Bhagyalakshmi Scheme: ಭಾಗ್ಯಲಕ್ಷ್ಮೀ ಬಾಂಡ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಆನ್ ಲೈನ್ ಮೂಲಕ ಸಲ್ಲಿಸಲಾದ ಒಂದು ಲಕ್ಷ ಅರ್ಜಿಗಳಿಗೆ ಬಾಂಡ್ ಸಿಗದೇ ಇದ್ದರೆ ಅರ್ಜಿ ವೇಸ್ಟ್ ಆಗುತ್ತಾ?  

Bhagyalakshmi Scheme: ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಸದ್ಯದ ಮಟ್ಟಿಗೆ ಭಾಗ್ಯಲಕ್ಷ್ಮಿ (Bhagyalakshmi Scheme) ಯೋಜನೆಯನ್ನು ಸ್ಥಗಿತಗೊಳಿಸುವಂತಹ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ ಹಾಗೂ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯನ್ನು ಕೂಡ ಮುಂದುವರಿಸಲಾಗುತ್ತಿದೆ ಎನ್ನುವಂತಹ ಹೇಳಿಕೆಯನ್ನು ನೀಡಿದ್ದಾರೆ. ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, 2006 ನೇ ಇಸವಿಯಿಂದಲೂ ಕೂಡ ಈ ಯೋಜನೆ ಬಡತನದ ರೇಖೆಗಿಂತ ಕೆಳಗಿರುವಂತಹ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ನೆರವು ನೀಡಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂಬುದಾಗಿ ಹೇಳಿದ್ದಾರೆ.

ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದು, ಎಲ್ಲೆಲ್ಲೂ ಸಾಲ ಸಿಗ್ತಿಲ್ವಾ? ಸಿಕ್ಕ ಸಾಲಕ್ಕೆ ಬಡ್ಡಿ ಹೆಚ್ಚಾ? ಈ ಒಂದು ಕೆಲಸ ಮಾಡಿ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಿ!

ಇನ್ನು ಇದು ಬಿಜೆಪಿಯ ಯೋಜನೆಯಿಂದ ಕರೆದಾಗ ಇದಕ್ಕೂ ಕೂಡ ಪ್ರತಿಕ್ರಿಯೆ ನೀಡಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದು ಕೇಂದ್ರ ಸರ್ಕಾರದ ಯೋಜನೆ ಅಲ್ಲ ಇದರಲ್ಲಿ ಮಾರ್ಪಾಡನ್ನು ತಂದಿದ್ದು ಇದು ರಾಜ್ಯ ಸರ್ಕಾರದ ಯೋಜನೆಯಾಗಿದೆ ಎಂಬುದಾಗಿ ಹೇಳಿದ್ದಾರೆ. ಆಗ ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್ ಅನ್ನು ಖರೀದಿಸಲಾಗುತ್ತಿತ್ತು ಹಾಗೂ ವರ್ಷಕ್ಕೆ ಮೂರು ಸಾವಿರ ರೀತಿಯಲ್ಲಿ 15 ವರ್ಷಕ್ಕೆ 45,000 ವರೆಗೆ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಅಡಿಯಲ್ಲಿ ಹಣವನ್ನು ಠೇವಣಿ ಇಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಮಗುವಿಗೆ 18 ವರ್ಷ ಪೂರ್ಣ ಆದ ನಂತರ 50 ಪ್ರತಿಶತದವರೆಗೂ ಕೂಡ ಹಣವನ್ನು ವಿದ್ಯಾಭ್ಯಾಸಕ್ಕಾಗಿ ವಿನೊಗಿಸಲು ಅವಕಾಶ ಮಾಡಿಕೊಡಲಾಗುತ್ತದೆ ಹಾಗೂ 21 ವರ್ಷದ ನಂತರ ಸಂಪೂರ್ಣ ಹಣವನ್ನು ಅಂದರೆ ಮದುವೆ ಕಾರ್ಯಗಳ ಉದ್ದೇಶಕ್ಕಾಗಿ ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಖಾತೆ ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Scheme) ಅಡಿಯಲ್ಲಿ ಈಗಾಗಲೇ 2006ರಿಂದ ಪ್ರಾರಂಭಿಸಿ ಇಲ್ಲಿಯವರೆಗೆ 23 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳನ್ನು ಸ್ವೀಕೃತಿಗೊಳಿಸಲಾಗಿದೆ ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಇಲ್ಲಿಯವರೆಗೂ ಸ್ವೀಕೃತಿ ಆಗಿರುವಂತಹ ಪ್ರತಿಯೊಂದು ಅರ್ಜಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂಬುದಾಗಿ ಹೇಳಿದ್ದಾರೆ. ಆನ್ಲೈನ್ ಮೂಲಕ ಸಲ್ಲಿಕೆ ಆಗಿರುವಂತಹ ಪ್ರತಿಯೊಂದು ಅರ್ಜಿಗಳನ್ನು ಕೂಡ ಈಗಾಗಲೇ ಸ್ವೀಕರಿಸಲಾಗಿದೆ ಎಂಬಂತಹ ಮಾಹಿತಿಯನ್ನು ಕೂಡ ಸಚಿವರು ಹೇಳಿಕೊಂಡಿದ್ದಾರೆ.

ಈ ಮೂಲಕ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವಂತಹ ಭಾಗ್ಯಲಕ್ಷ್ಮಿ (Bhagyalakshmi Scheme)ಯೋಜನೆಯನ್ನು ಯಾವ ರೀತಿಯಲ್ಲಿ ಪ್ರತಿಯೊಂದು ಮನೆಗೂ ತಲುಪುವ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎನ್ನುವಂತಹ ಮಾಹಿತಿಯನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ. ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಅಡಿಯಲ್ಲಿ ಯಾವ ರೀತಿಯಲ್ಲಿ ಪೋಷಕರು ತಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹಣಕಾಸಿನ ಸಹಾಯವನ್ನು ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಬಡತನದ ರೇಖೆಗಿಂತ ಕೆಳಗಿರುವಂತಹ ಕುಟುಂಬದ ಹೆಣ್ಣು ಮಕ್ಕಳು ಯಾವ ರೀತಿಯಲ್ಲಿ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು ಎನ್ನುವುದನ್ನು ಸಚಿವರು ಈ ಮೂಲಕ ಹೇಳಿಕೊಂಡಿದ್ದಾರೆ.

Comments are closed.