರೆ. ಆದರೆ ಅಡ್ಡ ಮಾರ್ಗದಲ್ಲಿ ಹೋದ ಕ್ಷಣ ಲಾಭ ಸಿಗುತ್ತೆ ಅನ್ನೋದು ನಿಜಕ್ಕೂ ಕೂಡ ತಪ್ಪು ಕಲ್ಪನೆ. ಹಾಗೂ ಇದರಿಂದ ಬೇರೆಯವರಿಗೆ ನಷ್ಟ ಆದ್ರೆ ಅದರ ಪಾಪ ಸಂಪಾದನೆಯನ್ನು ಕೂಡ ನೀವು ಮಾಡಬೇಕಾಗುತ್ತದೆ.

ಅದೆಲ್ಲ ಬಿಟ್ಟು ಯೋಚಿಸುವುದಾದರೆ ಒಂದು ವೇಳೆ ನೀವು ನಿಮ್ಮ ವ್ಯಾಪಾರದಲ್ಲಿ ನಷ್ಟವನ್ನು ಹೊಂದಿದ್ದರೆ ಅದರಲ್ಲಿ ವಾಸ್ತು ಶಾಸ್ತ್ರದ ದೋಷ ಕೂಡ ಇದ್ದರೂ ಇರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಒಂದು ವೇಳೆ ನೀವು ವಾಸ್ತುದೋಷದ ಕಾರಣದಿಂದಾಗಿ ಯಾವುದಾದರೂ ವ್ಯಾಪಾರದಲ್ಲಿ ನಷ್ಟವನ್ನು ಹೊಂದುತ್ತಿದ್ದೀರಿ ಎಂದಾದರೆ ಅದನ್ನು ಲಾಭಕ್ಕೆ ಪರಿವರ್ತಿಸಲು ಕೆಲವೊಂದು ಅವಲೋಕನ ಹಾಗೂ ಕಾರ್ಯ ವೈಖರಿಯನ್ನು ಬದಲಾಯಿಸುವುದು ಅತ್ಯಂತ ಅಗತ್ಯವಿರುತ್ತದೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

 1. ಯಾವ ದಿಕ್ಕಿನಲ್ಲಿ ಕಚೇರಿ ಇರಬೇಕು

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ವ್ಯಾಪಾರದ ಕಚೇರಿಯ ಬಾಗಿಲು ಅಂದರೆ ಮುಖ್ಯ ಬಾಗಿಲು ಈಶಾನ್ಯ ಉತ್ತರ ಹಾಗೂ ನೈರುತ್ಯ ದಿಕ್ಕಿನಲ್ಲಿ ಇರುವ ರೀತಿಯಲ್ಲಿ ನೋಡಿಕೊಳ್ಳಿ. ಈ ರೀತಿ ಇಂತಹ ನಿರ್ದಿಷ್ಟ ದಿಕ್ಕಿನಲ್ಲಿ ಮುಖ್ಯವಾಗಿ ಇರುವುದರಿಂದಾಗಿ ನಿಮ್ಮ ವ್ಯಾಪಾರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲಿದೆ. ಜನರು ಕೂಡ ನಿಮ್ಮ ವ್ಯಾಪಾರದ ಕಡೆಗೆ ಸೆಳೆಯಲ್ಪಡುತ್ತಾರೆ.

 2. ಬಿಲ್ಲಿಂಗ್ ಯಾವ ಮುಖದಲ್ಲಿರಬೇಕು?

ಯಾವುದೇ ಕಾರಣಕ್ಕೂ ನೀವು ನಿಮ್ಮ ಬಿಲ್ಲಿಂಗ್ ಮಾಡುವಂತಹ ಸ್ಥಳವನ್ನು ಸುಖಾ ಸುಮ್ಮನೆ ಯಾವುದೋ ಸ್ಥಳದಲ್ಲಿ ಇಡಬಾರದು ಬದಲಾಗಿ ವಾಸು ಪ್ರಕಾರವಾಗಿ ಅದನ್ನು ಇಡಬೇಕು. ಯಾವುದೇ ಕಾರಣಕ್ಕೂ ಬಿಲ್ಲಿಂಗ್ ಮಾಡೋ ಸ್ಥಳದಲ್ಲಿ ಯಾವುದೇ ರೀತಿಯ ಕೊಳೆ ಅಥವಾ ಧೂಳು ಇರಲೇಬಾರದು. ಈ ಸ್ಥಳ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

 3. ಕೆಲಸದ ಸ್ಥಳ

ಕೆಲಸದ ಸ್ಥಳಗಳಲ್ಲಿ ವಸ್ತುಗಳು ಅಸ್ತವ್ಯಸ್ತವಾಗಿ ಹರಡುವ ಹಾಗೆ ನೋಡಿಕೊಳ್ಳಬೇಡಿ ಅವುಗಳನ್ನು ಸರಿಯಾದ ರೀತಿಯಲ್ಲಿ ಕ್ರಮದಿಂದ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲಸ ಮಾಡುವಂತಹ ಜನರಿಗೂ ಕೂಡ ಆದಷ್ಟು ಶುಚಿತ್ವದಿಂದ ಕೆಲಸ ಮಾಡುವ ಸ್ಥಳವನ್ನು ನೋಡಿಕೊಳ್ಳುವುದಕ್ಕೆ ಹೇಳಿ.

 4. ಕಚೇರಿಯ ಸ್ವಾಗತ ಸ್ಥಳ

ಎಲ್ಲಕ್ಕಿಂತ ಪ್ರಮುಖವಾಗಿ ಕಚೇರಿಯ ಸ್ವಾಗತ ಪ್ರಮುಖವಾಗಿರುತ್ತದೆ. ಯಾವುದೇ ಗ್ರಾಹಕರು ಬಂದಾಗ ಪ್ರಮುಖವಾಗಿ ಮೊದಲಿಗೆ ಬರೋದು ಇದೆ ಸ್ಥಳಕ್ಕೆ. ಹೀಗಾಗಿ ಆದಷ್ಟು ಇಲ್ಲಿ ಹೊಳೆಯುವ ವಸ್ತುಗಳನ್ನು ಅಲಂಕಾರಿಕವಾಗಿ ಇಡಬೇಕು. ಇಲ್ಲಿ ವಾಸ್ತು ಪ್ರಕಾರವೇ ಮುಖ್ಯ ದ್ವಾರವನ್ನು ಇರಿಸಬೇಕು. ಆದಷ್ಟು ಪ್ರಕಾಶಮಾನವಾದ ಬೆಳಕು ಇಲ್ಲಿ ಕಾಣುವಂತೆ ಮಾಡಬೇಕು.

 5. ಕಚೇರಿಯ ಸಮತೋಲನ

ಕಚೇರಿಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ದೋಷಗಳು ಇರಬಾರದು ಎನ್ನುವ ಕಾರಣಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವಂತಹ ಅರಳುಗಳು ಸಸ್ಯಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ನಿಮ್ಮ ಕಚೇರಿಯ ಒಳಗೆ ಇಟ್ಟುಕೊಳ್ಳಬೇಕು. ಇದರಿಂದಾಗಿ ದೋಷಗಳು ಸಂಪೂರ್ಣವಾಗಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಿರುವುದರಿಂದ ನಿಮ್ಮ ವ್ಯಾಪಾರದಲ್ಲಿ ಲಾಭ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Comments are closed.