PPF: ಸ್ನೇಹಿತರೆ ಹೂಡಿಕೆ ಮಾಡೋ ಸಂದರ್ಭದಲ್ಲಿ ಉನ್ನತವಾದ ರಿಟರ್ನ್ ಅನ್ನು ಬಡ್ಡಿಯ ಮೂಲಕ ಸಂಪಾದಿಸುವ ಆಸೆ ಇದ್ದರೆ ಖಂಡಿತವಾಗಿ ಪ್ರತಿಯೊಬ್ಬರು ಪ್ರಯತ್ನ ಪಡಬೇಕಾದಂತಹ ಯೋಜನೆ ಅಂದ್ರೆ ಅದು ಪಿಪಿಎಫ್ ಅಂದ್ರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) . ಯಾವುದೇ ಭಾರತೀಯ ನಾಗರಿಕರು ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ತೆರಿಗೆ ಮುಕ್ತ ಹೂಡಿಕೆ ಜೊತೆಗೆ ಉತ್ತಮ ಬಡ್ಡಿದರ ಕೂಡ ನಿಮಗೆ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ.
ಭಾಗ್ಯಲಕ್ಷ್ಮೀ ಬಾಂಡ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಆನ್ ಲೈನ್ ಮೂಲಕ ಸಲ್ಲಿಸಲಾದ ಒಂದು ಲಕ್ಷ ಅರ್ಜಿಗಳಿಗೆ ಬಾಂಡ್ ಸಿಗದೇ ಇದ್ದರೆ ಅರ್ಜಿ ವೇಸ್ಟ್ ಆಗುತ್ತಾ?
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ನಲ್ಲಿ ಮೆಚುರಿಟಿ ಆಗುವಂತಹ ಅವಧಿ ಅಂದ್ರೆ 15 ವರ್ಷ. 15 ವರ್ಷಗಳ ನಂತರ ಮತ್ತೆ ನೀವು ನಿಮ್ಮ ಹೂಡಿಕೆ ಅವಧಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಉದಾಹರಣೆಗೆ ನೀವು ಪ್ರಾರಂಭದಲ್ಲಿ 5000 ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಸಂದರ್ಭದಲ್ಲಿ ನೀವು 26 ಲಕ್ಷ ರೂಪಾಯಿಗಳಷ್ಟು ರಿಟರ್ನ್ ಪಡೆದುಕೊಳ್ಳಬಹುದಾಗಿದೆ. ಇನ್ನು ಮೆಚುರಿಟಿ ಆಗುವ ಸಂದರ್ಭದಲ್ಲಿ ಮೂರು ಆಯ್ಕೆಗಳು ಪ್ರಮುಖವಾಗಿರುತ್ತವೆ ಅವುಗಳ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹಾಗಿದ್ರೆ ಬನ್ನಿ ಆ ಮೂರು ಆಯ್ಕೆಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
1. ಮೊದಲನೇ ಆಯ್ಕೆಯ ಬಗ್ಗೆ ಮಾತನಾಡುವುದಾದರೆ ನೀವು ಹಣವನ್ನು ಮೆಚುರಿಟಿಯ ಸಂದರ್ಭದಲ್ಲಿ ಸಂಪೂರ್ಣ ಹಣದ ಜೊತೆಗೆ ಬಡ್ಡಿಯನ್ನು ಕೂಡ ತೆಗೆದುಕೊಳ್ಳಬಹುದಾಗಿದೆ. ಇದರಲ್ಲಿ ನಿಮಗೆ 1.5 ಲಕ್ಷಗಳವರೆಗಿನ ವಾರ್ಷಿಕ ತೆರಿಗೆ ರಿಯಾಯಿತಿ ಕೂಡ ಇರುತ್ತದೆ. ಬಡ್ಡಿ ಹಾಗೂ ಇದರಲ್ಲಿ ಮಾಡಿರುವಂತಹ ಹೂಡಿಕೆಯ ಮೇಲೆ ತೆರಿಗೆ ರಿಯಾಯಿತಿ ಕೂಡ ಇರುತ್ತದೆ.
