Money Making Tips: ದುಡ್ಡು ಡಬಲ್ ಮಾಡ್ಕೊಳ್ಳಿ; FD ಗಿಂತ ಹೆಚ್ಚಿನ ಬಡ್ಡಿ ಕೊಡುವ ಯೋಜನೆಯಿದು!

Money Making Tips: ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜನ ಉಳಿತಾಯ ಮಾಡೋದಕ್ಕಿಂತ ಹೆಚ್ಚಾಗಿ ಹಣವನ್ನು ಹೂಡಿಕೆ ಮಾಡುವುದನ್ನು ಪ್ರಾರಂಭಿಸಿದ್ದಾರೆ. ಹೂಡಿಕೆ ಮಾಡು ಸಂದರ್ಭದಲ್ಲಿ ಕೂಡ ಹೆಚ್ಚಿನ ಲಾಭವನ್ನು ನೀಡುವಂತಹ ಮತ್ತು ಹೆಚ್ಚಿನ ಸುರಕ್ಷತೆಯನ್ನು ನೀಡುವಂತಹ ಯೋಜನೆಗಳಲ್ಲಿ ಮಾತ್ರ ಹಣವನ್ನು ಹೂಡಿಕೆ (Investment) ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಎರಡು ಸೌಲಭ್ಯಗಳನ್ನು ಹೂಡಿಕೆದಾರರಿಗೆ ನೀಡುತ್ತಿರುವಂತಹ ಒಂದೇ ಒಂದು ಸ್ಥಳ ಎಂದರೆ ಅದು ಭಾರತೀಯ ಅಂಚೆ ಇಲಾಖೆ. ಹೌದು ಪೋಸ್ಟ್ ಆಫೀಸ್ನಲ್ಲಿ (Post Office) ಇರುವಂತಹ ಸಾಕಷ್ಟು ಯೋಜನೆಗಳು ಉತ್ತಮ ಲಾಭವನ್ನು ನೀಡುವುದು ಮಾತ್ರವಲ್ಲದೆ ಸುರಕ್ಷಿತ ಠೇವಣಿಯನ್ನು ಕೂಡ ಒದಗಿಸುತ್ತದೆ.

ಇನ್ನು ಇವತ್ತಿಗೆ ಈ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಬಗ್ಗೆ. ಕಳೆದ ಏಳು ವರ್ಷಗಳ ಹಿಂದೆ ಕೂಡ ಅಂಚೆ ಕಚೇರಿಗಳಲ್ಲಿ ಈ ಯೋಜನೆ ಇದೆ. ಹಾಗಿದ್ರೆ ಬನ್ನಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. ಅಂಚೆ ಕಚೇರಿ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಇದು ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲಿಗೆ ಇದರ ಖಾತೆಯನ್ನು ತಡೆಯಬೇಕಾಗುತ್ತದೆ ಹಾಗೂ ಈ ಯೋಜನೆ ಮೂಲಕ ನೀವು 7.7% ವಾರ್ಷಿಕ ಬಡ್ಡಿ ದರವನ್ನು ಪಡೆದುಕೊಳ್ಳುತ್ತೀರಿ.

ಅಂಚೆ ಕಚೇರಿಯ ಈ ಯೋಜನೆಯ ಮೂಲಕ ಸಿಗುವಂತಹ ಬಡ್ಡಿದರ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗಿಂತ ಹೆಚ್ಚಿನ ಬಡ್ಡಿ ರೂಪದಲ್ಲಿ ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಹೌದು ಇಲ್ಲಿ 7.7% ಬಡ್ಡಿದರ ಸಿಕ್ಕರೆ, ನೀವು ದೇಶದ ಟಾಪ್ ಬ್ಯಾಂಕುಗಳಲ್ಲಿ ಸಿಗುವಂತಹ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ನೋಡುವುದಾದರೆ ಏಳರಿಂದ 7.5% ಇರುತ್ತದೆ. ಈ ಯೋಜನೆಯಲ್ಲಿ ಹಣವನ್ನು ಐದು ವರ್ಷಗಳವರೆಗೆ ಮಿನಿಮಮ್ ಲಾಕ್ ಇನ್ ನಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ. ಇಲ್ಲವಾದಲ್ಲಿ ನಿಮಗೆ ಇದಕ್ಕೆ ಸಿಗಬೇಕಾಗಿರುವಂತಹ ಪೂರ್ಣ ಪ್ರಮಾಣದ ಬಡ್ಡಿ ಸಿಗೋದಿಲ್ಲ. ಒಂದು ವೇಳೆ ನೀವು ಒಂದೇ ವರ್ಷದಲ್ಲಿ ಖಾತೆಯನ್ನು ಮುಚ್ಚಿ ಹಣವನ್ನು ತೆಗೆಯುವುದಕ್ಕೆ ನೋಡಿದರೆ ಸಿಗಬೇಕಾಗಿರುವಷ್ಟು ಹಣ ಸಿಗೋದಿಲ್ಲ. ಇದೇ ಕಾರಣಕ್ಕಾಗಿ ಐದು ವರ್ಷಗಳ ನಂತರ ಸಿಗಬೇಕಾಗಿರುವಂತಹ ಮೆಚುರಿಟಿ ಪ್ರಯೋಜನಗಳನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ನೀವು ಉಳಿತಾಯ ಪ್ರಮಾಣ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡು ಕಾರಣದಿಂದಾಗಿ ಕೇವಲ 7.7% ಬಡ್ಡಿದರವನ್ನು ಮಾತ್ರವಲ್ಲದೆ ತೆರಿಗೆಯಲ್ಲಿ ಕೂಡ ವಿನಾಯಿತಿಯನ್ನು ಪಡೆದುಕೊಳ್ಳುತ್ತೀರಿ. ಟ್ಯಾಕ್ಸ್ ರೂಲ್ 80 ಸಿ ಕಾಯ್ದೆಯ ಪ್ರಕಾರ ಉಳಿತಾಯ ಪ್ರಮಾಣ ಪತ್ರ ಯೋಜನೆ ಅಡಿಯಲ್ಲಿ ನೀವು 1.5 ಲಕ್ಷಗಳವರೆಗೂ ಕೂಡ ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಮಕ್ಕಳ ಹೆಸರಲ್ಲಿ ಕೂಡ ಈ ಯೋಜನೆಯನ್ನು ಪ್ರಾರಂಭಿಸಬಹುದಾಗಿದ್ದು 10 ವರ್ಷಗಳ ವಯಸ್ಸಿಗಿಂತ ಕಡಿಮೆ ಇರುವಂತಹ ಮಕ್ಕಳ ಖಾತೆಯನ್ನು ಅವರ ಪೋಷಕರ ಹೆಸರಿನಲ್ಲಿ ನಿರ್ವಹಣೆ ಮಾಡಬಹುದಾಗಿದೆ. ಮಿನಿಮಮ್ ಸಾವಿರ ರೂಪಾಯಿಗಳ ಮುಖಾಂತರ ಕೂಡ ನೀವು ಈ ಖಾತೆಯನ್ನು ಪ್ರಾರಂಭ ಮಾಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಭೇಟಿ ನೀಡಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.