2. ಎರಡನೇ ಆಯ್ಕೆಯಲ್ಲಿ 15 ವರ್ಷಗಳ ನಂತರ ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಯೋಜನೆ ಅಡಿಯಲ್ಲಿ ನೀವು ನಿಮ್ಮ ಹೂಡಿಕೆ ಅವಧಿಯನ್ನು ವಿಸ್ತರಣೆ ಮಾಡುವಂತಹ ಅವಕಾಶವನ್ನು ಕೂಡ ನಿಮಗೆ ಐದು ವರ್ಷಗಳವರೆಗೆ ನೀಡಲಾಗುತ್ತದೆ. ಇನ್ನು ಒಂದು ವೇಳೆ ನೀವು ವಿಸ್ತರಣೆ ಮಾಡುವಂತಹ ನಿರ್ಧಾರವನ್ನು ಮಾಡಿದರೆ ಮೆಚುರಿಟಿ ಆಗುವುದಕ್ಕಿಂತ ಒಂದು ವರ್ಷ ಮುಂಚೆ ನಿಮ್ಮ ಬ್ಯಾಂಕಿನ ಬ್ರಾಂಚ್ ಗೆ ಹೋಗಿ ನೀವು ಯೋಜನೆಯ ವಿಸ್ತರಣೆ ಮಾಡುವ ಕುರಿತಂತೆ ಬ್ಯಾಂಕಿನವರಿಗೆ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಇನ್ನು ವಿಸ್ತರಣೆ ಮಾಡಿದ ನಂತರ ಹಣವನ್ನು ತೆಗೆಯೋದಕ್ಕೆ ಬರೋದಿಲ್ಲ ಅನ್ನೋದನ್ನು ನೀವು ಯೋಚಿಸ್ತಾ ಇದ್ರೆ ಅದು ತಪ್ಪು. ಯೋಜನೆಯ ವಿಸ್ತರಣೆ ಮಾಡಿದ ನಂತರ ಕೂಡ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ.
3. ಮೇಲಿನ ಎರಡು ಆಯ್ಕೆಗಳನ್ನು ಕೂಡ ಆಯ್ಕೆ ಮಾಡದೇ ಹೋದಲ್ಲಿ ನಿಮ್ಮ ಖಾತೆ ಚಾಲ್ತಿಯಲ್ಲಿರುತ್ತದೆ ಹಾಗೂ ಅದಕ್ಕೆ ನೀವು ಯಾವುದೇ ರೀತಿ ಹಣವನ್ನು ಹೂಡಿಕೆ ಮಾಡಬೇಕಾದ ಅಗತ್ಯ ಕೂಡ ಇರುವುದಿಲ್ಲ. ಅವಧಿ ಕೂಡ ಮುಂದಿನ ಐದು ವರ್ಷಗಳಿಗೆ ಸ್ವಯಂ ಚಾಲಿತವಾಗಿ ನಿರ್ಧಾರಿತವಾಗಿರುತ್ತದೆ. ಅದೇ ರೀತಿ ಐದೈದು ವರ್ಷಗಳಿಗೊಮ್ಮೆ ಈ ಖಾತೆಯ ಮೆಚುರಿಟಿ ಅನ್ನೋದು ಮುಂದುವರೆಯುತ್ತದೆ. ಇದರ ಜೊತೆಗೆ ನಿಮಗೆ ಸಿಗುವಂತಹ ಬಡ್ಡಿ ಕೂಡ ಸ್ವಯಂ ಚಾಲಿತವಾಗಿ ನಿರ್ವಹಣೆ ಆಗಿರುತ್ತದೆ.
ಸದ್ಯದ ಮಟ್ಟಿಗೆ ಈ ಯೋಜನೆ ಅಡಿಯಲ್ಲಿ ನಿಮಗೆ ಸಿಗುತ್ತಿರುವಂತಹ ಬಡ್ಡಿದರ ವಾರ್ಷಿಕ 7.1% ಆಗಿರುತ್ತದೆ. ಇನ್ನು ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ನಿರ್ಧರಿಸಲಾಗುತ್ತದೆ. ಇದೇ ಬಡ್ಡಿ ದರದಲ್ಲಿ ಆವರೇಜ್ ರೂಪದಲ್ಲಿ 15 ರಿಂದ 20 ವರ್ಷಗಳಿಗೆ ನೀವು ಹೂಡಿಕೆ ಮಾಡಿದರೆ ಖಂಡಿತವಾಗಿ 26 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನೀವು ಯಾವುದೇ ಅನುಮಾನವಿಲ್ಲದೆ ಸಂಪಾದನೆ ಮಾಡಬಹುದಾಗಿದೆ.
Comments are closed.